ಕಿರು ಲೇಖನಗಳು: ಬಸವರಾಜ ಪಟ್ಟಣಶೆಟ್ಟಿ , ವೇಣುಗೋಪಾಲ್ ಹೆಚ್.

ಕನ್ನಡ ನಾಡಿನ ಅಪರೂಪದ ನೃತ್ಯತಾರೆ ಜ್ಯೋತಿ ಬಳ್ಳಾರಿ ಹಾಗೂ ಕಲಾವಿದರ ತಂಡ

ಜ್ಯೋತಿ ಬಳ್ಳಾರಿ ಕರ್ನಾಟಕ ಕಂಡ ಅಪರೂಪದ ನೃತ್ಯತಾರೆ.  ಈ  ತಾರೆ ಹಿಂದೊಮ್ಮೆ ಯಾವ ಪರಿ ಪ್ರೇಕ್ಷಕರಿಗೆ ತಮ್ಮ ನೃತ್ಯದ ಮೋಹಕತೆಯಿಂದ ಹುಚ್ಚು ಹಿಡಿಸಿದ್ದರೆಂದರೆ ಅದನ್ನು ಹಿಂದಿನ ಪ್ರೇಕ್ಷಕರು ಈಗಲೂ ನೆನಪಿಸಿ ಖುಷಿ ಪಡುತ್ತಾರೆ. ಆಶ್ಚರ್ಯವೆಂದರೆ ಈಗ ಕೂಡ ಜ್ಯೋತಿ ಬಳ್ಳಾರಿಯವರು  ಅದೇ ಮೋಹಕತೆಯ ನೃತ್ಯವನ್ನು ಮಾಡಿ  ಪ್ರೇಕ್ಷಕರ ಮನದಲ್ಲಿ ಅಭಿಮಾನದ  ತರಂಗಳನ್ನು  ಎಬ್ಬಿಸುತ್ತಾರೆ. ಮೂಲತಃ ಬಳ್ಳಾರಿಯವರಾದ ಜ್ಯೋತಿಯವರು ಕರ್ನಾಟಕದ ಎಲ್ಲ ವೃತ್ತಿ ರಂಗಭೂಮಿಗಳಲ್ಲಿ  ತಮ್ಮ ಮೋಹಕ ನೃತ್ಯಗಳಿಂದ ಅಪಾರ ಜನಪ್ರಿಯತೆ ಗಳಿಸಿದ್ದರು.  ಇವರ ಬಗ್ಗೆ ಅಂದು ಪ್ರೇಕ್ಷಕರಿಗೆ  ಅದೆಷ್ಟು  ಮೋಹ ಇತ್ತು ಎಂದರೆ ಇವರ ನೃತ್ಯ ಮುಗಿದ ನಂತರ ಇವರನ್ನು ಥೇಟರಿನಿಂದ  ಹೊರಗೆ ಕರೆತಂದು  ತಿರುಗಿ ರೂಮಿಗೆ ಕರೆದುಕೊಂಡು ಹೋಗಲು ಸಹಕಲಾವಿದರು  ಹರಸಾಹಸ ಪಡುತ್ತಿದ್ದರು. ಒಂದೊಂದು ಸಾರೆ  ಕಾರಿನ ಸೀಟಿನ  ಕೆಳಗೆ ಇವರನ್ನು  ಮುಚ್ಚಿ ಕೂಡಿಸಿ ಕರೆದುಕೊಂಡು ಹೋದದ್ದೂ ಇದೆ. ಈ ನಡುವೆ  ಹಲವಾರು ಸಮಸ್ಯೆಗಳಿಂದ  ನೊಂದುಕೊಂಡು  ನೃತ್ಯದಿಂದ ದೂರವಾಗಿದ್ದ ಜೋತಿಯವರನ್ನು  ಇವರ ಸಹೋದರ  ಸಂತೋಷ ಹಾಗೂ ಗುಲಬುರ್ಗಾ ಪತ್ರಕರ್ತರಾದ ಶರಣು ಗೊಬ್ಬೂರ ಮುಂತಾದ ಆತ್ಮೀಯರು  ಈ ತಾರೆಯ ಕಲೆ  ವ್ಯರ್ಥ ಆಗಬಾರದೆಂದು  ಮತ್ತೆ  ಪ್ರೋತ್ಸಾಹ  ನೀಡಿದಾಗ  ಜ್ಯೋತಿ ಬಳ್ಳಾರಿ ‘ಮತ್ತೆ ಹಾಡಿತು ಕೋಗಿಲೆ’ ಎಂಬಂತೆ  ಕರ್ನಾಟಕದಾದ್ಯಂತ  ತಮ್ಮ ನೃತ್ಯ ನೀಡಲಾರಂಭಿಸಿದರು. ಅದರಲ್ಲಿಯೂ ಕಳೆದ  ಸುಮಾರು ಒಂದು ವರ್ಷದಿಂದ ಬೆಳಗಾವಿ  ಜಿಲ್ಲೆಯಲ್ಲಿ  ಹುಕ್ಕೇರಿ, ಸಂಕೇಶ್ವರ, ಚಿಕ್ಕೋಡಿ, ಗೋಕಾಕ ಹೀಗೆ ಎಲ್ಲ ಕಡೆ ಯಶಸ್ವಿ ನೃತ್ಯ ಪ್ರದರ್ಶನ  ನೀಡಿದ್ದಾರೆ.

