ದೇಹವೆಂಬೋ ಮೋಟುಗೋಡೆಯ ಮೀರಿ..: ಮೌಲ್ಯ ಎಂ.

                                                       ಕವಿತೆ ಆತ್ಮದ ನಾದ. ಅದ್ಯಾಕೆ ದೇಹದ ಮೇಲೆಯೇ ಉರುಳಿಸುತ್ತಾರೋ.? ಅಂಗಾಂಗಕ್ಕೂ, ಅಂತರಂಗಕ್ಕೂ ಪರದೆ ತೀರ ಕಲಸಿ ಹೋಗುವಷ್ಟು ತೆಳುವಾ..? ಯಾಕೆ ಈವತ್ತಿನ ಪದ್ಯಗಳು ಕೇವಲ Anotomical description ಗಳಾಗುತ್ತಿವೆ? ಲಜ್ಜೆ ಈವತ್ತಿನ ದಿನಮಾನಕೆ ಒಂದು ಅನಗತ್ಯ ಸಂಗತಿಯೇ? ಅಥವಾ … Read more

ಶಂಕರ್ ನಾಗ್ ಇನ್ನು ಬದುಕ್ಕಿದ್ದಾರೆ: ಮುಕುಂದ್ ಎಸ್..

"ನಲಿವ ಗುಲಾಬಿ ಹೂವೇ…" ಎಂದು ಪಕ್ಕದಲ್ಲಿದ್ದ ಗೆಳೆಯ ಒಂದೇ ಸಾಲನ್ನು ಮಂತ್ರದಂತೆ ಪಠಿಸುತ್ತಿದ್ದ. ನಾನು ಅವನನ್ನು ಎಚ್ಚರಿಸಿ, "ಕೇಳಿಸಿಕೊಳ್ಳೋ, ಶಂಕರಣ್ಣನ ಹೆಂಡ್ತಿ ಮಾತಾಡ್ತಿದ್ದಾರೆ" ಎಂದೆ. ಅವನಿಗೆ ನನ್ನ ಮಾತು, ಅರುಂಧತಿನಾಗ್ ರವರ ಮಾತು ಎರಡೂ ಬೇಡವಾಗಿತ್ತು. ಅವನಿಗೆ ಶಂಕರ್ ನಾಗ್ ನೆನಪು ಆ ಸಂಜೆಗೆ ಸಾಕಾಗಿತ್ತು. ಅಂತಹ ಸುಂದರ ಸಂಜೆಯಲ್ಲಿ ಡಿವಿಸ್ ಕಾಲೇಜಿನಲ್ಲಿ ಹುಡುಗ-ಹುಡುಗಿಯರನ್ನು ಉದ್ದೇಶಿಸಿ, "ಆ ಹುಡುಗನ ಹೆಸರಲ್ಲಿ ಒಂದು ರಂಗಮಂದಿರವನ್ನು ಕಟ್ಟಬೇಕು. ನನ್ನ ಹತ್ತಿರ ಯೋಜನೆ ತಯಾರಾದ ಮೇಲೆ ಮತ್ತೆ ನಿಮ್ಮ ಮುಂದೆ ಬಂದು, … Read more

