ಆ ಹಸಿದ ಕಣ್ಣುಗಳಲ್ಲಿ ಉರಿದ ಬೆಂಕಿ: ರೇಷ್ಮಾ ಎ.ಎಸ್.

ಮಕ್ಕಳು ಆಟದ ಬಯಲಿನಲ್ಲಿ ಸೈಕಲ್ ಕಲಿಯುತ್ತಲಿದ್ದರು. ಜೊತೆಗೆ ಹೋಗಿದ್ದ ನಾನು ಮೈದಾನದಂಚಿನಲ್ಲಿ ಹುಲ್ಲಿನ ಮೇಲೆ ಕರ್ಚೀಫು ಹಾಸಿ ಕುಳಿತಿದ್ದೆ. ಆಗೀಗ ಅತ್ತಿತ್ತ ದೃಷ್ಟಿ ಹರಿಯುತ್ತಿತ್ತು. ಒಂದಷ್ಟು ದೂರದಲ್ಲಿ ಒಂದು ಅಲೆಮಾರಿ ಸಂಸಾರ. ಮೈದಾನದ ಒಂದು ಪಕ್ಕಕ್ಕೆ ಇದ್ದ ರಂಗಮಂಟಪವೇ ಅವರ ತತ್ಕಾಲದ ಬಿಡದಿ. ಎಣ್ಣೆ ಕಾಣದ ಕೆದರಿದ ಕೂದಲ, ಪಳಪಳನೆ ಮಿನುಗುವ ಕಂಗಳ, ಹರಕಲು ಬಟ್ಟೆಯಲ್ಲೂ ಗುಂಡುಗುಂಡಾಗಿ ಕಾಣುವ ಮೂವರು ಮಕ್ಕಳು ಆಟದ ಬಯಲಿನಲ್ಲಿ ಸೈಕಲ್ ಕಲಿಯುತ್ತಲಿದ್ದರು. ಜೊತೆಗೆ ಹೋಗಿದ್ದ ನಾನು ಮೈದಾನದಂಚಿನಲ್ಲಿ ಹುಲ್ಲಿನ ಮೇಲೆ ಕರ್ಚೀಫು ಹಾಸಿ … Read more

ಕೋತಿ ಮತ್ತು ಮನುಷ್ಯ: ರೇಷ್ಮಾ ಎ.ಎಸ್.

ಬಣ್ಣದ ಒಂದು ಇಡೀ ಸೀರೆಯನ್ನೇ ತಲೆಗೆ ರುಮಾಲಾಗಿ ಸುತ್ತಿ ಒಂದು ಚುಂಗನ್ನು ಹೆಗಲ ಮೇಲೆ ಬರುವಂತೆ ಇಳಿ ಬಿಟ್ಟಿದ್ದಾನೆ. ದೊಡ್ದ ಪೊದೆ ಮೀಸೆ, ಹಣೆಯಲ್ಲೊಂದು ಹಳದಿ ನಾಮ, ಮಾಸಲು ಕಪ್ಪು ಕೋಟು, ಎಂದೋ ಬಿಳಿಯಾಗಿದ್ದಿರಬಹುದಾದ ಪಂಚೆ, ಹೆಗಲಿಗೆ ಒಂದು ಚಿಂದಿ ಜೋಳಿಗೆ, ಒಂದು ಕೈಯಲ್ಲಿ ಬಣ್ಣದ ಬೇಗಡೆ ಹಚ್ಚಿದ ಕೋಲು, ಇನ್ನೊಂದು ಕೈಯ ದಾರದ ತಿದಿಯಲ್ಲಿ ಕಟ್ಟಿದುದು ಒಂದು ಧಡೂತಿ ಮಂಗ. ಅದೇ ಗಲ್ಲಿಯ ಮಕ್ಕಳಿಗೆಲ್ಲರಿಗೆ ಆಕರ್ಷಣೆಯಾಗಿದ್ದುದುದು. ಆ ಮಂಗಕ್ಕೆ ಬಣ್ಣ ಬಣ್ಣದ ಬಟ್ಟೆಗಳ ಚೂರುಗಳನ್ನು ಚೌಕಚೌಕವಾಗಿ … Read more

“ಹಾ! ಪುರುಷ ಜಗತ್ತೇ…”:ರೇಷ್ಮಾ ಎ.ಎಸ್.

