ಕನ್ನಡ ಕಣ್ಮಣಿ “ಅನ್ನದಾನಯ್ಯ ಪುರಾಣಿಕ”: ಉದಯ ಪುರಾಣಿಕ

ಭಾರತ ಸ್ವಾತಂತ್ರ್ಯ ಹೋರಾಟದಲ್ಲಿ ಬ್ರಿಟೀಷರ ದೌರ್ಜನ್ಯಕ್ಕೆ ಹೆದರದೆ, ಹೈದರಾಬಾದು ಸಂಸ್ಥಾನ ವಿಮೋಚನಾ ಹೋರಾಟದಲ್ಲಿ ನಿಜಾಮ್ ಸೇನೆಯ ಗುಂಡಿಗೆ ಬೆದರದೆ ಮತ್ತು ಕರ್ನಾಟಕ ಏಕೀಕರಣ ಹೋರಾಟದಲ್ಲಿ ಪೋಲಿಸರ ಮತ್ತು ಕನ್ನಡ ಮತ್ತು ಏಕೀಕರಣ ವಿರೋಧಿಗಳ ಹಿಂಸೆಗೆ ಜಗ್ಗದೆ, ನಾಡು-ನುಡಿಗಾಗಿ ಕಳೆದ 67 ವರ್ಷಗಳಿಗಿಂತ ಹೆಚ್ಚು ಕಾಲ ನಿಸ್ವಾರ್ಥ, ನಿರಂತರ, ಅಪ್ರತಿಮ ಸೇವೆ ಸಲ್ಲಿಸಿದವರು. ಗಾಂಧಿವಾದಿ, ಕನ್ನಡ ಕಣ್ಮಣಿ 87 ವರ್ಷದ ಸಾಹಿತ್ಯರತ್ನ ಅನ್ನದಾನಯ್ಯ ಪುರಾಣಿಕರು. ಪ್ರೀತಿ ನನ್ನ ಮತ, ಸೇವೆ ನನ್ನ ವ್ರತ ಎಂದು ಬಾಳಿದ ಈ ಸಜ್ಜನರ … Read more

ಕನಸು ಚಿವುಟಿದ ವಿಧಿ ಎದುರು ಕುಳಿತು…: ಕಾವೇರಿ ಎಸ್.ಎಸ್.

ಮನದ ತುಂಬ ದಿಗಿಲು, ಮನಸ್ಸು ಮೂಕ ಕಡಲು. ಕನಸು ಸೊರಗಿದೆ. ಸುತ್ತೆಲ್ಲ ನೀರವ ಮೌನ ಮನೆ ಮಾಡಿ ಕಾರ್ಗತ್ತಲ ಕಾರ್ಮೋಡ ಕವಿದು ಬೆಳದಿಂಗಳೂ ಕಪ್ಪಾದಂತೆ ಭಾಸವಾಗುತ್ತಿದೆ. ಮನದಿ ಕಟ್ಟಿದ ಕನಸು ನುಚ್ಚುನೂರಾಗಿ ಕಣ್ಣು ತುಂಬಿ ಭಾವುಕತೆಯ ಹೊದ್ದು ನಲುಗಿದೆ. ಹೆಪ್ಪುಗಟ್ಟಿದ ನೋವಿನ ಮಡಿಲಲ್ಲಿ ಮಿಂದು ಮಡಿಯಾಗಬೇಕು ಎಂದುಕೊಂಡರೂ ಆಗದೇ ವಿಧಿಯ ಆಟಕ್ಕೆ ತಲೆ ಬಾಗಿ, ಅದರ ಮುಂದೆ ಶರಣಾಗಿ ಮಂಡಿಯೂರಿ ಕುಳಿತು ಬಿಕ್ಕುತ್ತಿದ್ದೇನೆ. ನನ್ನ ಆಲೋಚನೆ ಖಾಲಿ ಹಾಳೆಯಾಗಿದೆ. ಅದರಲ್ಲಿ ಏನೂ ಬರೆಯಲು ತೋಚದೇ ಒಂಟಿಯಾಗಿರುವ ನನ್ನನ್ನು … Read more