ಹೋಳಿಗೆಯೂ … ಹಳೇ ಪೇಪರ್ರೂ ..: ಅನಿತಾ ನರೇಶ್ ಮಂಚಿ

ಚಿಕ್ಕಮ್ಮ ಬಂದು ಗುಟ್ಟಿನಲ್ಲಿ ಎಂಬಂತೆ ನನ್ನನ್ನು ಕರೆದು ಹೋಳಿಗೆ ಕಟ್ಟು ಕಟ್ಟಿಡ್ತೀಯಾ.. ಎಂದಳು. ಚಿಕ್ಕಪ್ಪನ ಕಡೆಗೆ ನೋಡಿದೆ. ಐವತ್ತು, ಮತ್ತೊಂದು ಹತ್ತು  ಎಂಬಂತೆ ಸನ್ನೆ ಮಾಡಿದರು.  ಸರಿ .. ನಮ್ಮ ಬಳಗ ಸಿದ್ದವಾಯ್ತು. ಈ ರಹಸ್ಯ ಕಾರ್ಯಕ್ಕೆಂದೇ ಒಂದು ಪುಟ್ಟ ಕೋಣೆಯಿತ್ತು. ನಾವಲ್ಲಿಗೆ ಸೇರಿ  ಕಾಲು ಚಾಚಿ ಕುಳಿತುಕೊಂಡೆವು.  ಅಲ್ಲೇ ಇದ್ದ ಚಿಕ್ಕಪ್ಪನ ಮಗ ನಮ್ಮ ಸಹಾಯಕ್ಕೆ ಸಿದ್ಧನಾದ.  ಪೇಪರ್ , ಪ್ಲಾಸ್ಟಿಕ್ ಕವರ್, ಹೋಳಿಗೆಯ ಗೆರಸೆ ತಂದಿಡು ಎಂದೆವು.  ಎಲ್ಲವೂ ಒಂದೊಂದಾಗಿ ನಮ್ಮೆದುರು ಪ್ರತ್ಯಕ್ಷವಾಯಿತು.   … Read more

ನೊಬೆಲ್ ಪ್ರಶಸ್ತಿ – ೨೦೧೪: ಜೈಕುಮಾರ್. ಹೆಚ್. ಎಸ್.

ಭೌತವಿಜ್ಞಾನ: ನೀಲಿ ವರ್ಣದ ಬೆಳಕು ಆವಿಷ್ಕಾರ ಮಾಡಿದ ವಿಜ್ಞಾನಿಗಳಿಗೆ ಕಡಿಮೆ ವಿದ್ಯುತ್‌ನಿಂದ ಹೆಚ್ಚಿನ ಬೆಳಕು ನೀಡುವ ದೀಪಗಳಿಗಾಗಿ ಶೋಧನೆ ನಿರಂತರವಾಗಿ ನಡೆಯುತ್ತಲೇ ಇದೆ. ೨೦ ನೇ ಶತಮಾನದಲ್ಲಿ ಇನ್‌ಕ್ಯಾಂಡಿಸೆಂಟ್ ಎಂದು ಕರೆಯಲಾಗುವ ಬಲ್ಬ್ ಗಳದೇ ಪಾರುಪತ್ಯ. ಇಂದಿಗೂ ನಮ್ಮ ಬಹುತೇಕ ಮನೆಗಳಿಂದ ಇವು ಕಣ್ಮರೆಯಾಗಿಲ್ಲ. ಇದರಲ್ಲಿ ಟಂಗಸ್ಟನ್ ಫಿಲಮೆಂಟ್ ಇದ್ದು, ಫಿಲಮೆಂಟ್ ಕಾದ ನಂತರ ಬೆಳಕನ್ನು ನೀಡಲಾರಂಭಿಸುತ್ತವೆ. ಆಮೇಲೆ ಟ್ಯೂಬ್‌ಲೈಟ್ (ಪ್ಲೋರೋಸೆಂಟ್) ದೀಪಗಳು ಬಂದವು. ಇದರಲ್ಲಿ ಪಾದರಸದ ಅನಿಲದ ಬಾಷ್ಪಗಳು ವಿದ್ಯುತ್ ಸರಬರಾಜಿನಿಂದ ಕಾದು ರಂಜಕದ ಕೋಟಿಂಗ್‌ನ್ನು … Read more

