ಮರಳುಗಾಡನ್ನೇ ತಡೆದ ಮಹಾಗೋಡೆ ಯಾಕುಬಾ: ಅಖಿಲೇಶ್ ಚಿಪ್ಪಳಿ

ಈ ಪ್ರಪಂಚದ ಬಹುತೇಕ ಜನಸಂಖ್ಯೆ ಕಾಡು ಇರುವುದು ಕಡಿಯಲಿಕ್ಕೆ, ಪ್ರಾಣಿಗಳು ಇರುವುದು ತಿನ್ನಲಿಕ್ಕೆ ಎಂಬು ಭಾವಿಸಿಕೊಂಡಂತಿದೆ. ಈ ಮನೋಭಾವದಿಂದಾಗಿಯೇ ಜಗತ್ತಿನ ಬಹಳಷ್ಟು ಕಾಡು ಹಾಗೂ ವನ್ಯಸಂಪತ್ತು ನಶಿಸಿಹೋಗುತ್ತಿದೆ. ಕಾಡು ಇಲ್ಲದೆ ಮಳೆಯಿಲ್ಲ, ಮಳೆಯಿಲ್ಲದೆ ನೀರಿಲ್ಲ, ನೀರಿಲ್ಲದೆ ಮನುಷ್ಯನ ಜೀವನವಿಲ್ಲ ಎಂಬ ಸತ್ಯ ಇದೀಗ ನಿಧಾನವಾಗಿ ಅರಿವಿನ ಹಂತಕ್ಕೆ ಬರುತ್ತಿದೆ. ಅದರಲ್ಲೂ ನೀರಿಗಾಗಿ, ಕಾಡಿಗಾಗಿ ಜೀವಮಾನವನ್ನೇ ತೇಯ್ದ ಹಲವರು ನಮ್ಮ ಮುಂದಿದ್ದಾರೆ. ಇವರ ನಿಸ್ವಾರ್ಥ ಸೇವೆ ಜಗತ್ತಿನ ಧುರೀಣರಿಗೆ ಮಾದರಿಯಾಗಬೇಕು ಅಂತದೊಂದು ಸಾಹಸಗಾಥೆಯನ್ನು  ಅನಾವರಣಗೊಳಿಸುವ ಮೊದಲು ನಮ್ಮ ಕಾಲಬುಡದಲ್ಲಿ … Read more

ಗಂಟೆಯ ನೆಂಟನೆ ಓ ಗಡಿಯಾರ: ಸ್ಮಿತಾ ಅಮೃತರಾಜ್. ಸಂಪಾಜೆ

ಬೆಳಗು, ಮಧ್ಯಾಹ್ನ, ಸಂಜೆ ಇವೆಲ್ಲಾ ಕಾಲದ ಅಣತಿಯಂತೆ ನಿಯಮಾನುಸಾರ ನಡೆಯುವ ಸಂಗತಿಗಳು, ಇದು ಯಾವೊತ್ತೂ ಏರು ಪೇರಾಗುವುದಿಲ್ಲ, ಒಂದು ದಿನವೂ ಶೀತ, ನೆಗಡಿ, ಜ್ವರ ಅಂತ ರಗಳೆಗಳನ್ನು ನೀಡಿ ನುಣುಚಿಕೊಂಡು ಗೈರು ಹಾಜಾರಾಗುವುದಿಲ್ಲ, ಅತೀ ಹೊಂದಾಣಿಕೆಯಿಂದ ಹಗಲು ಪಾಳಿ ರಾತ್ರೆ ಪಾಳಿಯನ್ನು ಯಾವೊತ್ತೂ ಅದಲು ಬದಲು ಮಾಡಿಕೊಳ್ಳುವುದಿಲ್ಲ, ಅಸಲಿಗೆ ಅವರಿಬ್ಬರೂ ಯಾವೊತ್ತೂ ಮುಖಾ ಮುಖಿ ಸಂಧಿಸಿಕೊಳ್ಳುವುದಿಲ್ಲವೆಂಬ ಸತ್ಯ ಎಳೆ ಮಕ್ಕಳಿಗೂ ಗೊತ್ತಿರಬಹುದಾದ ವಿಚಾರ.  ಕಾಲ ನಮಗೆ ಏನೆಲ್ಲಾ ಸಾವಕಾಶಗಳನ್ನು, ಅವಕಾಶಗಳನ್ನು, ಮಾನ ಮರ್ಯಾದೆಯನ್ನು, ಸೋಲು ಗೆಲುವುಗಳನ್ನು ತಂದು … Read more

