ಹಲೋ ಡಾಕ್ಟರ್: ಅಮರ್ ದೀಪ್ ಪಿ.ಎಸ್.

ಅದೊಂದು ಓಣಿಯಲ್ಲಿ ಆಗಾಗ ವಯಸ್ಸಿನ ಹುಡುಗರ ನಡುವೆ ಹಾಕ್ಯಾಟ, ಜಗಳ ನಡೆಯುತ್ತಿದ್ದವು. ಮತ್ತೇನಿಲ್ಲ, ರಜಾ ದಿನ ಬಂತೆಂದರೆ, ಹಬ್ಬ ಹರಿದಿನಗಳು ಬಂದವೆಂದರೆ, ಇಲ್ಲವೇ ಮದುವೆ ಸೀಜನ್ನು ಇದ್ದರೆ ಹೀಗೆ… ಅಲ್ಲಿ ಗುಂಪು ಕಟ್ಟಿಕೊಂಡು ಇಸ್ಪೀಟು ಆಡುವ ಖಯಾಲಿ ಅವರಿಗೆ. ಅಲ್ಲಿಗೆ ಇಸ್ಪೀಟು ಆಡುವವರು ಮಾತ್ರವೇ ಆಲ್ಲ ಆಡದವರೂ ಸಹ ಇರುತ್ತಿದ್ದರು. ಹಿಂದೆ ಸಾಲ ಕೊಟ್ಟು ಆಡಿಸಲು, ಇಸ್ಪೀಟು  ಆಡಲು ಹುರಿದುಂಬಿಸಿ ಮತ್ತೆ ಮತ್ತೆ ಸಾಲಗಾರರನ್ನಾಗಿಸಲು ಅಷ್ಟೇ.  ಅದಿದ್ದದ್ದೇ ಬಿಡಿ. ಅದಲ್ಲ ನಾನು ಹೇಳುತ್ತಿದ್ದುದು ಹೀಗೆ ಆಡುತ್ತಿದ್ದ ವಯಸ್ಸಿನ ಹುಡುಗರ ದಂಡಿನಲ್ಲಿ ಅಲ್ಲೊಬ್ಬ ಮಧ್ಯ ವಯಸ್ಕ ಲುಂಗಿ ಬನಿಯನ್ನು ಮೇಲೊಂದು ಟವೆಲ್ ಹಾಕಿಕೊಂಡು  ಮೋಟು ಬೀಡಿ ಎಳೆಯುತ್ತಾ "ಹಾಕ್ರಲೇ …. ಇದಪ್ಪಾ ಆಟ ಅಂದ್ರೆ…. " ಅನ್ನುತ್ತಾ ಕೂಡುತ್ತಿದ್ದ. 

ಮೊದ  ಮೊದಲು ಈವಯ್ಯನ ಎಂಟ್ರಿ ಅನುಮಾನವಾಗಿದ್ದರೂ ಹುಡುಗರಿಗೆ ಆಮೇಲಾಮೇಲೆ ಅಭ್ಯಾಸವಾಗಿ ಬಿಟ್ಟಿತ್ತು. ಆದರೆ, ಆ ವ್ಯಕ್ತಿಯ ಪರಿಚಯವಾದರೂ ಪಕ್ಕ ಹೇಳಲೇಬೇಕಲ್ಲ ? "ನಾನಿಲ್ಲೇ, ಇದೇ ಓಣಿಯಲ್ಲಿ ಹೊಸದಾಗಿ ಬಾಡಿಗೆ ಮನೆಯಲ್ಲಿ ಬಂದವನು" ಎಂದಷ್ಟೇ ಹೇಳಿದ್ದ. ಓಣಿ ಅಂದಮೇಲೆ ದಿನಬೆಳಗಾದರೆ ಆ ವ್ಯಕ್ತಿಯ ಮನೆ ಮುಂದೆ ಹಾದು ಹೋಗುವ ಹುಡುಗರಿಗೆ ಓಣಿಯ ಜನರಿಗೆ ಪತ್ತೆ ಆಗೇ ಆಗುತ್ತೆ. ಸರಿ, ಒಂದಷ್ಟು ದಿನಗಳ ವರೆಗೆ ಏನೆಂದರೆ ಏನೂ ಆ ಮನೆಯ ಮುಂದೆ ಬೋರ್ಡ್ ಇದ್ದಿಲ್ಲ. ಒಂದಿನ ಇದ್ದಕ್ಕಿದ್ದಂತೆ ಆ ಬಾಡಿಗೆ ಮನೆ ಮುಂದೆ ಡಾಕ್ಟರ್ ….. ಪದವಿಯನ್ನು ಆ ವ್ಯಕ್ತಿ ತನ್ನ ಹೆಸರಿಗೆ ತಗುಲಿಸಿ ಬೋರ್ಡ್ ನೇತಾಕಿಕೊಂಡಿದ್ದ. ಇಸ್ಪೀಟು ಎಲೆ ಹಾಸುವವರಿಗೆ, ಓಣಿಯ ಜನರಿಗೆ ಆ ಮನೆ ಮುಂದೆ ಓಡಾಡುವ ಅಪರಿಚಿತರಿಗೆ ಆಶ್ಚರ್ಯ ವಾದರೂ ತರಲೆ ಹುಡುಗರು ಕೇಳಿಯೇ ಬಿಟ್ಟಿದ್ದರು; " ಏನ್ ಸರ್, ಅದ್ಯಾವಾಗ ಯಾವ ಯುನಿವರ್ಸಿಟಿಯಲ್ಲಿ  'ಇಸ್ಪೀಟು ಆಟದ ಮಹತ್ವ ಮತ್ತು ಪರಿಣಾಮ' ದ ಪ್ರಬಂಧ ಬರೆದು ಗಿಟ್ಟಿಸಿಕೊಂಡ್ರಿ…." ಆಗೆಲ್ಲ  ಹಿ ಹಿ ಹಿ …. ಅಂತ ನಕ್ಕು "ಇಲ್ಲಾರೀ, ನನ್ನದು ಇಪ್ಪತ್ತು ವರ್ಷಗಳ ಹಿಂದೇನೇ ಹಳೇ ಸಿಲ್ಯಾಬಸ್ ಓದಿ ಡಿಗ್ರಿ ತಗೊಂಡಿದ್ದು; ಡಾಕ್ಟರ್ ದ್ದು " ಅಂದು ತೇಲಿಸಿಬಿಡುತ್ತಿದ್ದ. 