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಡ್ರ್ಯಾಗನ್‌  ಕೊಲ್ಲುವವ ಅಂದುಕೊಳ್ಳುತ್ತಿದ್ದವನ ಕತೆ ತಾನೊಬ್ಬ ಡ್ರ್ಯಾಗನ್‌ ಬೇಟೆಗಾರ ಎಂಬುದಾಗಿ ಹೇಳಿಕೊಳ್ಳುತ್ತಿದ್ದವನೊಬ್ಬ ಡ್ರ್ಯಾಗನ್‌ ಹಿಡಿಯಲೋಸುಗ ಪರ್ವತ ಪ್ರದೇಶಕ್ಕೆ ಹೋದನು. ಪರ್ವತ ಶ್ರೇಣಿಯಲ್ಲೆಲ್ಲ ಡ್ರ್ಯಾಗನ್‌ಗಾಗಿ ಹುಡುಕಾಡತೊಡಗಿದ. ಕೊನೆಗೆ ಅತ್ಯಂತ ಎತ್ತರದ ಪರ್ವತವೊಂದರಲ್ಲಿ ಅತೀ ಎತ್ತರದಲ್ಲಿದ್ದ ಗುಹೆಯೊಂದರಲ್ಲಿ ಬೃಹತ್ ಗಾತ್ರದ ಡ್ರ್ಯಾಗನ್‌ನ ಘನೀಕೃತ ದೇಹವೊಂದನ್ನು ಆವಿಷ್ಕರಿಸಿದ. ಅದನ್ನು ಆತ ಬಾಗ್ದಾದ್‌ಗೆ ತಂದನು. ಅದನ್ನು ತಾನು ಕೊಂದದ್ದಾಗಿ ಘೋಷಿಸಿ ಅಲ್ಲಿನ ನದಿಯ ದಡದಲ್ಲಿ ಪ್ರದರ್ಶನಕ್ಕೆ ಇಟ್ಟನು. ಡ್ರ್ಯಾಗನ್‌ ಅನ್ನು ನೋಡಲು ನೂರುಗಟ್ಟಲೆ ಸಂಖ್ಯೆಯಲ್ಲಿ ಜನ ಬಂದರು.  ಬಾಗ್ದಾದ್‌ನ ಬಿಸಿ ವಾತಾವರಣ … Read more

ನಮ್ಮೂರ ದಸರಾ: ಪ್ರಶಸ್ತಿ

ಹಬ್ಬಗಳೆಂದ್ರೆ ಅದೇನೋ ಖುಷಿ.ಅದು ನಮ್ಮನ್ನೆಲ್ಲಾ ಸ್ವಂತಂತ್ರ್ಯರನ್ನಾಗಿಸಿದ ಆಗಸ್ಟ್ ಹಬ್ಬವಾಗಿರಬಹುದು. ಗಣತಂತ್ರರನ್ನಾಗಿಸಿದ ಜನವರಿ ಹಬ್ಬವೂ ಆಗಿರಬಹುದು. ನಾಡಹಬ್ಬ ದಸರಾವಾಗಿರಬಹುದು, ಬೆಳಕಹಬ್ಬ ದೀಪಾವಳಿಯಾಗಿರಬಹುದು. ಯಾವಾಗ ಬರುತ್ತಪ್ಪಾ ರಜಾ ಎಂದನಿಸೋ ಬಕ್ರೀದು, ರಂಜಾನ್, ಕ್ರಿಸ್ಮಸ್ಸುಗಳಾದ್ರೂ ಸರಿಯೇ.ಹಬ್ಬವೆಂದ್ರೆ, ಆ ರಜೆಗಳೆಂದ್ರೆ ಅದೆಂತದೋ ಖುಷಿ ಬಾಲ್ಯದಿಂದಲೂ. ಕೆಲವೆಡೆಯೆಲ್ಲಾ ಶಾರದಾಪೂಜೆ, ಲಕ್ಷ್ಮೀ ಪೂಜೆ, ಆಯುಧಪೂಜೆ, ಗೂಪೂಜೆ ಅಂತ ಹಲವಾರು ಪೂಜೆಯಿರೋ ದಸರಾ ದೊಡ್ಡ ಹಬ್ಬವಾದರೆ ನಮ್ಮೆಡೆ ಅದರ ಹೆಚ್ಚಿನವೆಲ್ಲಾ ಬರೋ ದೀಪಾವಳಿಯೇ ದೊಡ್ಡಬ್ಬ. ದಸರಾವೆಂದರೆ  ದೊಡ್ಡವರಿಗೆ ಶಮೀ ಪತ್ರೆ ಕೊಟ್ಟು, ಬನ್ನಿ ಕಡಿಯೋದು , ಬಾಳೆಮರ … Read more

