ವೃದ್ಧಾರಾಧನೆ: ಕೆ ಎನ್ ಮಹಾಬಲ

ಆ ದಿನ ಬೆಳಿಗ್ಗೆ ಎಂದಿನಂತೆ ಬೆಳಗಿನ ವಾಯುಸಂಚಾರಕ್ಕೆ, ತರಕಾರಿ, ಹಾಲು ತರಲು ಹೊರಟಿದ್ದೆ. ರಸ್ತೆಯ ಎದುರುಗಡೆ ಟೀ ಅಂಗಡಿಯ ರಾಜೇಶ್‌”ಸಾರ್‌, ಇಲ್ಲಿ ಬನ್ನಿ” ಎಂದು ಜೋರಾಗಿ ಕೂಗಿದ. ರಸ್ತೆ ದಾಟಿ ಅವನನ್ನು ಸಮೀಪಿಸಿ “ಏನು ರಾಜೇಶ್?”‌ಎಂದು ಕೇಳಿದೆ.“ಸಾರ್‌, ಆ ಮುದುಕ ಹೊನ್ನಪ್ಪ, ಅದೇ ನೀವು ದಿನಾ ಕಾಸು ಕೊಡ್ತಾ ಇದ್ರಲ್ಲಾ ಅವನು ಹೋದ ತಿಂಗಳು ಯುಗಾದಿ ಹಿಂದಿನ ದಿನ ತೀರ್ಕೊಂಡ್ನಂತೆ, ಲಾಕ್‌ಡೌನ್‌ಆಗಿತ್ತಲ್ಲವಾ ಬಹಳ ಕಷ್ಟ ಆಯ್ತಂತೆ ಹೆಣ ಸಾಗಿಸೋದು. ಕಡೆಗೆ ಯಾವುದೋ ಟೆಂಪೋ ಗೊತ್ತು ಮಾಡಿ ಹುಟ್ಟಿದ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪ್ರೀತಿ: ಎಲ್.ಚಿನ್ನಪ್ಪ, ಬೆಂಗಳೂರು

ಮೇನೇಜರ್ ಸಾಹೇಬ್ರೇ, ಪಾಪ ! ನಮ್ಮ ಜಯಂತಿ ಬರೀ ಕೈ ಕಾಲು ವೀಕ್ ಎಂದು ಆಸ್ಪತ್ರೆಗೆ ಸೇರಿ ಹತ್ತು ದಿನಗಳಾದವು, ಇನ್ನೂ ಡಿಸ್ಚಾರ್ಜ್ ಆಗಿಲ್ಲ. ನಾನೀಗ ಅವಳನ್ನು ನೋಡಲು ಹೋಗುತ್ತಿದ್ದೇನೆ, ನೀವೂ ಒಮ್ಮೆ ಹೋಗಿ ನೋಡಿದ್ರೆ ಅವಳ ಮನಸ್ಸಿಗೆ ಸ್ವಲ್ಪ ಸಮಧಾನವಾಗಬಹುದು ಸಾರ್” ಎಂದಳು ಸ್ಟೆನೋ ಸುಮತಿ. “ನೀನ್ಹೋಗಿ ನೋಡ್ಕೊಂಡು ಬಾಮ್ಮ ಸುಮತಿ. . . ಇಲ್ಲಿ ನನ್ನ ಕೆಲಸ ಯಾವಾಗ ಮುಗಿಯುತ್ತೋ. . . . . .?” ಅದಿರಲಿ ಸಾರ್, ಹೇಗಾದರು ಒಮ್ಮೆ ನೀವು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಪ್ಪಣ್ಣ ಭಟ್ಟರ ಶ್ರುತಿಪೆಟ್ಟಿಗೆ: ಡಾ. ವಿಶ್ವನಾಥ ಎನ್ ನೇರಳಕಟ್ಟೆ

