‘ಕೊರಿಯೋ’ಗ್ರಾಫರ್: ಗುರುಪ್ರಸಾದ ಕುರ್ತಕೋಟಿ

’ಸುರದು ಊಟ ಮಾಡಬೇಕು ಗೊರದು ನಿದ್ದೆ ಮಾಡಬೇಕು’ ಅಂತ  ಹಳ್ಳಿ ಕಡೆ ಹೇಳತಾರೆ. ಅದರರ್ಥ ’ಸೊರ ಸೊರ’ ಅಂತ ಸದ್ದು ಮಾಡುತ್ತ, ಅದು ಹುಳಿಯೋ, ಸಾರೋ ಅದೇನೇ ಇದ್ದರೂ ಅದನ್ನು ಸೊರ ಸೊರನೆ ಸವಿದು ಊಟ ಮಾಡಬೇಕು. ಹಾಗೂ ಗೊರಕೆ ಹೊಡೆಯುತ್ತ ನಿದ್ದೆ ಮಾಡಬೇಕು, ಅದೇ ಗಡದ್ದಾದ ನಿದ್ದೆ ಅನ್ನೋದು ಈ ಹೇಳಿಕೆಯ ಹಿಂದಿರುವ ಅರ್ಥ. ಸುರದು ಹೊಟ್ಟೆ ಬಿರಿಯುವಂತೆ ಊಟ ಮಾಡಿದ ಮೇಲೆ ಗೊರಕೆ ಹೊಡೆಯುವಂತಹ ನಿದ್ದೆ ಬರದೇ ಇನ್ನೇನು? ಆದರೆ ಆ ಎರಡೂ ಕ್ರಿಯೆಗಳಿಂದ … Read more

ಫ್ಲಾಪಿಬಾಯ್ ಮತ್ತು ಲಗೋರಿಬಾಬಾ 8

ಕಾಲೇಜಿನ ಉಪನ್ಯಾಸ ಫ್ಲಾಪಿಬಾಯ್ ಮತ್ತು ಲಗೋರಿಬಾಬಾ ಖ್ಯಾತಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿತ್ತು. ಇವರ ಅಪರಿಮಿತ ಬುದ್ಧಿವಂತಿಕೆ, ಜ್ಞಾನಕ್ಕೆ ಮೆಚ್ಚಿದ ನಗರದ ನಾಗರಿಕರು ಬೆರೆ ಬೇರೆ ಕಡೆ ಉಪನ್ಯಾಸಕ್ಕೆ ಕರೆಯುತ್ತಿದ್ದರು. ಹೊಸ ಕೆಲಸ ಹೊಸ ಉತ್ಸಾಹ ಇಬ್ರೂ ಕರೆದಲ್ಲೆಲ್ಲಾ ಹೋಗಿ ಭಾಷಣ ಬಿಗಿದು ಸಿಳ್ಳೆ ಗಿಟ್ಟಿಸಿ ಬರುತ್ತಿದ್ದರು. ಹೀಗೆ ಒಮ್ಮೆ ಅವರಿಬ್ಬರನ್ನ ಉಪನ್ಯಾಸ ಕೊಡಲು ನಗರದ ಒಂದು ಕಾಲೇಜಿನಿಂದ ಕರೆ ಬಂತು. ಆಯ್ತು ಅಂತ ಇಬ್ರೂ ಹೊರಟ್ರು.  ಫ್ಲಾಪಿಬಾಯ್ ಇರಲಿ, ಲಗೋರಿಬಾಬಾನೆ ಆಗಿರಲಿ ಜನರನ್ನ ನೋಡಿ ಮಾತಾಡೋವಂತವ್ರು. ಮೊದಲೇ … Read more

