ಹೃದಯ ಗೆದ್ದವರು: ಸಂದೇಶ್ ಎಲ್. ಎಮ್.

 
 

ನನ್ನದು ಹೇಳಿ ಕೇಳಿ ಬಹುರಾಷ್ಟ್ರೀಯ ಕಂಪನಿ. ಏನೇನೋ ಸವಲತ್ತುಗಳು, ಎಲ್ಲ ಕಂಪನಿಗಳು ಸಾರ್ವಜನಿಕ ರಜೆಗಳು, ಹಬ್ಬ-ಹರಿದಿನಗಳಿಗೆ ರಜೆಮೀಸಲಿಟ್ಟರೆ  ನಮ್ಮ ಕಂಪನಿ ಪ್ರತಿಯೊಬ್ಬ ಉದ್ಯೋಗಿಗಳಿಗೂ ಒಂದು ದಿನದ ರಜೆಯನ್ನು "Valentine day" ಗೆ ಮೀಸಲಿಡುತ್ತದೆ, ಆ ರಜೆಯನ್ನು ವರ್ಷದಲ್ಲಿ ಉದ್ಯೋಗಿಯು ಯಾವಾಗ ಬೇಕಾದರೂ ಉಪಯೋಗಿಸಿಕೊಳ್ಳಬಹುದು!!!!
 ನಂಬ್ತೀರಾ..?? ನಂಬಲೇಬೇಕು ಆದ್ರೆ ಸ್ವಲ್ಪ ಸ್ಪೆಲ್ಲಿಂಗ್ ಮಿಸ್ಟೇಕ್ ಅಷ್ಟೆ ಅದು "Valentine day"  ಅಲ್ಲ "Volunteer day". 
 
My day is dedicated to "Diya" ಅನ್ನೋ ಒಂದು status ಹಾಕ್ಕಿದ್ದೆ, ಯಾರು ಅವ್ಳು ಅಂತ ಅದೆಷ್ಟು ಜನ ಪ್ರಶ್ನೆಮಾಡಿದ್ರು ಗೊತ್ತ, ಕೊನೆಗೆ My day is dedicated to "Diya Foundation" ಅಂತ ಬದಲಿಸಿದೆ  ಆಮೇಲೆ ಯಾರೊಬ್ಬರು ಪ್ರಶ್ನಿಸಲಿಲ್ಲ.

ಸಮಾಜಸೇವೆ ಮತ್ತು ಸಾಮಾಜಿಕ ಕಳಕಳಿಯ ಬಗ್ಗೆ ಗಂಟೆಗಟ್ಟಲೆ ಮಾತನಾಡುವ ಜನ ಸಮಯ ಸಿಕ್ಕಾಗ ಒಮ್ಮೆಯಾದರು ಸ್ವತಃ ತಾವೇ "ಸ್ವಯಂಸೇವಕರಾಗಿ" ಜನಸೇವೆಯಲ್ಲಿ ತೊಡಗಿಸಿಕೊಳ್ಳುವಲ್ಲಿ  ಎಷ್ಟು ಬೇಜವಾಬ್ದಾರಿ ತೋರುತ್ತಿದ್ದಾರೆ ಅನ್ನಿಸುತ್ತದ್ದೆ.

ಸಾಮಾನ್ಯವಾಗಿ ಪ್ರತಿಯೊಂದು ಕಂಪನಿಯು ವರ್ಷಕ್ಕೊಂದರಂತೆ ಪ್ರತಿಯೊಬ್ಬರಿಗೂ ಒಂದು ದಿನದ ರಜೆಯನ್ನು "Volunteer day" ಗಾಗಿ ಮೀಸಲಿಡುತ್ತದೆ, ಆ ದಿನವನ್ನುಉದ್ಯೋಗಿಗಳು ರಕ್ತದಾನ, Marathon, Walkathon, ಕ್ಲೀನ್ ಇಂಡಿಯಾ ಅಭಿಯಾನ ಹೀಗೆ  ಸಮಾಜಸೇವೆಯ ಉದ್ದೇಶಕ್ಕಾಗಿ ಉಪಯೋಗಿಸಿಕೊಳ್ಳಬಹುದು, ಅದರೆ ಅದನ್ನು ಸಮರ್ಪಕವಾಗಿ ಉಪಯೋಗಿಸಿಕೊಳ್ಳುವವರು ಮಾತ್ರ ಬೆರಳೆಣಿಕೆಯಷ್ಟು.
 