“. . . ವಿಚ. ಕ್ಷಣಗು. ಣಶೀ. ಲದಯಾ. ಲವಾ. ಲಮಾಂ. ಪಾ. ಲಯ. . . ” ತಾರಸ್ಥಾಯಿಯೇ ಉತ್ತುಂಗವೆನಿಸಿದ್ದ ಸಾಲನ್ನು ಹಾಡುವಾಗ ಅಪ್ಪಣ್ಣ ಭಟ್ಟರ ಶ್ರುತಿ ಎಲ್ಲೋ ಕಳೆದುಹೋಯಿತು. ಶುದ್ಧ ಮಧ್ಯಮ ಧ್ವನಿ ಹೊಮ್ಮುವ ಬದಲು ಪ್ರತಿ ಮಧ್ಯಮ ಧ್ವನಿಯನ್ನು ಅವರ ಗಂಟಲು ಹೊರಡಿಸಿದ್ದರಿಂದಾಗಿ ಅಪಶ್ರುತಿ ಕೇಳಿಬಂತು. ಅದು ಅವರಿಗೆ ತಿಳಿಯದ ಸಂಗತಿಯೇನಲ್ಲ. ತಕ್ಷಣಕ್ಕೆ ತಾನೆಲ್ಲೋ ತಪ್ಪು ಮಾಡಿದ್ದೇನೆ ಎಂಬ ಭಾವ ಅವರನ್ನು ಆವರಿಸಿತು. ಆದರೆ ಅದನ್ನು ಒಪ್ಪಿಕೊಳ್ಳಲು ಮನಸ್ಸು ಬಾರದೆ ಶ್ರುತಿಪೆಟ್ಟಿಗೆಯ ಕಡೆಗೆ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಜಯಂತಿಪುರವೆಂಬ ಸಾವಿರದ ಕಥಾಕಡಲು…!: ಜಗದೀಶ ಬ. ಹಾದಿಮನಿ

ಶ್ರೀಧರ ಬನವಾಸಿಯವರು ‘ಅಮ್ಮನ ಆಟೋಗ್ರಾಫ್’, ‘ಬ್ರಿಟಿಷ್ ಬಂಗ್ಲೆ’, ‘ದೇವರ ಜೋಳಿಗೆ’ ಕಥಾ ಸಂಕಲನಗಳು; ‘ತಿಗರಿಯ ಹೂಗಳು’, ‘ಬಿತ್ತಿದ ಬೆಂಕಿ’, ‘ಪೂರ್ಣಚಂದ್ರನಿಗೆ ಮುಖವಾಡವಿಲ್ಲ’ ಕವನ ಸಂಕಲನಗಳು, ಕೇಂದ್ರ ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಪಡೆದ ‘ಬೇರು’ ಕಾದಂಬರಿ ಹಾಗೂ ‘ಪಂಚಮಿ ಪ್ರಕಾಶನ’ದಿಂದ ಈಗಾಗಲೇ ಕನ್ನಡನಾಡಿಗೆ ಚಿರಪರಿಚಿತರು. ಈಗಿವರ ಮತ್ತೊಂದು ವಿಶಿಷ್ಟಕೃತಿಯೇ ‘ಜಯಂತಿಪುರದ ಕತೆಗಳು’ ಎಂಬ ಕಥಾ ಸಂಕಲನ. ಇದರಲ್ಲಿ ಒಟ್ಟು ಹತ್ತು ಕತೆಗಳು, ಎರಡು ನೀಳ್ಗತೆಗಳಿವೆ. ಯಾವವೂ ಅವಸರದ ರಚನೆಗಳಾಗಿಲ್ಲ; ಎಲ್ಲವೂ ಧ್ಯಾನಿಸಿಕೊಂಡು ನಿಧಾನ ಮೈದಾಳಿದಂತಹವುಗಳು. ಜಯಂತಿಪುರವನ್ನೇ ಕೇಂದ್ರಸ್ಥಾನ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ತ್ಯಾಗ, ನಿಸ್ವಾರ್ಥ ಹಾಗೂ ಮಾನವೀಯತೆಯ ಬೆಳಕು ಪಸರಿಸುವ ಅಪರೂಪದ ಜೀವನಗಾಥೆ ‘ಹೆಗಲು’: ಬೆಂಶ್ರೀ ರವೀಂದ್ರ, ಬೆಂಗಳೂರು

ಬದುಕು ಹಲವು ಸಾಧನೆಗಳಿಗೆ ಅವಕಾಶ ಮಾಡುವ ರಂಗಮಂಚ. ಯಾವ ಸಾಧನೆಯನ್ನೂ ಒಬ್ಬ ವ್ಯಕ್ತಿ ಮಾಡಲಾರ. ಆತನಿಗೆ ಹತ್ತಾರು ಜನರ ಸಹಕಾರ ಇದ್ದೇ ಇರುತ್ತದೆ. ಅದು ಅವನ ಅರಿವಿಗೆ ಬರಬಹುದು ಅಥವಾ ಬಾರದಿರಬಹುದು. ಈ ಸಾಧನೆಗಳು ವ್ಯಷ್ಟಿಯಾಗದೆ ಸಮಷ್ಟಿಯಾದಾಗ ಮಾತ್ರ ಸಾರ್ಥಕವಾಗುತ್ತದೆ. ಸಾಧಿಸಿ ಮುಂದೆ ನಡೆದವನು ತನ್ನನ್ನು ಆ ಎತ್ತರಕ್ಕೆ ಕರೆದೊಯ್ಯದವರನ್ನು ಪ್ರಜ್ಞಾಪೂರ್ವಕವಾಗಿ ಕೃತಜ್ಞತೆಯಿಂದ ನೆನಪಿಸಿಕೊಂಡಾಗ ಆ ಸಾಧನೆಗೂ, ವ್ಯಕ್ತಿಗೂ ಗೌರವ ಬರುತ್ತದೆ. ಅಂತಹ ಸಾರ್ಥಕತೆ “ಹೆಗಲು” ಪುಸ್ತಕದಲ್ಲಿ ಕಾಣುತ್ತದೆ. “ಹೆಗಲು”, ಒಂದು ಅಪರೂಪದ ಜೀವನಗಾಥೆ. ಈ ಕಥನದಲ್ಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮಂಗಟ್ಟೆ ಪಕ್ಷಿಯ ವಿಸ್ಮಯ ಲೋಕ: ಶ್ರೀಧರ ಬನವಾಸಿ