ನಿಮ್ಮ ಗಮನಕ್ಕೆ…

ಅದ್ವೈತ ಪ್ರಕಾಶನ, ಬೆಂಗಳೂರು ಇವರು ಪ್ರಥಮ ಬಾರಿಗೆ ಕನ್ನಡ ಕವಿತೆಗಳ ಆಂಡ್ರಾಯ್ಡ್ ಆ್ಯಪ್ ಒಂದನ್ನು ಅಭಿವೃದ್ದಿ ಮಾಡಿದ್ದಾರೆ. ಈ ಆಂಡ್ರಾಯ್ದ್ ಆ್ಯಪ್ ಅನ್ನು ಗೂಗಲ್ ಸ್ಟೋರ್ಸ್ ನಲ್ಲಿ ಉಚಿತವಾಗಿ ಇಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು. ಈ ಆ್ಯಪ್ ನಲ್ಲಿ 25 ಕನ್ನಡ ಕವಿಗಳ ಸುಮಾರು 75 ಕವಿತೆಗಳು ಓದಲು ಸಿಗುತ್ತವೆ. ಈ ಕವಿತೆಗಳಿಗೆ ಪೂರಕವಾಗುವಂತೆ ಉತ್ತಮ ರೇಖಾಚಿತ್ರಗಳು ಸಹ ಈ ಆ್ಯಪ್ ನಲ್ಲಿ ನೋಡಲು ಲಭ್ಯವಿವೆ.  ವಿದ್ಯಾಶಂಕರ್ ಹರಪನಹಳ್ಳಿಯವರ ನೇತೃತ್ವದಲ್ಲಿ ಮೂಡಿಬಂದಿರುವ ಈ ಪ್ರಾಜೆಕ್ಟ್ ಗೆ ಸಂಬಂಧಿಸಿದಂತೆ ಮಾಹಿತಿ … Read more

ಇಂಗು ತೊಂಡೆ ಇದ್ದರೆ…: ಮಾಲಾ

ಅಂಗಡಿಯಿಂದ ತರಕಾರಿ ತರುವುದು ಬಲು ಸುಲಭ. ಕೈಯಲ್ಲಿ ದುಡ್ಡಿದ್ದರೆ ಸಾಕು. ಆದರೆ ತರಕಾರಿ ಬೆಳೆಯುವುದು ಅಷ್ಟು ಸುಲಭದ ಕೆಲಸವಲ್ಲ. ನಮ್ಮ ಹಿತ್ತಲಲ್ಲಿ ತರಕಾರಿ ಬೆಳೆಯಲು ಎಷ್ಟೋ ಸಲ ನಾನೂ ಪ್ರಯತ್ನಿಸಿದ್ದೆ. ಹಳ್ಳಿಯಿಂದ ಪೇಟೆಗೆ ಬಂದ ನಾನು ಕೆಲವಾರು ವರ್ಷ ಮಣ್ಣಿನ ನಂಟು ಬೆಳೆಸಿದ್ದೆ. ಬೀನ್ಸ್, ಬೆಂಡೆ, ಬದನೆ ಬೀಜ ಹಾಕಿ ಅದು ಸಸಿಯಾಗಿ ಅರಳಿ ನಿಂತಾಗ ಸಂಭ್ರಮಿಸಿದ್ದೆ. ಕೇವಲ ಒಂದೆರಡು ಕಾಯಿ ಬಿಟ್ಟು ಅದನ್ನೇ ಖುಷಿಯಿಂದ ಅಡುಗೆ ಮಾಡಿ ತಿಂದದ್ದು ಇತ್ತು. ನಾವೇ ಬೆಳೆದ ತರಕಾರಿ ತಿನ್ನುವಾಗ … Read more

“ಭವಿಷ್ಯ”ದ ಜಗುಲಿಕಟ್ಟೆ​ಯಲ್ಲಿ ಅನಿರೀಕ್ಷಿತ​ವಾಗಿ ಕುಳಿತು: ಅಮರ್ ದೀಪ್ ಪಿ.ಎಸ್.

