ಅಂಗೈ ರೇಖೆಗಳಲ್ಲಿ ನದಿಗಳನ್ನು ಹರಿಸುವ ಕಾವ್ಯ ಕಡಮೆ: ನಾಗರಾಜ್ ಹರಪನಹಳ್ಳಿ

ಯುವ ಪ್ರತಿಭೆ  ಕಾವ್ಯ ಕಡಮೆಗೆ ೨೦೧೪ನೇ ಸಾಲಿನ ಕೇಂದ್ರ  ಸಾಹಿತ್ಯ ಅಕಾಡೆಮಿ ಯುವಪುರಸ್ಕಾರ ದೊರೆತಿದೆ. ೫೦ ಸಾವಿರ ರೂ. ಬಹುಮಾನ ರೂಪದಲ್ಲಿ ಸಹ ಸಿಗಲಿದೆ. ಈ ಪುರಸ್ಕಾರಕ್ಕೆ ಕಾರಣವಾದುದು ಆಕೆಯ  ‘ಧ್ಯಾನಕೆ ತಾರೀಖಿನ ಹಂಗಿಲ್ಲ’ ಎಂಬ ಮೊದಲ ಕವಿತಾ ಸಂಕಲನ. ಕುತೂಹಲದಿಂದಲೇ ಆ ಕವಿತಾ ಸಂಕಲನವನ್ನು ಕೈಗೆತ್ತಿಕೊಂಡು ಓದಿದರೆ ಅಲ್ಲಿನ ಭಾವಲೋಕ ಮತ್ತು ಮನಸ್ಸೊಂದು ತನ್ನ ಸುತ್ತಲ ಜಗತ್ತಿಗೆ ತೆರೆದುಕೊಳ್ಳುವ ಬಗೆ ಒಡೆದು ಕಾಣಿಸುತ್ತದೆ. ಕವಿತೆಗಳನ್ನು ಕಟ್ಟುವ ಬಗೆಯಲ್ಲೂ ತಾಜಾತನ ಮತ್ತು ಪ್ರತಿಮೆಗಳನ್ನು ಕಟ್ಟುವ ಬಗೆ ಸೊಗಸಾಗಿದೆ. … Read more

ಕಾಣೆಯಾದ ಕೈನಿ: ವಾಸುಕಿ ರಾಘವನ್

ಮಂತ್ರಿ ಮಾಲ್ ಇಂದ ಹೊರಗೆ ಬಂದಾಗ ರಾತ್ರಿ ಎಂಟೂ ಇಪ್ಪತ್ತು ಆಗಿತ್ತು. ಹಿಂದಿನ ದಿನ ಆಲ್ಟರೇಶನ್ನಿಗೆ ಕೊಟ್ಟಿದ್ದ ಪ್ಯಾಂಟ್ ಇಸ್ಕೊಂಡು ಬರೋಕೆ ಕೇವಲ ಹದಿಮೂರು ನಿಮಿಷ ತೆಗೆದುಕೊಂಡಿತ್ತು. ಕೈಯಲ್ಲಿದ್ದ ಹೆಲ್ಮೆಟ್ಟನ್ನು ಗುರಾಣಿಯಂತೆ ಬಳಸಿ, ಸಂಪಿಗೆ ರೋಡಿನ ನಾನ್ ಸ್ಟಾಪ್ ವಾಹನಗಳೆಂಬ ಚಕ್ರವ್ಯೂಹವನ್ನು ಭೇದಿಸಿಕೊಂಡು ಗೋಕುಲ್ ಹೋಟೆಲ್ ಮುಂದೆ ಬಂದೆ. ಹಿತವಾದ ಬೆಂಗಳೂರಿನ ತಂಗಾಳಿ ಮುಖಕ್ಕೆ ಬಡಿದು ಆ ದಿನದ ಸುಸ್ತೆಲ್ಲಾ ಒಂದು ಕ್ಷಣ ಮಾಯವಾದಂತೆ ಅನಿಸಿತು. ನಾನು ಗಾಡಿ ನಿಲ್ಲಿಸಿದ್ದ ಜಾಗಕ್ಕೆ ಬಂದು ನಿಂತಾಗ ಅಲ್ಲಿನ ದೃಶ್ಯ … Read more