ದೀಪಾವಳಿ ಹಬ್ಬದ ರಂಗಿನಲ್ಲಿ ಮೂರು ಮೂರು ದಿನಗಳ ಇಸ್ಪೀಟು ಆಟದಲ್ಲಿ ಎಷ್ಟು ಜನ ಗೆದ್ದ ಖುಷಿಯಲ್ಲೋ, ಕಳೆದುಕೊಂಡವರ ದು:ಖ ತಿಂಗಳಾನುಗಟ್ಟಲೆ ನಾಪತ್ತೆ ಆಗುವುದರಲ್ಲೋ, ಪ್ರತಿ ವರ್ಷ ಯಾರಾದರೊಬ್ಬರದೂ ಇಂಥ ಸುದ್ದಿ ಇದ್ದೇ ಇರುತ್ತದೆ.  ಇದು ನಮ್ಮೂರು, ಆ ಊರು ಅಂತಲ್ಲ, ಎಲ್ಲಾ ಊರುಗಳಲ್ಲೂ ಇಂಥ ಉದಾಹರಣೆಗಳು ಸಿಗುತ್ತವೆ.  ಅಂಥದ್ದೇ ಪ್ರಸಂಗದಲ್ಲಿ ಈ ಲುಂಗಿ ಟವೆಲ್ ಗಿರಾಕಿ ಯಾವುದೋ ಊರಿಂದ ಎದ್ದು ಬಂದದ್ದೆಂದು ತಿಳಿಯಲು ಬಹಳ ದಿನಗಳೇನು ಬೇಕಾಗಲಿಲ್ಲ ಜನರಿಗೆ. ಅದಕ್ಕೂ ಮುಂಚೆ ಆತ ಯಾವುದೋ ಡಾಕ್ಟರ್ ಹತ್ತಿರ ಕಾಂಪೌಂಡರ್ ಆಗಿ ಕೆಲಸ ಮಾಡುತ್ತಿದ್ದ. ಆದರೆ, ಆತನ ಹೆಂಡತಿ ಎಂ. ಎ. ಇಂಗ್ಲೀಷು ಮಾಡಿಕೊಂಡಿದ್ದಳು. ಆದರೆ ಈತನದೇ ವಿಚಿತ್ರ. ಒಮ್ಮೊಮ್ಮೆ ಅಗದೀ desent ಆಗಿ ಡ್ರೆಸ್ ಮಾಡಿಕೊಂಡು ಅತ್ಯಂತ ಸಭ್ಯ ರೀತಿಯಲ್ಲಿ ಮಾತಾಡುತ್ತಿದ್ದ. ಓಣಿಯ ದೇವಸ್ಥಾನದ ಪೂಜೆ, ಮೆರವಣಿಗೆ ಎಲ್ಲದರಲ್ಲೂ ಬೆರೆತು ಕೆಲಸ ಮಾಡುತ್ತಿದ್ದ.  ಇಲ್ಲವಾದರೆ ತಲೆ ಮೇಲೆ ಟವೆಲ್ ಹಾಕಿಕೊಂಡು ಲುಂಗಿ ಬನಿಯನ್ನು ಮೇಲೆ ಇಸ್ಪೀಟು ಎಲೆ ಸವಾರಿ ಮಾಡುವವರ ಕೋಚ್ ನಂತೆ ನಿಂತು ಮೋಟು ಬೀಡಿ ಸೇದುತ್ತಾ ನಿಂತುಬಿಡುತ್ತಿದ್ದ.

ಇದೆಲ್ಲಾ ವರಸೆಗಳ ನಂತರವೇ ಮನೆ ಮುಂದೆ ಡಾಕ್ಟರ್ ……. ಬೋರ್ಡ್ ತಗುಲಿ ಹಾಕಿಕೊಂಡು ಹೊಸ ಅವತಾರ ಆರಂಭಿಸಿದ್ದ. ಆದರೆ ಉಪದ್ವ್ಯಾಪಿತನದ ಗಿರಾಕಿ ಅಲ್ಲ. ಅಸಭ್ಯಕ್ಕೋ ಕುಚೇಷ್ಟೆಗೋ ತನ್ನನ್ನು ಈಡು ಮಾಡಿಕೊಳ್ಳುತ್ತಿದ್ದಿಲ್ಲ ವಾದರೂ ದುಡಿಮೆಗೆ ತನ್ನ ಹಳೆಯ ಕಳಂಕದ ತರಚು ಮರೆಮಾಚಲು ಹೀಗೆ ಅವತಾರ ಎತ್ತಿದ್ದ.  ಆದರೂ ವರ್ಷಾನುಗಟ್ಟಲೇ ಓದಿ ಮಣ್ಣು ಹೊತ್ತು ಕಷ್ಟ ಪಟ್ಟು ಡಿಗ್ರಿ, ಮಾಸ್ಟರ್ ಡಿಗ್ರಿ ಪಡೆದು ಲಕ್ಷ ಗಟ್ಟಲೇ ಇನ್ ವೆಸ್ಟ್ ಮಾಡಿ ನರ್ಸಿಂಗ್ ಹೋಂ, ಹಾಸ್ಪಿಟಲ್, ಕಟ್ಟಿಸಿ ಪ್ರೊಫೆಶನ್ ಆರಂಭಿಸಿದ ವೈದ್ಯರಿಗೆ ಒಮ್ಮೊಮ್ಮೆ ರೋಗಿಗಳ ಸಂಧಿಗ್ಧ ಪರಿಸ್ಥಿತಿ, ಗಂಭೀರತೆಯಲ್ಲಿ ತಮ್ಮ ಎಲ್ಲಾ ಅನುಭವಗಳನ್ನೂ ಕೈ ಮೀರುವ ಆತಂಕಗಳು ಇಲ್ಲದಿಲ್ಲ. ಅಂಥಾದ್ದರಲ್ಲಿ ಯಾವುದೇ ಅರ್ಹತೆ ಇಲ್ಲದೇ ಅನುಭವವೂ ಇಲ್ಲದೇ ಇದ್ದಕ್ಕಿದ್ದಂತೆ ಹೆಸರಿನ ಹಿಂದೆ ಡಾಕ್ಟರ್ ಬೋರ್ಡ್ ತಗುಲಿಸಿ ಕೊರಳಲ್ಲಿ ಸ್ಟೆಥಸ್ಕೋಪ್ ಹಾಕಿಕೊಂಡು ಬಿಟ್ಟರೆ ಬೋರ್ಡ್ ನೋಡಿ ಬರುವ ರೋಗಿಗಳ ಗತಿ ಏನು? ಓಣಿಯ ಜನ ಅನುಮಾನದಿಂದಲೇ ನೋಡುತ್ತಿದ್ದರೂ ಯಾರೊಬ್ಬರೂ ಆತನ ಬಳಿ ಚಿಕಿತ್ಸೆಗೆ ಹೋಗುತ್ತಿದ್ದಿಲ್ಲ. 

