ಪರಶುವಿನ ದೇವರು: ಶಾಂತಿ ಕೆ. ಅಪ್ಪಣ್ಣ

ಪರಶುವಿಗೆ ದೇವರು ಬಂದಾಗ ಡೊಳ್ಳನ ಕೇರಿಯ ಜನ ಅದಿನ್ನೂ ತಂತಮ್ಮ ಕೆಲಸಗಳಿಂದ ಮರಳಿ ದಣಿವಾರಿಸಿಕೊಳ್ಳುತ್ತ,  ಅಲ್ಲಲ್ಲೆ ಜಗುಲಿ ಕಟ್ಟೆಯ ಮೇಲೆ ಕುಳಿತು ಗಂಡಸರು ಬೀಡಿಯ ಝುರುಕಿ ಎಳೆದು ಕೊಳ್ಳುತ್ತಿದ್ದರೆ, ಹೆಂಗಸರು ಒಂದು ಬಾಯಿ ಕಾಫಿ ಕುಡಿಯುವ ಆತುರಕ್ಕೆ ಒಳಗೆ ಒಲೆ ಹಚ್ಚುವ ಕೆಲಸದಲ್ಲಿ ತೊಡಗಿದ್ದರು. ಮೊದಲಿನಂತೆ ಚೂರುಪಾರು ಸೌದೆ ತಂದು ಪ್ರಯಾಸದಿಂದ ಒಲೆ ಹಚ್ಚುವ ಕೆಲಸವೇನೂ ಈಗಿರಲಿಲ್ಲ, ಊರು ನಾಡು ಕಾಣುತ್ತಿದ್ದ ಬದಲಾವಣೆಯ ಗಾಳಿ ಯಾವುದೇ ತಕರಾರು ಮಾಡದೆ ಕೇರಿಯೊಳಗೂ ನುಸುಳಿ ಅಲ್ಲೂ ಅಲ್ಪಸ್ವಲ್ಪ ಬದಲಿಕೆ ತರತೊಡಗಿತ್ತು. … Read more

ಟ್ಯೂನು, ಲೈನು ಮತ್ತು ನಾನು: ಹೃದಯಶಿವ

ಪ್ರಖ್ಯಾತ ಹಿಂದೂಸ್ತಾನಿ ಸಂಗೀತಗಾರ ಪಂಡಿತ್ ಪರಮೇಶ್ವರ ಹೆಗಡೆಯವರು ಸಂಗೀತ ನೀಡುತ್ತಿರುವ ಆಲ್ಬಮ್ ನಲ್ಲಿ ನಾಲ್ಕು ಹಾಡು ಬರೆಯುತ್ತಿದ್ದೇನೆ ಅಂತ ಹಿಂದೊಮ್ಮೆ ಹೇಳಿದ್ದೆ. ಪರಮೇಶ್ವರ ಹೆಗಡೆಯವರ ಮಾತಿನಂತೆ ಮೊದಲೇ ಸಾಹಿತ್ಯ ಬರೆದುಕೊಡುವಂತೆ, ಆಮೇಲೆ ಆ ಸಾಹಿತ್ಯಕ್ಕೆ ಅವರು ಟ್ಯೂನ್ಸ್ ಹಾಕುವುದಾಗಿ ಹೇಳಿದ್ದರು. ಅದರಂತೆ ನನ್ನ ಆರು ಭಾವಗೀತೆಗಳನ್ನು ಅವರಿಗೆ ಕಳುಹಿಸಿಕೊಟ್ಟೆ. ಆ ಆರರ ಪೈಕಿ ನಿಮಗೆ ಬೇಕಾದ ನಾಲ್ಕನ್ನು ಆಯ್ಕೆ ಮಾಡಿಕೊಳ್ಳಿ ಅಂತಲೂ ಹೇಳಿದೆ. ಅವರು ಆಯ್ತು ಅಂದು ಅದರಂತೆ ಆ ಆರರ ಪೈಕಿ ಒಂದಕ್ಕೆ ಟ್ಯೂನ್ ಕೂಡ … Read more