ತಮಾಷೆ ಅನ್ನಿಸಿದರೂ ಕಿವಿಗೆ ಬಿದ್ದ ಒಂದು ಪ್ರಸಂಗ ಹೇಳಿಬಿಡುತ್ತೇನೆ.  ಒಂದಿನ ಸಂಜೆ ಪೂರ್ಣ ಬೆಳಕಿಲ್ಲದ  ದೊಡ್ಡ ಅಂಕಣದ ಕೋಣೆಯಲ್ಲಿ ಅಲ್ಲೊಂದು ಇಲ್ಲೊಂದು ದೀಪ ಹಚ್ಚಿಟ್ಟಂತಿದ್ದ  ಬೆಳಕಲ್ಲಿ  ಕುಳಿತು ಗುಸು ಗುಸು ಮಾತಾಡುವ ಮಂದಿ ಮಧ್ಯೆ ಅತ್ತಿಂದಿತ್ತ ತಿರುಗುವ ಹುಡುಗನೊಬ್ಬ. ಮಾತಾಡುವ ಗುಂಪಿನಲ್ಲಿ ಒಬ್ಬ ಧಡೂತಿ ಮನುಷ್ಯನೊಬ್ಬ   ಹುಡುಗನನ್ನು ಕರೆದು "ಏನ್ ತಮ್ಮಾ ನಿನ್ ಹೆಸ್ರು?" ಕೇಳಿದ.   ಈ ಹುಡುಗ "ಬಿರಾದರ" ಅಂದ.  "ಸರಿ, ಈ  ತುಂಡು ಪೇಪರ್ ಮೇಲೆ ನಿನ್ ಹೆಸ್ರು ಬರ್ದು ಸೈನ್ … Read more

ವಿದ್ಯಾರ್ಥಿಗಳ ಭವಿಷ್ಯವನ್ನು ಮಾರಕಗೊಳಿಸುತ್ತಿರುವ ಮಾದಕ ವಸ್ತುಗಳು: ಸುವರ್ಣ ಶಿ. ಕಂಬಿ

  "ಇಂದಿನ ಮಕ್ಕಳೇ ನಾಳಿನ ಪ್ರಜೆಗಳು", "ಇಂದಿನ ಯುವಕರೇ ನಾಳಿನ ನಾಗರಿಕರು" ಎನ್ನುವ ಮಾತು ಸತ್ಯ. ವಿದ್ಯಾರ್ಥಿಗಳು ನಮ್ಮ ದೇಶದ ಸಂಪತ್ತು. ನಮ್ಮ ದೇಶದ ಭವಿಷ್ಯ ನಾಲ್ಕು ಗೋಡೆಗಳ ಮಧ್ಯೆ ಕಲಿಯುವ ವಿದ್ಯಾರ್ಥಿಗಳ ಕೈಯಲ್ಲಿದೆ. ಯುವಶಕ್ತಿ ದೇಶದ ಶಕ್ತಿಯಾಗಿದೆ. ನಾಡಿನ ಆಸ್ತಿಯಾದ ಈ ವಿದ್ಯಾರ್ಥಿಗಳನ್ನು ಸನ್ಮಾರ್ಗದೆಡೆಗೆ ಒಯ್ಯುವ ಗುರುತರ ಜವಾಬ್ದಾರಿ ತಂದೆ-ತಾಯಿ, ಶಿಕ್ಷಕರ, ಸಮಾಜದ, ಸರಕಾರದ ಮೇಲಿದೆ. ಇದು ಆಧುನಿಕ ಯುಗ. ಮನುಷ್ಯ ವೈಜ್ಞಾನಿಕ, ವೈಚಾರಿಕ, ತಂತ್ರಜ್ಞಾನ, ವೈದ್ಯಕೀಯ ಮುಂತಾದವುಗಳಿಗೆ ಸಂಬಂಧಿಸಿದಂತೆ ತುಂಬಾ ಮುಂದುವರೆದಿದ್ದಾನೆ. ಅನೇಕ ಸಂಶೋಧನೆಗಳನ್ನು … Read more

