ಪಂಜು ಕಾವ್ಯಧಾರೆ

ಹನಿ-ಹನಿ (೧) ಪೋನು ಪೋನು ಇಲ್ಲದೇ  ಬದುಕದ ನಾನು, ನನಗೆ ನಾನೇ ಮಾಡಿಕೊಂಡ ಬೋನು‌..! (೨) ಮಿಸ್ ನಾವೇ ಲೇಟಾದರೂ ಬಸ್ಸಿಗೆ ಹಿಡಿ ಶಾಪ, ಮೇಲೊಂದು ಮಾತು ಬಸ್ಸು, ಜಸ್ಟ್..! (೩) ದಾರಿ ಅರಿತು ಹೋದರೆ ಬದುಕಿನ ದಾರಿ ರಹದಾರಿ, ಇಲ್ಲದಿದ್ದರೆ ಸೇರಬೇಕಾದೀತು ಬೇಗನೆ ಗೋರಿ..! (೪) ಚಂಚಲ ಮುದುಕನಾದರೂ ಮನಸೇಕೋ ಚಂಚಲ, ಮುದುಕನಾದರೂ ಮನಸೇಕೋ ಚಂಚಲ; ಕಾರಣ ಚಂಚಲಾ..|| (೫)ಆತಂಕ ಎಲ್ಲಾ ಮಕ್ಕಳಿಗೂ ಒಂದೇ ಆತಂಕ, ಕಡಿಮೆ ಬರದಿರಲಿ ಅಂಕ..|| (೬) ಬದುಕು ಬದುಕು ಯಾರೋ … Read more

ಜಾಣಸುದ್ದಿ 4: ಕೊಳ್ಳೇಗಾಲ ಶರ್ಮ

ಈ ವಾರದ ಸಂಚಿಕೆಯಲ್ಲಿ ಕೊಳ್ಳೇಗಾಲ  ಶರ್ಮರವರ ಧ್ವನಿಯಲ್ಲಿರುವ ಈ ಆಡೀಯೊ ಕೇಳಲು ಈ ಕೆಳಗಿನ ಕೊಂಡಿಯ ಮೇಲೆ ಕ್ಲಿಕ್ಕಿಸಿ. ಈ ಧ್ವನಿಮುದ್ರಿಕೆಯನ್ನು ಡೌನ್ ಲೋಡ್ ಮಾಡಿಕೊಳ್ಳಲು ಜಾಣ ಸುದ್ದಿ ಧ್ವನಿಮುದ್ರಿಕೆ ಲಿಂಕ್ ನ ಮೇಲೆ ಕ್ಲಿಕ್ ಮಾಡಿ ನಂತರ save as/ download ಆಪ್ಷನ್ ನಿಂದ ನಿಮ್ಮ ಮೊಬೈಲ್/ ಕಂಪ್ಯೂಟರ್ ಗೆ ಡೌನ್ ಲೋಡ್ ಮಾಡಿಕೊಳ್ಳಿ… ಇ ಮೇಲ್ ನಲ್ಲಿ ಅಥವಾ ವಾಟ್ಸ್ ಅಪ್ ನಲ್ಲಿ ಈ ಧ್ವನಿಮುದ್ರಿಕೆ ನಿಮಗೆ ಬೇಕು ಎಂದನಿಸಿದರೆ ನಿಮ್ಮ ಕೋರಿಕೆಯನ್ನು ನಮ್ಮ … Read more

ಅತೀ ವಿನಯಂ ಧೂರ್ತ ಲಕ್ಷಣಂ: ಪಿ.ಎಸ್. ಅಮರದೀಪ್

ವಾಟ್ಸಪ್ ನಲ್ಲಿ ಎಂಥೆಂಥ ಮೆಸೇಜ್ ಗಳು ಬರುತ್ತವೆಂದರೆ, ಅವುಗಳನ್ನು ನಂಬದೇ ಇರಲಾಗುವುದಿಲ್ಲ.   ಕೆಲ ತಿಂಗಳುಗಳ ಹಿಂದೆ ಅಮಿತಾಬ್ ಬಚ್ಚನ್, ವಿನೋದ್ ಖನ್ನಾ, ಹೀಗೆ ಅನೇಕರಿಗೆ ಹಾರ ಹಾಕಿ ಸಂತಾಪ ಸೂಚಿಸುತ್ತಿರುವ ಫೋಟೋ, ಅವರಷ್ಟರದೇ ಅಲ್ಲ,ಸೆಲೆಬ್ರಿಟಿಗಳ, ಕ್ರೀಡಾಪಟುಗಳ, ಸಿನಿಮಾ ನಟರ, ರಾಜಕೀಯ ವ್ಯಕ್ತಿಗಳಿಗೆ ಸಂಬಂಧಿಸಿದ ವಿಷಯಗಳಿಗೆ ಬರುತ್ತಿರುವ ಟ್ರಾಲ್ಸ್, ಕಿಂಡ್ಲಿಂಗ್ ಮೆಸೇಜ್ ಗಳನ್ನು ನೋಡಿದ್ರೆ ಅವುಗಳಿಗೆ ರೆಸ್ಪಾಂಡ್ ಮಾಡುವುದೂ ಕೆಲವೊಮ್ಮೆ  ಸೈಬರ್ ಕ್ರೈಂ  ಆಗುವ ಸಂಭವವಿರುತ್ತದೆ.    “ಕರಗ್ರೇ ವಸತೇ…….. ಎಂದು ಶುರುವಾಗುವ ಬೆಳಿಗ್ಗೆ ಕಣ್ಣು ಬಿಟ್ಟರೇ … Read more

