ಕೆ.ಎಸ್.ಎನ್.ನುಡಿ ನಮನ..: ಶೋಭಾ ಶಂಕರ್

ಡಿಸೆಂಬರ್ ೨೮ ನಾಡಿನ ಜನತೆ ಎಂದಿಗೂ ಮರೆಯಲಾರದಂಥ ದಿನ.ಈಗಾಗಲೇ ಡಿ.೨೮ ಎಂದಾಕ್ಷಣ ನಮ್ಮ ಮನಸ್ಸಿನ ಮುಂದೆ ಕೆ.ಎಸ್.ಎನ್. ಅವರ ಭಾವಚಿತ್ರ ಕಣ್ಣ ಮುಂದೆ ಮೂಡಿರಬೇಕಲ್ಲ? ನಿಜ!! ಕೆ.ಎಸ್.ಎನ್. ಅಂದು ಅನಂತವಾಗಿ ಚಿರನಿದ್ರೆಗೆ ಜಾರಿದ ದಿನ. ನರಸಿಂಹಸ್ವಾಮಿಯವರು ತಮ್ಮ ಪ್ರೇಮಕವಿತೆಗಳ ಮೂಲಕ ಕನ್ನಡಿಗರ ಮನದಲ್ಲಿ ಅಚ್ಛಳಿಯದ ಸ್ಥಾನ ಪಡೆದುಕೊಂಡಿದ್ದಾರೆ .ದಾಂಪತ್ಯ-ಪ್ರೇಮವನ್ನು ಅಮರಗೊಳಿಸಿ, ’ಮೈಸೂರು ಮಲ್ಲಿಗೆ’ಯ ಕವಿ ಎಂದೇ ಚಿರಪರಿಚಿತರಾಗಿದ್ದವರು ನಮ್ಮೆಲ್ಲರ ಒಲವಿನ ಕವಿ ಕೆ.ಎಸ್.ಎನ್. ಅವರ ವಾರಿಗೆಯವರು ಕಾವ್ಯವಲ್ಲದೇ, ಬೇರೆ ಪ್ರಕಾರಗಳ ಸಾಹಿತ್ಯಕೃಷಿಯಲ್ಲಿ ತೊಡಗಿಕೊಂಡರೂ, ನರಸಿಂಹಸ್ವಾಮಿಯವರು ಮಾತ್ರ ಕಾವ್ಯಕನ್ನಿಕೆಯನ್ನೇ … Read more

ತಂತು: ಎಸ್.ಎಲ್.ಭೈರಪ್ಪನವರ ಕಾದಂಬರಿಯ ಬಗ್ಗೆ ಒಂದು ಅನಿಸಿಕೆ, ಟಿಪ್ಪಣಿ: ಸಂತೋಷ್ ಕುಮಾರ್ ಎಲ್.ಎಂ.

  ಬಸವನಪುರ ಎಂಬ ಊರಿನ ಪುರಾತನ ಚನ್ನಕೇಶವ ದೇವಾಲಯದಲ್ಲಿದ್ದ ದೊಡ್ಡ ಸರಸ್ವತಿಯ ವಿಗ್ರಹ ಕಳುವಾಗಿರುತ್ತದೆ. ಗ್ರಾಮದವರು ಇದರ ಬಗ್ಗೆ ಗಮನ ಹರಿಸುವುದಿಲ್ಲ. ಇದೇ ಊರಿನಲ್ಲಿ ಹುಟ್ಟಿ ತನ್ನ ಸ್ವಂತ ಪರಿಶ್ರಮದಿಂದ ದೊಡ್ಡ ಇಂಗ್ಲೀಷ್ ಪತ್ರಿಕೆಯೊಂದರಲ್ಲಿ ಸಂಪಾದಕನಾಗಿರುವ ರವೀಂದ್ರನಿಗೆ ಈ ಸುದ್ದಿ ತಲುಪುತ್ತದೆ. ತನ್ನ ಹುಟ್ಟೂರು ಎಂಬ ಕರುಳಬಳ್ಳಿಯ ಮಮತೆಯಿಂದ ಬೇರಾರನ್ನು ಕಳುಹಿಸಲು ಮನಸ್ಸಾಗದೇ ತಾನೇ ಹುಟ್ಟೂರಿಗೆ ಬರುತ್ತಾನೆ. ಈ ವಿಷಯದ ಮೂಲ ಹುಡುಕುತ್ತಿರುವಾಗಲೇ ತನ್ನ ತಾತ ವೆಂಕಟಸುಬ್ಬಯ್ಯನವರು ಊರಿಗೆ ದಾನವಾಗಿ ಕಟ್ಟಿಸಿಕೊಟ್ಟಿದ್ದ ಆಸ್ಪತ್ರೆಯ ಫಲಕವನ್ನು ಯಾರೋ ತೆಗೆದು … Read more

