ಪಂಜು ಕಾವ್ಯಧಾರೆ

ಅವ್ವ ಸಂತಸದಿ ಹೊತ್ತವಳು ನೋವೆಲ್ಲ ನುಂಗುತಲಿ ಕನಸಲ್ಲೆ ಕಳೆಯುವಳು ನವಮಾಸ ತುದಿವರೆಗು ಮರುಜನ್ಮ ಪಡೆದವಳು ಶಿಶುಕೈಗೆ ಜಾರುತಲಿ ನೋವಲ್ಲು ನಕ್ಕವಳು ಅಳುವಿನ ಕರೆಕೇಳಿ ಕೈಹಿಡಿದು ನಡೆಸುವಳು ಅಂಬೆಗಾಲು ತೊಡರಿರಲು ಹಸಿಯದಿರು ಉಣಿಸುವಳು ಕಾಳಜಿಗೂ ತವರಾಗಿ ಒಂದೇಟು ನೀಡುವಳು ತೊದಲಲ್ಲಿ ಪದತಪ್ಪಿರಲು ರಮಿಸುತ್ತ ಮುದ್ದಿಸುವಳು ಕಣ್ಣೀರು ಸುರಿಸುತಲಿ ಆಸೆಗಳ ಹೊತ್ತವಳು ಹೊಸಜೀವ ಚಿಗುರಿರಲು ಅವಳೆನ್ನ ಹೆತ್ತವಳು ಮುಡಿಪಿಡುವೆ ಕೇಳದಿರು ಮಂಜು ಹೆಗಡೆ ಇಚ್ಛಾಶಕ್ತಿ ಬೆಟ್ಟದಮೇಲಿನ ತುದಿಯಲ್ಲಿ ಒಡಲನೋವನ್ನಿಟ್ಟು ಬಿಟ್ಟು ಬರಲು ಮನಸಿಲ್ಲ ಒಲವ ಹಾದಿಯಲಿ ನಡೆವಾಗ ಜಾರಿದರೂ ಬೀಳಲಾರೆನು … Read more

ಮಾತಿಗೊಂದು ಎಲ್ಲೆ ಎಲ್ಲಿದೆ. .: ಸ್ಮಿತಾ ಅಮೃತರಾಜ್. ಸಂಪಾಜೆ.

ಮಾನವ ಜನ್ಮ ದೊಡ್ಡದು ಅಂತ ದಾಸರು ಇದಕ್ಕೇ ಹೇಳಿರಬೇಕು. ಯಾಕೆಂದರೆ ನಾವು ಪ್ರಾಣಿ ಪಕ್ಷಿಗಳಿಂದ, ಕ್ರಿಮಿಕೀಟಾದಿಗಳಿಂದ, ಹೆಚ್ಚೇಕೆ ಸಕಲ ಜೀವ ಸಂಕುಲಗಳಿಗಿಂತ ಅದೆಷ್ಟೋ ಭಿನ್ನವಾದರೂ, ಅವರಿಗಿಂತ ರೂಪು ಲಾವಣ್ಯದಲ್ಲಿ ಮಿಗಿಲಾದರೂ, ಅದೆಲ್ಲಕ್ಕಿಂತ ಹೆಚ್ಚಾಗಿ ನಮಗೆ ಆಲೋಚಿಸುವ, ಯೋಚಿಸಿದ್ದನ್ನು ಹಿಂದು ಮುಂದು ನೋಡದೆ ಒದರುವ , ಅಂದರೆ ಮಾತನಾಡುವ ವಿಶೇಷ ಶಕ್ತಿ ಇರುವುದರಿಂದಲೋ ಏನೋ ನಾವುಗಳು ಎಲ್ಲರ ದೃಷ್ಟಿಯಲ್ಲಿ ಕೃತಾರ್ಥರಾಗಿರುವುದು. ಇನ್ನು ಮನುಷ್ಯನಿಗೆ ಬಾಯಿ ತಿನ್ನಲು ಮಾತ್ರ ಅಲ್ಲ, ಅದು ಮಾತನಾಡುವ ಕೆಲಸ ಕೂಡ ಮಾಡುತ್ತದೆ ಅಂದರೆ ಇದಕ್ಕಿಂತ … Read more