ಜಾಲತಾಣಗಳೆಂಬ ಮಾಯಾಲೋಕ: ವೇದಾವತಿ ಹೆಚ್. ಎಸ್.

ಸ್ನೇಹಿತೆಯ ಪೋನ್ ಕರೆ ಬಂದಿತ್ತು. “ನಿನ್ನ ಪ್ರೊಫೈಲ್ ಪಿಕ್ಚರ್ ತುಂಬಾ ಚೆನ್ನಾಗಿದೆ, ಎಲ್ಲಿಗೆ ಹೋಗಿದ್ದೆ, ಭಾವಚಿತ್ರದ ಹಿಂಬದಿಗೆ ಕಾಣುತ್ತಿರುವ ಫಾಲ್ಸ್ ನಾನು ನೋಡ ಬೇಕು, ಯಾವ ಸ್ಥಳ ಎಂಬುದು ವಾಟ್ಸಾಪ್ ನಲ್ಲಿ ಅಡ್ರೆಸ್ ಹಾಕಿ ತಿಳಿಸು, ಫೇಸ್ಬುಕ್ನಲ್ಲಿ ಬೇಡ. ಅಲ್ಲಿ ಕಾಮೆಂಟ್ ಮಾಡಿದರೆ. . ಎಲ್ಲರಿಗೂ ಗೊತ್ತಾಗುತ್ತದೆ”ಎಂದು ಒಂದೇ ಉಸಿರಿನಲ್ಲಿ ಬೇಕಾದ ಮಾಹಿತಿಯನ್ನು ಕಲೆ ಹಾಕಿದಳು. ಎಲ್ಲಿ ನೋಡಿದರೂ ವಾಟ್ಸಾಪ್, ಫೇಸ್ಬುಕ್ ಗಳ ಬಗ್ಗೆ ಮಾತುಗಳು. ಹಳ್ಳಿಯಿಂದ ಡೆಲ್ಲಿಯವರೆಗೆ ಜಾಸ್ತಿಯಾಗಿ ಜನ ಬಳಕೆ ಮಾಡುವ ಜಾಲತಾಣಗಳು ಎಂದರೆ … Read more

ಸಂತಾ ರನ್: ಪ್ರಶಸ್ತಿ

ವಾರಕ್ಕೊಮ್ಮೆ ಆಗೋ ಸಂತೆ ಗೊತ್ತು. ,ಸಂತಾ-ಬಂತಾ ಜೋಕುಗಳಲ್ಲಿಯ ಸಂತಾ ಗೊತ್ತು. ಕ್ರಿಸ್ಮಸ್ಸಿನಲ್ಲಿ ಗಿಫ್ಟ್ ಕೊಡ್ತಾನೆ ಅಂತ ಮಕ್ಕಳು ಕಾಯೋ ಸಂತಾ ಕ್ಲಾಸೂ ಗೊತ್ತು. ಇದೇನಿದು ಸಂತಾ ರನ್ ಅಂದ್ರಾ ? ಮೆಕ್ಸಿಕೋದಲ್ಲಿ ವರ್ಷಕ್ಕೊಮ್ಮೆ ಕ್ರಿಸ್ಮಸ್ ಸಮಯದಲ್ಲಿ ಆಗೋ ಓಟದ ಸ್ಪರ್ಧೆಯೇ "ಸಂತಾ ರನ್". ನಮ್ಮ ಬೆಂಗಳೂರಲ್ಲೂ ತಿಂಗಳಿಗೊಂದರಂತೆ ಓಟಗಳು ನಡೀತಿರತ್ತೆ. ನೈಸ್ ರೋಡ್ ಮ್ಯಾರಥಾನ್, ಟಿಸಿಎಸ್ ೧೦ಕೆ ಓಟಕ್ಕೆ ವಿದೇಶೀ ಅಥ್ಲೀಟುಗಳೂ ಬರುತ್ತಾರೆ ಇದ್ರಲ್ಲೇನು ವಿಶೇಷ ಅಂದ್ರಾ ? ಹೆಸರೇ ಹೇಳುವಂತೆ ಓಟಕ್ಕೆ ಬರೋ ಎಲ್ಲಾ ಸ್ಪರ್ಧಿಗಳೂ … Read more

