Facebook

ವಿದ್ಯಾರ್ಥಿಗಳ ಪಾಲಿನ ಅಚ್ಚುಮೆಚ್ಚಿನ ಶಿಕ್ಷಕ- ತಹಶೀಲ್ದಾರ: ದಾವಲಸಾಬ ತಾಳಿಕೋಟಿ

davalasaba-talikoti
(ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದ ಸಂಭ್ರಮ ಈ ನಿಮಿತ್ತ ಲೇಖನ) 

ಶಿಕ್ಷಕ ವೃತ್ತಿಯಂದರೇ ಎಲ್ಲಕ್ಕಿಂತಲೂ ಸರ್ವಶ್ರೇಷ್ಟವಾದ ಕಾಯಕವಾಗಿದೆ. ಶಿಕ್ಷಕ ತನ್ನಲ್ಲೇ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಧಾರೆಯರೇದು ಉತ್ತಮ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಶಿಕ್ಷಕನ ಪಾತ್ರ ಬಹುಮುಖ್ಯವಾದದ್ದು. ಇಂತಹ ಶ್ರೇಷ್ಠ ವೃತ್ತಿಗೆ ಬರಬೇಕಾದರೇ ಪೂರ್ವಿಕರ ಆರ್ಶಿವಾದ ಇರಬೇಕು ಎನ್ನುತ್ತಾರೆ. ಮುಂದೆ ಗುರಿ ಇರಬೇಕು ಹಿಂದೆ ಗುರುವಿರಬೇಕು ಗುರುವಿಲ್ಲದೇ ಎನ್ನುವಂತೆ  ಇಲ್ಲೋಬ್ಬ ಶಿಕ್ಷಕ ತನ್ನ ಕಾಯಕ ನಿಷ್ಠೆಯಿಂದಲೇ ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕನಾಗಿ, ಜಿಲ್ಲಾ ಉತ್ತಮ ಶಿಕ್ಷಕನಾಗಿ, ಸಹ ಶಿಕ್ಷಕರಾಗಿದ್ದುಕೊಂಡೆ ಶಾಲೆಯ ಎಲ್ಲ ಕೆಲಸ ಕಾರ್ಯಗಳಲ್ಲಿ ಹೆಚ್ಚು ಗಮನಹರಿಸುವುದರೊಮದಿಗೆ , ಎಲೆ ಮರೆ ಕಾಯಿಯಂತೆ ತನ್ನ ಕಾಯಕ ವೃತ್ತಿಯನ್ನು ಮಾಡುತ್ತಾ ಬಂದಿದ್ದಾರೆ. ಅಷ್ಟೆಯಲ್ಲದೇ ಅವರ ಸೇವೆ ಸಲ್ಲಿಸುತ್ತಿರುವ ಗ್ರಾಮದ ಜನತೆಗೆ ಇವರನ್ನು ಕಂಡರೆ ಎಲ್ಲಿಲ್ಲದ ಗೌರವ ಮತ್ತು ಪ್ರೀತಿಯನ್ನು ತೊರಿಸುತ್ತಾರೆ. 

