ಪಂಜು ಕಾವ್ಯಧಾರೆ

 ಆಡು ನವಿಲೇ    ಕನಸುಗಳ ಬಚ್ಚಿಟ್ಟು ಕಾಡದಿರು ಹೀಗೆ ಬೆಚ್ಚುತ್ತ ನೋಡದಿರು ಎದೆಹೂವು ನಲುಗೆ ।।   ನೆನಪು ಬುತ್ತಿಯು ಚೆಲ್ಲಿ ಈಗ ಚೆಲ್ಲಾಪಿಲ್ಲಿ ಕಿರಿಬೊಗಸೆಯಲ್ಲದನು ಮೊಗೆಯುವುದು ಹೇಗೆ ।।   ಜೊತೆ ಜೊತೆಗೆ ನಡೆವಲ್ಲಿ ಬೀಸಿ ಸುಂಟರಗಾಳಿ ಮರೆಯಾದ ಹೆಜ್ಜೆಗಳು ಹೆಚ್ಚಿಸಿವೆ ಬೇಗೆ।।   ಎದೆಯಲ್ಲಿ ಎದೆ ಬೆರೆತು ಹಾಡು ಹೊಮ್ಮಿರುವಂದು ಯಾವ ಗಂಟಲ ಗಾಣ ಒತ್ತಿದ್ದು ಹಾಗೆ ।।   ನುಡಿಸು ನೀ 'ಗೋವಿಂದ' ಕೊಳಲಿಗುಸಿರನ್ನೂಡಿ ಕರಗಿ ಎದೆ ನವಿಲಾಡಿ ಬಿಚ್ಚುತ್ತ ಸೋಗೆ।।   … Read more

ಹಿಂಗ್ ಕಣ್ಣೀರ್ ಹಾಕಿ ಎಷ್ಟೋ ವರ್ಷ ಆಗಿದ್ವು!: ಗುರುಪ್ರಸಾದ ಕುರ್ತಕೋಟಿ  

ಅವತ್ತ ನನ್ ಕಣ್ ನನಗ ನಂಬದಷ್ಟು ಆಶ್ಚರ್ಯ ಆತು. ಎರಡೂ ಕಣ್ಣಾಗ ದಳ ದಳ ನೀರು ಹರಿಲಿಕತ್ತಾವು. ತಡಕೊಳ್ಳಲಿಕ್ಕೆ ಆಗದಷ್ಟು. ಹಿಂಗ್ ಕಣ್ಣೀರ್ ಹಾಕಿ ಎಷ್ಟೋ ವರ್ಷ ಆಗಿದ್ವು!  … ನನಗ ನೆನಪಿದ್ದಂಗ ಹತ್ತು ವರ್ಷದ ಹಿಂದ ಇರ್ಬೇಕು ನನ್ನ ಹೆಂಡತಿ ನನ್ನ ಬಿಟ್ಟು ತಾ ಒಬ್ಬಾಕಿನ ತೌರ ಮನೀಗೆ ಹೋಗಿದ್ದು. ಅದನ್ನ ಬಿಟ್ರ ಅಕಿ ಒಬ್ಬಾಕಿನ ಎಂದೂ ಹೋಗೇ ಇಲ್ಲ. ಪ್ರತಿ ಸಲ ಊರಿಗೆ ಹೋಗುಮುಂದ ಜೊತಿಗೆ ನಾನೂ ಇದ್ದ ಇರ್ತಿದ್ದೆ. ಅಥವಾ ತನ್ನ ಜೋಡಿ … Read more

ಹಿಮಾಲಯವೆಂಬ ಸ್ವರ್ಗ (ಭಾಗ 2): ವೃಂದಾ ಸಂಗಮ್

ಹರನ ಜಡೆಯಿಂದ, ಹರಿಯ ಅಡಿಯಿಂದ, ಋಷಿಯ ತೊಡೆಯಿಂದ ಇಳಿದು ಬಂದ ಗಂಗೆ, ಸಗರನ ಮಕ್ಕಳಿಗೆ ಮೋಕ್ಷ ಕೊಟ್ಟ ಗಂಗೆ, ಭೀಷ್ಮ ಪಿತಾಮಹನ ತಾಯಿ ಗಂಗೆ, ಶಂತನು ಮಹರಾಜನ ಪ್ರೇಮಿ ಗಂಗೆ, ಜಹ್ನು ಋಷಿಯಿಂದ ಜಾಹ್ನವಿಯಾದ ಗಂಗೆ, ಭಗೀರಥನಿಂದ ಭಾಗೀರಥಿಯಾದ ಗಂಗೆ, ಪರಮ ಪಾವನೆ, ಪ್ರತಿಯೊಬ್ಬ ಭಾರತೀಯನ ಮನೆಯಲ್ಲಿರುವ ಗಂಗೆ, ‘ಗಂಗೆಗೇ ಕೊಳೆ ಸೋಕದು ಪಾಪದಾ ಫಲ ತಟ್ಟದು’ ಎಂದು ನಾವು ಮಲಿನಗೊಳಿಸಿದ ಗಂಗೆ, ಕೋಟ್ಯಾನು ಕೋಟಿ ಭಾರತೀಯರ ಪಾಪ ತೊಳೆದು ಈಗ ಕೋಟ್ಯಾನು ಕೋಟಿ ರೂಪಾಯಿಯ ಒಡತಿಯಾಗಿ … Read more