ಸುಟ್ಟ ಊರ ಹೊರಗಿನ ಹನುಮಪ್ಪನ ಹಿಂದೆ ಬಿದ್ದು: ಅಮರ್ ದೀಪ್ ಪಿ.ಎಸ್.

ರಾತ್ರಿ ಸುಮಾರು ಒಂಭತ್ತು ಮುಕ್ಕಾಲರ ಸಮಯಕ್ಕೆ ವೇದಿಕೆಯಲ್ಲಿ ಕಲಾವಿದರೆಲ್ಲರಿಗೂ ಸನ್ಮಾನ ಮಾಡಿದರು.   ಆ ಐದು ದಿನದ ನಾಟಕೋತ್ಸವದ  ಕೊನೆಯ ದಿನವಾದ ಅಂದು ಆ ಕಾರ್ಯಕ್ರಮದ ರುವಾರಿಗಳಿಗೆ ಅಭಿನಂದಿಸಲಾಯಿತು.  ಮುಕ್ತಾಯಕ್ಕೂ ಮುನ್ನ ಆ ನಾಟಕದ ಕತೃವನ್ನು ಸನ್ಮಾನಿಸಲಾಗಿತ್ತು.   ಅಂತಿಮವಾಗಿ ಆಯೋಜಕರು ಆ ನಾಟಕದ ರಚನೆ ಮಾಡಿದ ಲೇಖಕನಿಗೆ ಮೈಕನ್ನು ಹಸ್ತಾಂತರಿಸಿದರು.   ಲೇಖಕ ಮೂಲತ: ತಾನು ಬರೆದ ಸಣ್ಣ ಕತೆಯೊಂದನ್ನು ಆಧರಿಸಿ ಅದೇ ಕತೆಗೆ ನಾಟಕದ ರೂಪಕ ಲೇಪಿಸಿ ರಚಿಸಿದ ನಾಟಕದ ಅಂದಿನ ಪ್ರದರ್ಶನದ ನಂತರ … Read more