“ದ ಹಿಡನ್ ಸೀಕ್ರೇಟ್ಸ್ ಆಫ್ ಟ್ರೀಸ್”: ಅಖಿಲೇಶ್ ಚಿಪ್ಪಳಿ

ಪೀಟರ್ ಹೋಲ್‍ಮನ್ ರೋಲ್ಡ್ ದಾಲ್ ಬರೆದ “ದ ಸೌಂಡ್ ಮಶಿನ್” ಎಂಬ ಸಣ್ಣ ಕತೆಯಲ್ಲಿ ಒಬ್ಬ ಮನುಷ್ಯ ಒಂದು ಯಂತ್ರವನ್ನು ಕಂಡು ಹಿಡಿಯುತ್ತಾನೆ. ಕಿವಿಗೆ ಹಾಕಿಕೊಳ್ಳುವ ಈ ಯಂತ್ರದ ವಿಶೇಷವೆಂದರೆ ಸಾಮಾನ್ಯವಾಗಿ ಮನುಷ್ಯನಿಗೆ ಸ್ವಾಭಾವಿಕವಾಗಿ ಕೇಳಲಾರದ ಶಬ್ಧಗಳು ಕೇಳಿ ಬರುತ್ತವೆ. ಆ ಯಂತ್ರವನ್ನು ಕಿವಿಗೆ ಹಾಕಿಕೊಂಡು ಲಾನ್‍ನಲ್ಲಿ ಅಡ್ಡಾಡುತ್ತಾನೆ. ಅಲ್ಲಿ ಬೆಳೆದ ಸೇವಂತಿಗೆ ಹೂವನ್ನು ಕೀಳುತ್ತಾನೆ. ಆಶ್ಚರ್ಯವೆಂಬಂತೆ ಗಿಡದಿಂದ ವಿಚಿತ್ರವಾದ ಸದ್ದು ಬರುತ್ತದೆ. ಅದೇನು ಅಳುವೇ, ನೋವಿನ ಆಕ್ರಂದನವೇ? ಅಥವಾ ಪ್ರತಿಭಟಿಸುವ ಚರ್ಯೆಯೇ ಅವನಿಗದು ಅರ್ಥವಾಗುವುದಿಲ್ಲ. ಸಸ್ಯಗಳಿಗೆ … Read more

“ಒಲವಿಗೊಂದು ನೆನಪಿನೋಲೆ”: ಶಿವಾನಂದ ಆರ್ ಉಕುಮನಾಳ

ಒಂದು ಸುಂದರ ಮುಂಜಾವು ಮೈಸೂರಿನ ಮೈ ಕೊರೆವ ಚಳಿಯಲ್ಲಿ ಮಾನಸ ಗಂಗೋತ್ರಿಗೆ ಹೊರಟಿದ್ದೆ ಅದು ಬಿ.ಕಾಂ. ಅಂತಿಮ ವರ್ಷದ ಮೊದಲ ದಿನ. ಎಲ್ಲಿಂದಲೋ ಹಾರಿಬಂದ ಪಾರಿವಾಳವೊಂದು ಭುಜದ ಮೇಲೆ ಕುಳಿತಿತು ಅದು ಯಾರದೆಂದು ಸುತ್ತಲೂ ನೋಡಿದೆ ಯಾರೂ ಕಾಣಲಿಲ್ಲ. ಅದನ್ನೆತ್ತಿ ಮಣಿಕಟ್ಟಿನ ಮೇಲೆ ಕುಳ್ಳಿರಿಸಿ ನೋಡಲು ಅದರ ಎದೆಯ ಮೇಲೆ ನಯನಾ ಎಂಬ ಹೆಸರು ಮತ್ತೆ ಅತ್ತಿತ್ತ ನೋಡಲಾಗಿ ದೂರದಲ್ಲಿ ಕಂಡವಳೇ ನೀನು (ನಯನಾ). ಹತ್ತಿರಕ್ಕೆ ಬಂದು ಅದೇನನ್ನೋ ಹೇಳಿ ಆ ಪಾರಿವಾಳವನ್ನೆತ್ತಿಕೊಂಡು ಹೊರಟೇ ಹೋದೆ ಆದರೆ … Read more

ಯಮಕಿಂಕರರು: ಒಂದು ಭಯಾನಕ ಸತ್ಯಕಥೆ (ಭಾಗ 6): ಪ್ರಸಾದ್ ಕೆ.