ಅರಣ್ಯ ಸಂರಕ್ಷಣೆ ಮತ್ತು ಜೀವ ಸಂಕುಲಗಳ ಅಳಿವು ಉಳಿವಿನ ಹೋರಾಟವು ಸದಾ ಪರಿಸರ ಪ್ರಿಯರನ್ನು ಕಾಡುವ ಪ್ರಶ್ನೆ. ಮಾನವ ಅನಾದಿಕಾಲದಿಂದಲೂ ಕಾಡು, ಅಲ್ಲಿನ ಜೀವರಾಶಿಗಳ ನಡುವೆ ಸಹಬಾಳ್ವೆಯಿಂದಲೇ ಬದುಕುತ್ತಾ ಬಂದವನು. ಕಾಲಘಟ್ಟದ ಕಡುವೈರುಧ್ಯವೋ ಏನೋ…ಮಾನವ ತನ್ನ ಹಿಂದಿನ ಹಾದಿ ತಪ್ಪಿ ಹಿಂಸೆ, ಸ್ವಾರ್ಥದ ಚಿಂತನೆಯ ದಿಕ್ಕಿನತ್ತ ಸಾಗಿದಾಗ ಅಲ್ಲಿಂದ ಕಾಡಿನ ಜೊತೆ ಅವನ ಹೋರಾಟ ಶುರುವಿಟ್ಟುಕೊಂಡ. ಇದೊಂದು ಅನೈಸರ್ಗಿಕ ಸುದೀರ್ಘ ಪಯಣ. ಈ ದುರುಳ ಹಾದಿಯಲ್ಲಿ ನಾವು ಕಳೆದುಕೊಂಡ ಸಂಪತ್ತೇಷ್ಟೋ! ಒಂದು ರೀತಿಯಲ್ಲಿ ಮಾನವನ ಅಜ್ಞಾನದ ಹಾದಿಯು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಜ್ಜಿ ಕತೆ: ಆದರ್ಶ ಜೆ.

ಈ ದಿನ ಮಳೆ ಬಿಡುವಂತೆ ಇರಲಿಲ್ಲ ಮಾಡಲು ಕೆಲಸಗಳು ಬೇಕಾದಿಷ್ಟಿದ್ದರು ಮಾಡುವಂತೆಯೂ ಇರಲಿಲ್ಲ, ಈ ಹಾಳಾದ ಮಳೆ ಈಗ್ಲೇ ಮಳೆಗಾಲದ ನಮೂನೆ ಮಾಡ್ತಿದೆ. ಮಳೆಗಾಲ ಶುರುವಾಯ್ತೆನೊ?ಎಂದು ಕಾಲು ತೊಳೆಯುತ್ತಾ, ಹಿಮ್ಮಡಿಗೆ ಹತ್ತಿದ ಸಗಣಿ ಸರಿಯಾಗಿ ತೊಳೆದಿದಿಯೋ ಇಲ್ಲವೋ ಎಂದು ಖಾತರಿಪಡಿಸಿ. ಸೀದಾ ಅಡುಗೆ ಮನೆಗೆ ತೆರಳಿ ತಿಂಡಿ ತಿಂದು ಜಗುಲಿಯ ಕುರ್ಚಿಯೇರಿ, ಬೀಳುವ ಮಳೆಯನ್ನೇ ದಿಟ್ಟಿಸುತ್ತ ಕವಳ ಮೆಲ್ಲಲು ಶುರು ಮಾಡಿದ. ಒಮ್ಮೆಲೇ ಏನೋ ನೆನಪಾದವನಂತೆ ದಿಗ್ಗನೆ ಎದ್ದು ಚಡಿ ಕಟ್ಟೆ ತುದಿಗೆ ನೆಡೆದು, ಕವಳದ ಕೆಂಪು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಪಂಜು ಕಥಾ ಸ್ಪರ್ಧೆ

