Facebook

ಪಂಜು ಪ್ರಕಾಶನ

ಪ್ರಕಾಶಕನ ಮಾತು….

ಇಸವಿ ಎರಡು ಸಾವಿರದ ಹನ್ನೊಂದರಲ್ಲಿ ಪ್ರಕಾಶನವೊಂದನ್ನು ಶುರು ಮಾಡಬೇಕು ಎಂಬ ಕನಸು ಎರಡು ಸಾವಿರದ ಹದಿಮೂರರಲ್ಲಿ  ಚೊಚ್ಚಲ ಕೃತಿಯನ್ನು ಪ್ರಕಟಿಸುವ ಮೂಲಕ ನನಸಾಗಿದೆ. ಯುವ ಬರಹಗಾರರು ಪುಸ್ತಕ ಬರೆಯುವ ಸಾಹಸಕ್ಕೆ ಕೈ ಹಾಕಿದಾಗ ಅದನ್ನು ಪ್ರಕಟಿಸುವ ಧೈರ್ಯ ತೋರುವ ಪ್ರಕಾಶಕರ ಸಂಖ್ಯೆ ನಮ್ಮಲ್ಲಿ ಬಹುಶಃ ಬಹಳ ಕಡಿಮೆ. ಹೆಚ್ಚು ಸಲ ಬರಹಗಾರನೇ ಪ್ರಕಾಶಕನಾಗಬೇಕಾದ ಅನಿವಾರ್ಯತೆಗಳಿರುತ್ತವೆ. ಅಂತಹುದೇ ಅನಿವಾರ್ಯತೆ ಎದುರಾಗಿ ಮೂಡಿದ ಪ್ರಕಾಶನ "ಪಂಜು" ಪ್ರಕಾಶನ ಎನ್ನಬಹುದು. 

"ಪಂಜು" ಪ್ರಕಾಶನದಿಂದ ಕನ್ನಡದ ಬರಹಗಾರರ ಅದರಲ್ಲೂ ಯುವ ಬರಹಗಾರರ ಪುಸ್ತಕಗಳನ್ನು ಪ್ರಕಟಿಸುವ ಮೂಲಕ ಅವರಿಗೊಂದು ಸಾಹಿತ್ಯದ ವೇದಿಕೆಯನ್ನು ಕಲ್ಪಿಸುವ ಆಶಯ ಪಂಜು ಪ್ರಕಾಶನಕ್ಕಿದೆ. ಆ ಆಶಯಕ್ಕೆ ನಿಮ್ಮೆಲ್ಲರ ಸಹಕಾರ, ಹಾರೈಕೆ, ಆಶೀರ್ವಾದಗಳು ಇರುತ್ತವೆ ಎಂಬ ಆಶಯ ನಮ್ಮದು. ಈ ನಿಟ್ಟಿನಲ್ಲಿ "ಪಂಜು" ಪ್ರಕಾಶನದ ಚೊಚ್ಚಲ ಕೃತಿಯಾದ "ವಂಡರ್‌ಲ್ಯಾಂಡಿನ ಪುಟ್ಟ ರಾಜಕುಮಾರನೂ ಮತ್ತು ಖುಷಿನಗರಿಯ ಆತನ ನಲ್ಮೆಯ ಗೆಳತಿಯೂ.." ಪ್ರಕಟವಾಗಿದೆ. ನೀವು ಸಹೃದಯಿಗಳು ಈ ಕೃತಿಯನ್ನು ಓದಿ ಮೆಚ್ಚಿ "ಪಂಜು" ಪ್ರಕಾಶನದ ಮುಂದಿನ ಕೃತಿಗಳನ್ನು ಸಹ ಕೊಂಡು ಓದಿ ಕನ್ನಡದ ಈ ಪಂಜನ್ನು ಇನ್ನೂ ಪ್ರಜ್ವಲವಾಗಿ ಬೆಳಗಲು ಸಹಕರಿಸುತ್ತೀರೆಂದು ನಂಬುತ್ತೇನೆ..  