ಟೆಲಿವಿಷನ್: ಬಂಡವಾಳಶಾಹಿಯ ಹೊಸ ಆಯುಧ: ಕು.ಸ.ಮಧುಸೂದನ್ ನಾಯರ್

ಇವತ್ತು ಟೆಲಿವಿಷನ್ ಕೇವಲ ಒಂದು ಸಂವಹನಾ ಮಾಧ್ಯಮವಾಗಿ ಉಳಿದಿಲ್ಲ. ಬದಲಿಗೆ ಅದೊಂದು ಉದ್ಯಮವಾಗಿ ಬೆಳೆಯುತ್ತ,ಬಂಡವಾಳಶಾಹಿ ಶಕ್ತಿಗಳ ಕೈಯಲ್ಲಿನ ಒಂದು ಪ್ರಬಲ ಅಸ್ತ್ರವಾಗಿ ಪರಿವರ್ತನೆಯಾಗಿ ವಿಶ್ವದ ಅರ್ಥವ್ಯವಸ್ಥೆಯನ್ನು ನಿಯಂತ್ರಿಸುವ ಮಟ್ಟಕ್ಕೆ ಬೆಳೆದು ನಿಂತಿದೆ.  ವಸಾಹತುಶಾಹಿಯ ಮೂಲಭೂತಗುಣವೇ ಅಂತಾದ್ದು. ಆಯಾ ಕಾಲಘಟ್ಟದಲ್ಲಿ ಅನ್ವೇಷಿಸಲ್ಪಡುವ ವೈಜ್ಞಾನಿಕ ಉಪಕರಣಗಳನ್ನು ತನ್ನ ಹಿತಾಸಕ್ತಿಗಳಿಗನುಗುಣವಾಗಿ ಬಳಸಿಕೊಳ್ಳುವಲ್ಲಿ ಅದನ್ನು ಮೀರಿಸುವವರಿಲ್ಲ. ಇತಿಹಾಸವನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದರೆ ಈ ಸತ್ಯ ಅರ್ಥವಾಗುತ್ತದೆ. ಹದಿನಾಲ್ಕು ಹದಿನೈದನೇ ಶತಮಾನದಲ್ಲಿ  ಅನ್ವೇಷಿಸಲ್ಪಟ್ಟ ನಾವಿಕರ ದಿಕ್ಸೂಚಿ, ಇದಕ್ಕೊಂದು ಅತ್ಯುತ್ತಮ ಉದಾಹರಣೆ. ದಿಕ್ಸೂಚಿಯ ಅನ್ವೇಷಣೆಯ ನಂತರ … Read more

ಪಾತ್ರಗಳು ಎಂದರೆ ಯಾರು ?: ಸಚೇತನ

ಸಿನಿಮಾದ ತೆರೆಯ ಮೇಲೆ ಬಣ್ಣ ಹಚ್ಚಿ ಮುಖವಾಡವೊಂದವನ್ನು ಮೆತ್ತಿಕೊಂಡು, ಕೃತಕವಾದ ಪಾತ್ರ ಸ್ವರೂಪಿ ಭಾವಗಳನ್ನು ಆವಾಹಿಸಿಕೊಂಡು, ಸಿದ್ಧ ಸನ್ನಿವೇಶಗಳಿಗೆ, ಪ್ರಮಾಣಬದ್ಧವಾಗಿ ಅಭಿನಯಿಸುವದೇ ? ಪಾತ್ರ ಎಲ್ಲಿಯೋ ಇರುವಂತದ್ದಲ್ಲ, ನಮ್ಮ ನಿಮ್ಮ ನಡುವಿನಿಂದಲೇ ಎದ್ದು ಬಂದಂತಹ  : ಮುಂದಿನ ಮನೆಯ ಕಾಲೇಜಿನ ಹುಡುಗಿ, ಕಳ್ಳೆ  ಕಾಯಿ ಮಾರುತ್ತಿರುವ ಬಿಹಾರಿ ಹುಡುಗ, ಸಿಗ್ನಲ್ಲುಗಳಲ್ಲಿ ಬಲೂನು ಮಾರುತ್ತಿರುವ ಪೋರಿ, ಸರಕ್ಕನೆ ಸಿಂಬಳ ಒಳಗೆಳೆದುಕೊಳ್ಳುವ ಚಿಕ್ಕ ಬಾಲಕ,  ಮಸಾಲೆ ದೋಸೆ ತಿಂದು ಟೀ ಗೆ ಕಾಯುತ್ತಿರುವ ಪಕ್ಕದ ಟೇಬಲ್ ನ ಜೋಡಿ, ಗ್ಯಾಸ್ … Read more