ಗಂಡು ಹೆಣ್ಣಿನ ಪ್ರೀತಿ- ರೀತಿ: ನಾಗರೇಖಾಗಾಂವಕರ

ಮಾನವ ಸಂಬಂಧಗಳು ತೀರಾ ಸಂಕೀರ್ಣ, ಕ್ಲಿಷ್ಟಕರ. ಇಂದಿಗೆ ಬೇಡವೆನಿಸಿದ್ದು ಮುಂದೊಂದು ದಿನ ಆಪ್ತವಾಗುತ್ತದೆ. ಆಪ್ತವಾದ ವಸ್ತು ವ್ಯಕ್ತಿಗಳು ಅಸಹ್ಯವಾಗುತ್ತವೆ. ಇಂತಹುದೇ ಪ್ರೇಮ ಸಂಬಂಧದ ಸಂದಿಗ್ಧತೆಯಲ್ಲಿ ಕಂಡುಬರುವ ಪಾತ್ರಗಳು ಎಮಿಲಿ ಬ್ರೊಂಟೆಯ wuthering heights ನಲ್ಲಿವೆ. ಕಾದಂಬರಿಯ  ನಾಯಕಿಕ್ಯಾಥರಿನ್ ಹಾಗೂ  ನಾಯಕ ಹೇತ್ಕ್ಲಿಫ್. ಪ್ರೀತಿ ಮೂಲಬೂತವಾದ ಬಯಕೆ. ವಿಶ್ವಸನೀಯವಾದ ಪ್ರೀತಿ ಶ್ರೇಷ್ಟವಾದರೆ, ಪ್ರೀತಿಯಲ್ಲಿ ದ್ರೋಹ ಪಾಪವಾಗುತ್ತದೆ. ಅಲ್ಲಿ ಹುಟ್ಟಿದ ದ್ವೇಷಕ್ಕೆ ಪಾಪದ ಬಣ್ಣ ಕೊಡದೆ ಮಾನವಮೂರ್ತ ಪ್ರೀತಿಯೆಂದು ಚಿತ್ರಿಸಿ ಅದರ ಸೂಕ್ಷ್ಮ ತುಡಿತಗಳನ್ನು ಎಳೆಎಳೆಯಾಗಿ ಬಿತ್ತರಿಸಿದ್ದಾಳೆ ಎಮಿಲಿ. ಪರಿಪೂರ್ಣತೆ … Read more

ಓದಿ ಓದಿ ಲವ್ವೂ ಆಗಿ: ಪ್ರಸಾದ್ ಕೆ.

“ಪ್ರೀತಿಯು ಸದಾ ಕರುಣಾಮಯಿ. ಅದು ತಾಳ್ಮೆಯ ಪ್ರತಿರೂಪ. ಮತ್ಸರಕ್ಕೆ ಅಲ್ಲಿ ಜಾಗವಿಲ್ಲ. ಪ್ರೀತಿಯು ವೃಥಾ ಜಂಭ ಕೊಚ್ಚಿಕೊಳ್ಳುವುದನ್ನೋ, ದುರಹಂಕಾರವನ್ನೋ ತೋರಿಸುವುದಿಲ್ಲ. ಪ್ರೀತಿ ಒರಟೂ ಅಲ್ಲ, ಸ್ವಾಥರ್ಿಯೂ ಅಲ್ಲ. ಪ್ರೀತಿಯು ಸುಖಾಸುಮ್ಮನೆ ಎಲ್ಲವನ್ನೂ ತಪ್ಪುತಿಳಿದುಕೊಳ್ಳುವುದಿಲ್ಲ. ದ್ವೇಷವನ್ನೂ ಅದು ತನ್ನೊಳಗೆ ಬಿಟ್ಟುಕೊಳ್ಳಲಾರದು…'' ಹೀಗೆ ತಣ್ಣಗೆ ಶಾಂತಚಿತ್ತಳಾಗಿ ಹೇಳುತ್ತಾ ಹೋಗುತ್ತಿದ್ದಿದ್ದು `ಎ ವಾಕ್ ಟು ರಿಮೆಂಬರ್' ಚಿತ್ರದ ನಾಯಕಿ ಜೇಮಿ. ಹಾಗೆ ನೋಡಿದರೆ ಪ್ರೇಮಕಥೆಯ ಸುತ್ತ ಹೆಣೆದಿರುವ ನೂರಾರು ಚಲನಚಿತ್ರಗಳಲ್ಲಿ ಇದು ಅತ್ಯುತ್ತಮ ಚಿತ್ರವೇನೂ ಅಲ್ಲದಿದ್ದರೂ ಜೇಮಿ ಪಾತ್ರಕ್ಕೆ ಜೀವವನ್ನು ತುಂಬುವ … Read more