ಜಾತ್ರಿ ಜೊತಿಗಿನ ನೆನಪಿನ ಬುತ್ತಿ…: ನಾರಾಯಣ ಬಾಬಾನಗರ

ಜಾತ್ರೆ ಅಂದರ..ನಿಮಗೆ ಏನ ನೆನಪಾಗತೈತಿ?ಹಿಂಗ ನಿಮಗ ಯಾರರ ಕೇಳಿದರ..ಮಿಠಾಯಿ ಮಾರುವ ಅಂಗಡಿ,ಫುಗ್ಗಾ ಮಾರುವವನು ಬಲೂನಿಗೆ ಗಾಳಿ ತುಂಬುವ ಮುಖ,ಆಟಿಕಿ ಸಾಮಾನುಗಳನ್ನು ಹರಡಿಕೊಂಡು ಕುಳಿತ ಅಜ್ಜಿ,ಬಣ್ಣದ ಶರಬತ್ ಮಾರಕೋತ ನಿಂತವನ ಕೂಗು,ಎಣ್ಣಿಯೊಳಗ ಭಜಿ ಕರಕೋತ ಕುಂತವಳು ಒಂದ ಕೈಯಿಂದ ಕಡಾಯಿಯೊಳಗ ಭಜಿ ಕರೀತಿದ್ದರ ಇನ್ನೊಂದ ಕೈಯಿಂದ ಹಂಗ ಹಣೀ ಮ್ಯಾಲಿಂದ ಕೆಳಗ ಇಳೀತಿದ್ದ ಬೆವರನ್ನ ಒರಿಸಿಕೊಂತ ಕುಂತ ಚಿತ್ರಗಳು….ಅಬ್ಬಾ ಜನ ಜಂಗುಳಿ!! ಅಂಥಾದರಾಗ ಅವ್ವನ ಜೊತಿ ಜಾತ್ರಿಗಿ ಬಂದ ಪುಟ್ಟ ಪೋರಿ ತನ್ನ ಅವ್ವಳಿಂದ ತಪ್ಪಿಸಿಕೊಂಡು ರೊಯ್ಯನೆ ಅಳಕೋತ … Read more

ಮೂವರ ಕವಿತೆಗಳು: ವಿಲ್ಸನ್ ಕಟೀಲ್, ವಾಮನ ಕುಲಕರ್ಣಿ, ಅಕ್ಷಯ ಕಾಂತಬೈಲು

ಅಸ್ಪೃಶ್ಯರು ಎಲೆಗಳುದುರಿದ ಒಣ ಕೊಂಬೆಗೆ ಜೋಡಿ ಬಾವಲಿ ಜೋತು ಬಿದ್ದಂತೆ ಎದ್ದು ಕಾಣುವ ನಿನ್ನ ಪಕ್ಕೆಲುಬುಗಳಿಗೆ ಬತ್ತಿ ಹೋದ ಸ್ಥನಗಳು ನನ್ನ ಬೆರಳುಗಳೂ ಅಂತೆಯೇ ಎಲುಬಿನ ಚೂರುಗಳಿಗೆ ತೊಗಲುಡಿಸಿದಂತೆ  ಮಾಂಸಲವೇನಲ್ಲ ನಮ್ಮಿಬ್ಬರ ಮಿಲನ ರಮ್ಯವಲ್ಲ; ನವ್ಯ ಮಾಂಸಖಂಡಗಳ ಪ್ರಣಯದಾಟವಲ್ಲ ಅದು, ಮೂಳೆ-ತೊಗಲಿನ ಸಂಘರ್ಷ! *** ವಿದ್ಯುತ್ತಂತಿ ಸ್ಪರ್ಶಿಸಿ ಸತ್ತ  ಬಾವಲಿಯ ರೆಕ್ಕೆಯನ್ನು ತೆಂಗಿನ ಚಿಪ್ಪಿಗೆ ಬಿಗಿದು ಕಟ್ಟಿ ರಚಿಸಿದ ಪುಟ್ಟ ಡೋಲು ಬಾರಿಸುತ್ತಿದ್ದಾನೆ ನನ್ನ ಮುದ್ದು ಮಗ ಸವೆದ ಪಕ್ಕೆಲುಬುಗಳಂತಿರುವ ಚೋಟುದ್ದ ಬೆತ್ತಗಳಿಂದ ಬಾವಲಿಯ ರೆಕ್ಕೆಗೆ ಬಡಿಯುವಾಗ … Read more