 ಆದರೆ ಯಾವ ಯಾವ ರೋಗಿಗಳು ಎಲ್ಲಿಂದ ಬರುತ್ತಿದ್ದಾರೆಂತಲೂ, ಯಾವ ಖಾಯಿಲೆಗೆ ಔಷಧಿ ತಗೋತಾ ಇದಾರೆ ಅಂತೆಲ್ಲಾ ಸೂಕ್ಷ್ಮವಾಗಿ  ಗಮನಿಸುತ್ತಿದ್ದರು. ಬರುವ ರೋಗಿಗಳೆಲ್ಲ ಗುಪ್ತ ರೋಗಕ್ಕೆ ಔಷಧಿಗೆಂದೇ ಬರುತ್ತಿದ್ದರು. ಅದೇನು ಔಷಧಿ ಕೊಡುತ್ತಿದ್ದನೋ ಏನೋ ಡಾಕುಟ್ರು. ಒಂದು ವಿಷಯ ಸ್ಪಷ್ಟವಾಗಿತ್ತು; ಒಮ್ಮೆ ಬಂದ ರೋಗಿ ಇನ್ನೊಮ್ಮೆ ಅಪ್ಪಿತಪ್ಪಿ ಈ ಡಾಕ್ಟರ್ ಹತ್ತಿರ ಸುಳಿಯುತ್ತಿರಲಿಲ್ಲ. ಇಂಥ ಡಾಕ್ಟರರ ಚಿಕಿತ್ಸೆ ಮತ್ತು ಅಮಾಯಕ ರೋಗಿಗಳ ಪರದಾಟದಲ್ಲಿ ಹೊಸ ಬೈಕ್ ಮನೆ ಮುಂದೆ ನಿಂತಿತು. ಮತ್ತೀಗ ಡಾಕ್ಟರ್ ಹಳ್ಳಿ ಹಳ್ಳಿಗೆ ಹೋಗಿ ಚಿಕಿತ್ಸೆ ಕೊಟ್ಟು ಬರುವ ದಿನಚರಿ ಆರಂಭಿಸಿದ್ದರು. ಯಾವ ಹಳ್ಳಿಗೆ ಹೋಗುತ್ತಿದ್ದ, ಯಾವ ರೋಗಿ ಚಿಕಿತ್ಸೆ ಪಡೆಯುತ್ತಿದ್ದ, ಗೊತ್ತಾಗುತ್ತಿದ್ದಿಲ್ಲ.  ಆ ವಿಚಾರಕ್ಕೆ ಜನರು ತಲೆ ಹಾಕದಂತೆ ಡಾಕ್ಟರ್ ಮೊಬೈಲ್ ಸರ್ವಿಸ್ ಆರಂಭಿಸಿದ್ದರು. 

ಒಮ್ಮೆ ಏನಾಗಿತ್ತೆಂದರೆ ಯಾವುದೋ ಹಳ್ಳಿ ಮನಿಷ್ಯ ಈ ಡಾಕ್ಟರ ಮನೆಗೆ ಬಂದು "ಡಾಕುಟ್ರೆ ಯಾಕೋ ಎದೆ ನೌತಾ ಅದೇ"  ಅನ್ನುತ್ತಾ ಬಂದಿದ್ದಾನೆ. ಒಂದು ಸ್ಟೂಲ್ ಮೇಲೆ ಆ ವ್ಯಕ್ತಿಯನ್ನು ಕೂರಿಸಿ ಒಳಗಿನಿಂದ ಎರೆಡೆರಡು ತುಂಬಿದ ಸಿರೆಂಜ್ ಹಿಡಿದು "ಎಲ್ಲಿ, ಎದೆಯ ಯಾವ ಭಾಗದಲ್ಲಿದೆ ನೋವು? .. ಅಲ್ಲಿಗೇ ಡೈರೆಕ್ಟ್ ಆಗಿ ಇಂಜೆಕ್ಷನ್ ಕೊಟ್ ಬಿಡ್ತೀನಿ, ಎಲ್ಲಾ ಸರಿ ಹೋಗುತ್ತೆ " ಅಂದಿದ್ದಾರೆ ಡಾಕುಟ್ರು…. ಪುಣ್ಯಕ್ಕೆ ಆ ರೋಗಿ ಅಂತ ಸ್ಥಿತಿಯಲ್ಲೂ ತನ್ನ ಸ್ಥಿಮಿತ ಮತ್ತು ಬುಧ್ಹಿ ಕಳೆದುಕೊಳ್ಳದೇ ಪಾರಾಗಿ ಬಂದು ಬೇರೆಡೆ ಚಿಕಿತ್ಸೆ ಪಡೆದನಂತೆ. ಆ ಸಂಧರ್ಭದಲ್ಲಿ ಹಾಜರಿದ್ದ ಕೆಲ ಜನರು ಇವತ್ತಿಗೂ ಅದನ್ನು ಮೆಲಕು ಹಾಕುತ್ತಾರೆ ಮತ್ತು ಕ್ಯಾಕರಿಸುತ್ತಲೂ ಇರುತ್ತಾರೆ. 