ನಿ. ರಾಜಶೇಖರ ಅವರ ಜೀವನ ದರ್ಶನ ಹಾಗೂ ಅವರ ‘ಶ್ರೀರಾಮಾಯಣ ದರ್ಶನಂ’ ಗದ್ಯಾನುವಾದ: ಶ್ರೀನಿವಾಸ ಕೃ. ದೇಸಾಯಿ

ಕೃಪೆಗೆಯ್, ತಾಯೆ, ಪುಟ್ಟನಂ!  ಕನ್ನಡದ ಪೊಸಸುಗ್ಗಿ ಬನದ ಈ ಪರಪುಟ್ಟನಂ (ಶ್ರೀ.ರಾ.ದ. ಆಯೋದ್ಯಾ ಸಂಪುಟಂ – ಸಂಚಿಕೆ 1; 139-140) ಪುಟ್ಟನನ್ನು, ಕನ್ನಡದ ಹೊಸ ಸುಗ್ಗಿವನದ ಈ ಕೋಗಿಲೆಯನ್ನು ಹರಸು ತಾಯಿ! (ಗದ್ಯಾನುವಾದ – ನಿ. ರಾಜಶೇಖರ) ಹೊಸಗನ್ನಡದ ಸಾಹಿತ್ಯದ ಮೊಟ್ಟಮೊದಲ ಮಹಾಕಾವ್ಯವೆಂದು ಮಹಾಕವಿ ಕುವೆಂಪುರವರ ಮಹಾಛಂದಸ್ಸಿನ ‘ಶ್ರೀರಾಮಾಯನ ದರ್ಶನಂ’ ಪ್ರಸಿದ್ಧಿ ಪಡೆದಿದೆ. ಇದನ್ನು ಪುಷ್ಟೀಕರಿಸುವಂತೆ, ಕನ್ನಡ ಭಾಷೆಯ ಮೊದಲ ‘ಜ್ಞಾನಪೀಠ ಪ್ರಶಸ್ತಿ’ಯನ್ನು, ಈ ಮಹಾಕಾವ್ಯ ತನ್ನದಾಗಿಸಿತು. ಅದರಂತೆಯೇ ಕರ್ನಾಟಕ ರಾಜ್ಯ ಸರ್ಕಾರವು ಪ್ರಾರಂಬಿಸಿದ ‘ಪಂಪ’ ಪ್ರಶಸ್ತಿಯು … Read more

ಕಾವ್ಯಧಾರೆ: ಸುಷ್ಮಾ ರಾಘವೇಂದ್ರ, ಶೋಭಾ ಕೆ., ಕು.ಸ.ಮಧುಸೂದನ್ ರಂಗೇನಹಳ್ಳಿ, ಎಸ್.ಕಲಾಲ್

ಹಚ್ಚೆಯ ಹಸಿರು ಅವಳು, ಒಡಕು ಕನ್ನಡಕದೊಳಗಿನಿಂದ ಇಣುಕಿ ನನ್ನ ಕರೆದಾಗ ನನಗಿನ್ನು ಎಳಸು ಬೆರೆಯಲಿಲ್ಲ ಬೆಳೆಯಲಿಲ್ಲ ಅವಳೊಳಗೆ ಅವಳ ಕೈ ತುಂಬಿದ ಹಚ್ಚೆಯ ಹಸಿರೊಳಗೆ, ಎಲ್ಲರಂತೆ ತೊಡೆಯೇರಿ ಕಥೆಯಾಗಿ ಹಂಬಲಿಸಲಿಲ್ಲ ಅದಕ್ಕೇ ಕಾಡುತ್ತಾಳವಳು ಕಣ್ಣಂಚಿನಲ್ಲಿ ಹನಿಗಳಾಗಿ, ಬೀಳಲೊಲ್ಲೆ ನೆಲಕ್ಕೆ  ಬಾಗುತ್ತೇನೆ ಅವಳೆದುರಿಗೆ, ಯಾವ ಕಥೆಯ ನಾಯಕಿಯಂತಲ್ಲ ಉತ್ತಿದಳು ಬಿತ್ತಿದಳು ನನ್ನವರ ಹಸುರ, ಕೂತು ತಿನ್ನುವ ಮಂದಿಗೆ ಕುಡಿಕೆ ಹೊನ್ನು ತುಂಬಿಸಿ ಹರಿದ ನೆತ್ತರ,  ಕರಗಿದ ಖಂಡವನ್ನು ಸವೆದ ಬೆನ್ನ ಮೂಳೆಯ ತಿರುಗಿ ನೋಡದೇ ಬೆತ್ತಳಾದಳು ಶೂನ್ಯದೊಳಗೆ ನೆನಪಾಗದ … Read more