ಇಲ್ಲಿಯವರೆಗೆ ಪೌಲ್ ಬರ್ನಾರ್ಡೊ ನ ಬಂಧನದ ಬೆನ್ನಿಗೇ ಮಾಧ್ಯಮಗಳು “ದ ಸ್ಕಾರ್-ಬೋರೋ ರೇಪಿಸ್ಟ್'' ನ ಬಂಧನವಾಯಿತು ಎಂದು ಒಂದರ ಹಿಂದೊಂದರಂತೆ ಮುಖಪುಟಗಳಲ್ಲಿ ಪ್ರಕಟಿಸುತ್ತವೆ. ಮೊದಲೇ ಸೆನ್ಸೇಶನಲ್ ನ್ಯೂಸ್ ಆಗಿದ್ದ ಈ ಪ್ರಕರಣವು ಈಗಂತೂ ದಂಪತಿಗಳ ಬಂಧನದ ಬಳಿಕ ನಿತ್ಯವೂ ಒಂದಲ್ಲಾ ಒಂದು ಸುದ್ದಿಯನ್ನು ಬಿತ್ತರಿಸಿ ಪ್ರಕರಣದ ಬಿಸಿಯನ್ನು ಕಾಯ್ದುಕೊಂಡಿರುವಂತೆ ಮಾಡುತ್ತವೆ. ಈ ಸಂಬಂಧ ಒಂದು ಅಪೀಲನ್ನು ಸಲ್ಲಿಸುವ ದ ಕ್ರೌನ್ (ಪ್ರಾಸಿಕ್ಯೂಷನ್), `ಈ ಪ್ರಕರಣದ ಮಿತಿಮೀರಿದ ಕುಖ್ಯಾತಿಯ ಪರಿಣಾಮವಾಗಿ ನ್ಯಾಯಾಲಯದಿಂದ ನೇಮಿಸಲ್ಪಟ್ಟ ಜ್ಯೂರಿ ಸಮೂಹವು ಗಾಳಿಮಾತು ಮತ್ತು … Read more

ಸಚಿನ್ ಅಂಕೋಲಾ ಅವರ ಪ್ರಗತಿಪರ ಕ್ರಾಂತಿಕಾರೀ ಕವನಗಳು: ಹುಳಗೋಳ ನಾಗಪತಿ ಹೆಗಡೆ

ಇತ್ತೀಚೆಗೆ ಅಂಕೋಲೆಯ ಪಿ.ಎಮ್. ಜ್ಯೂನಿಯರ್ ಕಾಲೇಜಿನಲ್ಲಿ ಸಚಿನ್ ಅಂಕೋಲಾ ಅವರ, ‘ನಾನೂ ಹೆಣ್ಣಾಗಬೇಕಿತ್ತು..’ ಕವನ ಸಂಕಲನ ಲೋಕಾರ್ಪಣೆಗೊಂಡಿತು. ಈ ಮೊದಲೇ ತಮ್ಮ ಹಲವು ಗಟ್ಟಿ ಕವನಗಳ ಮೂಲಕ ಅನೇಕ ಹಿರಿಯರ ಗಮನ ಸೆಳೆದವರು ಸಚಿನ್. ಬಹಳಷ್ಟು ಕವಿಗೋಷ್ಠಿಗಳಲ್ಲಿ ಸಾಕಷ್ಟು ಸಶಕ್ತವಾದ ಕವನಗಳನ್ನೇ ವಾಚಿಸಿ, ಕಾವ್ಯಪ್ರಿಯರ ಮೆಚ್ಚುಗೆಯನ್ನೂ ಗಳಿಸಿಕೊಂಡಿದ್ದಾರೆ. ಇದೀಗ ಲೋಕಾರ್ಪಣೆಗೊಂಡಿರುವ ತಮ್ಮ ಕವನ ಸಂಕಲನದಲ್ಲಿ ಹಿರಿಯರು ಇಟ್ಟ ನಂಬಿಕೆಯನ್ನು ಹುಸಿಗೊಳಿಸದೆ ಇನ್ನಷ್ಟು ಭರವಸೆಯನ್ನು ಮೂಡಿಸಿ ಕನ್ನಡ ಕಾವ್ಯಲೋಕಕ್ಕೆ ಇನ್ನೊಬ್ಬ ಗಟ್ಟಿ ಕವಿ ಬರುತ್ತಿರುವ ಎಲ್ಲ ಬಗೆಯ ವಿಶ್ವಾಸವನ್ನೂ … Read more