ಭಾಷಣದ ಗಮ್ಮತ್ತು: ಅನಿತಾ ನರೇಶ್ ಮಂಚಿ

 ಭಾಷಣ ಎಂಬುದೊಂದು ಕಲೆ. ಕೆಲವರಿಗೆ ಭಾಷಣ ಮಾಡುವುದು ಎಂದರೆ ನೀರು ಕುಡಿದಂತೆ. ಮೈಕ್ ಕಂಡರೆ ಅದೇನೋ ಪ್ರೀತಿ. ಬಹು ಜನ್ಮದಾ ಅನುಬಂಧವೇನೋ ಎಂಬಂತೆ ಹಿಡಿದುಕೊಂಡದ್ದನ್ನು  ಬಿಡಲೇ ಒಲ್ಲರು. ಸಾಧಾರಣವಾಗಿ ರಾಜಕಾರಿಣಿಗಳಿಗೆ ಈ ರೋಗ ಇರುವುದು. ಯಾಕೆಂದರೆ ಅವರು ತಮ್ಮ ಕಾರ್ಯಗಳಿಂದ ಹೆಚ್ಚಾಗಿ ಮಾತಿನ ಬಲದಲ್ಲೇ ಮಂತ್ರಿಗಳಾಗುವಂತಹವರು. ಯಾವುದೇ ಮಾನದಂಡದ ಮುಲಾಜಿಗೂ ಸಿಕ್ಕದೇ ಪದವಿಯನ್ನಾಗಲೀ, ಪದಕಗಳನ್ನಾಗಲೀ,ಪ್ರಶಸ್ತಿಗಳನ್ನಾಗಲೀ ಮಾತಿನ ಬಲದಲ್ಲೇ ಪಡೆಯುವಂತಹವರು. ಅಂತವರು ಮಾತು ನಿಲ್ಲಿಸುವುದಾದರೂ ಹೇಗೆ ಅಲ್ಲವೇ?   ಇವರಷ್ಟೇ ಮೈಕ್ ಪ್ರೀತಿಸುವ ಇನ್ನೊಂದು ಪಂಗಡದ ಜನ ಯಾರೆಂದರೆ  ಕಾರ್ಯಕ್ರಮವನ್ನು … Read more

ಕಾಯಕವೇ ಕೈಲಾಸ: ಗುರುಪ್ರಸಾದ್ ಕುರ್ತಕೋಟಿ

ಇಲ್ಲಿಯವರೆಗೆ..  ಅವತ್ತು ಸಂಜೆ ಬೇಗನೆ ಮನೆಗೆ ತಲುಪಿದ ವೆಂಕಣ್ಣನ ಕಿವಿಯಲ್ಲಿ ಜೇಮ್ಸ್ ನ ಮಾತುಗಳು ಗುಂಯ್ ಗುಡುತ್ತಿತ್ತು. ಹೌದೆ? ನಾವೆಲ್ಲ ಅಮೆರಿಕಾಕ್ಕೆ ಬಂದು ಇವರ ಕೆಲಸಗಳನ್ನು ಕಸಿಯುತ್ತಿದ್ದೇವೆಯೇ? ಅನ್ನುವ ಪ್ರಶ್ನೆ ಇವನ ಕಾಡತೊಡಗಿತ್ತು. ಜಾನು ಮತ್ತು ಖುಷಿ ಇನ್ನೂ ಅಮೆರಿಕಾದ ದಿನಗಳಿಗೆ ಹೊಂದಿಕೊಳ್ಳದೆ ದಿನವಿಡಿ ನಿದ್ದೆಯಲ್ಲೇ ಕಳೆದಿದ್ದರು. ಇವನಿಗೂ ನಿದ್ದೆ ಎಳೆಯುತ್ತಿದ್ದರೂ ಬಲವಂತವಾಗಿ ಅದನ್ನು ತಡೆಯುತ್ತಿದ್ದ. ಆಗ ತಾನೇ ಎದ್ದು ಕುಳಿತಿದ್ದ ಖುಷಿಗೆ ಬೇರೆ ಏನೂ ಮಾಡಲು ತೋಚದೆ ಅಲ್ಲಿನ ಟೀವಿಯಲ್ಲಿ ಬರುತ್ತಿದ್ದ ಕಾರ್ಟೂನು ನೋಡುತ್ತಿದ್ದಳು.  ಜಾನು … Read more