ಪಂಜು ಅಂತರ್ಜಾಲ ಪತ್ರಿಕೆ ವತಿಯಿಂದ ಕಥಾ ಸ್ಪರ್ಧೆಗೆ ನಿಮ್ಮ ಕಥೆಯನ್ನು ಆಹ್ವಾನಿಸಲಾಗಿದೆ. ಸೂಚನೆಗಳು:-ಕಥೆ ಸ್ವಂತ ರಚನೆಯಾಗಿರಬೇಕು.-ಕಥೆ ಯೂನಿಕೋಡ್ ನಲ್ಲಿ ಇದ್ದರೆ ಒಳ್ಳೆಯದು.-ಸ್ಪರ್ಧೆಗೆ ಅಪ್ರಕಟಿತ ಕಥೆಯನ್ನು ಮಾತ್ರ ಕಳುಹಿಸಬೇಕು. ಕಥೆಯು, ಎಫ್ ಬಿ, ಸೇರಿದಂತೆ ಬೇರೆ ಎಲ್ಲಾದರು ಪ್ರಕಟವಾಗಿದ್ದರೆ ಅಂತಹ ಕಥೆಯನ್ನು ಸ್ಪರ್ಧೆಗೆ ಪರಿಗಣಿಸುವುದಿಲ್ಲ.-ಬೇರೆಯವರ ಕದ್ದ ಕಥೆಯನ್ನು ಕಳುಹಿಸಿದರೆ ಅಂತಹ ಲೇಖಕರನ್ನು ಪಂಜುವಿನ ಬ್ಲಾಕ್ ಲಿಸ್ಟ್ ಗೆ ಹಾಕಲಾಗುವುದು. ಕಥೆಯನ್ನು ಕಳುಹಿಸಿಕೊಡಬೇಕಾದ ಮಿಂಚಂಚೆ: editor.panju@gmail.com, smnattu@gmail.com ಮಿಂಚಂಚೆಯ ಸಬ್ಜೆಕ್ಟ್ ನಲ್ಲಿ “ಪಂಜು ಕಥಾಸ್ಪರ್ಧೆ” ಎಂದು ತಿಳಿಸಲು ಮರೆಯದಿರಿ. ಮಿಂಚಂಚೆಯಲ್ಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಮೂರು ಕವಿತೆಗಳು: ಚಂದಕಚರ್ಲ ರಮೇಶ ಬಾಬು

ಸಾಲುಮರದ ತಿಮ್ಮಕ್ಕ ವೃಕ್ಷ ಶಾಸ್ತ್ರ ಕಲಿತವರೆಲ್ಲತರಗತಿಗಳಲ್ಲಿ ಹೇಳಿ ದಣಿದರುನೀನು‌ ಮಾತ್ರಹಸಿರು ಧರಣಿಗೆ ಕಸುವುಪ್ರಾಣವಾಯು ನೀಡುವಪಾದಪಗಳೇ ಧರೆಗೆ ಪ್ರಾಣಪರಿಸರ ಹಸಿರು ಹಸಿರೆನಿಸಿದರೇನೇಜನರಿಗೆ ಉಸಿರುಎಂದು ಅರಿತುಯಾವ ಶಾಲೆಗೂ ಹೋಗದೆಯಾವ ಶಾಸ್ತ್ರದ ನೆರವು ಬೇಡದೆಭೂಮಿಗೆ ಹಸಿರ ಹೊದಿಕೆಹೊದಿಸುವ ಕಾಯಕ ಮಾಡಿದೆಯಲ್ಲಪ್ರಶಸ್ತಿ ಬಂದೀತೆಂದು ಕಾಯಲಿಲ್ಲಪತ್ರಿಕೆಗಳಲ್ಲಿ ಫೋಟೋ ಹಾಕಿಸಲಿಲ್ಲಮರ ನೆಡುವ ದುಡಿಮೆಮಾಡುತ್ತ ಜನರ ಸೇವೆ ಗೈದೆಪ್ರಶಸ್ತಿ ಕೊಟ್ಟ ಸರಕಾರತನ್ನನ್ನ ತಾನೇ ಗೌರವಿಸಿಕೊಂಡಿತುಇನ್ನ ನನ್ನ ಸರದಿ ಮುಗಿಯಿತುದೇವಲೋಕದ ಹಸಿರು ನಿಶಾನೆ ಬಂತುನೀವು ಮುಂದುವರೆಸಿ ಎನ್ನುತ್ತಶತಾಯುಷಿಯೆನಿಸಿಶತಮಾನಗಳಷ್ಟು ಕೀರ್ತಿ ಗಳಿಸಿಮರಗಳನ್ನ ಅಮರವಾಗಿಸಿಮರೆಯಾದೆ ತಿಮ್ಮಕ್ಕ! ಮಳೆಯ ಅವಾಂತರ ನಿರ್ಮಲ ಆಕಾಶ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ದಿಕ್ಕುಗಳು (ಭಾಗ 10): ಹಟ್ಟಿ ಸಾವಿತ್ರಿ ಪ್ರಭಾಕರಗೌಡ