ಸಮಾಜಸೇವೆಯು ಕಂಪನಿಯ ಒಂದು ಅವಿಭಾಜ್ಯ ಅಂಗವಾಗಿರುವುದರಿಂದ ಪಾಲ್ಗೊಳ್ಳುವಿಕೆಯನ್ನು ಕಡ್ಡಾಯಗೊಳಿಸಲಾಗಿದೆ, ಉದ್ಯೋಗಿಗಳ ಹಿತ ದೃಷ್ಟಿಯಿಂದ ಅನೇಕ ಸಮಾಜ ಸೇವೆಯ ಕೆಲಸಗಳನ್ನು ಕಂಪನಿಯ ಮೂಲಕವೇ ಹಮ್ಮಿಕೊಳ್ಳಲಾಗುತ್ತದೆ, ವಾರಾಂತ್ಯಗಳಲಿ(ರಜೆ ದಿನಗಳಲ್ಲಿ) ಪಾಲ್ಗೊಂಡ ಅಭ್ಯಾರ್ಥಿಗಳಿಗೆ Compensatory ಆಫ್ ನೀಡಲಾಗುತ್ತದೆ, ಹೀಗೆ ಈಚೆಗಾದ ಅನೇಕ ಬದಲಾವಣೆಯಿಂದ ಪಾಲ್ಗೊಳ್ಳುವಿಕೆಯಲ್ಲಿ ಗಣನೀಯ ಏರಿಕೆ ಕಂಡಿದೆ. 
 
ಹೀಗೆ ಕೆಲವು ದಿನಗಳ ಹಿಂದೆ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನನ್ನ ಹೆಸರನ್ನು ನೊಂದಾಯಿಸಿಕೊಂಡೆ. ನಮ್ಮ ಕಂಪನಿಯೊಂದಿಗೆ ಕೈ ಜೋಡಿಸಿರುವ "ದಿಯ ಫೌಂಡೇಶನ್" ಗೆ ಬೆಳ್ಳಗೆ ೯:೩೦ ನಿಮಿಷಕ್ಕೆ ಹೆಸರು ನೊಂದಾಯಿಸಿದ್ದವರು ಹಾಜರಿದ್ದೆವು. ನಮ್ಮನ್ನು ಆತ್ಮೀಯವಾಗಿ ಬರಮಾಡಿಕೊಂಡ ಅಲ್ಲಿನ ವಿಶಿಷ್ಟ ಚೇತನರು (೧೮ ವರ್ಷ ಮೇಲ್ಪಟ್ಟವರು)  ಮತ್ತು ಸಿಬ್ಬಂಧಿ ವರ್ಗ ಅಚ್ಚುಕಟ್ಟಾಗಿ ಕಾರ್ಯ ನಿರ್ವಹಿಸುವುದನ್ನು ನೋಡಿ ಮೂಖ ವಿಸ್ಮಿತರಾಗಿಬಿಟ್ಟೆವು. 