ಥ್ರೀರೋಜಸ್ ಕಥೆ: ಸಾವಿತ್ರಿ ವಿ. ಹಟ್ಟಿ

ನನ್ನವಳಿಗೆ ನಾನೇನೂ ಕಡಿಮೆ ಮಾಡಿಲ್ಲ. ಅವಳು ನಮ್ಮ ತುಂಬು ಮನೆತನಕ್ಕೆ ಏಕೈಕ ಸೊಸೆ. ಸದ್ಯಕ್ಕೆ ನನಗೆ ಅವಳೇ ಮಗಳೂ, ಮಗನೂ ಇದ್ದ ಹಾಗೆ ಕೂಡ. ತಂದೆ ಉಮಾಶಂಕರ ತಾಯಿ ಗೌರಮ್ಮನವರಿಗೆ ಏಕೈಕ ಸುಪುತ್ರನಾಗಿರುವ ನಾನು ಈ ಗೊಂಬೆಯನ್ನು ಕೈ ಮಾಡಿ ತೋರಿಸಿ, ನನಗೆ ಬೇಕು ಎಂದಾಗ ಅಪ್ಪ ಮೌನವಾಗಿ ನನ್ನನ್ನೇ ನೋಡಿದ್ದರು ವಿಸ್ಮಯದಿಂದ. ಅವ್ವ ಹನಿಗಣ್ಣಳಾಗಿದ್ದರೂ ನಂತರ ನನ್ನ ಆಸೆಗೆ ಬೇಡ ಎನ್ನಲಿಲ್ಲ. ನಾನು ಚಿಕ್ಕವನಿದ್ದಾಗ ಏನೆಲ್ಲ ಕೇಳಿದರೂ ಇಲ್ಲವೆನ್ನದೇ ಕೊಡಿಸುತ್ತಿದ್ದರು ತಂದೆ-ತಾಯಿ. ನನ್ನ ಜೀವನದ ಎರಡನೇ … Read more

ಮಲೆಗಳಲ್ಲಿ ಮದುಮಗಳು ಮತ್ತು ನಾವು: ಪ್ರಶಸ್ತಿ ಪಿ.

೨೦೦೬-೦೭ ನೇ ಇಸವಿ. ಸಾಗರದ ಶಿವಲಿಂಗಪ್ಪ ಪ್ರೌಢಶಾಲೆಯ ಶಾಲಾ ವಾರ್ಷಿಕೋತ್ಸವ. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ (ಕಳೆದ ವರ್ಷದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ನಾ ಡಿಸೋಜ)ರ ಭಾಷಣ. ಸಾಹಿತ್ಯದ ಬಗ್ಗೆ ಮಾತನಾಡುತ್ತಾ ಅವರು ಕುವೆಂಪು ಅವ್ರ ಎರಡು ಮುಖ್ಯ ಕಾದಂಬರಿಗಳು ಯಾವುದು ಗೊತ್ತಾ ಅಂತ ಸಭೆಗೆ ಕೇಳಿದ್ದರು. ತಕ್ಷಣ ಕೈಯಿತ್ತಿದ್ದ ನಾನು ಮಲೆಗಳಲ್ಲಿ ಮದುಮಗಳು ಮತ್ತು ಕಾನೂರು ಸುಬ್ಬಮ್ಮ ಹೆಗ್ಗಡತಿ ಅಂದಿದ್ದೆ. ಶ್ರೀ ರಾಮಾಯಣ ದರ್ಶನಂ ಕೂಡಾ ಮಹತ್ಕೃತಿಯಾಗಿದ್ದರೂ ಅದು ಕಾವ್ಯ, ಕಾದಂಬರಿಯಲ್ಲ ಎಂಬ ಸಾಮಾನ್ಯ ಜ್ನಾನ … Read more

ಎಕ್ಸಟ್ರಾರ್ಡಿ-ನರಿ: ಅಮರ್ ದೀಪ್ ಪಿ.ಎಸ್.