ಯಾರಿಂದ, ಯಾರಿಗೆ, ಯಾತಕ್ಕಾಗಿ ಈ ವಶೀಕರಣ?: ಕೃಷ್ಣವೇಣಿ ಕಿದೂರ್, ಇಚ್ಲಂಪಾಡಿ

ಸ್ತ್ರೀ, ಪುರುಷ ವಶೀಕರಣ ಮಾಡಿಕೊಡುವವರು ಮಾಧ್ಯಮಗಳಲ್ಲಿ ಜಾಹೀರಾತುಗಳ ಮೂಲಕ ಹೆಚ್ಚಾಗಿ ಯುವಜನರನ್ನು ಸೆಳೆದುಕೊಳ್ಳುವುದನ್ನು ಗಮನಿಸಿದರೆ ಮೋಸ ಹೋಗುವವರು ಇರುವ ತನಕ ಮೋಸ ಮಾಡುವವರು ಇರುತ್ತಾರೆ ಅನ್ನುವ ಮಾತು ಅಪ್ಪಟ ಸತ್ಯ. ವಾರ್ತಾಮಾಧ್ಯಮಗಳಲ್ಲಿ ನಿತ್ಯವೂ ನಾನಾ ತರಹದ ಆಮಿಷವೊಡ್ಡಿ ಗಾಳಕ್ಕೆ ಸಿಲುಕಿಸುತ್ತಾರೆ. ಮೀನು ಹಿಡಿಯಬೇಕಾದರೆ ಗಾಳಕ್ಕೆ ಎರೆಹುಳ ಸಿಕ್ಕಿಸದೆ ಹೋದರೆ ಅದು ಬಾರದು. ಯುವಜನರನ್ನು ಮಾತ್ರವಲ್ಲ; ಈ ವಶೀಕರಣದ ಮೂಲಕ ಬಯಸಿದವರನ್ನು, ಸುಲಭವಾಗಿ ವಶ ಮಾಡಿಕೊಳ್ಳಬಹುದು ಎನ್ನುವ ಆಸೆ ಅನೇಕ ಜನರನ್ನು ಪತಂಗದಂತೆ ಮುಕುರಿ ಬೀಳಿಸುತ್ತದೆ. ಇದಕ್ಕೆ ವಯಸ್ಸಿನ … Read more

ಶಿಕ್ಷಣ: ಭಾರ್ಗವ ಎಚ್.ಕೆ.

1 ಶಿಕ್ಷಣದ ಉದ್ದೇಶವಾದರು ಏನು ? ಇಂದಿನ ಆಧುನಿಕ ಯುಗದಲ್ಲಿ ಶಿಕ್ಷಣವಂತರು ಸಮಾಜದ ಉದ್ಧಾರಕ್ಕೆ ತಮ್ಮ ಕೊಡುಗೆಗಳನ್ನು ನೀಡುತ್ತಾ ಬಂದಿದ್ದಾರೆ. ಇನ್ನು ಕೆಲವರು ಸಮಾಜದ ಸ್ವಾಸ್ಥ್ಯ ಕೆಡಿಸುವ ಕೆಲಸಕ್ಕೂ ಕೈಹಾಕಿದ್ದಾರೆ.  ಉದಾಹರಣೆಗೆ, ಗೂಗಲ್‍ನಲ್ಲಿ ಬಾಂಬ್ ತಯಾರಿಸುವ ಬಗೆಯನ್ನು ಸಾವಿರಾರು ಯುಆರ್‍ಎಲ್‍ಗಳು ಮಾಹಿತಿಗಳನ್ನು ನೀಡುತ್ತಿವೆ. ಅದೇ ರೀತಿಯಾಗಿ ಗೂಗಲ್ ಸರ್ಚ್ ಇಂಜಿನ್ ಒಳ್ಳೆಯದಕ್ಕೂ ಬಳಕೆಯಾಗುತ್ತಿದೆ. ವಿಪರ್ಯಾಸವೆಂದರೆ, ಈ ಜಾಲತಾಣಗಳನ್ನೆಲ್ಲ ಜಾಲಾಡುವ ವರ್ಗ ಮಾತ್ರ ಶಿಕ್ಷಣವಂತರು. ಶಿಕ್ಷಣದ ಮೂಲ ಉದ್ದೇಶವು ಕೆಲವು ಸಮಾಜಘಾತುಕರ ತಲೆಗೆ ಹೊಕ್ಕಿಲ್ಲ. ಪರಿಜ್ಞಾನದ ಪಾರವೇ ಇಲ್ಲದಷ್ಟು … Read more