ಹೃದಯದ ಬೀದಿಯಲ್ಲಿ: ಸಚಿನ್ ನಾಯ್ಕ ಅಂಕೋಲ

ಹೃದಯದ ಬೀದಿಯಲ್ಲಿ ಮಿಂಚತೆ ಹಾದು ಹೋದ ನಿನಗಾಗಿ….                                                       ನಿನ್ನವನಿಂದ…. ಸೂರ್ಯನನ್ನೇ ನುಂಗಿ ಬಿಟ್ಟ ಇಳಿಸಂಜೆಯ ನೀರವತೆ, ಹಸಿರೆಲೆಯ  ಮೈಸೋಕಿ ಮೆಲ್ಲನೆ ಹರಿಯುವ ತಂಗಾಳಿ ಹೆಪ್ಪುಗಟ್ಟಿ ಎದೆಯಲ್ಲಿ ಸಣ್ಣನೆ ನೋವು, ದೂರದಲ್ಲೆಲ್ಲೋ ಗುನುಗುವ ಹಾಡು ಯಾವ ಮೋಹನ ಮುರಳಿ ಕರೆಯಿತೋ, … Read more

ಯುರೇಕಾ..! ಯುರೇಕಾ..!! : ಎಸ್.ಜಿ.ಶಿವಶಂಕರ್

’ರೀ…’ ಅಲೆಅಲೆಯಾಗಿ ತೇಲಿಬಂದು ವಿಶ್ವನ ಕರ್ಣಪಟಲದ ಮೇಲೆ ಪ್ರಹರಿಸಿದುವು-ಶಬ್ದ ತರಂಗಗಳು! ತೂಕಡಿಸುತ್ತಿದ್ದ ವಿಶ್ವ ಮೆಟ್ಟಿ ಬಿದ್ದ!! ನಿದ್ರೆ ಹಾರಿತು! ಬಿ.ಪಿ ಏರಿತು! ಅದು ತನ್ನ ಜೀವನ ಸಂಗಾತಿ ವಿಶಾಲೂ ದನಿಯೆಂದು ತಿಳಿದು. ಆ ಕ್ಷಣ ಏನು ಮಾಡಬೇಕೆಂದು ತೋಚದೆ ಅವಾಕ್ಕಾದ. ಆ ದನಿಯಲ್ಲಿನ ಭಾವ ಅರ್ಥ ಮಾಡಿಕ್ಕೊಳ್ಳಲು ಪ್ರಯತ್ನಿಸಿದ. ಮೊದಲಿಗೆ ದನಿ ಬಂದ ದಿಕ್ಕು ಗುರುತಿಸಲು ಪ್ರಯತ್ನಿಸಿದ. ಅದು ಮನೆಯ ಹಿಂಭಾಗದಿಂದ ಬಂತು ಎಂಬುದನ್ನು ಯಶಸ್ವಿಯಾಗಿ ಗುರುತಿಸಿದ. ನಂತರ ಆ ದನಿಯಲ್ಲಿ ಆತಂಕವಿದೆಯೆ..? ಗಾಬರಿಯಿದೆಯೆ..? ಇಲ್ಲಾ ಸಹಜವಾದ … Read more