ಅಲ್ಲೊಂದು ಮದುವೆ ನಡೀತಿರುತ್ತೆ. ಮಗಳ ಮದುವೆ ಮಾಡುವಾತ ಕೈಗುಣ ಚೆನ್ನಾಗಿದ್ದ ಅಡುಗೆ ಮಾಡುವವನನ್ನು  ಖುದ್ದಾಗಿ ಕರೆದು ಅಡುಗೆ ಮಾಡಲು ಹೇಳಿರುತ್ತಾನೆ.   ಪಾಪ, ಕುಕ್ಕು, ತನ್ನ ಪಾಡಿಗೆ ತಾನು ಮದುವೆಯ ಹಿಂದಿನ ದಿನವೇ ಬಂದು ಯಜಮಾನನನ್ನು ಕಂಡು ಅಂಗಿ ಕಳಚಿಟ್ಟು ಕೈಚಳಕದ ರುಚಿ ಜೋಡಿಸಲು ಕೆಲಸಕ್ಕೆ ಒಗ್ಗಿರುತ್ತಾನೆ.  ಮದುವೆ ಹಿಂದಿನ ದಿನ ಮತ್ತು ಮದುವೆ ದಿನ ಬಂದ ನೆಂಟರು, ಬಂಧುಗಳು, ಆಪ್ತರು, ಗೊತ್ತಿದ್ದವರು, ಗೊತ್ತಿಲ್ಲದವರೆಲ್ಲರೂ ಬಂದು ಸವಿದ ನಂತರ “ಅಡುಗೆ ಚೆನ್ನಾಗಿದೆ” ಅನ್ನುತ್ತಾರೆ. ಮದುವೆ ಮಾಡಿದ ಯಜಮಾನನಿಗೆ … Read more

ಮೂರು ಕವನಗಳು: ತಿರುಪತಿ ಭಂಗಿ, ಪ್ರಕಾಶ್ ಬಿ. ಜಾಲಹಳ್ಳಿ, ಸಂದೇಶ್ ಎನ್.

ಹೇಗೆ ಹೇಳಲಿ ಗೆಳತಿ  ನಾನೀರವುದೇ ಹೀಗೆ  ಕತ್ತಲಲ್ಲಿ ಮಿರಮಿರನೇ ಮಿನುಗುವ ಮಿಂಚುಳ್ಳಿ ಹಾಗೆ  ಬೆಳಕಿನಲ್ಲಿ ನನಗಿಲ್ಲ ಒಂದಿಷ್ಟು ಬೆಲೆ. ಹೇಗೆ ಹೇಳಲಿ ಗೆಳತಿ  ನಾನೀರವುದೇ ಹೀಗೆ  ಗಂಗೆಯಲಿ ತೇಲಾಡುವ ಮೀನಿನ ಹಾಗೆ  ಮೋಸದಿಂದ ಎಸೆದ ಗಾಳ  ನನಗೆ ಸಾವು ತಂದರೂ ನಾನಂತು  ಅವರಿಗೆ 'ಅನ್ನದೇವಿ' ಯಾಗುತ್ತೇನೆ. ಹೇಗೆ ಹೇಳಲಿ ಗೆಳತಿ  ನಾನೀರವುದೇ ಹೀಗೆ ಬಾನೆತ್ತರಕೆ ಬೆಳೆದು ನಿಂತ  ತೆಂಗಿನ ಮರದ ಹಾಗೆ  ನೂರೆಂಟು ರೋಗಿಗಳಿಗೆ ಎಳೆನೀರ ಔಷಧಿ ಕೊಟ್ಟರೂ ನನ್ನ ಬುಡಕ್ಕೆ ನೀರು ಬಿಡುವವರಿಲ್ಲ  ಗೊಬ್ಬರದ ವಾಸನೆ … Read more