ದೀಪಾವಳಿ – ೨೦೧೪ ವಿ(ಶೇ)ಷ: ಅಖಿಲೇಶ್ ಚಿಪ್ಪಳಿ

ದೀಪಾವಳಿಗೆ ಇನ್ನೆರೆಡು ದಿನವಿರಬೇಕಾದರೆ, ರಾತ್ರಿ ಜ್ವರ ಜೊತೆಗೆ ವಿಪರೀತ ನಡುಕ. ಬೆಳಗ್ಗೆ ವೈದ್ಯರಿಗೆ ತೋರಿಸಿದಾಗ ವೈರಾಣು ಸೋಂಕಿನಿಂದ ಜ್ವರ ಬಂದಿದೆ ಎಂದು ಪ್ಯಾರಾಸಿಟಮಲ್ ಮಾತ್ರೆ ಕೊಟ್ಟರು. ಮತ್ತೆ ರಾತ್ರಿ ಜ್ವರ ವಿಪರೀತ ನಡುಕ. ಬೆಳಗ್ಗೆ ಎದ್ದು ಮೂತ್ರಕ್ಕೆಂದು ನಿಂತರೆ ಅಸಾಧ್ಯ ಉರಿ. ಮೂತ್ರದ ಬಣ್ಣ ತಿಳಿಗೆಂಪು. ವಿಪರೀತ ಸುಸ್ತು. ಡ್ಯೂಟಿಗೆ ಹೋಗಲೇಬೇಕಾದ ಅನಿವಾರ್ಯತೆಯಿತ್ತು. ಬಹುಶ: ನೀರು ಕಡಿಮೆಯಾಗಿ ಹೀಗಾಗಿದೆ ಎಂದುಕೊಂಡು ಕೊತ್ತಂಬರಿ ಹಾಕಿ ಕುದಿಸಿದ ೨ ಲೀಟರ್ ನೀರು ಕುಡಿದಿದ್ದಾಯಿತು. ಮತ್ತೆ ವೈದ್ಯರಿಗೆ ಹೇಳಿದಾಗ ಮೂತ್ರಪರೀಕ್ಷೆ ಮಾಡುವ … Read more

ಮಣ್ಣಾದ ಶೂ ಮತ್ತು ಮೋಡಗಳ ಊಟಿ: ಪ್ರಶಸ್ತಿ ಅಂಕಣ

ಇದೇನಪ್ಪಾ ವಿಚಿತ್ರ ಶೀರ್ಷಿಕೆ ,ಶೂ ಮಣ್ಣಾಗೋಕೂ ಮತ್ತು ಊಟಿ ಮೋಡಕ್ಕೂ ಎಲ್ಲಿಂದೆಲ್ಲಿಯ ಸಂಬಂಧ ಅಂದ್ಕೊಂಡ್ರಾ ? ಊಟಿ ಅಂದ್ರೆ ಮಧುಚಂದ್ರದ ಜಾಗ. ಅದ್ರ ಬಗ್ಗೆ ಮದ್ವೆಯಾಗದ ಈ ಹುಡ್ಗ ಏನು ಬರಿಬೋದು ಅಂದ್ಕೊಂಡ್ರಾ ? ಹಿ.ಹಿ. ನಾ ಆ ವಿಷ್ಯದ ಬಗ್ಗೆ ಹೇಳ್ತಿರೋದಲ್ಲ.ಶೂ ಬೆಂಗ್ಳೂರಲ್ಲಿದ್ರೂ ಮಣ್ಣಾಗತ್ತೆ. ಅದಕ್ಕೆ ಊಟಿ ಮೋಡ ಸುರ್ಸೋ ಮಳೇನೇ ಆಗ್ಬೇಕಾ ಅಂದ್ರಾ ? ವಿಷ್ಯ ಅದೂ ಅಲ್ಲ. ಹೇಳೋಕೆ ಹೊರಟೊರೋದು ಎಲ್ಲಾ ಸಾಮಾನ್ಯವಾಗಿ ನೋಡೋ ದೊಡ್ಡಬೆಟ್ಟ, ಗುಲಾಬಿ ತೋಟ, ಊಟಿ ಕೆರೆಗಳನ್ನೊಳಗೊಂಡ ಊಟಿಯ … Read more