ಫ್ರಾನ್ಜ್ ಕಾಫ್ಕನ ತಪೋಸ್ಥಲ: ಕೀರ್ತಿ. ಪಿ

ಜಗತ್ತಿನ ಪ್ರತಿಯೊಂದು ಕತೆ, ಕಾದಂಬರಿಯೂ ಏನೋ ಒಂದು ಸಾರಾಂಶವ ಹೇಳಲು ಹೊರಟಿರುತ್ತದೆ. ತನ್ನ ಕಾವ್ಯಾನುಶಕ್ತಿಯ ಮೀರಿ ಕವಿ ಬರೆಯಲು ಹೋದಾಗ ಕವಿಗೆ ಕಾವ್ಯ ಹೊಸತು, ನಿರ್ಧಾರ ಸ್ಪಷ್ಟವಾಗುತಾ ಹೋಗುತ್ತದೆ. ಕವಿ ಹೀಗೆಯಿರಬೇಕೆಂಬ ಇರಾದೆ, ತಗಾದೆಯೂ ಇಲ್ಲ, ತನ್ನ ಅರ್ಥಪೂರ್ಣ ಕತೆಯ ಚಿತ್ರಿಸಲು ಕವಿಗೆ ಹೊಳೆದದ್ದನ್ನು ಹೇಳಿ ಮುಗಿಸಿ ಬಿಡುತ್ತಾನೆ. ಕಾವ್ಯ ತಪಸ್ಸು, ತಪಸ್ಸಿಲ್ಲದ ವ್ಯಕ್ತಿಗೆ ಕಾವ್ಯ ದಕ್ಕುವುದು ಕಷ್ಟ. ಓದು, ಜ್ಞಾನ, ತಾಳ್ಮೆ, ಪ್ರೀತಿ, ಸಹನೆ, ತಪಸ್ಸು, ಏಕಾಂತ, ಧ್ಯಾನ, ವಿಭೂತಿಯ ವಿಭಾವ, ಭಾವನಾತ್ಮಕ ಮನೋಭಾವ ಬಹುಮುಖ್ಯ! … Read more

ಲೇಡೀಸ್ ಬೋಗಿ: ಪ್ರೇಮಾ ಟಿ ಎಮ್ ಆರ್

ರೈಲು ಸಿಳ್ಳೆ ಹೊಡೆಯುತ್ತ ಹೊರಟಿದೆ. ಲೇಡೀಸ್ ಬೋಗಿ ತುಂಬಿ ತುಳುಕುತ್ತಿದೆ. ಮುಚ್ಚಿದ  ಕಿಟಕಿ ಗಾಜಿನಮೇಲೆ ಮಳೆನೀರು ಧಾರೆಯಾಗಿ ಹರಿಯುತ್ತಿದೆ. ಒಳಗೆ ಬದುಕಿನ ಕಥೆಗಳು  ಮಾತುಗಳಾಗಿ ಬಿಚ್ಚಿಕೊಳ್ಳುತ್ತಿವೆ. ಇನ್ನಷ್ಟು ಕಥೆಗಳು ಸರದಿಯಲ್ಲಿವೆ. ಅವಳು ಕಸ್ತೂರಿ.  ಕಾವೇರಿಯಂತೆ ತಂಪಿನ ಹುಡುಗಿ. ಅವಳ ನಗು ರೇಶಿಮೆಯಷ್ಟು ನವಿರು. ಜುಳುಗುಡುವ ನೀರ ಮೈಮೇಲೆ ಮೂಡುವ ಸುಳಿಯಂಥ ಕೆನ್ನೆಗುಳಿ. ಕಸ್ತೂರಿ ಏಳನೇ ತರಗತಿ ಮುಟ್ಟುವದರೊಳಗೆ ಅಮ್ಮ ಮತ್ತೆ ನಾಲ್ಕು ಹೆತ್ತಿದ್ದಳು. ನಿತ್ಯದ ಗಂಜಿಗೆ ಅಮ್ಮ ಅಪ್ಪನಿಗೆ ನೆರಳಾಗಿ ನಡೆಯಬೇಕು  ಹೊರಗಿನ ದುಡಿತಕ್ಕೆ. ತಮ್ಮ ತಂಗಿಯರು  … Read more