ಕವಿಮನೆ: ಶಂಕರಾನಂದ ಹೆಚ್. ಕೆ., ಶೋಭಾ ಶಂಕರಾನಂದ

ಮರೆಯಲು ಸಾಧ್ಯವೇ? ಆ ಕ್ಷಣ…… .. ’ಓ ನನ್ನ ಚೇತನ ಆಗು ನೀ ಅನಿಕೇತನ’  ’ನೂರು ದೇವರನೆಲ್ಲ ನೂಕಾಚೆ ದೂರ ಭಾರತಾಂಬೆಯೆ ದೇವಿ ನಮಗಿಂದು ಪೂಜಿಸುವ ಬಾರ’  ’ಸತ್ತಂತೆ ಬದುಕುವುದಕ್ಕಿಂತ ಸತ್ತು ಬದುಕುವುದು ಲೇಸು’ ಹೀಗೆ ಹತ್ತು ಹಲವು ಸಾಲುಗಳಿಗೆ ಜೀವ ತುಂಬಿರುವ ಕಲ್ಲುಗಳು ಹಾಗೂ ಫಲಕಗಳನ್ನು ನೋಡುವ ಭಾಗ್ಯ ಒಂದು ದಿನ ನನ್ನದಾಗುವುದು ಎಂದು ನಾನು ಊಹಿಸಿರಲಿಲ್ಲ. ನಮ್ಮ ನಾಡಿನ ಮಹಾನ್ ಕವಿ ಡಾ!! ಕುವೆಂಪು ರವರ ಜನ್ಮ ಸ್ಥಳ, ಕುಪ್ಪಳ್ಳಿಗೆ ಹೋಗಬೆಕೆನ್ನುವ ತುಡಿತ ನನ್ನನ್ನು … Read more

ಝೆನ್ ಕತೆಗಳು: ಗೋವಿಂದ ರಾವ್ ವಿ. ಅಡಮನೆ

೧. ನಿಜವಾದ ಸುಧಾರಣೆ ರ್ಯೋಕಾನ್‌ ಝೆನ್‌ ಅಧ್ಯಯನಕ್ಕಾಗಿ ತನ್ನ ಜೀವನವನ್ನು ಮೀಸಲಾಗಿಟ್ಟಿದ್ದವನು. ಬಂಧುಗಳು ಎಷ್ಟೇ ಎಚ್ಚರಿಕೆ ನೀಡಿದರೂ ತನ್ನ ಸಹೋದರನ ಮಗ ತನ್ನ ಹಣವನ್ನು ವೇಶ್ಯೆಯೊಬ್ಬಳಿಗಾಗಿ ವ್ಯಯಿಸುತ್ತಿದ್ದಾನೆ ಎಂಬ ವಿಷಯ ಅವನಿಗೆ ತಿಳಿಯಿತು. ಕುಟುಂಬದ ಆಸ್ತಿಯನ್ನು ನಿರ್ವಹಿಸುವ ಜವಾಬ್ದಾರಿಯನ್ನು ರ್ಯೋಕಾನ್‌ನ ಅನುಪಸ್ಥಿತಿಯಲ್ಲಿ ಅವನು ಹೊತ್ತುಕೊಂಡಿದ್ದನಾದ್ದರಿಂದ ಸೊತ್ತು ಸಂಪೂರ್ಣವಾಗಿ ಕರಗುವ ಅಪಾಯ ಎದುರಾಗಿತ್ತು. ಈ ಕುರಿತು ಏನಾದರೂ ಮಾಡುವಂತೆ ರ್ಯೋಕಾನ್‌ಅನ್ನು ಬಂಧುಗಳು ಕೋರಿದರು. ಅನೇಕ ವರ್ಷಗಳಿಂದ ನೋಡದೇ ಇದ್ದ ಸಹೋದರನ ಮಗನನ್ನು ಭೇಟಿ ಮಾಡಲು ರ್ಯೋಕಾನ್‌ ಬಹು ದೂರ … Read more