ಹೌದು ಇದಿಷ್ಟು ಗದಗ ಜಿಲ್ಲೆಯ ರೋಣ ತಾಲೂಕಿನ ವೀರಾಪೂರ ಎಂಬ ಸಣ್ಣ ಗ್ರಾಮದಲ್ಲಿರುವ ಎಲ್.ಪಿ.ಎಸ್ ಶಾಲೆಯ ಸಹ ಶಿಕ್ಷಕ ಎ.ಬಿ.ತಹಶೀಲ್ದಾರವರ ಕುರಿತು. ರಾಮಾಂಪೂರ ಗ್ರಾಮಕ್ಕೆ 2002ರಲ್ಲಿ ಸೇವೆಗೆ ಬಂದ ತಹಶೀಲ್ದಾರವರು ವಿದ್ಯಾರ್ಥಿಗಳಿಗೆ ಅಕ್ಷರ ಜ್ಞಾನವನ್ನು ಕಲಿಸಿ ಅಪಾರ ವಿದ್ಯಾರ್ಥಿ ಬಳಗವನ್ನು ಸಂಪಾದಿಸಿ, ಉತ್ತಮ ಶಿಕ್ಷಕರಾಗಿ ಗುರ್ತಿಸಿಕೊಂಡರು. ರಸ್ತೆ ಸರಿಯಿಲ್ಲದ ಕಾರಣ, ಬಸ್‍ಗಳು ಕೂಡಾ ಈ ಗ್ರಾಮಕ್ಕಿಲ್ಲ ಆಟೋ, ಟಂಟಂ ಹಿಡಿದು ಶಾಲೆಗೆ ಹೊಗಬೇಕಾದ ಅನಿರ್ವಾಯತೆ, ಆಟೋಗಳು ಇಲ್ಲವಾಗಿದ್ದರೆ ಆದಿನ 5 ಕೀಮಿನಷ್ಟು ಕಾಲ್ನಡ್ಗೆಯಲ್ಲಿ ನಡೆದುಕೊಂಡೆ ಶಾಲೆ ತಲುಪಬೇಕಾಗಿತ್ತು. ಹೀಗಿದ್ದರೂ ಒಂದು ದಿನವೂ ತಮ್ಮ ಕಾಯಕದ ಬಗ್ಗೆ ಬೇಸರ ಪಟ್ಟುಕೊಂಡವರಲ್ಲ. ಉತ್ಸಾಹದಿಂದಲೇ ಮಕ್ಕಳಿಗೆ ಬೋಧನೆ ಮಾಡಿ ಮಕ್ಕಳ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸುವ ಜೀವವಿದು. ಶಿಕ್ಷಕನು ಕಲ್ಲನ್ನು ಶಿಲೆಯಾಗಿ ಮಾಡುವ ಶಿಲ್ಪಕಾರನಾಗಿದ್ದಾನೆ ಅಂತಹ ಶಿಲ್ಪಕಾರನ ಕೈಯಲ್ಲಿ ಏನುಬೇಕಾದರೂ ಸಿದ್ದವಾಗಿ ಹೊರಹೊಮ್ಮಬಹುದು. 