ಇದರ ಮೇಲೆ ಆ  ಡಾಕುಟ್ರು ಟ್ರೀಟ್ಮೆಂಟ್ ಎಫೆಕ್ಟ್ ಎಂಥದೆಂದು ತಿಳಿಯವುದು ಕಷ್ಟವೇನಲ್ಲ. ಪಡ್ಡೆ  ಹುಡುಗ ರೆಲ್ಲ ಈ ಡಾಕುಟ್ರು ಹಿಂದೆ  ಬಿದ್ದು  ಒಂದು  ಗತಿ  ಕಾಣಿಸಲೇಬೇಕು  ಅಂತಲೇ  ತಮ್ಮ  ಇಸ್ಪೀಟು  ಎಲೆ ಹರಡೋ ಚಾಪೆ ಸುತ್ತಿಟ್ಟುಬಿಟ್ಟರು. ನೋಡ ನೋಡುತ್ತಲೇ ಡಾಕುಟ್ರು ಚಿಕ್ಕದೊಂದು ಕ್ಲಿನಿಕ್ ಸಹ ಶುರು ಹಚ್ಚಿಕೊಂಡರು. ಈಗ ಹೊಸ ಹೊಸ ರೋಗಿಗಳ ಎಂಟ್ರಿ ಮತ್ತು ಹಳೇ ರೋಗಿಗಳ ಮತೊಮ್ಮೆ ಹೆಜ್ಜೆ ಇಡದಂಥ ಪರಿಸ್ಥಿತಿ ಬಹುಶಃ ಡಾಕುಟ್ರಿಗೆ ಗೊತ್ತಾಗಿಬಿಟ್ಟಿತ್ತು. ಆದರೂ ತೋರಿಸಿಕೊಳ್ಳದೇ ಕ್ಲಿನಿಕ್ ಶೆಟರ್ಸ್ ತೆಗೆದು ಮುಚ್ಚುತ್ತಲೂ, ಧೂಳು ತೆಗೆಯುತ್ತಲೂ ಇದ್ದ. ಪ್ರಿಸ್ಕ್ರಿಪ್ಷನ್ ಚೀಟಿ ಖಾಲಿಯಾಗದಿರುವ ಬುಕ್ಕನ್ನು ತಿರುವುತ್ತಲೂ ಕುಳಿತು ತಿರುಗುವ ಫ್ಯಾನ್ ನೋಡುವುದು ಮತ್ತೆ ಮತ್ತೆ ಕರೆಂಟು ಬಿಲ್ಲು ಕಟ್ಟಲು, ಬಾಡಿಗೆ ಕಟ್ಟಲು ಹುಟ್ಟದ ರೊಕ್ಕದ ಕಡೆ ದೈನೇಸಿಯಾಗಿ ಯೋಚಿಸಿ ಫ್ಯಾನ್ ಸ್ವಿಚ್ ಆಫ್ ಮಾಡುತ್ತಿದ್ದ.  ಎಲ್ಲಾ ಅತಿರೇಕದ ವರ್ತನೆಗೂ ಅಮಾಯಕರನ್ನು  ವಂಚನೆಗೆ ತಳ್ಳಿ  ತಾನು  ದುಂಡಗಾಗುವ  ಪರಿಗೆ  ಒಂದಲ್ಲಾ ಒಂದು ದಿನ ಅಂತ್ಯ ಇದ್ದೇ ಇರುತ್ತದೆ.  

ಪ್ರತಿ ಚಿಕ್ಕ ಊರಿನಲ್ಲೂ ನಗರದಲ್ಲೂ ನಕಲಿ  ವೈದ್ಯರ  ಹಾವಳಿ  ಇರುವ ಬಗ್ಗೆ  ಆಗಾಗ ಏಳುತ್ತಿದ್ದ  ಕೂಗಿಗೆ  ಆ ದಿನಗಳಲ್ಲಿ ಬಹುಶಃ ಹೆಚ್ಚು ಪ್ರತಿಕ್ರಿಯೆ  ಮತ್ತು ಕಾಳಜಿ  ವಹಿಸಿದ ಸರ್ಕಾರವು ನಕಲಿ ವೈದ್ಯರ ಪತ್ತೆಗೆ ಮುಂದಾಗಿತ್ತು. ಅದರಲ್ಲೂ ಸಾರ್ವಜನಿಕರು ಇಂಥಹುದೇ ನಕಲಿ ವೈದ್ಯರಿಂದ ಆಪ್ತರ, ಬಂಧುಗಳ ಜೀವ ಕಳೆದುಕೊಂಡವರ ಸಹಕಾರ ಅತೀವ ಹುರುಪು ತುಂಬಿತು.  ಆ ಊರಿನಲ್ಲಿ ಇಷ್ಟು ನಕಲಿ ವೈದ್ಯರು ಸಿಕ್ಕರಂತೆ, ಈ ಊರಿನಲ್ಲಿ ಇಷ್ಟು ನಕಲಿ ವೈದ್ಯರನ್ನು ಪತ್ತೆ ಮಾಡಿ ಅರೆಸ್ಟ್ ಮಾಡಿದ್ದಾರಂತೆ, ಬರೀ ಇವೆ ಸುದ್ದಿಗಳನ್ನು ನಮ್ಮ ಡಾಕುಟ್ರು  ಕಿವಿಗೆ ಬಿದ್ದರೂ, ಏನೂ ಗೊತ್ತೇ ಇಲ್ಲ, ಮತ್ತು ತಾನು ನಕಲಿ ಅಲ್ಲ; ಅಸಲಿ ಎಂಬಂತೆಯೇ ಫೋಸು ಕೊಟ್ಟು ಕ್ಲಿನಿಕ್ ತೆಗೆಯುತ್ತಿದ್ದ.  ಅದಾಗಿ ಒಂದೆರಡು ದಿನ ಆಗಿದ್ದಿಲ್ಲ; ಸಂಜೆ ಕ್ಲಿನಿಕ್ ನಲ್ಲಿ ದೇವರ ಫೋಟೋ ಮುಂದೆ ದೀಪ ಹಚ್ಚಿ ತನ್ನ ಚೇರಿನಲ್ಲಿ ಕುಳಿತುಕೊಳ್ಳಬೇಕು, ನಾಲ್ಕೈದು ಜನ ತನಿಖಾ ತಂಡದವರು ಬಂದು ಎದುರಿಗೆ ನಿಲ್ಲುತ್ತಿದ್ದಂತೆಯೇ ನಮ್ಮ ಡಾಕುಟ್ರು ತನಗಾದ ಗಾಬರಿಯನ್ನು ಎಳ್ಳಷ್ಟು ತೋರಿಸಿಕೊಳ್ಳದೇ, ಅವರನ್ನು ಕೂಲಾಗಿಯೇ ಎದುರಿಸುತ್ತಿದ್ದ. 