***** 

ನಾವು ವಿಶಿಷ್ಟ ಚೇತನರ ಬಗ್ಗೆ ಓದಿದ್ದೇವೆ, ಅನೇಕ ಸಂಘ ಸಂಸ್ಥೆಗಳಿಗೆ ಭೇಟಿ ಕೊಟ್ಟಿರುತ್ತೇವೆ,ಅವರಲ್ಲಿ ಅಧಮ್ಯಚೇತನ, ಜೀವನೋತ್ಸಾಹವಿರುವುದನ್ನು ಗುರುಸಿರುತ್ತೇವೆ ಆ ಅವರು ಯಾವುದೊ ಶೂನ್ಯವನ್ನು ದಿಟ್ಟಿಸುತ್ತ ಸುಮ್ಮನೆ ಕುಳಿತಿರುವುದನ್ನು ನೋಡಿ ಪರ್ಶತ್ತಾಪ ಪಟ್ಟಿರುತ್ತೇವೆ. ಅವರಲ್ಲಿನ ಪ್ರತಿಭೆಯ ಕಿಡಿ ಹಾರಿಹೋಗುತ್ತಿರುವುದನ್ನ ನೋಡಿ ನೊಂದುಕೊಂಡಿರುತ್ತೇವೆ. 


 
"ದಿಯ ಫೌಂಡೇಶನ್" ಬೆಂಗಳೂರಿನ ಕಲ್ಯಾಣನಗರದ ವ್ಯಾಪ್ತಿಯಲ್ಲಿರುವ ವಿಶಿಷ್ಟ ಚೇತನರನ್ನು ಸ್ವಾವಲಂಬಿಯಾಗಿಸಲು ಹಗಲಿರುಳು ಶ್ರಮಿಸುತ್ತಿರುವ ಸಂಘಸಂಸ್ಥೆ (NGO). ಇಲ್ಲಿನ ವಿಶಿಷ್ಟ ಚೇತನರು ತಮ್ಮಲ್ಲಿರುವ ಪ್ರತಿಭೆಯನ್ನು ಕಲೆಯ ಮೂಲಕ ವ್ಯಕ್ತ ಪಡಿಸುತ್ತಿರುವುದಲ್ಲದೆ ಅದಕ್ಕೆ ಪ್ರತಿಯಾಗಿ ತರಬೇತಿ ಭತ್ಯೆಯನ್ನು ಗಿಟ್ಟಿಸಿ ಸ್ವಾವಲಂಬಿಗಳಾಗಿದ್ದರೆಂದರೆ ಎಲ್ಲರು ಖುಷಿಪಡಬೇಕಾದ ಸಂಗತಿ. 

ದೀಪಾವಳಿಗೆ ಹಚ್ಚುವ ಬಣ್ಣ ಬಣ್ಣದ ದೀಪ ಮಾಡುವುದರಲ್ಲಿ, ಅಂಗಡಿಯಿಂದ ಸಾಮಾನು ತರುವ ಪೇಪರ್ ಬ್ಯಾಗುಗಳು, ಮೇಜಿನಮೇಲೆ, ಶೋ ಕೇಸ್ ಒಳಗಿರಿಸುವ ಆಕರ್ಷಕ ವಸ್ತುಗಳು,  ಬೆಳಕು ಪಸರಿಸುವ ಮೇಣದ ಬತ್ತಿಗಳು, ಬಾಯ್ನೀರು ತರಿಸುವ ಚಾಕಲೇಟ್ ತಯಾರಿಕೆ ಮತ್ತು ಪ್ಯಾಕಿಂಗ್, ಕಂಪ್ಯೂಟರ್ ಡಾಟಾ ಎಂಟ್ರಿ, ತೋಟಗಾರಿಕೆ ಹೀಗೆ ಅನೇಕ ವಿಷಯಗಳಲ್ಲಿ ವಿದ್ಯಾರ್ಥಿಗಳು ಅಸಾಮಾನ್ಯರಾಗಿದ್ದಾರೆ.  