ಲಿಂಗ ಸಾಮರಸ್ಯತೆ  ಮತ್ತು ಸ್ತ್ರೀ ಸಂವೇದನೆ: ನಾಗರೇಖಾ ಗಾಂವಕರ

ನನ್ನೊಳಗಿನ ತುಡಿತಗಳು ಅವನಿಗೆ ಅರ್ಥವಾಗುವುದಿಲ್ಲ. ಅವನದೇನಿದ್ದರೂ ತನ್ನ ಮೇಲುಗಾರಿಕೆಯ ನೆಲೆಯಲ್ಲಿಯೇ ನನ್ನನ್ನು ಉದ್ದರಿಸುವ ನಿಲುವು. ಇದು ಧೀಮಂತ ವ್ಯಕ್ತಿತ್ವ ಎನ್ನಿಸಿಕೊಳ್ಳುವ ಪ್ರತಿಯೊಬ್ಬ ಸಜ್ಜನ ಪುರುಷನ ಲಕ್ಷಣ. ಹೆಣ್ಣು ದುರ್ಬಲೆ ಎಂಬ ಧೋರಣೆಯ ಅಂಚಿನಿಂದ ಆತನಿನ್ನೂ ಹೊರಬಂದಿಲ್ಲ. ಅವಳ ಮಾನಸಿಕ ಸಾಮಥ್ರ್ಯ ತನಗೆ ಮಿಕ್ಕಿದ್ದರೂ ಒಪ್ಪಲಾರ. ಅದು ಅವರಿಬ್ಬರ ಜಗತ್ತಿಗೆ ಅನ್ವಯಿಸಿ ಹೇಳುವಾಗ ಹೆಂಗಸರ ಬುದ್ಧಿ ಮೊಣಕಾಲ ಕೆಳಗೆ ಎಂದು ಉದ್ಘರಿಸುವ ಹಲವು ಮುಖಗಳು ಸದಾ ನಮ್ಮ ಸುತ್ತಮುತ್ತ ಸಂಚರಿಸುತ್ತಿರುತ್ತವೆ. ಅದಕ್ಕಾಗೆ ಪ್ರತ್ಯೇಕ ಸ್ತ್ರೀ ಪ್ರಜ್ಞೆಯ ಸ್ತ್ರೀ ಸಂವೇದನೆಯ … Read more

ನಿರಾಶ್ರಿತ: ವೈ. ಬಿ. ಕಡಕೋಳ

"ನಮಸ್ಕಾರ ಗುರುಗಳಿಗೆ" ಎದುರಿಗಿದ್ದ ಮಲ್ಲಪ್ಪನ ಕಂಡ ವೆಂಕಪ್ಪ ಮಾಸ್ತರು  "ಅರೆ ಮಲ್ಲಪ್ಪ. ಏನಿದು ಕಳೆದ ಎಳೆಂಟು ತಿಂಗಳಿಂದ ಬೆಟ್ಟಿ ಆಗಿಲ್ಲ ಎಲ್ಲಿ ಹೋಗಿದ್ದಿ. ಏನು ಕಥೆ? ", ಮತ್ತೆ ಮಾತು ಮುಂದುವರೆಸಿ "ಅಂದಾಂಗ ನಿನ್ನ ಮಗ ಚನ್ನಪ್ಪ ಅರಾಮ ಅದಾನೇನು? " ಹಾಗೆಯೇ ಒಂದೇ ಉಸಿರಿನಿಂದ ಪ್ರಶ್ನೆಗಳ ಸುರಿಮಳೆಯನ್ನೇ ಹರಿಸಿದರು. ಬಹಳ ದಿನಗಳಿಂದ ಶಾಲೆಯ ಕಡೆಗೆ ಬರದಿದ್ದ ಮಲ್ಲಪ್ಪನ ಬಗ್ಗೆ ವೆಂಕಪ್ಪ ಮಾಸ್ತರರಿಗೆ ವಿಶೇಷ ಕಾಳಜಿ. ಅವನ ಮಗ ಚನ್ನಪ್ಪ ಓದಿನಲ್ಲಿ ಸದಾ ಮುಂದು. ಮಲ್ಲಪ್ಪ ಬಡವನಾದರೂ … Read more

ಬದುಕಿನಲ್ಲಿ ಭರವಸೆ ಎಂಬುದು ಪುನರ್ಜನ್ಮದ ಅವಕಾಶವಿದ್ದಂತೆ: ನರಸಿಂಹಮೂರ್ತಿ. ಎಂ.ಎಲ್.