ಡಿಸೆಂಬರ್, ೨೦೧೨                                                                                                               ಪ್ರಕಾಶಕ

 

ಪಂಜು ಪ್ರಕಾಶನದ "ವಂಡರ್‌ಲ್ಯಾಂಡಿನ ಪುಟ್ಟ ರಾಜಕುಮಾರನೂ ಮತ್ತು ಖುಷಿನಗರಿಯ ಆತನ ನಲ್ಮೆಯ ಗೆಳತಿಯೂ.." ಕೃತಿ ದೊರೆಯುವ ಸ್ಥಳಗಳು: 

ಸ್ವಪ್ನ ಬುಕ್ ಹೌಸ್ ಬೆಂಗಳೂರು, ಮೈಸೂರು, 

ಚೈತ್ರ ಬುಕ್ ಹೌಸ್, ಬೆಂಗಳೂರು.

ಆಕೃತಿ ಬುಕ್ಸ್, ಬೆಂಗಳೂರು

ನಾವಡ ಬುಕ್ಸ್, ಬೆಂಗಳೂರು

ಪ್ರಚೇತ ಬುಕ್ಸ್, ಬೆಂಗಳೂರು

ಅಂಕಿತಾ ಪುಸ್ತಕ, ಬೆಂಗಳೂರು

ರವಿ ಬೆಳಗೆರೆ ಬುಕ್ಸ್, ಬೆಂಗಳೂರು

ಟೋಟಲ್ ಕನ್ನಡ, ಜಯನಗರ, ಬೆಂಗಳೂರು

 

ಆನ್ ಲೈನ್ ನಲ್ಲಿ ಈ ಪುಸ್ತಕ ಕೊಳ್ಳಲು ಈ ಕೆಳಗಿನ ಲಿಂಕ್ ಗಳನ್ನು ಉಪಯೋಗಿಸಬಹುದು

https://sapnaonline.com/wonder-landina-putta-rajakumaranoo-mattu-khushi-nagariya-aatana-nalmeya-gelatiyoo-2729816

http://akrutibooks.com/kn/product/ವಂಡರ್-ಲ್ಯಾಂಡಿನ-ಪುಟ್ಟ-ರಾಜಕುಮಾರನೂ-ಮತ್ತು-ಖುಷಿ-ನಗರಿಯ-ಆತನ-ನಲ್ಮೆಯ-ಗೆಳತಿಯೂ

 

ಪಂಜು ಪತ್ರಿಕೆಯ ಸಂಪಾದಕ ನಟರಾಜು ಎಸ್ ಎಂ ಅವರ "ಎಲೆ ಮರೆ ಕಾಯಿ-ಸಂಪುಟ 1" ಎಂಬ ಕೃತಿ ಮೇಲೆ ತಿಳಿಸಿದ ಎಲ್ಲಾ ಪುಸ್ತಕ ಮಳಿಗೆಗಳಲ್ಲೂ ದೊರೆಯುತ್ತದೆ.

 

ಆನ್ ಲೈನ್ ನಲ್ಲಿ ಈ ಪುಸ್ತಕ ಕೊಳ್ಳಲು ಈ ಕೆಳಗಿನ ಲಿಂಕ್ ಗಳನ್ನು ಉಪಯೋಗಿಸಬಹುದು

http://akrutibooks.com/kn/product/ಎಲೆ-ಮರೆ-ಕಾಯಿ-ಸಂಪುಟ-೧

https://sapnaonline.com/elemarekayi-vol-1-2706629

 

ಪ್ರತಿಗಳಿಗಾಗಿ ಹಾಗು ಹಂಚಿಕೆಗಾಗಿ ಸಂಪರ್ಕಿಸಿ:

ಡಾ, ನಟರಾಜು ಎಸ್ ಎಂ

09883258979

ಈ ಮೇಲ್ ವಿಳಾಸ: smnattu@gmail.com, editor.panju@gmail.com