ಬದುಕು ಮಾಯೆ: ಮಂಜುನಾಥ ಹೆಗಡೆ

ಪ್ರತಾಪ್ ಚೆಂಬರ್ ನಲ್ಲಿ ಕುಳಿತು ಮಂಕಾಗಿದ್ದ, ಆಗಷ್ಟೆ ಸುನಯನಾ ಜೊತೆ ಕೊನೆ ಬಾರಿ ಮಾತನಾಡಿದ್ದ. ಐದು ವರ್ಷಗಳ ಪ್ರೀತಿಗೆ ಕೊನೆಯ ಮಾತಿನೊಂದಿಗೆ ಪರದೆ ಎಳೆದಿದ್ದಳು ಅವಳು. ಪ್ರತಾಪ್ ನೊಂದಿದ್ದ, ಕೆಲಸಕ್ಕೆ ನಾಲ್ಕು ದಿನ ರಜಾ ಹಾಕಿ ಹೋಗಲು ತೀರ್ಮಾನಿಸಿ ರಜಾ ಅರ್ಜಿ ರೆಡಿಮಾಡುತ್ತಿದ್ದ. ಆಗ ನೀತಾ ಮೆ ಐ ಕಮಿನ್ ಎನ್ನುತ್ತ ಬಾಗಿಲು ತಳ್ಳಿ ನಗುತ್ತ ಬಂದಳು, ಆದರೇ ಪ್ರತಾಪ್ ಮುಖನೋಡಿ ಒಮ್ಮೆ ದಿಗಿಲಾಯಿತು, ಮೌನ ಆವರಿಸಿತು ಇಬ್ಬರ ನಡುವೆ. ಪ್ರತಾಪ್ ಟೇಬಲ್ ಮೇಲಿನ ಲೀವ್ ಲೆಟರ್ … Read more

ನೆನಪಿನ ಪಯಣ – ಭಾಗ 3: ಪಾರ್ಥಸಾರಥಿ ಎನ್  

ಇಲ್ಲಿಯವರೆಗೆ ಆಗ ವಿಚಿತ್ರ ಗಮನಿಸಿದೆ,  ಜ್ಯೋತಿಗೆ ಸಂದ್ಯಾಳ ಮಾತು ಕೇಳಿಸುತ್ತಿದೆ ಎಂದು ನನಗನ್ನಿಸಲಿಲ್ಲ. ಹೀಗೇಕೆ ಆಕೆಯನ್ನು ನಾನು ಹಿಪ್ನಾಟಾಯಿಸ್ ಏನು ಮಾಡಿಲ್ಲ, ಮೊದಲಿಗೆ ನನಗೆ ಆ ಹಿಪ್ನಾಟೈಸ್ ಅಥವ ಸಂಮೋಹನ ವಿದ್ಯೆಯ ಬಗ್ಗೆ ಗೊತ್ತು ಇಲ್ಲ. ಆದರೆ ಇಲ್ಲಿ ಏನೋ ವಿಚಿತ್ರವಾದಂತಿದೆ  ನಾನು. ’ ಜ್ಯೋತಿ ಸಮಾದಾನ ಪಟ್ಟುಕೊಳ್ಳಿ ಅದೇಕೆ ಎಲ್ಲ ದುಃಖದ ವಿಷಯವನ್ನೆ ನೆನೆಯುತ್ತಿರುವಿರಿ, ನೀವು ಎದ್ದೇಳಿ, ಸ್ವಲ್ಪ ಕಾಪಿ ಕುಡಿಯಿರಿ ಮತ್ತೆಂದಾದರು , ಈ ಪ್ರಯೋಗ ಮುಂದುವರೆಸೋಣ, ಇಂದಿಗೆ ಸಾಕು ಅಲ್ಲವೇ' ಎಂದೆ ' … Read more

ಮಹತ್ವ ಕಳೆದುಕೊಳ್ಳುತ್ತಿರುವ ಮಹಾತ್ಮರ ಜಯಂತಿಗಳು:  ಕೆ ಟಿ ಸೋಮಶೇಖರ ಹೊಳಲ್ಕೆರೆ.