ಚಳಿಗೆ ಮುರುಟಿದ ಮನಕ್ಕೊಂದು ಹೊದಿಕೆ ಹೊಚ್ಚುತ್ತಾ: ಪ್ರಶಸ್ತಿ

ಚಳಿಯೆಂದ್ರೆ ವಿಪರೀತ ಚಳಿ ಕಣೋ ಬೆಂಗ್ಳೂರಲ್ಲಿ ಅಂದ್ರೆ ದೆಲ್ಲೀಲಿ ಕೂತ ಫ್ರೆಂಡು ನಗ್ತಾ ಇದ್ದ. ಅಲ್ಲಿ ಅಬ್ಬಬ್ಬಾ ಅಂದ್ರೆ ಹದಿನೆಂಟೂ ಇಪ್ಪತ್ತೋ ಆಗಿರಬಹುದಷ್ಟೆ. ಅಷ್ಟಕ್ಕೇ ಚಳಿಯೆನ್ನೋ ನೀನು ಇಲ್ಲಿನ ಮೈನಸ್ಸುಗಳಿಗೆ ಬಂದ್ರೆ ಸತ್ತೇ ಹೋಗಬಹುದೇನೋ ಅಂದ. ಅರೆ ಹೌದಲ್ವಾ ಅನಿಸ್ತು. ಊರಲ್ಲಿ ಎರಡು ಕಂಬಳಿ, ಮೂರು ಕಂಬಳಿ ಚಳಿಯಂತ ಹೇಳುತ್ತಿದ್ದ, ಸ್ವೆಟರಿಲ್ಲದೆ ಹೊರಗಲ್ಲ ಮನೆಯೊಳಗೂ ಕೂರಲಾಗದಿದ್ದ ನಮ್ಮೂರೆಲ್ಲಿ ಬೆಳಗ್ಗೆ ಎಂಟಕ್ಕೇ ಆಫೀಸಿಗೆ ಬರೋ ಪರಿಸ್ಥಿತಿಯಿದ್ರೂ ಸ್ವೆಟರುಗಳೆಲ್ಲಾ  ಧೂಳು ಹೊಡೆಯುತ್ತಿರುವ ಬೆಂಗಳೂರೆಲ್ಲಿ ಅಂತನೂ ಒಮ್ಮೆ ಅನಿಸಿದ್ದು ಸುಳ್ಳಲ್ಲ.ಇಷ್ಟರ ಮಧ್ಯೆವೂ … Read more

ಮೂವರ ಕವಿತೆಗಳು: ರಘುನಂದನ ಹೆಗಡೆ, ಬಿ. ಸಿ. ಪ್ರಮೋದ, ಗಿರಿ

ನೀನಿಲ್ಲದ ಗೋಕುಲದ ಬೇಸರ ನಿನ್ನ ತುಟಿಯಂಚಿನ ಕೊಳಲಾಗುವೆ ಬಿಸಿಯುಸಿರ ಪುಳಕದಿ ರಾಗವಾಗುವೆ ಅನುರಾಗದ ರವಳಿಯ ತೇಲಿ ಬಿಡು ಶ್ಯಾಮ ಯಮುನಾ ತೀರದಿ ಹಾಡಾಗಿ ಹರಿಯಲಿ ಪ್ರೇಮ ನನ್ನೆದೆಯ ರಾಗ ಕೇಳು ಸಾಕು ಮಾಡೊ ವಿರಹಿ ಬಾಳು ನಿಂತೆ ಇದೆ ಜೀವ ಗೋಕುಲದಲ್ಲಿ ಜೀವಾಮೃತವಿದೆ ಎದೆಯಲ್ಲಿ ದ್ವಾರಕೆ, ಮಧುರೆಗಳು ಸಾಕು ಬಾ ನನ್ನೊಲವ ಬೃಂದಾವನಕೆ ಗೋಧೂಳಿ ದೀಪ ಮನದಲ್ಲಿ ಒಮ್ಮೆ ಹರಿವ ಯಮುನೆ ಕಣ್ಣಲ್ಲಿ ಇನ್ನೊಮ್ಮೆ ಗಿರಿಯ ಭಾರ ಎದೆಯಲ್ಲಿ  ಕಾಯುತ್ತ ನಿಂತೆ ಇದೆ ಜೋಕಾಲಿ ಯಾರಿಗೆ ಹೇಳಲೋ … Read more