1

ಬಾಲ್ಯದ ಜೀವನ:-
ಅಬ್ದುಲ್‍ಗಾಫರ್ ತಹಶೀಲ್ದಾರ ಅವರು ಗದಗ ಜಿಲ್ಲೆಯ ನರಗುಂದ ನಗರದಲ್ಲಿ ಜೂನ್ 22 ರ 1966 ರಲ್ಲಿ ಜನಿಸಿದರು. ಇವರ ತಂದೆ ಬಾಪುಸಾಬ ವೃತ್ತಿಯಲ್ಲಿ ಕೃಷಿಕ ತಾಯಿ ಹುಸೇನಬಿ ಗೃಹೀಣಿ, ತುಂಬು ಸಂಸಾರದಲ್ಲಿ 4 ಜನ ತಮ್ಮದಿಂರು, 3 ಜನ ತಂಗಿಯರು. ಬಾಲ್ಯದ ಜೀವನವನ್ನು ನೆನಪಿಸಿಕೊಂಡಾಗ ಕಿತ್ತುತಿನ್ನುವ ಬಡತನ ಒಂದಡೆಯಾದ್ರೆ, ಕಲಿಯಬೇಕು ಎನ್ನುವ ಹಂಬಲ ಮತ್ತೊಂದಡೆಯಾಗಿತ್ತು. ಮೊದಲೆ ಬಂಡಾಯದ ನಾಡಿನಲ್ಲಿ ಹುಟ್ಟಿದ್ದ ತಹಶೀಲ್ದಾರರು ಮುಗ್ದ ಸ್ವಾಭಾವದಿಂದ ಅಪಾರ ಸ್ನೇಹ ಬಳಗವನ್ನು ಸಂಪಾದಿಸಿ ಪದವಿ ಶಿಕ್ಷಣವನ್ನು ಪಡೆದು ಶಿಕ್ಷಕ ವೃತ್ತಿಗೆ ಬರಬೇಕು ಎನ್ನುವ ಆಸೆಯಿಂದ ಟಿಸಿಎಚ್ ಪದವಿ ಮಾಡಿ 1998 ರಲ್ಲಿ ಶಿಕ್ಷಣ ಇಲಾಖೆಗೆ ಸೇರುತ್ತಾರೆ. ರೋಣ ತಾಲೂಕಿನ ರಾಮಂಪೂರ ಗ್ರಾಮದ ಸ.ಕಿ.ಪ್ರಾ ಶಾಲೆಗೆ ಸಹ ಶಿಕ್ಷಕರಾಗಿ ಅವರ ವೃತ್ತಿ ಬದುಕು ಪ್ರಾರಂಭಗೊಂಡಿತು. ರಾಮಾಂಪೂರ ಶಾಲೆಯಲ್ಲಿ ಸುಮಾರು 8 ವರ್ಷಗಳ ಕಾಲ ಸೇವೆ ಸಲ್ಲಿಸಿ ಅಲ್ಲಿಂದ ವೀರಾಪೂರ ಶಾಲೆಗೆ ವರ್ಗವಣೆಯಾಗುತ್ತಾರೆ. ವೀರಾಪೂರ ಶಾಲೆಗೆ ಬಂದ ನಂತರ ಶಾಲೆಯ ಮುಖ್ಯಶಿಕ್ಷಕರು, ಗ್ರಾಮದ ಹಿರಿಯರ ಸಹಕಾರದಿಂದ ಸುತ್ತಮುತ್ತಲು ಗಿಡಮರಗಳನ್ನು ಬೆಳಸಿ, ಶಾಲೆಗೆ ಬೇಕಾಗುವ ಕಾಯುಪಲ್ಲೆಗಳನ್ನು ಶಾಲೆಯ ಆವರಣದಲ್ಲಿಯೇ ಸಿಗುವಂತೆ ಮಾಡಿದರು. ಅದರೊಂದಿಗೆ ಹೈಟೇಕ ಶೌಚಾಲಯವನ್ನು, ಪ್ರಾರಂಭಿಸಿ ಸುಚ್ಚಿತ್ವ ಕಾಪಾಡುವಂತೆ ಮಕ್ಕಳಲ್ಲಿ ಪಠ್ಯದ ಜೊತೆಗೆ ಪಠ್ಯತೇರ ಚಟುವಟಿಕೆಗಳನ್ನು ಹೇಳಿಕೊಡಲು ಪ್ರಾರಂಭಿಸಿದರು. ಮುಖ್ಯ ಶಿಕ್ಷಕರಲ್ಲದೆ ಹೊದರೂ ಮುಖ್ಯ ಶಿಕ್ಷಕರಷ್ಟೇ ಜವಾಬ್ದಾರಿ ತೆಗೆದುಕೊಂಡು ಶಾಲೆಯ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ. ವೀರಾಪೂರ ಶಾಲೆಯಲ್ಲೂ ಸಹ ನೆಚ್ಚಿನ ಶಿಕ್ಷಕರಾಗಿ, ಗ್ರಾಮದ ಜನರಿಗೆ ಪ್ರೀತಿಯ ಮಾಸ್ತರರಾಗಿ, ತಹಶೀಲ್ದಾರವರು ಹೆಸರು ಗಳಿಸುತ್ತಾರೆ. ಪ್ರಚಾರದಿಂದ ದೂರವಿರುವ ಇವರು ಯಾವುದೇ ಊರ ಉಸಾಬರಿಗೂ ಹೊಗದೇ, ಯಾವತ್ತು ಯೊರೊಂದಿಗೂ ವೈರತ್ವ ಬೆಳಿಸಿಕೊಮಡವರಲ್ಲ, ಸದಾ ನಗುಮುಖದಿಂದಲೇ ತಾವಾಯಿತು ತಮ್ಮ ಶಾಲೆಯಾಯಿತು ಎಂದು ಮಕ್ಕಳಿಗೆ ಬೋಧನೆಯಲ್ಲಿ ಸದಾ ಸಿದ್ದಹಸ್ತರು.

ಪ್ರಶಸ್ತಿಗಳು:-
ಕರ್ನಾಟಕ ರಾಜ್ಯ ಶಾಲಾ ಶಿಕ್ಷಕರ ಸಂಘ ರೋಣ ಇವರು ಕೊಡಮಾಡುವ ಉತ್ತಮ ಶಿಕ್ಷಕ ಪ್ರಶಸ್ತಿ, ಕರವೇ(ನಾರಯಾಣ ಗೌಡ ಬಣ) ಇವರು ಕೊಡಮಾಡುವ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ಕರ್ನಾಟಕ ರಾಜ್ಯ ಶಾಲಾ ಶಿಕ್ಷಕರ ಸಂಘ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ-2016, ಕರವೇ(ಪ್ರವೀಣ ಶೆಟ್ಟಿ ಬಣ) ಇವರು ಕೊಡಮಾಡುವ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ
ತಾಲೂಕ ಆದರ್ಶ ಶಿಕ್ಷಕ ಪ್ರಶಸ್ತಿ ಇಷ್ಟೆಯಲ್ಲದೇ ಅನೇಕ ಸಂಘ ಸಂಸ್ಥೆಗಳು ಶ್ರೀಯುತರನ್ನು ಪುರಸ್ಕಾರ ನೀಡಿ ಗೌರವಿಸಿವೆ.