ಕರಿಸುಂದರಿಯ ಕಿರಿಗೂಡು-2: ಅಖಿಲೇಶ್ ಚಿಪ್ಪಳಿ

ಕರಿಸುಂದರಿಯ ಕಿರಿಗೂಡು-1 [ಎರಡು ವಾರದ ಹಿಂದೆ ಬರೆದಿದ್ದ ಈ ಸತ್ಯಕಥೆಯನ್ನು ಪೂರ್ಣಗೊಳಿಸುವ ಹೊಣೆಗಾರಿಕೆ ಇದ್ದುದ್ದರಿಂದ, ನಂತರದಲ್ಲಿ ನಡೆದ ಘಟನೆಗಳನ್ನು ಕಟ್ಟಿಕೊಡುವ ಪ್ರಯತ್ನ ಇಲ್ಲಿ ಮಾಡಲಾಗಿದೆ. ನಾವಂದುಕೊಂಡಂತೆ ಎಲ್ಲವೂ ನಡೆಯುವುದಿದ್ದರೆ, ಪ್ರಪಂಚ ಸುಲಲಿತವಾಗಿಯೇ ಇರುತ್ತಿತ್ತೇನೋ. ಇಲ್ಲಿ ಪುಟ್ಟ ಕಣಜವೊಂದು ತನ್ನ ವಂಶಾಭಿವೃದ್ಧಿಯ ಪ್ರಯತ್ನದಲ್ಲಿದ್ದಾಗಲೇ, ದೂರದ ಅಸ್ಸಾಂನಲ್ಲಿ ಮಾನವನ ಶೋಕಿಗಾಗಿ ಒಂದು ಅಪ್ರಿಯ ಘಟನೆ ನಡೆಯಿತು. ಜೀವಜಾಲದಲ್ಲಿ ನಡೆದ ಎರಡು ಘಟನೆಗಳನ್ನು ಇಲ್ಲಿ ಪೋಣಿಸಲಾಗಿದೆ]    ತನ್ನ ಗೂಡಿಗೆ ಲಪ್ಪ ಹಾಕಿ ಮೆತ್ತಿದಂತೆ, ಜೇಡಿ ಮಣ್ಣನ್ನು ಮೆತ್ತಿ ಹೋದ ಕಪ್ಪು … Read more

ಕಾವ್ಯಧಾರೆ: ವಸಂತ ಬಿ ಈಶ್ವರಗೆರೆ, ನೂರುಲ್ಲಾ ತ್ಯಾಮಗೊಂಡ್ಲು, ಸತೀಶ್ ಪಾಳೇಗಾರ್

ಮಳೆರಾಯ ಬರಡು ಭೂಮಿಗೆ, ಮುತ್ತಿನ ಹನಿಗಳ ಸುರಿಸಿ,  ಹಸಿರ ಚಿಗುರಿಸು ಮಳೆರಾಯ.  ಕಾದು ಬಾಯ್ದೆರೆದಿದೆ,  ನಿನ್ನ ಆಗಮನದ ನಿರೀಕ್ಷೆಯಲಿದೆ, ಸುರಿಯಲು ಬಾರೆಯ ಮಹರಾಯ..? ರೈತ ಮುಗಿಲತ್ತ ನೋಡುತ,  ಪಶು ಪಕ್ಷಿಗಳೆಲ್ಲ ನಿನಗಾಗಿ ಹುಯ್ಯಲಿಡುತ,  ಕರುಣೆ ತೋರಲಾರೆಯ ಮುನಿದ ಮಾಯ…?  ಬೆಟ್ಟದಲಿ ಹಸಿರಿಲ್ಲ,  ಭುವಿಯಲಿ ತಂಪಿನ ಕಂಪಿಲ್ಲ, ತೋರಲಾರೆಯ ಹೊಸ ಚೇತನ ರಾಯ…?  ನೀರಿಗಾಗಿ ಆಹಕಾರ ಏಳುವ ಮುನ್ನ,  ಜಾನುವಾರುಗಳು ಹಸಿವಿನಿಂದ ಸಾಯುವ ಮುನ್ನ,  ಈ ಧರೆ ಬಾಯಿ ಬಿಟ್ಟು ಎಲ್ಲರನು ಮಣ್ಣಾಗಿಸುವ ಮುನ್ನ,  ನಿನ್ನ ಸಿಂಚನ ಸುರಿಸು,  … Read more