ರಾಮನ ಆದರ್ಶ, ಹನುಮನ ಸೇವಾನಿಷ್ಟೆ, ಮಹಾವೀರನ ಅಹಿಂಸೆ, ಪ್ರಾಣಿದಯೆ, ಅಂಬೇಡ್ಕರವರ ಸ್ವಾಭಿಮಾನ, ಯೋಗ್ಯವಾದುದಕ್ಕಾಗಿ ಅಸದೃಶ ಹೋರಾಟ, ಅಕ್ಕನ ಸ್ವಾತಂತ್ರ್ಯಕ್ಕಾಗಿ ಅರಸೊತ್ತಿಗೆಯನ್ನು ದಿಕ್ಕರಿಸಿದ ದಿಟ್ಟತನ … ಆನುಭಾವ,  ಸ್ವಾಭಿಮಾನ, ಗಾಂಧೀಜಿಯ ಸತ್ಯ –  ಇವುಗಳನ್ನು ಯಾರು ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ?  ಮಹಾತ್ಮರು ಯಾರು? ಎಂಬ ಪ್ರಶ್ನೆಯನ್ನು ಮೇಲ್ನೋಟಕ್ಕೆ ಸರಳ ಅನ್ನಿಸಿದರೂ ಚರ್ಚಿಸತೊಡಗಿದಾಗ ಸಂಕೀರ್ಣ ಅನ್ನಿಸುತ್ತದೆ! ಚರ್ಚೆ ಕೊನೆಗೊಳ್ಳದಂತಾಗುತ್ತದೆ! ಒಂದು ಮಾತಿನಲ್ಲಿ ಹೇಳಬೇಕೆಂದರೆ  ಯಾರ ಜೀವನ ಉತ್ತಮ, ಮಾನವೀಯ ಸಮಾಜ ಸೃಷ್ಟಿಗೆ ಕಾರಣವಾಗುತ್ತದೋ ಅವರೇ ಮಹಾತ್ಮರು. ಎಂದು ಹೇಳ ಬೇಕಾಗುತ್ತದೆ. " … Read more

ಪ್ಲಾಸ್ಟಿಕ್: ರೇಖ ಮಾಲುಗೋಡು.

ಕಾಯಿಲೆಯೇ ಏನೆಂದು ಗೊತ್ತಿಲ್ಲದೇ ಹೊಟ್ಟೆ ಉಬ್ಬರಿಸಿ ಅಡ್ಡಬಿದ್ದ ದನದಿಂದ ಕೆಜಿಗಟ್ಟಲೆ ಪ್ಲಾಸ್ಟಿಕ್ ಹೊರತೆಗೆದ ಪಶುವೈದ್ಯ ಎಂದು ಓದುವಾಗ ಮುಂದಿನ ದಿನಗಳಲ್ಲಿ ದನದ ಬದಲು ಮನುಷ್ಯ  ಎನ್ನುವ ಪದ ಬಂದರೆ ಆಶ್ಚರ್ಯವೇನಿಲ್ಲ. ಈಗ ಎಲ್ಲಿ ನೋಡಿದರು ಪ್ಲಾಸ್ಟಿಕ್ ಕವರ್ಗಳದ್ದೇ ಸಾಮ್ರಜ್ಯ.ಪ್ಲಾಸ್ಟಿಕ್ ಪದ ಬಳಕೆಗೆ  ನಮ್ಮ ಕನ್ನಡದಲ್ಲಿ ಸುಲಭವಾಗಿ ಆಡುವಂತ ಪರ್ಯಾಯ ಪದವಿಲ್ಲ. ಆದ್ದರಿಂದ ಬೇರೆ ಆಂಗ್ಲ ಪದದ ತರವೇ ನಮ್ಮನ್ನು ನಾವು ಆಂಗ್ಲಪದಗಳಿಗೆ ಹೊಂದಿಸಿಕೊಂಡು ಬಿಟ್ಟಿದ್ದೇವೆ.  ನಮ್ಮ ಪರಿಸರ ಶುದ್ದವಾಗಿರಬೇಕೆಂದರೆ ನಾವೇ ಪ್ಲಾಸ್ಟಿಕ್ನ್ನುಆದಷ್ಟು ಕಡಿಮೆ ಮಾಡುತ್ತಾ ಹೋಗಬೇಕು.ನಮ್ಮ ಹಿಂದಿನ … Read more