ತನಿಖಾ ತಂಡದವರು ಕೇಳುವ ಒಂದೊಂದು ಪ್ರಶ್ನೆಗೂ ಹಾರಿಕೆ ಉತ್ತರ ನೀಡುತ್ತಿದ್ದ. ಹಾಗೆಯೇ ಒಂದೊಂದೇ ಹೆಜ್ಜೆ ಹೊರಗೆ ಇಡುತ್ತಲೇ "ಜಸ್ಟ್ ಅ ಮಿನಿಟ್  ನೀವು ಕೇಳಿದ ಎಲ್ಲಾ ದಾಖಲೆಗಳನ್ನು ತೋರಿಸುತ್ತೇನೆಂದು ಅವರನ್ನು ಕ್ಲಿನಿಕ್ ನಿಂದ ಆಚೆ ಕರೆದು ಶೆಟರ್ ಎಳೆದು ಕೀ ಹಾಕಿ ಅವರ ಕಣ್ಣೆದುರೇ ತಪ್ಪಿಸಿಕೊಂಡು ಬಿಟ್ಟ. ಆ ನಂತರ ಅವರನ್ನು ಪತ್ತೆ ಮಾಡಿದರೋ ಇಲ್ಲವೋ ಏನಾಯಿತೋ ಏನೋ ಗೊತ್ತಿಲ್ಲ.  ಆದರೆ ಅಮಾಯಕ ರೋಗಿಗಳಿಗೆ ತೊಂದರೆ ಆಗಿದ್ದಂತೂ ನಿಜ. ನನ್ನ ಸ್ನೇಹಿತರೊಬ್ಬರು ತಮ್ಮ ಅನುಭವಕ್ಕೆ ಬಂದ ಮತ್ತು ಕಂಡಂಥ ಈ ಡಾಕ್ಟರ್ ನಕಲಿ ಒಬ್ಬರ ಬಗ್ಗೆ ಹೇಳಿದ್ದನ್ನು ಮಾತ್ರವೇ ಇಲ್ಲಿ ಹೇಳಲಿಚ್ಚಿಸುತ್ತೇನೆ.

ಇದಕ್ಕಿಂತ ದುರಾದೃಷ್ಟದ ಇನ್ನೊಂದು  ಸಂಗತಿಯೊಂದನ್ನು ಹೇಳಬೇಕನಿಸುತ್ತಿದೆ. ನನಗಿಂತ ಬಹಳ ಚಿಕ್ಕವ ನೊಬ್ಬ ಸ್ನೇಹಿತನಿದ್ದ ರೂಪೇಶ್ ಅಂತ. ಬಳ್ಳಾರಿಯಲ್ಲಿ  ಹಿಂದುಳಿದ ಮತ್ತು ಅಲ್ಪ ಸಂಖ್ಯಾತರ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ.  ಒಳ್ಳೆಯ ನೌಕರ ಹಾಗೂ ಸ್ನೇಹಜೀವಿ. ಮೊನ್ನೆ ಮೊನ್ನೆ ಅಂದರೂ ಎರಡು ಮೂರು ವರ್ಷಗಳ ಹಿಂದಿನವರೆಗೂ ಕಾಂಟಾಕ್ಟ್ ನಲ್ಲಿದ್ದ.  ಯಾವುದೋ ಕಾರಣಕ್ಕೆ ಒಮ್ಮೆ ಕಾಲ್ ಮಾಡಿದ್ದೆ, ಮೊಬೈಲ್ ಸ್ವಿಚ್ ಆಫ್ ಆಗಿತ್ತು. ಏನೋ ಪ್ರಾಬ್ಲಮ್ ಇರಬಹುದೆಂದು ಸುಮ್ಮನಾಗಿದ್ದೆ. ನಂತರ ಗೊತ್ತಾಗಿದ್ದೆಂದರೆ, ಈ ರೂಪೇಶ್ ಕೋಮಾ ಹಂತ ತಲುಪಿಯೇ ಸುಮಾರು ಆರು ತಿಂಗಳಾಗಿವೆ. ಆಶ್ಚರ್ಯ ಮತ್ತು ಬೇಸರ ಎರಡು ಆವರಿಸಿದವು. 

ಅದೇನಾಗಿತ್ತೆಂದರೆ,  ಅವನ ಕೈಗೋ ಅಥವಾ ತಲೆಗೋ ಒಂದು ಚಿಕ್ಕ ಗುಳ್ಳೆಯಾಗಿದೆ. ಅದಕ್ಕೆ ತೋರಿಸಿ ಕೊಂಡು ಚಿಕಿತ್ಸೆಯನ್ನು ಪಡೆದಿದ್ದಾನೆ. ಆದರೆ ಕರ್ಮ ನೋಡಿ ಮೆಡಿಸಿನ್ ರಿಯಾಕ್ಷನ್ ಆಗಿ ಮೆದುಳಿಗೆ ತೊಂದರೆಯಾಗಿದೆ. ಅದಕ್ಕೆ ಬೆಂಗಳೂರಿನಂಥ ದೊಡ್ಡ ಊರಿನ ಹೆಸರಾಂತ ಆಸ್ಪತ್ರೆಯಲ್ಲಿ  ತಿಂಗಳಾನು ಗಟ್ಟಲೆ ದಾಖಲಾಗಿದ್ದಾನೆ. ಮದುವೆಯಾಗಿನ್ನು ಹೊಸದು. ಮಕ್ಕಳಾಗಿದ್ದವಾ? ಗೊತ್ತಿಲ್ಲ. ನಾನು ನೌಕರಿ ಮೇಲೆ ವರ್ಗಾವಣೆಗೊಂಡು ಊರೂರು ಅಲೆದೆನು. ಫೋನಿಗೆ ಮಾತ್ರವೇ ಸಿಗುತ್ತಿದ್ದ ಹುಡುಗ, ಮಾತಾಡಿದೊಡನೆ  "ಏನ್ ಸರ್ ಹೇಳಿ ಹೇಗಿದೀರಿ" ಅನ್ನುತ್ತಿದ್ದ. ಅಂಥವನದು ಮೊದಲು ಫೋನ್ ಸ್ವಿಚ್ ಆಫ್ ಆಯಿತು. ನಂತರ ಮಾತು ನಿಂತು ಹೋಯಿತು. ಕೋಮಾ ಹಂತ ತಲುಪಿ ದೇಹವೇ ನಿಶ್ಚಲವಾಯಿತು. ಕಾರಣ ಮಾತ್ರ ಏನೆಂದು ಎಂಥ ಪರಿಣಿತ ಮತ್ತು ಪ್ರಸಿದ್ಧ ವೈದ್ಯರಿಗೂ ಗೊತ್ತಾಗಲಿಲ್ಲ. ಅಥವಾ ಗೊತ್ತಾದರೂ ಹೇಳಲಿಲ್ಲವಾ? ಯಾರಿಗ್ಗೊತ್ತು. 