ಮತ್ತೆ ರಂಗದಲ್ಲಿ ಅಬ್ಬರಿಸಿದ ’ವೀರ ಸಿಂಧೂರ ಲಕ್ಷ್ಮಣ’: ಹಿಪ್ಪರಗಿ ಸಿದ್ಧರಾಮ್,

ಗಾಂಧಿಯವರ ಅಸಹಕಾರ ಚಳುವಳಿಯ ಕರೆಗೆ ಓಗೊಟ್ಟ ಫಲವಾಗಿ ಹಲವರು ಸ್ಥಳೀಯ ಮಟ್ಟದಲ್ಲಿ ಕರನಿರಾಕರಣೆ, ಸರಕಾರಿ ಖಜಾನೆಗಳ ಲೂಟಿ, ಶ್ರೀಮಂತರ ಸ್ವತ್ತನ್ನು ದೋಚಿಕೊಂಡು ಬಡವರಿಗೆ ಹಂಚುವುದು ಮುಂತಾದವುಗಳನ್ನು ಮಾಡುತ್ತಾ ಆಗಿನ ಸರಕಾರಗಳಿಗೆ ಸವಾಲಾಗಿರುವ ಸಂಗತಿ ಇತಿಹಾಸದಲ್ಲಿ ದಾಖಲಾಗಿದೆ. ದೇಶದ ಸ್ವಾತಂತ್ರ್ಯ ಸಮರದ ಇತಿಹಾಸವನ್ನು ಅವಲೋಕಿಸಿದಾಗ, ಜನನಾಯಕರ ಜನಾಂದೋಲನಗಳು, ಕಾನೂನುಬದ್ಧ ಚಳುವಳಿಗಳು ಒಂದೆಡೆಯಾದರೆ ಜಾಗೃತ ಯುವಮನಸ್ಸುಗಳು, ಆದಿವಾಸಿಗಳ ರಕ್ತಸಿಕ್ತ ಹೋರಾಟದಲ್ಲಿ ಸ್ವ್ವಾತಂತ್ರ ಸಮರದ ಗಂಗೆಯ ಪ್ರವಾಹಕ್ಕೆ ಸಾವಿರ ತೊರೆಗಳು ಸೇರಿಕೊಂಡು ಬಿಸಿನೆತ್ತಿರಿನ ತರ್ಪಣದಿಂದ ತಾಯ್ನೆಲದ ಮುಕ್ತಿಗಾಗಿ ಅನ್ಯಾಯದ ವಿರುದ್ಧ ಸಿಡಿದೆದ್ದು … Read more

ಸಾಮಾನ್ಯ ಜ್ಞಾನ (ವಾರ 51): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಹೋಮಿಯೋಪತಿ ವೈದ್ಯ ಪದ್ಧತಿಯ ಜನಕ ಯಾರು? ೨.    ಅಲ್ಯೂಮಿನಿಯಂ ಲೋಹದ ಅದಿರು ಯಾವುದು? ೩.    ರಾಷ್ಟ್ರೀಯ ಲಾಂಛನವನ್ನು ಭಾರತ ಸರ್ಕಾರವು ಅಳವಡಿಸಿಕೊಂಡ ವರ್ಷ ಯಾವುದು? ೪.    ರಘುಪತಿ ಇದು ಯಾರ ಅಂಕಿತನಾಮವಾಗಿದೆ? ೫.    ಮೇಣದ ಬತ್ತಿಯನ್ನು ತಯಾರಿಸಲು ಬಳಸುವ ಮೇಣ ಯಾವುದು? ೬.    ಮೈಸೂರು – ಕರ್ನಾಟಕ ಎಂದು ನಾಮಕರಣಗೊಂಡ ವರ್ಷ ಯಾವುದು? ೭.    ಜೀವಿಗಳ ಮೂಲಘಟಕವನ್ನು ಜೀವಕೋಶ ಎಂದು ಹೆಸರಿಸಿದ ವಿಜ್ಞಾನಿ ಯಾರು? ೮.    ಅಸ್ಸಾಮಿ ಲೇಖಕ ಬಿ.ಕೆ.ಭಟ್ಟಾಚಾರ್ಯರವರ ಯಾವ ಕೃತಿಗೆ ಜ್ಞಾನಪೀಠ … Read more