ಹೊಟ್ಟೆ ತುಂಬಾ ನಗು ಕಣ್ಣ ತುಂಬಾ ನೀರು ಉಕ್ಕಿಸಿದ ನಾಟಕ ಕಿಲಾಡಿ ರಂಗಣ್ಣ: ಹಿಪ್ಪರಗಿ ಸಿದ್ಧರಾಮ

ನವರಸಗಳಿಂದಾದ ಕಲಾರಂಗವು ಜನಸಮುದಾಯದ ಸಮಸ್ಯೆಗಳನ್ನು ವಿವಿಧ ಕಾನ್ವಾಸಗಳ ಮೂಲಕ ಹೊರಹೊಮ್ಮಿಸುತ್ತಾ ಸಮಕಾಲೀನ ಸಮಸ್ಯೆಗಳನ್ನು ಎತ್ತಿ ತೋರಿಸಿ ಜಾಗೃತಿಯ ನಿನಾದವನ್ನು ನಿರಂತರವಾಗಿಸುವ ಶಕ್ತಿ ಹೊಂದಿದೆ. ಇಂತಹ ಪ್ರಖರ ಶಕ್ತಿಯನ್ನು ಹೊಂದಿರುವ ಕಪಾಪ್ರಕಾರಗಳಲ್ಲಿ ಒಂದಾದ ರಂಗಭೂಮಿಯು ಶತಮಾನದಿಂದಲೂ ಇಂಥಹ ಸಾಮಾಜಿಕ ಜಾಗೃತಿಯನ್ನು ಮೂಡಿಸುತ್ತಾ ಕೆಲವೊಂದು ಬಗೆಹರಿಸಲಾಗದ ಸಮಸ್ಯೆಗಳನ್ನು ನವರಸಗಳಲ್ಲಿಯೇ ಹೆಚ್ಚು ಇಷ್ಟವಾಗುವ ಹಾಸ್ಯರಸದ ಮೂಲಕ ಹೇಳಲು ಪ್ರಯತ್ನಿಸುತ್ತಿದೆ. ಈ ಪ್ರಯತ್ನದಲ್ಲಿ ಹಲವಾರು ನಾಟಕಕಾರರು ಆಗಾಗ ಪ್ರಯತ್ನ-ಪ್ರಯೋಗ ಮಾಡುತ್ತಲೇ ಬಂದಿದ್ದಾರೆ. ಯಾಕಂದರೆ ರಂಗಭೂಮಿಯೆಂಬುದು ನಾಗರಿಕ ಚಿಕಿತ್ಸಕ ಶಕ್ತಿಯೊಂದಿಗೆ ಅನುದಿನವೂ ನಿತ್ಯನಿರಂತರ ಪ್ರವಹಿಸುವ … Read more

ಬೀದಿ ನಾಯಿಗಳ ವ್ಯಥೆ: ಎಚ್.ಕೆ.ಶರತ್

ಬೀದಿ ನಾಯಿಗಳಾದ ನಮಗೆ ಮನುಷ್ಯರೆಂದು ಕರೆಸಿಕೊಳ್ಳುವ ನಿಮ್ಮ ಮೇಲೆ ಮುನಿಸಿದೆ. ನಾವೇನು ನಮಗೆ ವಸತಿ ಸೌಲಭ್ಯ ಕಲ್ಪಿಸಿ ಎಂದು ಎಂದಾದರೂ ಬೇಡಿಕೆ ಮುಂದಿಟ್ಟಿದ್ದೇವೆಯೇ? ಬೀದಿಯನ್ನೇ ಸರ್ವಸ್ವವೆಂದು ಭಾವಿಸಿ ನಮ್ಮ ಮುತ್ತಾತನ ಕಾಲದಿಂದಲೂ ಅಲ್ಲೇ ಜೀವಿಸುತ್ತಿದ್ದೇವೆ. ಇತ್ತೀಚಿನ ದಿನಗಳಲ್ಲಿ ನಮ್ಮ ಮೇಲೆ ನೀವು ಹೊರಿಸುತ್ತಿರುವ ಗಂಭೀರ ಆಪಾದನೆ ಎಂದರೆ, ನಾವು ಮನುಷ್ಯರ ಮೇಲೆ ದಾಳಿ ಮಾಡುತ್ತೇವೆನ್ನುವುದು. ಯಾರೋ ನಮ್ಮ ಕಡೆಯ ಕೆಲವರು ಮಾಡುವ ದುಷ್ಕøತ್ಯಕ್ಕೆ ನಮ್ಮೆಲ್ಲರನ್ನೂ ಬಲಿಪಶುಗಳನ್ನಾಗಿ ಮಾಡುವುದು ಎಷ್ಟು ಸರಿ? ಈಗ ನೀವೆ ಆಲೋಚಿಸಿ, ನಿಮ್ಮ ಕುಲಕ್ಕೆ … Read more