ಫಾರ್ ಎವ್ರಿಥಿ೦ಗ್ ಎಲ್ಸ್: ಆದರ್ಶ ಸದಾನ೦ದ ಅರ್ಕಸಾಲಿ

"ಪಕ್ಷಿವೀಕ್ಷಣೆ ಭಾಗ 3"  ಇಲ್ಲಿಯವರೆಗೆ ಬಣ್ಣ ಬಣ್ಣದ ಪಕ್ಷಿಗಳ ಅ೦ದ-ಚೆ೦ದ, ಮತ್ತು ಅವುಗಳ ದೇಹ-ಕೊಕ್ಕು-ರೆಕ್ಕೆ-ಕಾಲುಗಳ ರಚನೆ ಅಭ್ಯಸಿಸಲು 'DSLR ಕ್ಯಾಮೆರ' ಮತ್ತು 'ZOOM ಲೆನ್ಸ್' ಜೊತೆಗೆ ಪಕ್ಷಿಗಳ ವಿವರ ಹೊ೦ದಿರುವ 'ಮಾಹಿತಿ ಪುಸ್ತಕ' ಇವೆಲ್ಲ ಅತ್ಯಾವಶ್ಯಕವಾಗಿ ಬೇಕಾದ ಸಾಧನಗಳು. ಅದಲ್ಲದೆ ಪಕ್ಷಿಗಳನ್ನು ವೀಕ್ಷಿಸಲು 'ಆಸಕ್ತಿ' ಮತ್ತು 'ತಾಳ್ಮೆ' ಅನ್ನುವ ವಿರಳವಾದ ಗುಣಗಳು ನೋಡುಗನಲ್ಲಿ ಇರಬೇಕು. ಇವೆಲ್ಲಾ ಇದ್ದರೂ ಕೆಲವೊಮ್ಮೆ ಅದೃಷ್ಟವೂ ಜೊತೆಗಿರಬೇಕು, ಯಾಕೆ೦ದರೆ ಒ೦ದೊ೦ದು ಸಾರಿ, ನೀವೂ ಎಲ್ಲಾ ರೀತಿಯಿ೦ದಲೂ ತಯಾರಾಗಿ, ಪಕ್ಷಿವೀಕ್ಷಣೆಗೆ ಹುರುಪಾಗಿ ಹೋದರೂ ನಿಮಗೆ … Read more

ಅಲ್ಲಿರಲಾಗಲಿ​ಲ್ಲ ಇನ್ನೆಲ್ಲಿಗೂ ಹೋಗಲಿಲ್ಲ: ಅಮರ್ ದೀಪ್ ಪಿ.ಎಸ್.

ಹದಿನೈದಿಪ್ಪತ್ತು  ದಿನದ ಹಿಂದೆ ನನ್ನ ಸ್ನೇಹಿತರೊಬ್ಬರೊಂದಿಗೆ ಬಹಳ ದಿನದ ನಂತರ ಕಲೆತು ಹರಟುತ್ತಿದ್ದೆ.   ಅವನು  ತಾನು  ಕಂಡಂಥ ಕೆಲವರ ಅವಸರದ ನಡುವಳಿಕೆ ಬಗ್ಗೆ ಹೇಳುತ್ತಿದ್ದ;   "ಕೆಲವರನ್ನು ನಾವು ನೋಡಬಹುದು.  ಹುಳ ಹರಿದಾಡಿದಂತೆ ತಿರುಗುತ್ತಿರುತ್ತಾರೆ.  ಯಾವುದೇ ಸಭೆ,  ಸಮಾರಂಭ, ಕಾರ್ಯಕ್ರಮ,  ಉಪನ್ಯಾಸ ತಪ್ಪಿಸಿಕೊಳ್ಳುವುದಿಲ್ಲ.  ಆಯಾಯಾ ಕಾರ್ಯಕ್ರಮಗಳಲ್ಲಿ ತಮ್ಮ ಇರುವಿಕೆಯ ಛಾಪನ್ನು ಬಿಟ್ಟು ಬಂದಿರುತ್ತಾರೆ.  ಆ ಸಮಾರಂಭ ಪೂರ್ಣವಾಗುವವರೆಗೂ ಅಲ್ಲಿರುವುದಿಲ್ಲ. ತಮ್ಮ  ಹಾಜರಿ ಹಾಕಿ ಅವಕಾಶವಿದ್ದರೆ, ನಾಲ್ಕು ಮಾತಾಡಿ, ನೆರೆದಿದ್ದವರೊಂದಿಗೆ  ಆತ್ಮೀಯತೆಯಿಂದ  ಬೆರೆತು ಮತ್ತೊಂದು ಕಾರ್ಯಕ್ರಮದ, ಸಮಾರಂಭದ … Read more