ಪ್ರಾರಂಭದಲ್ಲಿ ಸಂಸ್ಥೆಯ ಪರಿಣಿತರು ವಿಶಿಷ್ಟ ಚೇತನರಿಗೆ ಈ ಮೇಲಿನ ವಿಷಯಗಳಲ್ಲಿ ತರೆಬೇತಿ ನೀಡುತ್ತಾರೆ ಮತ್ತು  ಅವರ ಆಸಕ್ತಿ ಹಾಗೂ ಸಾಮರ್ಥ್ಯಕ್ಕೆ ಅನುಗುಣವಾಗಿ ಕೆಲಸವನ್ನು ನಿಯೋಜಿಸಲಾಗುತ್ತದೆ. ಅವರ ಕ್ಷಮತೆಯನ್ನು ಅಧಿಕಗೊಳಿಸಲು ಟಾರ್ಗೆಟ್ಗಳನ್ನು ನೀಡಲಾಗುತ್ತದೆ. ವಿಶಿಷ್ಟ ಚೇತನರ ಚೈತನ್ಯದ ಮುಂದೆ ನಾವು ಮೂಕವಿಸ್ಮಿತರಾಗುವುದರಲ್ಲಿ ಯಾವುದೇ ಸಂಶಯವಿಲ್ಲ. 

ಕಲಿಯುವಿಕೆ ಸಾಗರದಂತೆ, ನೀರು ಮೊಗೆದಷ್ಟು ಖಾಲಿಯಾಗುವ ಯಾವುದೇ ಸೂಚನೆಯು ತಿಳಿಯುವುದಿಲ್ಲ. ಮೊದಲಿಗೆ ವಿಶಿಷ್ಟ ಚೇತನರಿಗೆ ಸಹಾಯ ಮಾಡುವ ನೆಪದಲ್ಲಿ ಒಂದು ದಿನದ ರಜೆಯಾದರು ಸಿಗುವುದಲ್ಲ ಎಂಬ ಉದ್ದೇಶವಿಟ್ಟುಕೊಂಡು ಅಲ್ಲಿಗೆ ಹೋದೆ. ಬಣ್ಣ ಬಳಿದ ದೀಪಗಳ ಮೇಲೆ ಚಿನ್ನದ ಬಣ್ಣದ ಡಿಸೈನ್ ಮಾಡುವ ಕೆಲಸವನ್ನು ಆರಿಸಿಕೊಂಡೆ. ನಾವು ಆ ಅವರಿಗಿಂತ ಏನೂ ಕಮ್ಮಿಯಿಲ್ಲ ಎಂಬ ಅಹಂನಿಂದ ನಮಗೂ ಟಾರ್ಗೆಟ್ ಫಿಕ್ಸ್ ಮಾಡಲು ಕೇಳಿಕೊಂಡೆವು. ಸುಮಾರು ೨೦೦ ದೀಪವಿರುವ ಟೇಬಲ್ಮೇಲೆ ಕುಳಿತ ಎಲ್ಲರೂ ಕೆಲಸ ಮಾಡುವುದರಲ್ಲಿ ತಲ್ಲೀನರಾದೆವು. ದಿನ ಮುಗಿದಾಗ ನಾನು ೭೫ ದೀಪಗಳಿಗೆ ಬಣ್ಣ ಬಳಿದಿದ್ದೆ , ಉತ್ಸಾಹಿ ಚೇತನರು ಬಣ್ಣ ಬಳಿದ ದೀಪಗಳ ಸಂಖ್ಯೆ ಮಾತ್ರ ೧೫೦ ದಾಟಿತ್ತು!!!! ಒಮ್ಮೆ ಅವರ ಕೆಲಸದ ಮೇಲಿನ ಶ್ರದ್ದೆಯನ್ನು ಊಹಿಸಿಕೊಳ್ಳಿ… 