jyoti-ballari    
ಶಿಷ್ಯ ಗುರುವನ್ನ ಮೀರಿಸಬೇಕು. ಮಗ ತಂದೇನ ಮೀರಿಸಬೇಕು ಎನ್ನುವಂತೆ ಇವರ ಮಗಳು ಪಲ್ಲವಿ ಬಳ್ಳಾರಿ ಕೂಡ ಇಂದು  ತುಂಬ ಜನಪ್ರಿಯ  ನೃತ್ಯ ತಾರೆ ಆಗಿದ್ದಾರೆ. ಪಲ್ಲವಿಯ ಮೋಹಕ ಮೈಮಾಟ ಹಾಗೂ ಕಣ್ಣು ತಣಿಸುವ ನೃತ್ಯ ಮೆಚ್ಚಿ ಪಲ್ಲವಿಗೆ ಈಗಾಗಲೇ ಚಿತ್ರರಂಗ ಕೈಬೀಸಿ ಕರೆದಿದ್ದು ನಾಲ್ಕಾರು ಚಿತ್ರಗಳಲ್ಲಿ ನಟಿಸಿದ್ದಾರೆ. ಪರಭಾಷಾ ಚಿತ್ರರಂಗದಿಂದ  ಹೀರೋಯಿನ್‍ಗಳನ್ನು ಕರೆತರುವ  ನಮ್ಮ ಕನ್ನಡ ನಿರ್ಮಾಪಕರು  ಪಲ್ಲವಿಯಂಥ ಪ್ರತಿಭಾವಂತರಿಗೆ  ಇನ್ನೂ ಹೆಚ್ಚು  ಪ್ರೋತ್ಸಾಹಿಸಬೇಕು.  ಇವರ ತಂಡದಲ್ಲಿ ಜ್ಯೂನಿಯರ ಉಪೇಂದ್ರ, ಆರ್, ಡಿ . ಬಾಬು ಜ್ಯೂನಿಯರ್ ವಿಷ್ಣುವರ್ಧನ ರವಿ ಕೋರೆ, ಮೋಹಕವಾದ ತಾರೆ  ಭಾವನಾ, ಶಿವು ಪೂಜಾರಿ, ಮುಂತಾದ ಅಪರೂಪದ ಕಲಾವಿದರಿದ್ದಾರೆ. ವೇದಿಕೆಯಿಂದ ಸದಾ  ದೂರ ಇರುವ ಜ್ಯೋತಿಯವರ  ಸಹೋದರ ಸಂತೋಷ ಅಪಾರ ಶ್ರಮ ವಹಿಸಿ ಈ ಕಲಾಪ್ರದರ್ಶನದ  ಸಂಯೋಜನೆ ಮಾಡುತ್ತಾರೆ. ಜ್ಯೋತಿ ಬಳ್ಳಾರಿಯವರಂಥ  ಅಪರೂಪದ ಕಲಾವಿದೆಯನ್ನು ಸರಕಾರ ಗೌರವಿಸಲಿ.  

-ಬಸವರಾಜ ಪಟ್ಟಣಶೆಟ್ಟಿ 

basavaraj-pattanshettey

 

 

 

 

 


ಕ್ರಿಕೆಟ್ ತನಗೆ ತಾನೆ ವಿದಾಯ ಹೇಳಿದ ದಿನ ….!!

ಸರಿಯಾಗಿ 3 ವರ್ಷಗಳ ಹಿಂದೆ 16/11/13 ಅಂದು ಇಡೀ ಕ್ರಿಕೆಟ್ ಜಗತ್ತಿಗೆ ಮೋಡ ಕವಿದ ದಿನ ಟೆಸ್ಟ್ ಅಂದರೇನೆ ಬೇಜಾರು ಅನ್ನೊ ಜನ ಅಂದು ಸ್ಟೇಡಿಯಮ್ ಅಲ್ಲಿ, ಖಿಗಿ ಮುಂದೆ ಕಣ್ಣು ಮುಚ್ಚದೆ ಕೂತಿದ್ದರು, ವಿಶ್ವಕಪ್ ಫೈನಲ್ಗೇನೆ ಸೇರದಷ್ಟು ಜನ ಅಂದು ಸ್ಟೇಡಿಯಮ್ ನಲ್ಲಿ ಸೇರಿದ್ದರು..ಪಿಚ್ನಲ್ಲಿ 14 ಮಂದಿ ಇದ್ದರೂ ಜನರಿಗೆ ಕಾಣುತ್ತಿದ್ದದ್ದು ಒಬ್ಬನೇ ….ಅದೊಂದು ಕ್ರೀಡಾಲೋಕದ ಶಕ್ತಿ,ಬರವಸೆ …ಸಚಿನ್ ರಮೇಶ್ ತೆಂಡುಲ್ಕರ್