ಅದೇ ರೀತಿ ಸುಸಜ್ಜಿತವಾದ ಆಧುನಿಕ ಸ್ನಾನದ ಕೋಣೆ, ಪಾಯಖಾನೆಯನ್ನು ನೋಡಿದಾಗ ಅನುಶ್ರೀ ಗೊಂದಲಕ್ಕೀಡಾದಳು. ಚೈತನ್ ಆಕೆಯ ಕೈ ಹಿಡಿದುಕೊಂಡೇ ನಡೆದು ಬಚ್ಚಲು ಮನೆಯಲ್ಲಿಯ ಬಿಸಿ ನೀರು, ತಣ್ಣೀರಿನ ನಲ್ಲಿಗಳನ್ನು ತೋರಿಸಿ, ಪಾಯಖಾನೆ ಬಳಸುವ ಪದ್ಧತಿಯನ್ನೂ ಸೂಚ್ಯವಾಗಿ ತಿಳಿಸಿ ಸಂಕೋಚಪಟ್ಟುಕೊಳ್ಳುವ ಅಗತ್ಯವಿಲ್ಲವೆಂದು ಬೆನ್ನು ತಟ್ಟಿ ಹೇಳಿದನು. “ಸ್ನಾನ ಮಾಡಿ ಬಿಡು. ಫ್ರೆಶ್ ಆಗುತ್ತೆ ಮನಸ್ಸು ಕೂಡ” ಎಂದಾಗ ಆಕೆ, “ಬ ಬ ಬಟ್ಟೆ..” ಎಂದು ತೊದಲಿದಳು. “ನಾ ನಾ ನಾಳೆ ತರ್ತೀನಿ. ಈಗ ನನ್ನ ಬಟ್ಟೆ ಹಾಕಿಕೊ” ಎಂದು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಭೀಮಹೆಜ್ಜೆ: ಡಾ. ವಿಶ್ವನಾಥ ಎನ್ ನೇರಳಕಟ್ಟೆ

ಕುರುಕ್ಷೇತ್ರ ಯುದ್ಧದ ಹತ್ತೊಂಭತ್ತನೆಯ ದಿನ ರಣರಂಗದಲ್ಲಿ ಶಬರಿ ಬಂದು ಅಳುತ್ತಾ ಕುಳಿತಂತೆ ಕಾಣಿಸುತ್ತಿದ್ದಳು,ಭರತಪುರದ ತನ್ನ ಜಮೀನಿನಲ್ಲಿ ಕೆಂಪು ನೆಲದ ಮೇಲೆ ಕುಳಿತು ಅಳುತ್ತಿರುವ ಪಳನಿಯಮ್ಮ. ಸುತ್ತಮುತ್ತ ನಡು ಮುರಿಸಿಕೊಂಡು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಬಾಳೆಯ ಗಿಡಗಳು, ಅವುಗಳ ಮಧ್ಯೆ ಎಪ್ಪತ್ತೆರಡರ ಹಿರಿಜೀವ ಪಳನಿಯಮ್ಮ. ಕದಳಿ ವನದಲ್ಲಿ ಕದಡಿ ಕುಳಿತಂತಹ ನಿಲುವು ಅವಳದ್ದಾಗಿತ್ತು. ಬಿಕ್ಕಳಿಸುತ್ತಿದ್ದಳು. ನೆಲದ ಮೇಲೆ ಎರಡೆರಡು ಸಲ ಕೈಬಡಿದಳು. ತನ್ನ ಹೊಟ್ಟೆ ಸೇರಿ ತಂಪುಮಾಡಲಿ ಎಂದು ತಾನು ನಿರುಕಿಸುತ್ತಿದ್ದ ಹಣ್ಣುಹಣ್ಣಾದ ಗೊನೆ ಇದೆಯೇ ಎಂದು ತಾನು ಕುಳಿತಲ್ಲಿಂದಲೇ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಜಂಬೂ ಸವಾರಿ: ಡಾ.ವೃಂದಾ ಸಂಗಮ್