ನಾ ಕಲಿತಿದ್ದು:
1. ಅವರಲ್ಲಿರುವ ತಾಳ್ಮೆ
2. ಕೆಲಸದ ಮೇಲಿರುವ ಶ್ರದ್ದೆ 
3. ಸ್ವಾವಲಂಬಿಗಳಾಗಿ ಮನೆಯವರಿಗೆ ನೆರವಾಗುತ್ತಿರುವ ಅವರ ಉತ್ಸುಕತೆ 
4. ಕಾಯಕದಲ್ಲಿ ಕಾಣುವ ಉತ್ಸಾಹ 
5. ಪುಟ್ಟ ಪುಟ್ಟ ತುಂಟತನಕೆ ಮನಸು ಬಿಚ್ಚಿ ನಗುವ ಅವರ ಮುಗ್ದತೆ, ಸರಳತೆ 
6. ಜಾತಿ, ಧರ್ಮ ಬೇದ ಎಲ್ಲವನ್ನು ಮರೆತು ಮಾನವೀಯತೆ ಮೆರೆವ ಅವರ ನಿಷ್ಕಲ್ಮಶ ಪ್ರೀತಿ 

ಅಲ್ಲಿ "ನಾನು" ಬದಲಾಗಿ "ನಾವು" ಇದೆ, ನೀನು ಬದಲಾಗಿ "ನೀವು"  ಇದೆ.. ಇದು ಕೇವಲ ಪದಗಳಿಗೆ/ಮಾತಿಗೆ ಮೀಸಲಲ್ಲ ಅವರ ಮನಸಿನಲ್ಲಿ ಮತ್ತವರ ಜೀವನದಲ್ಲಿ ಸದಾ ಆವರಿಸಿಕೊಂಡಿದೆ.. 

ಹಾಟ್ಸ್ ಆಫ್ ಟು ಯು ಮುದ್ದುಗಳೇ..  

ನಿಮಗೂ ಈ ಅವರೊಂದಿಗೆ ಬೇರೆಯಬೇಕೆ? ಅವರ ಕೆಲಸಗಳಿಗೆ ಸ್ಪೂರ್ತಿಯಾಗಿ ಸಹಾಯಮಾಡಿ ಮನಸು ಹಗುರ ಮಾಡಿಕೊಳ್ಳಬೇಕೆ? ತಡ ಮಾಡಬೇಡಿ ಕೆಳಗಿನ ವಿಳಾಸಕೊಮ್ಮೆ ಭೇಟಿಕೊಡಿ.. 
 
Diya Foundation
#112/147, Chikkatayappa Reddy Layout,
Chelekere, Kalyan Nagar,
Bangalore, 560043
India
Tel: +91 80 2543 0040
Mob: +91 98800 52833

 
*****
ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

8 Comments
Oldest
Newest Most Voted
Inline Feedbacks
View all comments
Rukmini Nagannavar
Rukmini Nagannavar
9 years ago

nice article Sandesh…
asadya ennuvudanna sadhyabmaduva sethana chilumegalavru. hemme anisutte avara bagge oduvaga..

avara thalme, shraddhe, mugdha nagu namagoo barali..

Althia cardoza
Althia cardoza
9 years ago

Well said and I beleive this message needs to be passed throughout the world

sandesh
sandesh
9 years ago

Thank u Althiya..:)

Rathan Narayan
Rathan Narayan
9 years ago

Super artical sandy…
Keep writting…
Share the love..

ಅಮರದೀಪ್.ಪಿ.ಎಸ್.
ಅಮರದೀಪ್.ಪಿ.ಎಸ್.
9 years ago

ಸಂದೇಶ್ ತುಂಬಾ ಚೆನ್ನಾಗಿದೆ….. ಬರೀತಿರು….

ಮಮತ ಹಿಮಂತ್
ಮಮತ ಹಿಮಂತ್
9 years ago

ಮನ ಮುಟ್ಟುವ ಸಂದೇಶವನ್ನು ನೀಡಿರುವೆ ಸಂದೇಶ…..

ಮಮತ ಹಿಮಂತ್
ಮಮತ ಹಿಮಂತ್
9 years ago

ಮುಂದಿನ ಲೇಖನಕ್ಕೆ ಶುಭ ಹಾರೈಕೆ……

santhoshkumar LM
santhoshkumar LM
9 years ago

Superb!

8
0
Would love your thoughts, please comment.x
()
x