ನಿರೀಕ್ಷೆಗಳು ಹುಸಿಗೊಂಡಾಗ ಭರವಸೆಗಳೊಂದಿಗೆ ಬೆಸೆದುಕೊಂಡು ಮುನ್ನೆಡೆಯಬೇಕು. ಅಂದುಕೊಂಡಿದ್ದೆಲ್ಲ  ನಡೆಯಲ್ಲ, ಅಪೇಕ್ಷಿಸಿದ್ದೆಲ್ಲ ದೊರೆಯುವುದಿಲ್ಲ. ಇದು ಹೀಗೆ ಒಂದಂತರಂಗದ ಅಲೆಯಾಗಿ ಮೌನವನ್ನು ಪರಿಚಯಿಸಿ ಹೋಗಿಬಿಡುತ್ತದೆ.  ನಿರೀಕ್ಷೆಗಳಲ್ಲಿ ತೇಲಿಮುಳುಗುವಾಗ ಕುತೂಹಲಗಳು ಕನಸ್ಸಿನ ದೋಣಿಯನ್ನು ಅಲುಗಾಡದಂತೆ ಮುನ್ನೆಡಿಸಿದಂತೆ ಸೊಗಸಾದ ಅನುಭವದ ಹಿತವನ್ನು ಒಡ್ಡುತ್ತದೆ. ಅದೇ ನಿರೀಕ್ಷೆಗಳು ಹುಸಿಯಾಗುತ್ತಿದ್ದಂತೆ ಭರವಸೆಯ ಬೆಳಕು ಮೆಲ್ಲನೆ ಸರಿದು ಹೋಗಿ ಕತ್ತಲಾವರಿಸಲು ಆರಂಭಿಸಿ ಅತೀವ ಭಾವೋವೇದನೆಗೆ ಗುರಿ ಮಾಡುತ್ತಾ ಜಗತ್ತೆಲ್ಲ ಶೂನ್ಯವೆಂಬಂತಾಗಿ ಜಿಗುಪ್ಸೆ ಆವರಿಸಿಕೊಳ್ಳುತ್ತದೆ. ಏನೇನು ಹುಚ್ಚು ಮನಸ್ಸಿನ ಮಜಲುಗಳು ವಿವಿಧ ಆಯಾಮಗಳಲ್ಲಿ ಹಂಗಿಸಲು ಆರಂಭಿಸುತ್ತದೆ. ಈ ಪಯಣವೇ … Read more

ಬದುಕೆಂದರೆ ಪೂರ್ಣತ್ವದ ಕಡೆಗೆ ಸಾಗುವುದ?: ಕೆ ಟಿ ಸೋಮಶೇಖರ ಹೊಳಲ್ಕೆರೆ

 ‌ " ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ " ಎಂದು ಗೋಪಾಲಕೃಷ್ಣ ಅಡಿಗರು ಹೇಳಿದ್ದಾರೆ. ಜೀವನ ಎಂದರೇನು ಎಂದು ಒಂದು ವ್ಯಾಖ್ಯೆಯಲ್ಲಿ ಹಿಡಿದಿಡುವುದು ಕಷ್ಟ. ಆದರೂ ಕೆಲವರು ಪ್ರಯತ್ನಿಸಿದ್ದಾರೆ ಅದು ಜೀವನವನ್ನೆಲ್ಲಾ ಒಂದೇ ವ್ಯಾಖ್ಯೆಯಲ್ಲಿ ಹಿಡಿದಿಟ್ಟಿದ್ದರೂ ಅವು ಪರಿಪೂರ್ಣ ಅನ್ನಿಸವು. ಏಕೆಂದರೆ ಜೀವನ ಹೇಗೆ ಬೇಕಾದರೂ ಇರಬಹುದು! ವಿಶಾಲವೂ ಆಗಬಹುದು, ಅತಿ ಕಿರಿದೂ ಆಗಬಹುದು! ಹಿಗ್ಗಿನ ಸುಗ್ಗಿಯಾಗಬಹುದು, ಬಿರು ಬಿಸಿಲ ಬೇಸಿಗೆಯಾಗಬಹುದು. ಕಷ್ಟಗಳ ಮಳೆಯಾಗಬಹುದು! ಸಾಧನೆಯ ಶಿಖರವೇ ಆಗಬಹುದು. ಭೂಮಿಯ ಮೇಲಿರುವವರಾರೂ ಪರಿಪೂರ್ಣರಲ್ಲ. ಹುಟ್ಟಿದ ಪ್ರಯುಕ್ತ … Read more