ಸುಜಿಯೆಂಬ ಕುರುಡಾನೆಯ ಬಿಡುಗಡೆ!: ಅಖಿಲೇಶ್ ಚಿಪ್ಪಳಿ

[ಮಾನವನ ಮನೋವಿಕಾರಗಳಿಗೆ ಎಣೆಯಿಲ್ಲ. ಮನುಷ್ಯರನ್ನೇ ಗುಲಾಮರನ್ನಾಗಿಸಿ, ಚಿತ್ರಹಿಂಸೆ ನೀಡಿ ದುಡಿಸಿಕೊಂಡಿರುವ ಹಲವಾರು ನಿದರ್ಶನಗಳು ಇತಿಹಾಸದ ಪುಟಗಳಲ್ಲಿ ದಾಖಲಾಗಿವೆ. ಅನೇಕ ತರಹದ ರಕ್ತಪಾತ, ಹೋರಾಟ, ಪ್ರತಿರೋಧಗಳಿಂದಾಗಿ ಜಗತ್ತಿನ ಹಲವು ಭಾಗಗಳಲ್ಲಿ ಮಾನವ ಗುಲಾಮಗಿರಿ ಎಂಬ ಅಮಾನುಷ ಕೃತ್ಯ ಹೆಚ್ಚು ಕಡಿಮೆ ಅಳಿದುಹೋಗಿದ್ದರೂ, ನಾಗರೀಕ ಸಮಾಜದಲ್ಲಿ ಅಲ್ಲಲ್ಲಿ ಇನ್ನೂ ಈ ಹೇಯ ಕೃತ್ಯ ಇನ್ನೂ ಉಳಿದುಕೊಂಡಿದೆ. ಜೀತ ಪದ್ಧತಿಯೆಂದು ನಮ್ಮಲ್ಲಿ ಕರೆಯಲಾಗುವ ಕೆಲವು ಘಟನೆಗಳನ್ನು ದಿನಪತ್ರಿಕೆಗಳಲ್ಲಿ ನಾವಿನ್ನೂ ಓದುತ್ತಿದ್ದೇವೆ. ಇದೇ ನಾಗರೀಕ ಸಮಾಜ ತನ್ನ ಮನರಂಜನೆಗಾಗಿ ಪ್ರಾಣಿಗಳನ್ನು ಪಳಗಿಸಿ ಗುಲಾಮಿತನಕ್ಕೆ … Read more