ಚಾತುರ್ಮಾಸ: ಉಮೇಶ ಕ. ಪಾಟೀಲ

ಆಷಾಢಮಾಸದಿಂದ ನಾಲ್ಕು ತಿಂಗಳುಗಳ ಕಾಲ ನಡೆಯುವ ಒಂದು ವ್ರತ ಆಚರಣೆಯಾಗಿದೆ. ಆಷಾಢ ಶುಕ್ಲ ಪೂರ್ಣಿಮೆಯಿಂದ ಕಾರ್ತಿಕ ಶುಕ್ಲ ಪೂರ್ಣಿಮೆಯ ವರೆಗೆ ನಾಲ್ಕು ತಿಂಗಳ ಸಮಯವನ್ನು ‘ಚಾತುರ್ಮಾಸ’ ಎಂದು ಪರಿಗಣಿಸಲ್ಪಟಿದೆ. ಚಾತುರ್ಮಾಸ ಸಮೀಪಿಸದೊಡನೆ ಪೂಜ್ಯ ಮುನಿಗಳು, ಆರ್ಯಿಕೆಯರು, ತ್ಯಾಗಿಗಳು, ಬ್ರಹ್ಮಚಾರಿಗಳು ಮೊದಲಾದ ತಾವು ಚಾತುರ್ಮಾಸಕ್ಕಾಗಿ ನಿಶ್ಚಿಯಿಸಿದ ಗ್ರಾಮ, ನಗರಗಳನ್ನು ಆಶ್ರಯಿಸುತ್ತಾರೆ. ಈ ವ್ರತವನ್ನು ಆಷಾಢ ಶುಕ್ಲ ಏಕಾದಶಿ, ದ್ವಾದಸೀ, ಹುಣ್ಣಿಮೆ, ಕರ್ಕಾಟಕ ಸಂಕ್ರಮಣ, ಇವುಗಳಲ್ಲೊಂದು ದಿವಸ ಈ ವ್ರತವನ್ನು ಪ್ರಾರಂಭಿಸುತ್ತಾರೆ. ಈ ವ್ರತ ಆಚರಣೆಯನ್ನು ಪ್ರಾರಂಭ ಕಾಲ ಭಿನ್ನವಾಗಿದ್ದರು … Read more