ಎಷ್ಟೋ ಕ್ರಿಕೆಟರ್ಸ್, ಕ್ರಿಕೆಟ್ ಪ್ರೇಮಿಗಳು ಹುಟ್ಟೋಕೆ ಮುಂಚೆನೆ ಕ್ರಿಕೆಟ್ ಲೋಕಕ್ಕೆ ಕಾಲಿಟ್ಟ 16 ವರ್ಷದ ಅದೇ ಹುಡುಗ ಅಲ್ಲಿ ಉಸಿರಾಡಿದ್ದು 24 ವರ್ಷಗಳು..ಎಷ್ಟೊ ಸಾವಿರ ದಾಖಲೆಗಳ ಹೊರತಾಗಿ  ಎಷ್ಟೋ ಜನರ ಮನಸನ್ನು ಆತನ ಗುಣಗಳಿಂದಲೇ ಗೆದ್ದ ವ್ಯಕ್ತಿ ,ಎಷ್ಟೋ ಜನರಿಗೆ ಕ್ರಿಕೆಟ್ ಆಡುವ ಕನಸನ್ನು ಕಾಣುವಂತೆ ಮಾಡಿದ ವ್ಯಕ್ತಿ, ಒಖಈ,ಃಔಔSಖಿ,PಇPSI ಎಂದರೆ ಸಚಿನ್ ಅನ್ನುವಂತೆ ಮಾಡಿದಾತ..

ಕ್ರಿಕೆಟ್ ಎಂಬ ಮನೋರಂಜನೆಯ ಆಟ ನೋಡುವಾಗಲು ಕಣ್ಣೀರು ಬರುತ್ತದೆ, ಗೊತ್ತಿಲ್ಲದ ಹಾಗೆ ಕಂಬನಿ ಜಾರುತ್ತದೆ ಎಂದು ತಿಳಿದಿದ್ದು ಅಂದೇ ಸಚಿನ್ ಕೊನೆಯ ಬಾರಿಗೆ ಬ್ಯಾಟ್ ಹಿಡಿದು ಬಂದಾಗ, ಔಟ್ ಆದಾಗ, ಕೊನೆಯ ಬಾರಿ ಮಾತನಾಡಿದಾಗ …ಪಿಚ್ ಗೆ ನಮಸ್ಕರಿಸಿ ಬಂದ ಆತನಿಗೆ ಮೊದಲ ಬಾರಿ ಅಂಪೈರ್ ಗಳು ಕೂಡ ಸ್ವಾಗತಿಸಲು ಬರುತ್ತಾರೆ, ವೆಸ್ಟ್ ಇಂಡೀಸ್ ಜೊತೆ ನಡೆಯುತ್ತಿದ್ದ ಆಟದಲ್ಲಿ ಮೊದಲ ಬಾರಿ ಎರಡನೆಯ ವಿಕೇಟ್ ಹೋದಾಗ ಜನ ಒಂದು ರೀತಿಯಲ್ಲಿ ಖುಷಿಪಡುತ್ತಾರೆ ಒಬ್ಬ ಆಟಗಾರ ಔಟ್ ಆದ ಅನ್ನೊ ದುಖಃಕ್ಕಿಂತ ಸಚಿನ್ ಆಡಲು ಬರುತ್ತಾನೆ ಎಂಬ ಖುಷಿ ಜಾಸ್ತಿ ಇರುತ್ತದೆ, ಆ ಕ್ಷಣ ಸಚಿನ್ ಸಚಿನ್ ಎಂಬ ಕೂಗು ಎಲ್ಲರ ಮನದಲ್ಲಿ ಹಾಗೆ ಇದೆ…