ಖಾಲಿ: ಪ್ರಶಸ್ತಿ

ಕನಸ ಕಲ್ಪನೆಗಳೆಲ್ಲಾ ಕರಗಿಹೋಗಿ, ಮನದ ಭಾವಗಳೆಲ್ಲಾ ಬತ್ತಿಹೋಗಿ ಖಾಲಿತನ ಕಾಡುತ್ತಿತ್ತು. ಬರೆಯೋಣವೆಂದರೆ ಬರೆಯಲೇನನ್ನ, ಹಾಡೋಣವೆಂದರೆ ಹಾಡಲೇನನ್ನ ಅನ್ನೋ ದ್ವಂದ್ವ. ಸಖತ್ ಚೆನ್ನಾಗಿ ಬರೆದು ಅದಕ್ಕೇನಾದ್ರೂ ಪುರಸ್ಕಾರಗಳ ಸುರಿಮಳೆಯಾಗಿ ಕೊನೆಗೊಂದು ದಿನ ಅದನ್ನು ವಾಪಾಸ್ ಮಾಡಬೇಕಾಗಬಹುದೆನ್ನೋ ಭಯ ಬರೆಯಲೇ ಬಿಡುತ್ತಿರಲಿಲ್ಲ! ಹೊಸದೇನನ್ನಾದ್ರೂ ಬರೆಯೋ ಬದಲು ಬರೆದುದರ ಬಗ್ಗೆಯೇ ಮತ್ತಿನ್ನೇನ್ನಾದ್ರೂ ಬರೆಯೋಣವಾ ಅನ್ನಿಸಿತು. ವಿಶ್ವವಿದ್ಯಾಲಯಗಳಲ್ಲಿರುವ ಕೃತಿಚೌರ್ಯ ತಂತ್ರಜ್ಜಾನ ಎಲ್ಲಾ ಲೇಖಕರ, ಓದುಗರ ಬಳಿಯೂ ಸದ್ಯಕ್ಕಿಲ್ಲದೇ ನಾ ಕದ್ದಿದ್ದು ಗೊತ್ತಾಗದಿಲ್ಲದಿದ್ದರೂ ಮುಂದೊಂದು ದಿನ ಜನರ ಬಾಯಲ್ಲಿ ಛೀ, ಥೂ ಅನ್ನಿಸಿಕೊಳ್ಳೋ ಬದಲು … Read more

ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ಮಂಗಗಳನ್ನು ಹಿಡಿಯುವುದು ಹೇಗೆ? ಒಂದಾನೊಂದು ಕಾಲದಲ್ಲಿ ಚೆರಿ ಹಣ್ಣುಗಳನ್ನು ಬಲು ಇಷ್ಟಪಡುತ್ತಿದ್ದ ಮಂಗವೊಂದಿತ್ತು. ಒಂದು ದಿನ ಅದಕ್ಕೆ ರಸಭರಿತ ಚೆರಿ ಹಣ್ಣೊಂದು ಗೋಚರಿಸಿತು. ಆ ಹಣ್ಣನ್ನು ಪಡೆಯಲೋಸುಗ ಮಂಗ ಮರದಿಂದ ಇಳಿದು ಬಂದಿತು. ಆ ಹಣ್ಣು ಒಂದು ಶುಭ್ರವಾದ ಗಾಜಿನ ಸೀಸೆಯೊಳಗಿತ್ತು. ವಿವಿಧ ರೀತಿಯಲ್ಲಿ ಪ್ರಯತ್ನಿಸಿದ ನಂತರ ಸೀಸೆಯ ಕತ್ತಿನೊಳಕ್ಕೆ ಕೈತೂರಿಸಿ ಹಣ್ಣನ್ನು ಹಿಡಿಯಬಹುದು ಎಂಬುದನ್ನು ಅದು ಪತ್ತೆಹಚ್ಚಿತು. ಅಂತೆಯೇ ಕೈತೂರಿಸಿ ಹಣ್ಣನ್ನು ಹಿಡಿದುಕೊಂಡಿತಾದರೂ ಮುಷ್ಟಿಯಲ್ಲಿ ಹಣ್ಣನ್ನು ಹಿಡಿದುಕೊಂಡಾಗ ಅದರ ಗಾತ್ರ ಸೀಸೆಯ ಕತ್ತಿನ ಗಾತ್ರಕ್ಕಿಂತ … Read more

ಸತ್ಯಶೋಧಕನಿಗೊಂದು ರಂಗನಮನ ಸಲ್ಲಿಸಿದ ‘ಖರೇ-ಖರೇ ಸಂಗ್ಯಾ-ಬಾಳ್ಯಾ’ ಪ್ರದರ್ಶನ: ಹಿಪ್ಪರಗಿ ಸಿದ್ಧರಾಮ