ಇದೇನು ಕತಿಯಲ್ಲ. ನಮ್ಮೂರಾಗ ನಡೆದದ್ದು. ಆದರೂ ನೀವು ನಂಬೂದಿಲ್ಲ ನನಗ ಗೊತ್ತದ. ಅಂಥಾದ್ದೇನದ ಅಂದರ. ನಮ್ಮೂರಾಗ ಒಂದು ಇನ್ಸಪೆಕ್ಷನ್‌ ಬಂಗಲೋ ಅದ. ಅದೇನು ದೊಡ್ಡದು ಅಂತೀರಾ ಅಥವಾ ಈಗ ಹೋಗಿ ನೋಡಿದರ ಅದೊಂದು ಹಳೆಯ ಪಳೆಯುಳಿಕೆಯ ಕೋಟೆ ಕೊತ್ತಳದಂಗ ಕಾಣತದ. ಆದರೆ, ಒಂದಾನೊಂದು ಕಾಲದಾಗ, ಇದು ನಮ್ಮೂರಿನವರಿಗೆ ಒಂದು ಪಿಕ್‌ ನಿಕ್‌ ಸ್ಪಾಟ್‌ ಆಗಿತ್ತು. ಅದು ಹೆಂಗೆ ಅಂದರೆ, ಊರಿಗೆ ಯಾರಾದರೂ ಬಂಧುಗಳು ಬಂದರೆ, ಅವರಿಗೆ ಊರಲ್ಲಿ ತೋರಿಸ ಬೇಕಾದ ವಿಶೇಷ ಸ್ಥಳದಲ್ಲಿ ಇದೂ ಒಂದಾಗಿತ್ತು. ಹಂಗಂದರ, … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸಸ್ಯಶಾಸ್ತ್ರದ ಲೋಕದಲ್ಲಿ ಒಂದು ಪ್ರವಾಸ (ಭಾಗ 2): ರೋಹಿತ್ ವಿಜಯ್ ಜಿರೋಬೆ.

ಪ್ರಕೃತಿಯೊಳಗೆಯೇ ಮಾನವ ಜೀವನ ವಾಸ್ತವವಾಗಿ ನೆಲೆಗೊಂಡಿದೆ. ಅಲ್ಲಿ ಜೀವ, ಸೌಂದರ್ಯ ಮತ್ತು ಪ್ರೇರಣೆ ಒಳಗೊಂಡಿದೆ. ಪ್ರಕೃತಿಯ ಅಂಶಗಳಲ್ಲಿ ಸಸ್ಯಗಳು ಅತ್ಯಂತ ಪ್ರಮುಖವಾದವು. ಪ್ರಕೃತಿಯು ಸಸ್ಯಗಳಿಲ್ಲದೆ ಅಪೂರ್ಣವಾಗಿದೆ. ಸಸ್ಯಗಳು ಆಹಾರ, ಆಶ್ರಯ, ಔಷಧ, ಆಮ್ಲಜನಕ ಮತ್ತು ಪರಿಸರ ಸಮತೋಲನಕ್ಕೆ ಪ್ರಮುಖ ಪಾತ್ರವಹಿಸುತ್ತವೆ. ಹೀಗಾಗಿ ಸಸ್ಯಶಾಸ್ತ್ರದ ಲೋಕವು ಕೇವಲ ವಿಜ್ಞಾನ ಶಾಖೆಯಲ್ಲ — ಅದು ಮಾನವನ ಜೀವನದ ಅಸ್ತಿತ್ವವನ್ನು ಕಾಯ್ದುಕೊಳ್ಳುವ ಮೂಲ ತತ್ವವಾಗಿದೆ. ಸಸ್ಯಶಾಸ್ತ್ರದ ಮೊದಲ ಭಾಗದಲ್ಲಿ ನಾವು ಸಸ್ಯಗಳ ವೈವಿಧ್ಯತೆ, ಅವುಗಳ ಜೀವಚಕ್ರ ಮತ್ತು ಮಾನವ ಜೀವನದ ಸಂಬಂಧವನ್ನು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಬ್ಲಾಕೀ ನಾಯಿ ಕಥೆ: ಕೋಡೀಹಳ್ಳಿ ಮುರಳೀ ಮೋಹನ್

ತೆಲುಗು ಮೂಲ :ಕಂದಾಳ ಶೇಷಾಚಾರ್ಯಲು ಸ್ವೇಚ್ಚಾನುವಾದ: ಕೋಡೀಹಳ್ಳಿ ಮುರಳೀ ಮೋಹನ್ ೧ ಅದು ಒಂದು ಸಣ್ಣ ಹಳ್ಳಿಯಾಗಿತ್ತು. ಅಲ್ಲಿ ಕರಣಂ (ಹಳ್ಳಿಯ ಲೆಕ್ಕಿಗ) ಅವರ ಮನೆಯಲ್ಲಿ ಒಂದು ನಾಯಿ ಮರಿಯನ್ನು ಸಾಕುತ್ತಿದ್ದರು. ಅದು ನೋಡಲು ಬೀದಿ ನಾಯಿಗಳಂತೆ ಇದ್ದರೂ, ಜೊತೆಯಲ್ಲಿ ಹುಟ್ಟಿದವರು ಯಾರೂ ಇಲ್ಲದ ಕಾರಣ, ತಾಯಿ ಹಾಲನ್ನು ಪುಷ್ಟಿಯಾಗಿ ಕುಡಿದು ಗಟ್ಟಿಮುಟ್ಟಾಗಿ ಬೆಳೆಯುತ್ತಿತ್ತು. ಅದಕ್ಕೆ ‘ರಾಮು’ ಎಂದು ಹೆಸರಿಟ್ಟರು. ಕರಣಂ ಅವರು ‘ರಾಮ್’ ಎಂದು ಕರೆಯುತ್ತಿದ್ದಂತೆ ಅದು ಅವರ ಹಿಂದೆ ಹೊಲಗಳಿಗೆ ಹೋಗಿ ಮೇಲ್ವಿಚಾರಣೆ ನಡೆಸುತ್ತಿತ್ತು. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಧರ್ಮೊದಕ: ಚಂದಕಚರ್ಲ ರಮೇಶ ಬಾಬು