ಎಷ್ಟೋ ಜನ ಅವನು ದಾಖಲೆಗೋಸ್ಕರ ಆಡುತ್ತಾನೆ ಎನ್ನುತ್ತಾರೆ ಅವನ ಏಳಿಗೆ ಕಂಡು ಉರಿದುಕೊಳ್ಳುವವರು ಮಾತ್ರ, ಕ್ರಿಕೆಟ್ ಬಗ್ಗೆ ಪ್ರೀತಿ ಇಲ್ಲದವರು ಮಾತ್ರ ಹಾಗೆ ಹೇಳುವುದು ,ದಾಖಲೆಗಳ ಹೊರತಾಗಿ ಅವನನ್ನ ಪ್ರೀತಿಸಿ ನೋಡಿದವರಿಗೆ ಗೊತ್ತು ಅವನು ಸ'ಚಿನ್ನ' ಎಂದು ..
ಅಂದು ಸಚಿನ್ 74 ರನ್ ಗಳಿಸಿ ಕೊನೆಯ ಬಾರಿಗೆ ವಿಕೇಟ್ ಒಪ್ಪಿಸುತ್ತಾರೆ …ಕ್ಯಾಚ್ ಹಿಡಿದ ಡ್ಯಾರೆನ್  ಸಾಮಿ ಏನೊ ದೊಡ್ಡ ತಪ್ಪು ಮಾಡಿದಂತೆ ತಲೆ ತಗ್ಗಿಸಿಕೊಂಡು ಕೂರುತ್ತಾರೆ, ಅವರ ಕಣ್ಣಲ್ಲು ನೀರು ನಿಲ್ಲದೆ ಹೊರಬರುತ್ತದೆ ..ಸ್ಟೇಡಿಯಮ್ ಒಂದು ಕ್ಷಣ ಮೌನ….
24 ವರ್ಷಗಳ ಕಾಲ ಮನೋರಂಜನೆ ನೀಡಿದ,ಕ್ರಿಕೆಟ್ ಇಂದ ಜನರನ್ನು ಒಂದು ಮಾಡಿದ ಆತನ ವಿದಾಯ ಯಾರಿಗೂ ತಡೆದುಕೊಳ್ಳಲಾಗುವುದಿಲ್ಲ ..

ನಾವು ಎಷ್ಟೋ ಜನರನ್ನು ನೋಡಿದಿವಿ PPassion -Life -Profession -Hobby  -interest ಎಲ್ಲವನ್ನೂ ಒಂದೇ ಮಾಡಿಕೊಂಡ ವ್ಯಕ್ತಿ ಭಾರತ ರತ್ನ ಸಚಿನ್ …
ಅವನು ಮಾಡಿದ ಸಾವಿರಾರು ದಾಖಲೆ ಮುಂದೆ ಯಾರಾದರೂ ಮುರಿಯಬಹುದು ಆದರೆ ಅವನು ಕ್ರಿಕೆಟ್ ಅನ್ನು ಪ್ರೀತಿಸುತ್ತಿದ್ದ ರೀತಿ, ಜನರ ಮನಸಲ್ಲಿರುವ ಆತನ ಬಿಂಬ ಯಾರಿಂದಲೂ ಮುರಿಯಲು, ಬದಲಾಗಿಸಲು ಆಗುವುದಿಲ್ಲ..

ಕೆಲವು ಕ್ಷೇತ್ರಕ್ಕೆ  ಬಂದು ಎಷ್ಟೋ ಜನ ಹೆಸರು,ಹಣ ಮಾಡಿ ಫೇಮಸ್ ಆಗಿದ್ದಾರೆ, ಆದರೆ ಕೆಲವು ಕ್ಷೇತಗಳೇ ಅವರಿಂದ ಬೆಳೆಯುತ್ತದೆ, ಫೇಮಸ್ ಆಗುತ್ತದೆ ಅದೇರೀತಿ ಸಚಿನ್ ಕ್ರಿಕೆಟ್ ಗೆ ಬಂದು ಫೇಮಸ್ ಆದರು ಅನ್ನುವುದಕ್ಕಿಂತ ಅವರಿಂದ ಕ್ರಿಕೆಟ್ ಫೇಮಸ್ ಆಯ್ತು ಅನ್ನುವುದೇ ಸೂಕ್ತ ..
ಅದೇ ರೀತಿ ಮೂರು ವರ್ಷಗಳ ಹಿಂದೆ ಸಚಿನ್ ಕ್ರಿಕೆಟ್ ಗೆ ವಿದಾಯ ಹೇಳಲಿಲ್ಲ ..ಕ್ರಿಕೆಟ್ ತನಗೆ ತಾನೆ ವಿದಾಯ ಹೇಳಿಕೊಂಡಿತು …….!!

-ವೇಣುಗೋಪಾಲ್ ಹೆಚ್.

Venugopal Hasrali

 

 

 

 



 

ಕನ್ನಡದ ಬರಹಗಳನ್ನು ಹಂಚಿ ಹರಡಿ
0 0 votes
Article Rating
Subscribe
Notify of
guest

0 Comments
Inline Feedbacks
View all comments
0
Would love your thoughts, please comment.x
()
x