ಪಂಜು ಕಾವ್ಯಧಾರೆ: ಸಿರಿ, ಅರುಣ್ ಕುಮಾರ್ ಹೆಚ್ ಎಸ್, ಎಸ್.ಜಿ.ಶಿವಶಂಕರ್

ಬದುಕುವುದು ಕೆಲವೇ ದಿನ ಎಂದ ಮೇಲೆ…. ಬದುಕುವುದು ಇನ್ನು ಕೆಲವೇ ದಿನ ಎನ್ನುವ ಸತ್ಯ ತಿಳಿದ ಮೇಲೆ….. ನೀನು ದೂರವಾದ ದಿನಗಳ  ಲೆಕ್ಕ ಹಾಕುತ್ತ ಕಣ್ಣೀರು ಹಾಕುವುದಿಲ್ಲ ಕೊನೆಯ ಭೇಟಿಯಲ್ಲಿ  ನೀನಾಡಿದ ಮಾತುಗಳನ್ನು ಮೆಲಕು ಹಾಕುತ್ತ  ಮನಸ್ಸನ್ನು ರಾಡಿಯಾಗಿಸಿಕೊಳ್ಳುವುದಿಲ್ಲ ನೀನು ಕೊನೆಯದಾಗಿ ಕಳಿಸಿದ ಸಂದೇಶವನ್ನು ಪುನಃ ಪುನಃ ಓದುತ್ತ ನಿನ್ನ ದ್ವೇಷಕ್ಕೆ ಹೊಸ ಅರ್ಥ ಹುಡುಕುವುದಿಲ್ಲ ಯಾಕೆಂದರೆ, ನಾನು ಬದುಕ ಬೇಕಿದೆ ನಿನ್ನ ಧೂರ್ತ, ಕುತಿತ್ಸ ಮಾತುಗಳನ್ನು ಮರೆತು ಬರೀ ನನ್ನೊಳಗಿನ ಮಾತನ್ನಷ್ಟೇ ಕೇಳಬೇಕಿದೆ ನನ್ನೆದೆಯೊಳಗಿನ ಪ್ರೀತಿಯನ್ನು … Read more

ಬದುಕಿನ ಸುಳಿಯಲ್ಲಿ: ಪ್ರಕಾಶ ತದಡಿಕರ

  “ಹುಚ್ಚಿ… ಹುಚ್ಚಿ”  ಎಂದು ಹಿಯಾಳಿಸುತ್ತ  ಕೇಕೆ ಹಾಕುವ ಮಕ್ಕಳ ಗುಂಪು ನನ್ನನ್ನು ಅಟ್ಟಿಸಿ ಕುಷಿಪಡುತ್ತಿತ್ತು. ರಸ್ತೆ ಬದಿಯಲ್ಲಿ ಅಸ್ತವ್ಯಸ್ತವಾಗಿ ನಿಂತ ನಾನು ಮಕ್ಕಳೆಸೆಯುವ ಕಲ್ಲಿನ ಪೆಟ್ಟು ಸಹಿಸದೇ ಬಿಕ್ಕಿ ಬಿಕ್ಕಿ ಅಳುತ್ತಿದ್ದೆ. ಯುವಕರು, ಹಿರಿಯರೂ ಎನ್ನದೇ  ಎಲ್ಲರೂ ನನ್ನ ಅವಸ್ಥೆ ಕಂಡು ನಗುತ್ತಿದ್ದರು. ಹಸಿವಾದಾಗ ಊರಿನ ಖಾನವಳಿಯ ಮುಂದೆ ನಿಲ್ಲುವ ನನ್ನ ಗೋಳು ಪ್ರತಿ ನಿತ್ಯ ಪೇಟೆಯ ರಸ್ತೆಯಲ್ಲಿ ಕಾಣಬಹುದಾದ ದೃಶ್ಯ. ಕೆದರಿದ ತಲೆಗೂದಲು, ಕೊಳಕು ದೇಹ , ಆ ದೇಹವನ್ನು ಮುಚ್ಚಲು ಹೆಣಗುವ  ಹಳೆಯ … Read more