ಇನ್ನು ನಾನು ಕಂಡಂಥ ಇನ್ನೊಬ್ಬ ವೈದ್ಯನ ಬಗ್ಗೆ ಒಂಚೂರು ಹೇಳಬೇಕು, ನಮ್ಮ ಅಕ್ಕ ಗರ್ಭಿಣಿ ಇದ್ದಾಗ "ಹೊಟ್ಟೆಯಲ್ಲಿ ಕೂಸು ಸರಿಯಾಗಿ ಬೆಳವಣಿಗೆ ಆಗಿಲ್ಲ ತೆಗೆಸಿಬಿಡಿ" ಅಂದದ್ದಕ್ಕೆ ಮನೆಯಲ್ಲಿ ಅಜ್ಜಿ, ಮಾಮ ಎಲ್ಲರ ಮುಖದಲ್ಲೂ ಏನು ಮಾಡು ವುದೆಂದು ಪ್ರಶ್ನೆ ಚಿನ್ಹೆ. ನಾನು ಆಗತಾನೇ ನೌಕರಿಗೆ ಸೇರಿದ್ದೆ. ಗದರಿಸಿ ಬೇರೊಂದು ಊರಲ್ಲಿ ನುರಿತ ವೈದ್ಯರಲ್ಲಿ ಚೆಕ್ ಮಾಡಿಸಿದೆ. "ಸರಿಯಾಗಿ ಕೂಸೇನೋ ಬೆಳೆದಿದೆ. ನೀವು ನಿಮ್ಮ ತಿಳುವಳಿಕೆ ಬೆಳೆಸಿಕೊಳ್ಳಿ" ಎಂದೇಳಿ ಒಂಬತ್ತು ತಿಂಗಳವರೆಗೂ ಚಿಕಿತ್ಸೆ ಕೊಟ್ಟ ವೈದ್ಯರನ್ನು ಮರೆಯುವುದೇ? ಆಗ ಆರೋಗ್ಯವಾಗಿ ಜನಿಸಿದ ನನ್ನ ಅಕ್ಕನ ಮಗಳಿಗೀಗ 15 ವರ್ಷ. ಮೊದಲಿಗೆ ಹೇಳಿದ್ದನಲ್ಲ ವೈದ್ಯ; "ಕೂಸು ಸರಿಯಾಗಿ ಬೆಳವಣಿಗೆಯಾಗಿಲ್ಲ" ಎಂದು?  ಅದೇ ಕೂಸು  ಹುಟ್ಟಿದ ಆರು ತಿಂಗಳಿಗೆ ಕೂಸಿನ ಸಮೇತ ಹೋಗಿ ನಮ್ಮಕ್ಕ ಆ ವೈದ್ಯರಿಗೆ ತೋರಿಸಿ ಬಂದಿದ್ದಳಂತೆ. ಹೇಗಾಗಿರಬೇಡ ವೈದ್ಯನಿಗೆ…. 

ಒಬ್ಬ ಸ್ನೇಹಿತ ತಾನು ಕಂಡಂಥ ನಕಲಿ ವೈದ್ಯರೊಬ್ಬರ ಕಥೆಯನ್ನು ಅತ್ಯಂತ ರಸವತ್ತಾಗಿ, ಹಾಸ್ಯಭರಿತವಾಗಿ ನನ್ನೊಂದಿಗೆ ಹೇಳಿದನಾದರೂ ನಾನು ಅವನಷ್ಟು ಹಾಸ್ಯಪ್ರಜ್ಞೆಯಿಂದ ಬರೆಯಲಾಗುತ್ತಿಲ್ಲ. ಇನ್ನೊಬ್ಬ ಸ್ನೇಹಿತ ಅಷ್ಟೊಂದು ನುರಿತ ಮತ್ತು ಪರಿಣಿತ ವೈದ್ಯರ ಕೈಯಲ್ಲಿ ಸಿಕ್ಕಿಯೂ ಕೂಡ ಅವನಿಗೆ ಬಂದ ರೋಗದ ಲಕ್ಷಣ ಸ್ಪಷ್ಟವಾಗಿ ಗೋಚರಿಸದೇ ಹಾಗೆಯೇ ಜೀವ ಕಳೆದುಕೊಂಡನಲ್ಲ? ಅದೂ  ಲಕ್ಷಾಂತರ  ದುಡ್ಡನ್ನು  ಸುರಿದು,  ಮತ್ತೆ ಅವನ  ಅಮ್ಮ ಮತ್ತು  ಹೆಂಡತಿ ತಲೆಗೆ  ಸಾಲದ ಹೊರೆ ಕಟ್ಟಿ.  just ಅವನ ಮೂವತ್ತರ ಆಸುಪಾಸಿನ ವಯಸ್ಸಲ್ಲೇ.. ಇದಕ್ಕೇನೆನ್ನಬೇಕೋ?   ವೈದ್ಯರನ್ನು "ವೈದ್ಯೋ ನಾರಾಯಣ ಹರಿ " ಎಂದು  ಕರೆಯುತ್ತೇವೆ.  ನನ್ನ  ಪಾಲಿಗೆ  ಅಂಥವರೇ ಹೆಚ್ಚಿದ್ದಾರೆ. ಆದರೆ ಕೆಲವರ ವಿಚಾರದಲ್ಲಿ ಹೀಗೇಕೆ ?…… 

ವೈದ್ಯರನ್ನು  ದೂರುವುದಾ? ಯಾವುದೇ ಸಂದೇಹ ಬರದಂತೆಯೂ ಸುಳಿವೂ ನೀಡದೇ  ವಿಚಿತ್ರವಾಗಿ ಒಬ್ಬೊಬ್ಬರ  ಹಣೆಬರಹ  ಬರೆಯುವ ದೇವರನ್ನು ದೂಷಿಸುವುದೇ? ತಿಳಿಯುತ್ತಿಲ್ಲ. ಇದು  ನನ್ನ  ಸದ್ಯದ ಗೊಂದಲ …….  