ಸೀರೆಯ ನಿರಿಗೆಗಳನ್ನು ಜೋಡಿಸುತ್ತಾ ಹಾಸಿಗೆಯಲ್ಲಿ ಮಲಗಿದ್ದ ಪುಟ್ಟ ಮಗುವನ್ನಾಕೆ ನೋಡಿದಳು. ಮಗುವಿನ ಮುಖ ಬಾಡಿದ ಹೂವಿನಂತೆ ಸೊರಗಿತ್ತು. ಕಣ್ಣುಗಳು ಜ್ವರದ ತಾಪದಿಂದ ಬಸವಳಿದು ಒಣಗಿದ ಗುಲಾಬಿ ದಳದಂತಾಗಿದ್ದವು. ಜ್ವರ ಬಿಟ್ಟ ಸೂಚನೆಯಾಗಿ ಹಣೆಯ ಮೇಲೆ ಮೂಡಿದ್ದ ಬೆವರ ಹನಿಗೆ ಹಣೆಯಂಚಿನ ಗುಂಗುರು ಕೂದಲು ತೊಯ್ದು ಅಂಟಿಕೊಂಡಿತ್ತು. ಅವಳು ಸೆರಗಿನಿಂದ ಬೆವರನ್ನು ಹಗುರವಾಗಿ ಮಗುವಿಗೆ ಎಚ್ಚರವಾಗದಂತೆ ಒರೆಸಿದಳು. ರಾತ್ರಿಯಿಡೀ ಮಗು ಮಲಗಿರಲಿಲ್ಲ. ಜ್ವರದಿಂದ ಚಡಪಡಿಸುತ್ತಿತ್ತು. ಹನ್ನೊಂದು ಘಂಟೆಯವರೆಗೆ ಹೇಗೋ ಕುಳಿತಿದ್ದ ಅವಳ ಪತಿ "ಇನ್ನು ನಂಗಾಗೋಲ್ಲ, ನಿದ್ರೆ ಕೆಟ್ರೆ … Read more

ಹೆಣ್ಣು:ಎರಡು ಚಿತ್ರಗಳು-ರೇಷ್ಮಾ ಎ.ಎಸ್.

ಗೆಳತಿಯ ತಂಗಿ ಅಂಜಲಿಗೆ ಮಗುವಾಗಿದೆ, ಮೂರನೆಯದು. ನರ್ಸಿಂಗ್ ಹೋಂಗೆ ಮಗು-ಬಾಣಂತಿಯನ್ನು ನೋಡಲು ಹೋಗಿದ್ದೆ. ಮುದ್ದಾದ ಹೆಣ್ಣು ಮಗು ತೊಟ್ಟಿಲಲ್ಲಿ  ಮಲಗಿತ್ತು. ಗುಲಾಬಿ ಬಣ್ಣ, ಕಪ್ಪು ಗುಂಗುರು ಕೂದಲು, ಸುಂದರ ಮಗು. ಆದರೆ ಮಗುವಿನ ತಾಯಿಯ ಕಣ್ಣುಗಳು ಕೆಂಪಡರಿ ಊದಿಕೊಂಡಿದ್ದವು, ತುಂಬಾ ಅತ್ತ ಹಾಗೆ. ಗೆಳತಿ ಮತ್ತು ಅವಳ ತಾಯಿಯ ಮುಖ ಒಣಗಿ ಕಳಾಹೀನವಾಗಿತ್ತು. ಆಶ್ಚರ್ಯದಿಂದ ಕಾರಣ ಕೇಳಿದಾಗ ಬಾಣಂತಿ ಬಿಕ್ಕಳಿಸಿ ಅಳತೊಡಗಿದಳು. ಗೆಳತಿ ಸಪ್ಪೆ ಮುಖದಿಂದಲೇ ಬಾಯಿಬಿಟ್ಟಳು. "ಈ ಸಾರಿ ಗಂಡು ಮಗೂನೇ ಆಗುತ್ತೇಂತ ಎಲ್ರೂ ತುಂಬಾ … Read more