ನ್ಯಾನೋ ಕತೆಗಳು: ನವೀನ್ ಮಧುಗಿರಿ

ಪ್ರೇಮಿಗಳು ಇಬ್ಬರೂ ಮೌನವಾಗಿ ಕುಳಿತಿದ್ದರು. ಮುಂದೇನು ಮಾಡುವುದೆಂದು ಇಬ್ಬರಿಗೂ ತೋಚುತ್ತಿಲ್ಲ. ಜಾತಿಯ ನೆಪವೊಡ್ಡಿ ಎರಡೂ ಮನೆಯವರು ಪ್ರೇಮಿಗಳನ್ನು ದೂರ ಮಾಡಲು ಯತ್ನಿಸುತ್ತಿದ್ದರು. "ಮುಂದೇನು ಮಾಡುವುದು?" ಹುಡುಗಿ ಪ್ರಶ್ನಿಸಿದಳು. "ಗೊತ್ತಿಲ್ಲ, ಏನೊಂದು ತೋಚುತ್ತಿಲ್ಲ" ಹುಡುಗ ಉತ್ತರಿಸಿದ. "ಎಲ್ಲಾದರೂ ದೂರ ಹೋಗಿ ಜೊತೆಯಾಗಿ ಬದುಕೋಣ" "ಬದುಕು ಎರಡೂವರೆ ಗಂಟೆಯ ಸಿನಿಮಾವಲ್ಲ" "ಹಾಗಾದರೆ ನಾವು ಪ್ರೀತಿಸಿದ್ದಾದರೂ ಯಾಕೆ?" ಹುಡುಗಿಯ ಕಣ್ಣಲ್ಲಿ ನೀರು ತುಂಬಿತ್ತು. ಅವಳ ಕಣ್ಣಲ್ಲಿನ ನೋವು ಗುರುತಿಸಿದ. ಎದೆಗೆ ಕೊಳ್ಳಿಯಿಂದ ತಿವಿದಂತಾಯ್ತು, ನೋವಿನಿಂದಲೇ ನುಡಿದ "ಜೊತೆಯಾಗಿ ಬದುಕೋಣವೆಂದು, ಆದರೆ.." "ಆದರೆ … Read more

ಸಲ್ಲದ ಪ್ರೇಮ ಪತ್ರ: ಅಜ್ಜೀಮನೆ ಗಣೇಶ್

ನೀನು ಆಗಾಗ ಹೇಳುತ್ತಿದ್ದೆ ಗೊತ್ತಾ…ಒಂದೂರಿನ ರಾಜನ ಕಥೆ, ಅದೇ ಕಣೆ, ತಾಜ್‍ಮಹಲ್ ಕಟ್ಟಿದವನು..ಒಲವಿಗೆ ಅವನೇ ರಾಯಭಾರಿಯಂತೆ. ಆತ ಕಟ್ಟಿದ ಪ್ರೀತಿ ಸಂಕೇತವೇ ಇವತ್ತಿಗೂ ಜಗತ್ತಿನ ಲವ್ ಸಿಂಬಲ್ ಅಂತೆ. ಏನೇ ಆಗಲಿ, ಆ ರಾಜನ ಪ್ರೇಮಕ್ಕಿಂತ ನಮ್ಮಿಬ್ಬರ ಪ್ರೀತಿ ಒಂದು ಮೆಟ್ಟಿಲಾದರೂ ಎತ್ತರದಲ್ಲಿರಬೇಕು ಅಂತಿದ್ದೆ ನೋಡು. ಅದಕ್ಕಾಗಿ ವಾರಕೊಮ್ಮೆ ಒಪ್ಪತ್ತು ಮಾಡಿ, ನನ್ನನ್ನೂ ಉಪವಾಸ ಕೆಡವುತ್ತಿದ್ದೆ ನೋಡು..ವಿಷಯ ಗೊತ್ತಾ..ನಿನ್ನ ಉಪವಾಸ ಫಲನೀಡಿದೆ. ನಾನೀಗ ನಿನ್ನ ಆಸೆ ಈಡೇರಿಸುತ್ತಿದ್ದೇನೆ. ನಾಚಿಕೆ ಮುಳ್ಳಿನಂತ ನಮ್ಮಿಬ್ಬರ ಪ್ರೇಮವೀಗ ಇತಿಹಾಸದ ಸಾಕ್ಷಿ ಹೇಳುವ … Read more