ಬೆಂಗಳೂರಿನಿಂದ ಹೊರಟು, ಹಂಪಿ ಎಕ್ಸ್ ಪ್ರೆಸ್ಸಿನಲ್ಲಿ ಹೊಸಪೇಟೆಗೆ ತಲುಪಿದ್ದೆ. ಅಲ್ಲಿಂದ ಹಂಪಿಗೆ ಹೊರಡುವುದಿತ್ತು. ರೈಲಿನ ಹೆಸರು ಹಂಪಿ ಎಕ್ಸ್ ಪ್ರೆಸ್ ಅಂತ ಇದ್ದರೂ ಅದು ಹಂಪಿಗೆ ಹೋಗುವುದಿಲ್ಲ. ಹಂಪಿಗೆ ನಿಲ್ದಾಣವೇ ಇಲ್ಲ. ಹೆಸರು ಮಾತ್ರ ಉಳಿದುಕೊಂಡಿದೆ. ಹೊಸಪೇಟೆಯಿಂದ ಹಂಪಿಗೆ ಅರ್ಧಗಂಟೆಗೊಂದು ಬಸ್ಸಿದೆ. ಹಾಗಾಗಿ ಬಸ್ ಸ್ಟಾಂಡಿನ ಎದುರಿನಲ್ಲಿರುವ ಉಡುಪಿ ಹೋಟೆಲಿಗೆ ಹೋಗಿ ಬೆಳಗಿನ ಪೆಟ್ರೋಲ್ ಹಾಕೋಣವೆಂದು ಹೊರಟೆ. ರೈಲಿನಲ್ಲಿ ಕಾಲು ನೀಡಿ ನಿದ್ರೆ ಮಾಡಿದ್ದರೂ, ಇನ್ನೂ ಪ್ರಯಾಣದ ದಣಿವು ಮಾತಾಡುತ್ತಿತ್ತು. ಹೋಟೆಲಿಗೆ ಹೋಗಿ ಸರ್ವರನಿಗೆ ಕಾಫಿ ಕೊಡಲು … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಡಾ.ದೊಡ್ಡರಂಗೇಗೌಡರ ಕಾವ್ಯ: ಸಂತೋಷ್ ಟಿ.

ಮಾನವೀಯತೆಯ ಮಹೋನ್ನತ ಭಾವಗಳ ಆಧುನಿಕ ಕಾವ್ಯ ಪುನರುತ್ಥಾನ ಪರ್ವದ ಮಹಾಮೇರು ಕವಿ ಪದ್ಮಶ್ರೀ ಡಾ ದೊಡ್ಡರಂಗೇಗೌಡರು ಎಂದು ಬಹು ಹೆಮ್ಮೆಯಿಂದ ಹೇಳಬಹುದು. ಕನ್ನಡ ಕಾವ್ಯ ನದಿಯು ಹರಿದು ಹರಿದು ಸವಕಲಾಗಿ ಹಳೆಯದಾದರೂ ಉಕ್ಕಿ ಹರಿಯುವ ನೂತನ ತವನಿಧಿಯಂತೆ ತನ್ನ ನಿರಂತರ ಚಲನಶೀಲತೆ ಮತ್ತು ಮತ್ತು ಅದು ತೆಗೆದುಕೊಂಡು ತಿರುವು ಪಾತ್ರ ಆಕಾರ ಗುಣ ಸಂಪನ್ಮೂಲಗಳಲ್ಲಿ ಭಾಷೆಯ ಸ್ವರೂಪ ಬದಲಾಗಿದೆ. ಛಂದಸ್ಸಿನಲ್ಲಿ ಸುಧಾರಣೆಯಾಗಿದೆ. ಜನಪದ ಸಾಹಿತ್ಯದ ಮೂಲ ಧಾತುಗಳಿಂದ ಕೂಡಿ ಇಲ್ಲಿಯವರಗಿನ ಅದರ ಸ್ಫೂರ್ತಿಯ ಚಿಲುಮೆ ಎಂದಿಗೂ ಬತ್ತಿಲ್ಲ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಅಪ್ಪನೆಂಬ ಬದುಕು ಕಲಿಸಿದ ಗುರು: ನಾಗರಾಜನಾಯಕ ಡಿ. ಡೊಳ್ಳಿನ