ಭಾರತದಲ್ಲಿ ಏಕರೂಪ ಶಿಕ್ಷಣದ ಒಂದು ಚರ್ಚೆ: ಸಿದ್ದುಯಾದವ್ ಚಿರಿಬಿ

ಶಿಕ್ಷಣ ಎಂಬ ಪದಕ್ಕೆ ವ್ಯಾಪಕವಾದ ಅರ್ಥವಿದೆ. ಆ ಅರ್ಥವನ್ನು ಹಿಡಿದಿಡುವ ಒಂದು ಸಮರ್ಥ ವ್ಯಾಖ್ಯೆಯನ್ನು ಅಥವಾ ನಿರ್ದಿಷ್ಟ್ಟವಾಗಿ ಇದೇ ಶಿಕ್ಷಣ ಎಂಬ ವ್ಯಾಖ್ಯೆಯನ್ನು ಕೊಡುವುದು ಕಷ್ಟ್ಟ .ತತ್ವಜ್ಞಾನಿಗಳು ಶಿಕ್ಷಣತಜ್ಞರು ,ರಾಜಕಾರಣಿಗಳು ಮತ್ತು ಸಾಧುಸಂತರು ಇನ್ನು ಮುಂತಾದವರೆಲ್ಲರೂ ತಮ್ಮ ತಮ್ಮ ದೃಷ್ಟಿ ಕೋನಗಳಿಗನುಗುಣವಾಗಿ ಶಿಕ್ಷಣವನ್ನು ವ್ಯಾಖ್ಯಾನಿಸಲು ಪ್ರಯತ್ನಿಸುತ್ತಿದ್ದಾರೆ. ಪ್ರತಿಯೊಂದು ಸಂಪೂರ್ಣವಲ್ಲದಿದ್ದರು ಶಿಕ್ಷಣದ ಬಗ್ಗೆ ಪರಿಗಣಿಸಬೇಕಾದ ಒಂದಲ್ಲ ಒಂದಂಶವನ್ನು ಎತ್ತಿ ಹಿಡಿಯುವದರಿಂದ ಶಿಕ್ಷಣದ ಯಾವುದೇ ವ್ಯಾಖ್ಯೆಯನ್ನು ತಳ್ಳಿಹಾಕುವಂತಿಲ್ಲ. ಇದರಿಂದ ಶಿಕ್ಷಣದ ಪರಿಕಲ್ಪನೆಯು ಸಂಕೀರ್ಣವಾದುದು ಹಾಗೂ ಸಕ್ರಿಯವಾದುದು ಎಂದು ಹೇಳಬಹುದಾಗಿದೆ. ನಿರಂತರವಾಗಿ … Read more

 ಅರಳುಗುಪ್ಪೆ : ಕಲ್ಲರಳಿ ಕಲೆಯಾಗಿ…: ದಂಡಿನಶಿವರ ಮಂಜುನಾಥ್

ಬೇಲೂರು-ಹಳೇಬೀಡಿನ ದೇವಾಲಯಗಳು ವಿಶ್ವದಲ್ಲಿಯೇ ಶಿಲ್ಪಕಲೆಗೆ ಹೆಸರುವಾಸಿಯಾಗಿವೆ. ಹಾಗೆಯೇ ಅದೆಷ್ಟೋ ದೇವಾಲಯಗಳು ಶಿಲ್ಪಕಲಾ ಸೌಂದರ್ಯದಿಂದ ತುಳುಕುತ್ತಿದ್ದರೂ ಸಹ ಇನ್ನೂ ಅಪರಿಚಿತವಾಗಿಯೇ ಉಳಿದಿದೆ. ಅಂತಹ ಅಪರಿಚಿತ ದೇವಾಲಯಗಳಲ್ಲಿ ಅರಳುಗುಪ್ಪೆಯ ದೇವಾಲಯಗಳೂ ಸೇರ್ಪಡೆಗೊಂಡಿವೆ. ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನಲ್ಲಿರುವ ಅರಳುಗುಪ್ಪೆ ಎಂಬ ಕುಗ್ರಾಮ ಕಿಬ್ಬನಹಳ್ಳಿ ಹೋಬಳಿಗೆ ಸೇರಿದೆ. ಇಲ್ಲಿರುವ ಹೊಯ್ಸಳರ ಕಾಲದ ಶ್ರೀ ಚನ್ನಕೇಶವ ದೇವಾಲಯ ಮತ್ತು ದ್ರಾವಿಡ ಶೈಲಿಯ ಶ್ರೀ ಕಲ್ಲೇಶ್ವರ ದೇವಾಲಯಗಳು ಶಿಲ್ಪಕಲಾ ಸೌಂದರ್ಯದಿಂದ ಕಂಗೊಳಿಸುತ್ತಿವೆ. ಚನ್ನಕೇಶವ ದೇಗುಲ : ಚನ್ನಕೇಶವ ದೇವಾಲಯವನ್ನು ನೋಡಿದ ತಕ್ಷಣ ನಮಗೆ ನೆನಪಾಗುವುದು ಬೇಲೂರು ಮತ್ತು … Read more