ಹೊಸ ವರುಷದಿ ಹೊಸ ಮನಸು: ಪದ್ಮಾ ಭಟ್

                   ಹೊಸ ವರುಷವು ಪ್ರತೀ ವರುಷವೂ ಬರುತ್ತದೆ.. ಕಳೆದು ಹೋದ ಹಳೆಯ ವರುಷದ ನೆನಪಿನಲಿ ನವ ವರುಷವನ್ನು ಸ್ವಾಗತಿಸುತ್ತ, ಹೊಸ ಕನಸುಗಳನು ಬಿಚ್ಚಿಡಲು ಶುರು ಮಾಡಿರುತ್ತೇವೆ.. ಪ್ರತೀ ಸಲದಂತೆ ಈ ಸಲವೂ ಏನಾದರೂ ಹೊಸದಾದ ಪ್ಲ್ಯಾನ್ ಮಾಡಬೇಕು.. ಹೊಸ ಯೋಜನೆಗಳು ಹೊಸ ವರುಷದಿಂದಲೆ ಜಾರಿಗೆ ಬರಲೆಂಬ ಕಟುವಾದ ನಿರ್ಧಾರವನ್ನೂ ತೆಗೆದುಕೊಂಡು ಬಿಟ್ಟಿರುತ್ತೇವೆ.. ಅದೇ ಹಳೆಯ ಕೆಟ್ಟ ಚಟಗಳನ್ನು ಬಿಡಬೇಕು ಎಂತಲೋ, ಹೊಸದಾದ ಕೆಲಸವನ್ನು ಶುರು ಮಾಡಿಕೊಳ್ಳಬೇಕೆಂತೋ, … Read more

ನಾಟಿಯ ಪದಗಳು: ಹನಿಯೂರು ಚಂದ್ರೇಗೌಡ

ಜನಪದರ ಕಾಯಕಶಕ್ತಿಯೇ ಜಾನಪದ ಸಾಹಿತ್ಯಸೃಷ್ಟಿಗೆ ಮೂಲಕಾರಣವಾದುದು. ಕಾಯಕದೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿರುವ ಕಾರಣದಿಂದಲೇ ಜಾನಪದ ಸಾಹಿತ್ಯ ಹೆಚ್ಚೆಚ್ಚು ಬೆಳೆಯುತ್ತಾ ಬಂದು, ಅದೀಗ ಸಂಪೂರ್ಣವಾಗಿ ಏಕಕಾಲದಲ್ಲಿ ಯಾರೊಬ್ಬನು ಮುಟ್ಟಲಾಗದ ಬೃಹದ್ ರಾಶಿಯಾಗಿದೆ. ಇಂತಹ ಜಾನಪದ ರಾಶಿಯಲ್ಲಿ ಕೃಷಿಹಾಡು, ಹಸೆಹಾಡು, ಸೋಬಾನೆಹಾಡು, ದೇವರಮೇಲಿನಹಾಡು, ಮಳೆಹಾಡು, ಕಳೆಕೀಳುವಾಗಿನಹಾಡು, ಮಗುಹುಟ್ಟಿದಹಾಡು, ಯಾರೋ ಸತ್ತರೆಹಾಡು, ಹಬ್ಬಕ್ಕೊಂದುಹಾಡು, ಹರುಷಕ್ಕೊಂದುಹಾಡು, ದುಃಖಕ್ಕೊಂದುಹಾಡು, ಸರಸಕ್ಕೊಂದುಹಾಡು, ವಿರಸಕ್ಕೊಂದುಹಾಡು, ಕೀಟಲೆಗೊಂದುಹಾಡು, ಕಿಚಾಯಿಸಲೊಂದುಹಾಡು, ಚುಡಾಯಿಸಲೊಂದುಹಾಡು, ರೇಗಿಸಲೊಂದುಹಾಡು, ಪ್ರಸ್ತಕ್ಕೊಂದುಹಾಡು, ಹೆಣ್ಣು,ಗಂಡನ ಮನೆಗೆ ಹೋಗುವಾಗೊಂದುಹಾಡು, ತವರುಮನೆಗೆ ಬರುವಾಗೊಂದುಹಾಡು, ಮಡಿಲುತುಂಬುವಾಗೊಂದುಹಾಡು, ಬಾಣಂತಿಗೊಂದುಹಾಡು, ಗರ್ಭಿಣಿಗೊಂದುಹಾಡು, ಮದುವಣಗಿತ್ತಿಯನ್ನು ಕರೆದೊಯ್ಯುವಾಗೊಂದುಹಾಡು, ಮನೆತುಂಬಿಸಿಕೊಳ್ಳವಾಗೊಂದುಹಾಡು, … Read more