*****

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

5 Comments
Oldest
Newest Most Voted
Inline Feedbacks
View all comments
Ramesh Konaje
9 years ago

ಜಸ್ಟ್ ಮಾತ್ಮಾತಲ್ಲಿ….

 

(ವೈದ್ಯರ ಬಗ್ಗೆ ಶ್ರೀಯುತ ಅಮರ ದೀಪ್ ಅವರ " ಹಲೋ ಡಾಕ್ಟರ್" ಲೇಖನವನ್ನೋದಿದ ಮೇಲೆ ನನ್ನ ಬಾಲ್ಯದಲ್ಲಿನ ನಮ್ಮೂರ ವೈದ್ಯರ ಬಗ್ಗೆ ಒಂದು ನೆನಪು)

 

 

" ಅದು ನನ್ನ ತಪ್ಪಲ್ಲ "!!!

 

ಆಗ ನಾನು ಎಂಟನೇ ತರಗತಿ ಇದ್ದೆ.

ನಮ್ಮೂರಲ್ಲಿದ್ದಿದ್ದು ಒಂದೇ ಒಂದು ಸರಕಾರಿ ಆಸ್ಪತ್ರೆ, ಬಿಟ್ಟರೆ ಬೇರೆ ಇರಲಿಲ್ಲ.

ಅಲ್ಲಿಗೆ ದಯಾಳುವಾದ ವೈದ್ಯರೊಬ್ಬರು ಎಲ್ಲಿಂದಲೋ ವರ್ಗವಾಗಿ ಬಂದಿದ್ದರು.

ರೋಗಿ ಹೋಗಿ ಅವರೆದುರು ನಿಂತರೆ ಸಾಕು, ಕೂಲಂಕುಷವಾಗಿ ಪರೀಕ್ಷೆ ಮಾಡಿ,

ಔಷದಿ ಕೊಟ್ಟು ಮನೆಗೆ ಕಳಿಸಿದರೆಂದರೆ ಎರಡೇ ದಿನಗಳಲ್ಲಿ ರೋಗಿಯ ಆರೋಗ್ಯ ಸುದಾರಿಸುತ್ತಿತ್ತು.

 

ಅಂತ ವಾತಾವರಣದಲ್ಲಿ ಇಂತ ಸೌಜನ್ಯಯುತ ವೈದ್ಯರಿಗೆ ವರ್ಗವಾಗಿ ಆ ಜಾಗಕ್ಕೆ ಎಲ್ಲಿಂದಲೋ ಬೇರೊಬ್ಬ ವೈದ್ಯರು ವರ್ಗವಾಗಿ ಬಂದರು.

ಎರಡೇ ದಿವಸಗಳಲ್ಲಿ ಆ ವೈದ್ಯರ ಕೋಪ – ಸಿಡುಕು – ಅಸಹನೆ – ನಿರ್ವಿಕಾರ ಭಾವನೆಗಳೆಲ್ಲ ಜನರ ಬಾಯಿಗೆ ಮಾತಾದವು….

 

ಅವರು ಮಿಲ್ಟ್ರೀ ವೈದ್ಯರಂತೆ….

ಹಿಂದಿನ ವೈದ್ಯರ ತರ ಅಲ್ಲವಂತೆ….

ಮಾತ್ರೆಗಳನ್ನು ಜಾಸ್ತಿ ಕೊಡದೆ ಬರೇ ಇಂಜೆಕ್ಷನ್ ಚುಚ್ಚುತ್ತಾರಂತೆ…

ಹೋಗುವಾಗ ಅಂಗಿಯಲ್ಲಿ ಕೊಳೆ ಇರಬಾರದಂತೆ…

ಪರೀಕ್ಷೆ ಮಾಡುವಾಗ ಕುತ್ತಿಗೆಯನ್ನು ಎಡಕ್ಕೆ ತಿರುಗಿಸುತ್ತಾರಂತೆ….

ಕೈಯಲ್ಲಿ ನಮ್ಮನ್ನು ಮುಟ್ಟಲ್ಲವಂತೆ….

ಹೀಗೆ ಏನೇನೋ ಮಾತುಗಳು ಜನರ ಬಾಯಲ್ಲಿ… ಕೇಳಿ ಮಕ್ಕಳಾದ ನಾವೆಲ್ಲ ವಿಪರೀತ ಭಯಪಡುತ್ತಿದ್ದೆವು.

ಯಾಕೆಂದರೆ ಆ ಕಾಲದಲ್ಲಿ ವರ್ಷಕ್ಕೆರಡು ಬಾರಿಯಾದರೂ ಜ್ವರ – ಶೀತ ವಾಂತಿ ಬೇದಿ ಇವೆಲ್ಲಾ ಮಾಮೂಲು.

 

ನನಗೂ ಒಮ್ಮೆ ಜ್ವರ ಬಂದಾಗ ಹೆದರಿಕೆಯಿಂದಲೇ ಅವರ ಬಳಿ ಹೋಗಿದ್ದೆ.

ಜನ ಅಂದುಕೊಂಡಿರುವ ಆಡಿಕೊಂಡಿರುವ ಮಾತುಗಳಲ್ಲಿ ಒಂದೇ ಒಂದು ಮಾತ್ರ ನನ್ನ ಅನುಭವಕ್ಕೂ ಬಂದಿತ್ತು…

 

ಅದೇ ಪರೀಕ್ಷೆ ಮಾಡುವಾಗ ಕುತ್ತಿಗೆಯನ್ನು ಎಡಕ್ಕೆ ತಿರುಗಿಸುವುದು…

 

ಹೇಳದೇ ಕೇಳದೇ ನನ್ನ ಕುತ್ತಿಗೆಯನ್ನು ಏಕಾ ಏಕಿ ಹಿಡಿದು ಎಡಕ್ಕೆ ತಿರುಗಿಸಿ ಬಿಟ್ಟರು…

ನಿಜವಾಗಿಯೂ ನನಗೆ ಜ್ವರಕ್ಕಿಂತ ಆ ನೋವೇ ಜಾಸ್ತಿಯಾಗಿತ್ತು…

ಕುತ್ತಿಗೆ ತಿರುಗಿಸಿದ ಕಾರಣ ಆ ಮೇಲೆ ತಿಳಿಯಿತು…

ನಮ್ಮ ಶ್ವಾಸ (ಉಸಿರು) ವೈದ್ಯರ ಬಾಯಿಗೆ ಹೋಗಬಾರದೆಂದು….!