ಸರಿಸುಮಾರು ಕ್ರಿ.ಶ.1850ರ ಸುಮಾರಿಗೆ ಬ್ರಿಟಿಷರ ಆಳ್ವಿಕೆಯಲ್ಲಿ ಹಳ್ಳಿಯಂತಿದ್ದ ಇಂದಿನ ಬೈಲಹೊಂಗಲದ ಆಗಿನ ಲಗಳೇರ ಮನೆತನದಲ್ಲಿ ನಡೆದ ಘಟನೆಯನ್ನಾಧರಿಸಿ ಪತ್ತಾರ ಮಾಸ್ತರ ರಚಿಸಿದ್ದಾರೆಂದು ಓದಿ-ಕೇಳಿದ ಮೂಲ ‘ಸಂಗ್ಯಾ-ಬಾಳ್ಯಾ’ ಕಥಾನಕವು ವಿವಿಧ ಪ್ರಕಾರದ ಪ್ರದರ್ಶನ ಕಲೆಗಳ ಮೂಲಕ ನಾಡಿನಾದ್ಯಂತ ಸಾವಿರಾರು ಪ್ರದರ್ಶನ ಕಂಡಿದ್ದು ಎಲ್ಲರಿಗೂ ಗೊತ್ತಿರುವ ಸಂಗತಿ. ಈ ಕಥೆಯಲ್ಲಿ ಲಗಳೇರ ಮನೆತನದ ಈರಪ್ಪನ ಹೆಂಡತಿ ಗಂಗಾ ರೂಪಕ್ಕೆ ಆತನ ಗೆಳೆಯ ಸಂಗ್ಯಾ ಮನಸೋಲುವುದು, ಗಂಗಾ ಜೊತೆಗೆ ದೈಹಿಕ ಸುಖ ಪಡೆಯಲು ಆತ ಜೀವದ ಗೆಳೆಯ ಬಾಳ್ಯಾನ ಜೊತೆ ಚರ್ಚಿಸುವುದು. … Read more

ಸಾಮಾನ್ಯ ಜ್ಞಾನ (ವಾರ 78): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು 1.    2015ರ ಮೈಸೂರು ದಸರಾ ಉದ್ಘಾಟಕರು ಯಾರು? 2.    SUNFED ನ ವಿಸ್ತೃತ ರೂಪವೇನು? 3.    ಗೋವಿಂದ ವಲ್ಲಬ್ ಪಂತ್ ಜಲಾಶಯ ಯಾವ ರಾಜ್ಯದಲ್ಲಿದೆ? 4.    ಮೂತ್ರಪಿಂಡಕ್ಕೆ ಸಂಬಂಧಿಸಿದ ವ್ಯಾಧಿಗಳನ್ನು ವಿವರಿಸವ ಶಾಸ್ತ್ರಕ್ಕೆ ಏನೆನ್ನುತ್ತಾರೆ? 5.    ಸದಾಶಿವಗುರು ಇದು ಯಾರ ಅಂಕಿತನಾಮವಾಗಿದೆ? 6.    ಕರ್ನಾಟಕ ರತ್ನ ಪ್ರಶಸ್ತಿಯನ್ನು ಪ್ರಾರಂಭಿಸಿದ ಮುಖ್ಯಮಂತ್ರಿ ಯಾರು? 7.    ಬೋರಾಕ್ಸ್‍ನ ರಾಸಾಯನಿಕ ಹೆಸರೇನು? 8.    ಬಹುಮನಿ ಸುಲ್ತಾನರ ಅತ್ಯಂತ ಪ್ರಾಚೀನ ಸ್ಮಾರಕ ಯಾವುದು? 9.    “ಮೇರಾ ನಾಮ್ ಜೋಕರ್” ಕಾದಂಬರಿಯ ಕರ್ತೃ … Read more