ಪಶ್ಚಿಮ ಘಟ್ಟಗಳ ಸ್ಥಿತಿ-ಗತಿ – ಅವಲೋಕನ-೨: ಅಖಿಲೇಶ್ ಚಿಪ್ಪಳಿ

ಇಲ್ಲಿಯವರೆಗೆ ಫ್ರೊ:ಮಾಧವ ಗಾಡ್ಗಿಳ್ ನೇತೃತ್ವದ ಸಮಿತಿಯು ಕೇಂದ್ರ ಸರ್ಕಾರ ವಹಿಸಿದ ಮಹತ್ವದ ಈ ಮಹಾಕಾರ್ಯವನ್ನು ಪ್ರಚಂಡ ಉತ್ಸಾಹದೊಂದಿಗೆ ಪ್ರಾರಂಬಿಸಿತು. ದೀರ್ಘಕಾಲದಿಂದ ಚರ್ಚೆಗೊಳಪಟ್ಟ, ಗೊಂದಲಗಳ ಗೂಡಾದ ಪಶ್ಚಿಮಘಟ್ಟಗಳ ಉಳಿವಿಗೆ ಸಂಬಂಧಿಸಿದಂತೆ ಬಹುಮುಖ್ಯ ಕಾರ್ಯತಂತ್ರದ ಭಾಗವಾಗಿ ಬಹು ಮುಖ್ಯವಾಗಿ ಮೂರು ಹಂತಗಳನ್ನು ಗುರುತಿಸಿಕೊಂಡಿತು. ೧. ಈಗಾಗಲೇ ಪಶ್ಚಿಮಘಟ್ಟಗಳಿಗೆ ಸಂಭಂದಿಸಿದಂತೆ ಲಭ್ಯವಿರುವ ಎಲ್ಲಾ ಮಾಹಿತಿಗಳನ್ನು ಕ್ರೂಡಿಕರಿಸುವುದು. ೨. ಪಶ್ಚಿಮಘಟ್ಟಗಳ ಭೌಗೋಳಿಕ ವಿಸ್ತಾರದಲ್ಲಿ ಪರಿಸರ ಸೂಕ್ಷ್ಮಪ್ರದೇಶಗಳನ್ನು ನಿಖರವಾಗಿ ಗುರುತಿಸಿ ಅದನ್ನು ವ್ಯವಸ್ಥಿತವಾಗಿ ಗಣಕೀಕೃತಗೊಳಿಸುವುದು. ೩.ಮುಖ್ಯ ಕೈಗಾರಿಕೋದ್ಯಮಿಗಳ, ಸಂಘ-ಸಂಸ್ಥೆಗಳ, ಜನಸಾಮಾನ್ಯರ, ಜನಪ್ರತಿನಿಧಿಗಳಿಂದ ಸಮಗ್ರವಾಗಿ ಮಾಹಿತಿಯನ್ನು … Read more

ಚಳಿಗಾಲ…ಆರೋಗ್ಯ ಜೋಪಾನ: ಗಣೇಶ್.ಹೆಚ್.ಪಿ.