ಏಟುತಿಂದ ಕೈಗಳಿಗೆ ಬಹುಮಾನ ಇಟ್ಟ ಕೈಗಳು: ತಿರುಪತಿ ಭಂಗಿ

        ಅಮ್ಮನಿಗೆ ಗೊತ್ತಾದ್ರೆ ಸತ್ತೆ ಹೋಗುತ್ತಾಳೆ ಅಂತ ಅಂಜಿ  ಹನುಮ ತಾನು ಸ್ಕೂಲಲ್ಲಿ ಗಣಿತ ಪೇಲಾದ ವಿಷಯವನ್ನು ಗೌಪ್ಯವಾಗಿಯೇ  ಕಾಯ್ದುಕೊಂಡಿದ್ದ. ಅಂದಿನಿಂದ ಯಾಕೋ ಅವನು ಸರಿಯಾಗಿ ಊಟಮಾಡುತಿರಲಿಲ್ಲ, ಕುಂತಲ್ಲಿ ಕೂಡುತಿರಲಿಲ್ಲ, ಪುಸ್ತಕದ ಸಹವಾಸವೇ ಸಾಕೆನಿಸದಂತಾಗಿ ಹನಿಗೆ ಕೈಹಚ್ಚಿಕೊಂಡು ಚಿಂತೆಯ ಮಡಿಲಿಗೆ ಜಾರಿದ್ದ. ಸುಳ್ಳು ಹೇಳಬಾರದೆಂದು  ಶಾಲೆಯಲ್ಲಿ ಕನ್ನಡಾ ಶಿಕ್ಷಕರು ಸಾವಿರ ಸಲ ಶಂಕಾ ಊದಿದ್ದು ಅರಿವಾಗಿ, ದೇವರಂತಾ ಅಮ್ಮನಿಗೆ ಸುಳ್ಳು ಹೇಳಿದಿನಲ್ಲ ಅಂತ ಮನಸಿಗೇಕೋ ನಾಚಿಕೆ ಅನಿಸಿತು.  ವಾರ್ಷಿಕ ಪರೀಕ್ಷೆಯಲ್ಲಿ ಕಂಡಿತಾ ಪಾಸಾಗೊದಿಲ್ಲ … Read more

ಒಂದು ಮುತ್ತಿನ ಕತೆ: ಪ್ರಶಸ್ತಿ

ನಿಮ್ಗೆಲ್ಲಾ ದೀಪಾವಳಿ ಶುಭಾಶಯಗಳು ಅಜ್ಜಿ. ಆರೋಗ್ಯ ಚೆನ್ನಾಗಿ ನೊಡ್ಕೋಳಿ. ಹೋಗ್ಬರ್ತೀವಿ. ಹೂಂ ಕಣಪ್ಪ. ಥ್ಯಾಂಕ್ಸು.ನಿಮ್ಗೂ ಶುಭಾಶಯಗಳು. ಸರಿ ಅಜ್ಜಿ ಬರ್ತೀವಿ. ನಮಸ್ಕಾರ ಮಾಡ್ತೀವಿ ತಡೀರಿ ಅಂತ ಕಾಲು ಮುಟ್ಟಿ ನಮಸ್ಕಾರ ಮಾಡಿದ್ರೆ ನೂರ್ಕಾಲ ಚೆನ್ನಾಗಿ ಬಾಳಿ ಅಂದ್ರು ಎಂಭತ್ನಾಲ್ಕರ ಹೊಸ್ತಿಲಲ್ಲಿದ್ದ ಅಜ್ಜಿ. ತಡಿ ಮೊಮ್ಮಗನೆ ಅಂತ ಸುಗುಣಜ್ಜಿ  ಹತ್ತಿರ ಬಂದಾಗ ಏನು ಹೇಳ್ಬೋದಪ್ಪಾ ಅನ್ನೋ ಕುತೂಹಲ ನನಗೆ. ಬಾಚಿ ತಪ್ಪಿದ ಅಜ್ಜಿ ಕೆನ್ನೆಗೊಂದು ಸಿಹಿಮುತ್ತಿನ ಮುದ್ರೆಯೊತ್ತಿಬಿಡೋದೇ ? ! ಅಲ್ಲಿದ್ದಿದ್ದು ಅವ್ರಿಬ್ರೇ ಅಲ್ಲ.  ಸಲೋನಿ ಅಜ್ಜಿ. ಆನೇಕಲ್ಲಿನಜ್ಜಿ, … Read more