ಅಬ್ದುಲ್‍ಗಫಾರ ತಹಶೀಲ್ದಾರ ಅವರು ಎಂದೂ ಕೂಡಾ ಯಾವ ಪ್ರಶಸ್ತಿಗೂ ಅರ್ಜಿ ಸಲ್ಲಿಸಿದವರಲ್ಲ,  ಯಾವ ಪ್ರಚಾರಕ್ಕೂ ಜೊತು ಬೀಳದೇ ತಮ್ಮ ಶಾಲೆಯಾಯಿತು ತಾವಾಯಿತು ಎಂದು ಕಾಯಕ ನಿಷ್ಟೆ ಮಾಡಿಕೊಂಡು ಮಕ್ಕಳೆ ನನಗೆ ಪ್ರಶಸ್ತಿ ಅವರಿಗಿಂತ ಯಾವ ಮೀಗಿಲಾದ ಪ್ರಶಸ್ತಿಯಿಲ್ಲ ಎನ್ನುತ್ತಾರೆ ಈ ಆದರ್ಶ ಶಿಕ್ಷಕ. ಇವರಿಗೆ ನಾಲ್ಕು ಜನ ಮಕ್ಕಳು ಒಬ್ಬ ಮಗಳು ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದು ಮತ್ತೊಬ್ಬ ಮಗಳು ಪದವಿ, ಕಿರಿಯ ಮಗಳು ಆದರ್ಶ ಮಹಾವಿದ್ಯಾಲಯದಲ್ಲಿ ಹತ್ತನೇ ತರಗತಿ, ಮಗ ಬಿಇ ಇಂಜೀನಿಯರ ಓದುತ್ತಿದ್ದು. ಇವರ ಮಗಳು 2010 ರ ಎಸ್.ಎಸ್.ಎಲ್.ಸಿ ಹಾಗೂ 2012 ರ ಪಿಯುಸಿಯಲ್ಲೂ ಕೂಡಾ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಳು. ತಮ್ಮ ಮಕ್ಕಳಿಗೂ ಕೂಡಾ ಉತ್ತಮ ಸಂಸ್ಕಾರ ಜ್ಞಾನವನ್ನು ನೀಡಿ ಆದರ್ಶ ತಂದೆಯಾಗಿದ್ದಾರೆ ಇಂತಹ ಅನೇಕ ಶಿಕ್ಷಕರು ನಮ್ಮ ಮಧ್ಯಯೇ ಇದ್ದು ಅವರುಗಳು ಎಲ್ಲೂ ಗುರ್ತಿಸಿಕೊಳ್ಳದೇ ಇನ್ನು ಎಲೆ ಮರೆಕಾಯಿಯಂತೆ ಸೇವೆ ಸಲ್ಲಿಸುತ್ತಲೇ ಬಂದಿದ್ದಾರೆ ಅವರಿಗ್ಯಾರಿಗೂ ಇಂತಹ ಪುರಸ್ಕಾರ ಗೌರವಗಳು ಬೇಕಿಲ್ಲ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಟ್ಟರೇ ಅಷ್ಟೆ ಸಾಕು ನಮಗ್ಯಾವ ಪ್ರಶಸ್ತಿ ಪುರಸ್ಕಾರಗಳು ಬೇಡ, ನಮ್ಮ ಕೈಯಲ್ಲಿ ಕಲಿತ ಮಕ್ಕಳು ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳಲಿ ಎನ್ನುವುದು ಅವರ ಆಶಯವಾಗಿದೆ. ಇಂತಹ ನಿಸ್ವಾರ್ಥ ಸೇವೆಯ ಶಿಕ್ಷಕರನ್ನು ಗುರ್ತಿಸಿ ರಾಜ್ಯ ಸರ್ಕಾರ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಿ ಎನ್ನುವುದು ನಮ್ಮ ಆಶಯವಾಗಿದೆ.

ದಾವಲಸಾಬ ತಾಳಿಕೋಟಿ 

You can leave a response, or trackback from your own site.

One Response to “ವಿದ್ಯಾರ್ಥಿಗಳ ಪಾಲಿನ ಅಚ್ಚುಮೆಚ್ಚಿನ ಶಿಕ್ಷಕ- ತಹಶೀಲ್ದಾರ: ದಾವಲಸಾಬ ತಾಳಿಕೋಟಿ”

  1. Hiriyanna Shetty Hejmadi says:

    ಇಂಥಹ ಗುರುಗಳನ್ನು ಪಡೆದ ವಿದ್ಯಾರ್ಥಿಗಳೆ ಧನ್ಯರು.

    ಇಂಥಹ ಗುರುಗಳ ಸಂತತಿ ಸಾವಿರವಾಗಲಿ.
     

Leave a Reply