ಮೊನ್ನೆ ಆಕಸ್ಮಿಕವಾಗಿ ಗೆಳೆಯನೊಬ್ಬನನ್ನು ಭೇಟಿಯಾದೆ. ಹೇಗಿದೆ ಶಾಲೆ ? ಕ್ಲಾಸಸ್ ಎಲ್ಲಾ ಚೆನ್ನಾಗಿ ನಡೀತಿದೆಯೋ ಎಂದು ವಿಚಾರಿಸಿದೆ. ಅವನು ಸಪ್ಪೆ ಮುಖದಿಂದ ಇಲ್ಲಾ ಕಣೋ ಎರಡು ದಿನದಿಂದ ಜ್ವರ, ಶೀತ ಆಗಿ ಶಾಲೆಗೆ ಹೋಗಿಲ್ಲ ಎಂದು ಹೇಳಿದ. ನಾನು ಅವನಿಗೆ ಆರೋಗ್ಯದ ಮೇಲೆ ನಿಗಾ ಇಡು, ಹಾಗೇ ಶಾಲೆಯನ್ನು ತಪ್ಪಿಸಬೇಡ ಎಂದು ಬುದ್ಧಿ ಹೇಳಿದೆ. ಮೈ ಕೊರೆಯುವ ಚಳಿ :  ಈ ಕಾಲದಲ್ಲಂತೂ ಕಳೆಗುಂದಿದ ವಾತಾವರಣ, ಹೊರಗೆ ಕಾಲಿಟ್ಟರೆ ಸಾಕು ಮೈ ಕೊರೆಯುವ ಚಳಿ, ಬೆಳಿಗ್ಗೆ ಹಾಸಿಗೆ … Read more

ನಿಮ್ಮ ಗಮನಕ್ಕೆ

ದಿನಾಂಕ 30 ಡಿಸೆಂಬರ್ 2014 ರಿಂದ 3 ಜನವರಿ 2015ರ ವರೆಗೆ ಮೈಸೂರಿನ ನಿರಂತನ ಫೌಂಡೇಷನ್ ವತಿಯಿಂದ ರಾಷ್ಟ್ರೀಯ ರಂಗ ಉತ್ಸವವನ್ನು ಆಯೋಜಿಸಲಾಗಿದೆ. ಈ ನಿಮಿತ್ತ ರಂಗಾಸಕ್ತರಿಗೆ ನಿರಂತರ ಫೌಂಡೇಷನ್ ಆಹ್ವಾನ ಕೋರಿದೆ.  ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ: ನಿರಂತರ ಫೌಂಡೇಷನ್ ಕಾಂತರಾಜ ರಸ್ತೆ ಸರಸ್ವತಿ ಪುರಂ ಮೈಸೂರು ದೂರವಾಣಿ: 0821-2544990 ****

ಸಾಮಾನ್ಯ ಜ್ಞಾನ (ವಾರ 59): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು ೧.    ಇತ್ತೀಚಿಗೆ ಭಾರತ ರತ್ನ ಪುರಸ್ಕಾರಕ್ಕೆ ಯಾರನ್ನು ಆಯ್ಕೆ ಮಾಡಲಾಯಿತು? ೨.    ಜಿಎಮ್‌ಟಿ (GMT)ಯ ವಿಸ್ತೃತ ರೂಪವೇನು? ೩.    ಅಡಿಗೆಉಪ್ಪಿನ ರಾಸಾಯನಿಕ ಹೆಸರೇನು? ೪.    ಆಹಾರ ಶಕ್ತಿಯನ್ನು ಯಾವ ಮಾನದಿಂದ ಅಳೆಯುತ್ತಾರೆ? ೫.    ಅಶ್ವಿನಿ ಇದು ಯಾರ ಕಾವ್ಯ ನಾಮವಾಗಿದೆ? ೬.    ಪ್ರಸಿದ್ಧ ಶಿರಹಟ್ಟಿಯ ಫಕಿರೇಶ್ವರ ಮಠ ಕರ್ನಾಟಕದ ಯಾವ ಜಿಲ್ಲೆಯಲ್ಲಿದೆ? ೭.    ರಾಷ್ಟ್ರೀಯ ಕೂಲಿಗಾಗಿ ಕಾಳು ಕಾರ್ಯಕ್ರಮವನ್ನು ಜಾರಿಗೊಳಿಸಲಾದ ವರ್ಷ ಯಾವುದು? ೮.    ಡೆನ್ಮಾರ್ಕ್ ವಿಶಿಷ್ಟವಾಗಿ ಯಾವ ಪ್ರಾಣಿಗಳಿಗೆ ಪ್ರಸಿದ್ಧಿ ಪಡೆದಿದೆ? ೯.    ಕನ್ನಡದ … Read more