“ಅಪ್ಪಾಜಿ” ಅಂದರೆ ಧೈರ್ಯ“ಅಪ್ಪಾಜಿ” ಅಂದರೆ ಹುರುಪು“ಅಪ್ಪಾಜಿ” ಅಂದರೆ ಹಸನ್ಮುಖಿ“ಅಪ್ಪಾಜಿ” ಅಂದರೆ ಕರುಣೆ“ಅಪ್ಪಾಜಿ” ಅಂದರೆ ಕನಸು“ಅಪ್ಪಾಜಿ”ಅಂದರೆ ಬೆನ್ನೆಲುಬು“ಅಪ್ಪಾಜಿ” ಅಂದರೆ ಆತ್ಮವಿಶ್ವಾಸ.“ಅಪ್ಪಾಜಿ “, ಅಂದರೆ ಪ್ರಯತ್ನ. ಮೊಬೈಲ್ ನ ವಾಟ್ಸಾಪ್ ನಲ್ಲಿ ಈ ಸಂದೇಶ ಬಂದೊಡನೆ ನನಗೂ ಅಪ್ಪನ ನೆನಪಾಯಿತು. ಅಪ್ಪಾಜಿ ಅಂದರೆ ಎಲ್ಲರಿಗೂ ಅವರವರ ಹೀರೊ. ನಮ್ಮ ತೊದಲು ನುಡಿಗಳನ್ನು ತಿದ್ದುತ್ತ, ಮುದ್ದಿಸುತ್ತಾ, ಬದುಕಿನ ಪಾಠಗಳನ್ನು ಸದ್ದಿಲ್ಲದೇ ಕಲಿಸುವ ಗುರು. ಅಪ್ಪಾಜಿಯೆಂಬ ಗುರು ಯಾವ ವಿಶ್ವವಿದ್ಯಾಲಯದ ಪ್ರೊಫೆಸರ್ ಗಿಂತ ಕಡಿಮೆಯಲ್ಲ. ಅಪ್ಪಾಜಿಯ ಸೈಕಲ್ಲಿನ ಮುಂದಿನ ಭಾಗದಲ್ಲಿನ ಪುಟಾಣಿ ಸೀಟಿನಲ್ಲಿ … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ

ಸೇವಾ ಮನೋಭಾವ: ಎಲ್. ಚಿನ್ನಪ್ಪ, ಬೆಂಗಳೂರು

ದಯಾನಿಧಿಯವರು ಆಸ್ಪತ್ರೆಗೆ ದಾಖಲಾಗಿ ಹದಿನೈದು ದಿನಗಳಾಗಿವೆ, ಆಸ್ಪತ್ರೆಯಲ್ಲಿ ಅವರಿಗೆ ಸತತ ಚಿಕಿತ್ಸೆಗಳು ಜರುಗುತ್ತಿವೆ. ಅವರಿಗೆ ಅಂತಹ ಗಂಭೀರ ಸ್ವರೂಪದ ಖಾಯಿಲೆಯೇನೂ ಇಲ್ಲ. ವಯೋಸಹಜ ಕಾರಣಕ್ಕೆ ಕಾಣಿಸಿಕೊಂಡ ಒಂದು ಸಾಧಾರಣ ತೊಂದರೆಗೆ ಅವರು ಅತ್ಯಂತ ಮಹತ್ವಕೊಟ್ಟು ತಮ್ಮ ಹಣ ಖರ್ಚುಮಾಡಿಕೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಹಾಸಿಗೆಯಲ್ಲಿ ಮಲಗಿದ್ದಂತೆಯೇ ದಯಾನಿಧಿಯವರು ತಾವೇ ಮಗ್ಗುಲು ಬದಲಾಯಿಸಿಕೊಂಡರು. ದೇಹ ಮೂತ್ರ ವಿಸರ್ಜನೆಗೆ ಕರೆ ಕೊಟ್ಟಿತು. ಅವರು ಎದ್ದು ಹತ್ತಿರವೇ ಇದ್ದ ಶೌಚಾಲಯಕ್ಕೆ ಹೋಗಿ ಬರಬಹುದಿತ್ತು, ಆದರೆ ಅವರು ಹಾಸಿಗೆ ಬಿಟ್ಟು ಮೇಲೇಳಲಿಲ್ಲ. … Read more

ಕನ್ನಡದ ಬರಹಗಳನ್ನು ಹಂಚಿ ಹರಡಿ