ಆ ಮೂರು ದಿನಗಳು: ಗುಂಡುರಾವ್ ದೇಸಾಯಿ ಮಸ್ಕಿ

ಯಾವು ಆ ಮೂರು ದಿನಗಳು!  ವೈಶಾಖದ ದಿನಗಳಾ, ಆಷಾಢದಿನಗಳಾ ಅಂತ ಭಾವಿಸಿದ್ರಾ! ಅಲ್ಲ ಅಲ್ಲ. ಇಕಿ ಒಮ್ಮಿಂದೊಮ್ಮೆಲೆ ದೂರ ನಿಂತು ನೀರು  ಕೋಡ್ರಿ, ಹಾಸಿಗಿ ಕೊಡ್ರಿ ಅಂತ ಸ್ಟಾರ್ಟ ಮಾಡಿದ್ರ  ’ಎದಿ ಝಲ್’ ಅಂತದ. ಏನ್ರೀ ಹೊರಗಿದ್ದ ಮೂರುದಿನದ ಬಗ್ಗೆ ಸಿರಿಯಸ್ಸ ತೋಳೊದಾ! ಅಂತ ಮೂಗು ನೀವು ಮುರಿಬಹುದು. ಅದಕ್ಕಲ್ಲ ಸಂಕಟ ಪಡೋದು ಕೆಲಸ ಮಾಡಕ. ಅಯ್ಯೋ! ಇವರು ಎಂಥವರ್ರೀ ತಿಂಗಳಾನಗಟ್ಟಲೇ ಮಾಡಿ ಹಾಕೋರಿಗೆ ಕೂಡ್ರಿಸಿ ಮೂರು ದಿನ ಹಾಕಕ ಏನು ಧಾಡಿ ಅಂತ ಅಂದಕೊಂಡಿರಲೂ ಬಹುದು … Read more

೨೦೧೫ ಡಿಸೆಂಬರ್ ಪ್ಯಾರೀಸ್ ಶೃಂಗಸಭೆಯ ಮುನ್ನ ಒಂದಿಷ್ಟು!!: ಅಖಿಲೇಶ್ ಚಿಪ್ಪಳಿ

ಈ ಬಾರಿ ಶಿವರಾತ್ರಿ ಕಳೆದ ಮೇಲೂ ಚಳಿ ಮುಂದುವರೆದಿತ್ತು. ಮದುವೆ-ಮುಂಜಿ ಕಾರ್ಯಕ್ರಮಗಳಿಗೆ ಅಕಾಲಿಕ ಮಳೆ ಅಡಚಣೆಯಾಗಿ ಕಾಡಿತು. ಬಿಲ್ಲನ್ನು ಎಳೆದು ಬಿಟ್ಟಾಗ ಬಾಣ ನುಗ್ಗುವ ರೀತಿಯಲ್ಲಿ ಬೇಸಿಗೆ ದಾಪುಗಾಲಿಕ್ಕಿ ಬರುತ್ತಿದೆ. ಉಳ್ಳವರು ಸೆಖೆಯಿಂದ ಬಚಾವಾಗಲು ಹವಾನಿಯಂತ್ರಕದ ಮೊರೆ ಹೋಗುತ್ತಾರೆ. ಎಂದಿನಂತೆ ತಂಪುಪಾನೀಯಗಳ ಜಾಹಿರಾತು ಟಿ.ವಿಯಲ್ಲಿ ಧಾಂಗುಡಿಯಿಡುತ್ತಿವೆ. ಅಂಟಾರ್ಟಿಕಾವನ್ನು ನಾಚಿಸುವಂತೆ ತಣ್ಣಗೆ ಮಾಡುವ ರೆಪ್ರಿಜಿರೇಟರ್ ಭರಾಟೆಯೂ ವ್ಯೋಮಕ್ಕೆ ಜಿಗಿದಿದೆ. ಅತ್ತ ಪ್ಯಾರೀಸ್ ನಗರ ಡಿಸೆಂಬರ್ ತಿಂಗಳಿಗಾಗಿ ಕಾಯುತ್ತಿದೆ. ಡಿಸೆಂಬರ್ ತಿಂಗಳಲ್ಲಿ ೧೯೬ ದೇಶಗಳ ಸಾವಿರಾರು ಧುರೀಣರು, ವಿಜ್ಞಾನಿಗಳು, ಭಾಗಿದಾರರು, … Read more

ಅನನ್ಯ ವ್ಯಕ್ತಿಚಿತ್ರಕ, ಸುಹೃದ ವಿಶಾರದ: ಎಸ್. ಜಿ. ಸೀತಾರಾಮ್, ಮೈಸೂರು.