ಟೀನೇಜೆಂದರೆ ಬರೀ ಮೋಜಲ್ಲ. . . . : ಸವಿತಾ ಗುರುಪ್ರಸಾದ್

  ಟೀನೇಜಿನಲ್ಲಿ ಲವ್ ಮಾಡದಿದ್ದರೆ ಆತ ಅಂಜುಬುರುಕ, ಸಿಗರೇಟು ಸೇದದಿದ್ದರೆ ಈ ಶತಮಾನದಲ್ಲಿ ಆತ ಬದುಕುವುದಕ್ಕೇ ನಾಲಾಯಕ್ಕು, ಗುಂಡು ಹಾಕಿ ಗಲಾಟೆ ಎಬ್ಬಿಸಿ ಹೊಡೆದಾಟ ಮಾಡದಿದ್ದರೆ ಆತ ಗಂಡಸೇ ಅಲ್ಲ, ರಸ್ತೆಯಲ್ಲಿ ಹುಡುಗಿಯರಿಗೆ ಕಾಮೆಂಟ್ ಪಾಸ್ ಮಾಡಿ ಚುಡಾಯಿಸದಿದ್ದರೆ ಅವ ದಂಡ ! ಇದು ನಮ್ಮ ಟೀನೇಜ್ ಹುಡುಗರ ಮನದಿಂಗಿತ. ಕಾರಣ ಇವೆಲ್ಲಾ ಪೌರುಷದ ಸಂಕೇತ.  ಇನ್ನು ಹುಡುಗಿಯರೂ ಇದಕ್ಕೆ ಹೊರತಾಗಿಲ್ಲ ಬಿಡಿ. ತನ್ನ ಹಿಂದೆ ಒಬ್ಬ ಹುಡುಗನಾದರೂ ಓಡಾಡದಿದ್ದರೆ ಆಕೆ ಕಾಲೇಜು ಹಂತಕ್ಕೆ ತಲುಪಿದ್ದೇ ವೇಸ್ಟ್, … Read more

ಕರಿಯ ಮತ್ತು ಕೆಂದಿಯ ಕಥೆ: ನವೀನ್ ಮಧುಗಿರಿ

ಮಲ್ಲಿಗೆಪುರದ ಗಾಳೇರ ಓಣಿಯಲ್ಲಿ ಹನುಮಂತಪ್ಪನ ಮನೆ. ಹನುಮಂತಪ್ಪ ಒಂದು ಕಪ್ಪು ಬಣ್ಣದ ನಾಯಿ ಸಾಕಿದ್ದ. ತುಂಬಾ ದಷ್ಟಪುಷ್ಟ ಹಾಗೂ ನಂಬಿಕಸ್ಥ ನಾಯಿ ಅದು. ಹನುಮಂತಪ್ಪ ಅದನ್ನ ಕರಿಯ ಅಂತ ಕರೆಯುತ್ತಿದ್ದ. ಅಪ್ಪಿತಪ್ಪಿ ಅವನೆದುರು ಯಾರಾದರೂ ಅದನ್ನ ನಾಯಿ ಅಂದರೆ, "ಅದುಕ್ಕೆ ಹೆಸರಿಲ್ವಾ? ನಾಯಿ ಅಂತ್ಯಾಕಂತೀರ? ಕರಿಯ ಅಂತ ಕರೀರಿ" ಎಂದು ದಬಾಯಿಸುತ್ತಿದ್ದ. ಆ ಕರಿಯನ ದೆಸೆಯಿಂದಾಗಿ ಹನುಮಂತಪ್ಪನ ಮನೆಯಂಗಳದ ಮೇಲೆ  ಹೆಜ್ಜೆಯಿಡಲು ಜನ ಹೆದರುತ್ತಿದ್ದರು. ಕರಿಯ ಮನೆಯ ಹಜಾರದಲ್ಲಿ ಮಲಗುತ್ತಿದ್ದ. ಹಾಕಿದ ಊಟ ತಿನ್ನುತ್ತಿದ್ದ. ಯಾರಾದರೂ ಮನೆಯ … Read more

ಅವನಿ: ಪ್ರಶಸ್ತಿ

ಅರಳಗುಪ್ಪೆಯ ಹೊಯ್ಸಳರ ಕಾಲದ ಚನ್ನಕೇಶವ ದೇವಸ್ಥಾನ ನೋಡಹೋದಾಗ ಅಲ್ಲಿ ಅದಕ್ಕಿಂತ ಹಳೆಯದಾದ ಒಂಭತ್ತನೇ ಶತಮಾನದ ಆಸುಪಾಸಿನಲ್ಲಿ ಕಟ್ಟಿಸಿದ ಕಲ್ಲೇಶ್ವರ ದೇವಾಲಯವಿದೆ ಅಂತ ಗೊತ್ತಾಯ್ತು. ಅದನ್ನು ಕಟ್ಟಿಸಿದವರು ನೋಲಂಬ ಅರಸರು ಅಂತಲೂ ತಿಳಿಯಿತು. ಚಾಲುಕ್ಯರು ಗೊತ್ತು. ಅವರಿಗಿಂತ ಮುಂಚೆ ಬಂದ ನೆರೆ ರಾಜ್ಯಗಳಲ್ಲಿದ್ದ ಚೋಳರು, ರಾಷ್ಟ್ರಕೂಟರ ಬಗ್ಗೆ ಗೊತ್ತು. ಅದಕ್ಕಿಂತಲೂ ಮುಂಚೆ ಬಂದ ಗಂಗರು, ಕದಂಬರು ಕಟ್ಟಿಸಿದ ದೇವಾಲಯಗಳ ಬಗ್ಗೆಯೂ ಚೂರ್ಚೂರು ಗೊತ್ತು. ಇದ್ಯಾರು ನೋಲಂಬ ಅರಸರು ಅಂದರಾ ? ರಾಷ್ಟ್ರಕೂಟರ ಸಾಮಂತರಾಜರಾಗಿದ್ದ ಇವರು ಒಂಭತ್ತರಿಂದ ಹನ್ನೆರಡನೆಯ ಶತಮಾನದವರೆಗೆ … Read more