 

ಇಂತ ವೈದ್ಯರಲ್ಲಿಗೆ ಹಳ್ಳಿಯ ಹಿರಿಯ ಮುದುಕರೊಬ್ಬರು ಎರಡನೇ ಬಾರಿಗೆ ವೈದ್ಯರಲ್ಲಿಗೆ ಹೋಗಿದ್ದರು…

ಆ ಅಜ್ಜ ಮೊದಲ ಬಾರಿ ಆಸ್ಪತ್ರೆ ಮೆಟ್ಟಿಲೇರಿದ್ದಾಗ ಹಳೇಯ ವೈದ್ಯರಿದ್ದರು,

ಅನುಕಂಪಯುತವಾಗಿ, ಮಾನವೀಯತೆಯಿಂದ ನೋಡಿಕೊಂಡಿದ್ದರು.

ಆದರೆ ಈ ಹೊಸಾ ವೈದ್ಯರ ಬಗ್ಗೆ ಈ ಅಜ್ಜನಿಗೆ ತಿಳಿದಿರಲಿಲ್ಲ…

 

ತನ್ನ ಸರದಿ ಬಂದಾಗ ಹೋಗಿ ವೈದ್ಯರೆದುರು ನಿಲ್ಲುತ್ತಾರೆ….

 

ವೈದ್ಯರು : ಯಾಕೆ ಬಂದೇ…?

 

ಅಜ್ಜ : ಸ್ವಲ್ಪ ಔಷದಿ ಬೇಕಾಗಿತ್ತು….

 

ವೈದ್ಯರು : ಏನಾಗಿದೆ ನಿನಗೇ….

 

ಅಜ್ಜ : ಏನಾಗಿದೆ ಅಂತ ಗೊತ್ತಾಗ್ತಾ ಇಲ್ಲ….

 

ವೈದ್ಯರು : ಮತ್ತ್ಯಾಕೆ ಬಂದೇ…?

 

ಅಜ್ಜ : ಮನೇಲಿ ಬೈದು ಕಳಿಸಿದ್ರು…

 

ವೈದ್ಯರು : ಏನು ಬೈದ್ರು….?

 

ಅಜ್ಜ : ಔಷದಿ ತೆಕ್ಕೊಳ್ಳೀ ಅಂತ…

 

ವೈದ್ಯರು : ಯಾಕಂತೆ…?

 

ಅಜ್ಜ : ನನಗೆ ಹುಷಾರಿಲ್ಲ ಅದಕ್ಕೆ…

 

ವೈದ್ಯರು : ಏನಾಗಿದೆ ನಿನಗೆ…?

 

ಅಜ್ಜ : ಏನಾಗ್ತಿದೆ ಅಂತಾನೇ ಗೊತ್ತಾಗ್ತಾ ಇಲ್ಲ… ನೀವೇ ಹೇಳಬೇಕು…

 

ಪಟ್ಟನೆ ಪೆನ್ನು ತೆಗೆದವರೇ ವೈದ್ಯರು ಚೀಟಿಯೊಂದನ್ನು ಬರೆದು ಅಜ್ಜನ ಕೈಗೆ ಕೊಟ್ಟು,

ಇಲ್ಲೇ ಪಕ್ಕದಲ್ಲಿ ಒಂದು ಆಸ್ಪತ್ತ್ರೆ ಇದೆ ನೀವು ಅಲ್ಲಿಗೆ ಹೋಗಿ ಎಂದು ಹೇಳಿ ಹೊರಗೆ ಕಳಿಸುತ್ತಾರೆ…

 

ಅನುಮಾನಗೊಂಡ ಸಜ್ಜನ ಕಾಂಪೌಂಡರು ಆ ಚೀಟಿಯನ್ನು ಅಜ್ಜನಿಂದ ಪಡೆದು ಓದಿ ನೋಡುತ್ತಾರೆ…

ಅದು ಗೋವು ಆಸ್ಪತ್ರೆಗೆ ಕೊಟ್ಟ ಚೀಟಿ ಆಗಿರುತ್ತದೆ.

 

ದೈರ್ಯ ಮಾಡಿದ ಕಾಂಪೌಂಡರು ವೈದ್ಯರಿಗೆ ಈ ಬಗ್ಗೆ ಕಾರಣ ಕೇಳಿದಾಗ

ಆ ವೈದ್ಯರನ್ನುತ್ತಾರೆ

"ಅವನಿಗೆ ಏನಾಗ್ತಿದೆ ಅಂತ ಸ್ವತಹಾ ಅವನಿಗೇ ಗೊತ್ತಾಗ್ತಿಲ್ಲ ಅಂತಾದರೆ ಅವನು ಗೋವಾಸ್ಪತ್ರೆಗೇ ಹೋಗೋದೇ ವಾಸಿ,

ಅದು ನನ್ನ ತಪ್ಪಲ್ಲ !!! "

 

 

 

 

 

 

 

 

 

 

ashadeepa
ashadeepa
9 years ago

Changide sir etichege enta nakali vydgyara havali hechagide

ganesh
ganesh
9 years ago

Lekhana chennagithu amardeep sir.  Vaidhyaru devara samana nija, adare ithichina vaidhyara neethi niste nodidre, yaru asali yaru nakali antha thiliyode illa.  Adelladikintha hechagi kelavu kayilege yenu upachara madabeku? yava oushadi kodabeku? embudu asali vaidhyarige innu thilidilla… Kadeyadagi doctor enu helthare andre… navu ella prayathna madidvi, innu mundindu devara ichche… antha heli kai tholkothare.. nijavagi rogige enu agide.. mundina jeevana hege antha helode illa,  rogige innu badukuva ase, vaidhyarige duddu maduva ase, idara madye vidiya leele aste…

Santhoshkumar LM
9 years ago

🙂 chennagide Amar sir

Kotraswamy M
Kotraswamy M
9 years ago

Nijakkoo saamaajika kala-kaliya vishaya Amar! 'Loakoa Bhinna Ruchi' ennuva maathide. Ella bageya jana idda mele, vaidyaroo janare thaane?! But, 'Quacks' should not have a place in civic society. Its our own responsibility to see that such people do not exploit the underprevileged class. 

5
0
Would love your thoughts, please comment.x
()
x