[ಕನ್ನಡ ಸಾಹಿತ್ಯಾಕಾಶದ ಕೃಷಿಋಷಿಮಂಡಲದಲ್ಲಿ ತಮ್ಮ ವಿದ್ವಚ್ಛಕ್ತಿಪ್ರಭೆಯಿಂದ ವಿರಾಜಮಾನರಾಗಿರುವ, ಮತ್ತು ವಾತ್ಸಲ್ಯಾದಿ ಗುಣೋಜ್ವಲತೆಗಳಿಂದ ತಮ್ಮ ಅಭಿಮಾನಿಗಳ ಹೃದಯಾಕಾಶದಲ್ಲಿಯೂ ಅಂತೆಯೇ ಶೋಭಿಸುತ್ತಿರುವ,  ಮೈಸೂರಿನ ಪ್ರೊ. ಟಿ.ವಿ. ವೆಂಕಟಾಚಲ ಶಾಸ್ತ್ರಿಯವರು ಈಗ ಸಹಸ್ರ  ಪೂರ್ಣಚಂದ್ರ ದರ್ಶನ ಪ್ರತಿಫಲನದಿಂದ ಮತ್ತಷ್ಟು ಕಾಂತಿಯುತರಾಗಿದ್ದಾರೆ.  ಮಾರ್ಚ್-೨೦೧೫ರಲ್ಲಿ ಜರುಗಿದ ಅವರ ಸಹಸ್ರ ಚಂದ್ರ ದರ್ಶನೋತ್ಸವ ಸಂದರ್ಭದಲ್ಲಿ ಅವರಿಗಿಲ್ಲೊಂದು ಬರಹಮಣಿಹ.]         ಪ್ರೊ. ಟಿ.ವಿ. ವೆಂಕಟಾಚಲ ಶಾಸ್ತ್ರಿಯವರು ಸಾಹಿತ್ಯಶಾಸ್ತ್ರಗಳಲ್ಲಿ ವೆಂಕಟಾಚಲಸದೃಶರೇ ಸರಿ. ಆ ದೊಡ್ಡಬೆಟ್ಟದ ದಾರಿಯಲ್ಲಿ ಸುಳಿಯುವ ಸಂಭವವೂ ಇಲ್ಲದ ನನಗೂ-ಅವರಿಗೂ ನಡುವೆ ಇರುವ ಒಡನಾಟವು, … Read more

ಸಾಮಾನ್ಯ ಜ್ಞಾನ (ವಾರ 70): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಪಂಪ ಪ್ರಶಸ್ತಿ ಪಡೆದ ಮೊದಲ ಕೃತಿ ಯಾವುದು? ೨.    ನಾಸಾ (NASA) ದ ವಿಸ್ರೃತ ರೂಪವೇನು? ೩.    ಹ್ವಾಂಗ್ ಹೈಡ್ರೋಪವರ್ ಗೋಲ್ಡನ್ ಸೋಲಾರ ಪಾರ್ಕ್ ಯಾವ ದೇಶದಲ್ಲಿದೆ? ೪.    ಕೂಡಲಸಂಗಮದೇವ ಇದು ಯಾರ ಅಂಕಿತನಾಮವಾಗಿದೆ? ೫.    ರಾಜ್ಯದಲ್ಲಿ ಅತೀ ಹೆಚ್ಚು ಬಿತ್ತನೆ ಪ್ರದೇಶವನ್ನು ಹೊಂದಿರುವ  ಜಿಲ್ಲೆ ಯಾವುದು? ೬.    ಗಾಂಧಿಜಿಯ ಸಬರಮತಿ ಅಶ್ರಮ ಯಾವ ರಾಜ್ಯದಲ್ಲಿದೆ? ೭.    ಇತಿಹಾಸ ಪ್ರಸಿದ್ಧ ಕೆಳದಿ ಈಗಿನ ಯಾವ ಜಿಲ್ಲೆಯಲ್ಲಿದೆ? ೮.    ಸಿಖ್ಖರ ಐದನೇ ಗುರು ಯಾರು? ೯.   … Read more