ನಾಡು, ನುಡಿಯ ಮೇಲಿನ ಅಭಿಮಾನ: ಕೃಷ್ಣವೇಣಿ ಕಿದೂರ್

ಛತ್ತೀಸ್ ಘಡದಲ್ಲಿ ಒಂದು  ಅಖಿಲ ಭಾರತ ಮಹಿಳಾ ಕಾನ್ ಫರೆನ್ಸಿಗೆ   ನಾವು ಬಂದಿದ್ದೆವು. ಭಾರತದ ಎಲ್ಲೆಡೆಯಿಂದ ಬಂದ ಮಹಿಳೆಯರು ಅಲ್ಲಿದ್ದರು. ವಿವಿಧ ಉಡುಗೆ ತೊಡುಗೆ, ವೈವಿಧ್ಯಮಯ ಆಹಾರ, ವಿವಿಧ ಭಾಷೆ ಎಲ್ಲವನ್ನೂ ಗಮನಿಸುತ್ತಿದ್ದೆವು. ನಾವು ಕೇರಳದವರು ನಾಲ್ಕು ಮಂದಿ ಒಟ್ಟಾಗಿದ್ದೆವು. ಕಾನ್ ಫರೆನ್ಸ್ ನ ಎರಡನೆಯ ದಿನ. ನಾವುಈ ಮೊದಲೇ ಮಾತಾಡಿಕೊಂಡ ಹಾಗೆ ಕೇರಳದ ಮಲಯಾಳಿ ಸೀರೆ ಉಟ್ಟಿದ್ದೆವು. ನಸು ಕ್ರೀಂ ಬಣ್ಣದ   ಖಾಲಿ(ಪ್ಲೈನ್)   ಸೀರೆಗೆ ಚಿನ್ನದ ಬಣ್ಣದ ಜರಿಯ ಅಂಚು, ಅದೇ ರೀತಿಯ ಜರಿಯ ಸೆರಗು. … Read more

ನಜ಼ರುದ್ದೀನ್‌ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ನಜ಼ರುದ್ದೀನ್‌ ಹಣ್ಣುಗಳನ್ನು ಮಾರಿದ್ದು ಬೇಸಿಗೆಯಲ್ಲಿ ವಿಪರೀತ ಸೆಕೆ ಇದ್ದ ಒಂದು ದಿನ ನಜ಼ರುದ್ದೀನ್‌ ಹಣ್ಣುಗಳನ್ನು ಮಾರುತ್ತಿದ್ದ.  ಗಿರಾಕಿ: “ಒಂದು ಮಿಣಿಕೆ ಹಣ್ಣಿನ ಬೆಲೆ ಎಷ್ಟು?” ನಜ಼ರುದ್ದೀನ್‌: “ನಾಲ್ಕು ದಿನಾರ್‌ಗಳು.” ಗಿರಾಕಿ: “ಮಿತಿಮೀರಿದ ಬೆಲೆ ಹೇಳುತ್ತಿರುವೆ. ಅಷ್ಟು ಹೆಚ್ಚು ಬೆಲೆ ಹೇಗೆ ಕೇಳುತ್ತಿರುವೆ? ನಿನಗೇನು ನ್ಯಾಯ ನೀತಿ ಎಂಬುದೇ ಇಲ್ಲವೇ?” ನಜ಼ರುದ್ದೀನ್‌: “ಇಲ್ಲ. ನೀವು ಹೇಳುತ್ತಿರುವ ಯಾವ ಸರಕುಗಳೂ ನನ್ನ ಹತ್ತಿರ ದಾಸ್ತಾನು ಇಲ್ಲ!” ***** ೨. ನಜ಼ರುದ್ದೀನ್‌ನ ರೋಗಪೀಡಿತ ಕತ್ತೆ ತನ್ನ ರೋಗಪೀಡಿತ ಕತ್ತೆಯ ಹತ್ತಿರ … Read more