ಮೂರು ಕವಿತೆಗಳು: ಶಿವರಾಂ ಎಚ್. ಆಶಾ ದೀಪ, ಅಕ್ಷತಾ ಕೃಷ್ಣಮೂರ್ತಿ

ನೀనిಲ್ಲದ ದಿನಗಳಲಿ ಮೌನವಾಗಿವೆ ಭಾವಗಳು ಮ್ಲಾನವಾಗಿವೆ ಕನಸಿನ ಬಣ್ಣಗಳು ಹೃದಯದ  ಸರಸಿಯಲ್ಲೇ ಅರಳಿದ ತಾವರೆಯ ಹೂಗಳು. ನೀನಿಲ್ಲದ ದಿನಗಳಲಿ ಇರುಳು ತಪ್ತವಾಗಿದೆ; ಪ್ರೀತಿಯ ಇನಿದನಿಗಳು ಸೊಂಪಾಗಿ ಹನಿಯಾಗಿ ತೊಟ್ಟಿಕ್ಕಲಾಗದೇ ಬತ್ತಿಹೋಗಿವೆ ಪಿಸು ಮಾತಿನ ಕುಸುಮಗಳು. ಹ್ಞಾಂ! ಹಾಗೂ ಪಿಸುಗುಟ್ಟಿ ನುಡಿಯಲಾಗದೆ ಹ್ಞುಂ, ಹೀಗೂ ಬಿಗುವಿಟ್ಟು ಸವಿ ಹೀರಲಾಗದೆ ಒಣಗಿವೆ ಚೆಂದುಟಿಗಳು; ಹೊರಗಿನ ನೋವಿನಲ್ಲೂ ಸುಖಿಸಿ ಇಹ ಮರೆಯಲೆಳೆಸುವ ಒಳಗಿನ ಅಂಗಗಳು  ತಟ್ಟನೆ ಕಾವೇರಿದರೂ ತಂಪಾಗದಿವೆ. ಗೆಳೆಯಾ, ಅಂದಿಗೆ ಬೆದೆ ಬಂದ ಸೊಕ್ಕಿನಲಿ ಹೆಡೆಯಾಡಿಸುತ್ತ ತಪ್ತವಾಗಿ ಹೋದ ಕಾಮನೆಗಳೆಲ್ಲ … Read more

ಕಾಡ ಹಕ್ಕಿ: ಅಖಿಲೇಶ್ ಚಿಪ್ಪಳಿ

ಒಂದಾನೊಂದು ಕಾಲದಲ್ಲಿ ದೊಡ್ಡ ಪಟ್ಟಣದಲ್ಲಿ ಒಬ್ಬ ಶ್ರೀಮಂತ ವ್ಯಾಪಾರಿಯಿದ್ದ. ಒಂದು ದಿನ ವ್ಯಾಪಾರ ನಿಮಿತ್ತ ಬೇರೆ ಊರಿಗೆ ಹೋಗಲು ಕಾಡಿನ ಮಾರ್ಗವಾಗಿ ಹೊರಟ. ಅಲ್ಲೊಂದು ದಟ್ಟ ಕಾಡು, ಹಕ್ಕಿಗಳ ಕಲರವ, ಮಂಗಗಳ ಕೂಗು, ಜಿಂಕೆಗಳ ನೆಗೆದಾಟ, ನವಿಲಿನ ಕೇಕೆ ಹೀಗೆ ಆ ಕಾಡೊಂದು ಸ್ವರ್ಗಸದೃಶವಾಗಿತ್ತು. ಕಾಡಿನ ಸೌಂದರ್ಯ ಆ ವ್ಯಾಪಾರಿಯನ್ನು ದಂಗುಗೊಳಿಸಿತ್ತು. ಆಗ ವ್ಯಾಪಾರಿಯ ಕಣ್ಣಿಗೊಂದು ಸುಂದರವಾದ ಪಕ್ಷಿ ಕಣ್ಣಿಗೆ ಬಿತ್ತು. ನಾನಾ ತರಹದ ಗಾಢ ಬಣ್ಣಗಳಿಂದ ಕೂಡಿದ ಹಕ್ಕಿಯನ್ನು ನೋಡಿದ ವ್ಯಾಪಾರಿ ಹಕ್ಕಿ ಎಲ್ಲೆಲ್ಲಿ ಹಾರುತ್ತಾ … Read more

ಈ ಬಂಧಗಳು..ಸಂಬಂಧಗಳು..: ಪದ್ಮಾ ಭಟ್, ಇಡಗುಂದಿ.

                  ನೀನಿಲ್ಲದೆಯೇ ನಾ ಹೇಗಿರಲಿ.. ನಿನ್ನೊಂದಿಗೇ ಎಂದಿಗೂ ಇರಬೇಕು ಅಂಥ ಅನಿಸುತ್ತೆ ಕಣೇ.. ನೀನಿಲ್ಲದ ಕ್ಷಣವನ್ನು ಊಹಿಸಿಕೊಳ್ಳಲೂ ಆಗುವುದಿಲ್ಲ.. ನಿನ್ನಂತಹ ಗೆಳತಿ ಈ ಜನ್ಮದಲ್ಲಿ ಮತ್ತೆ ಸಿಗಲಾರದೇನೋ ಎಂದು ಗೆಳತಿಯೊಬ್ಬಳು ಬೀಳ್ಕೊಡುವಾಗ ಹೇಳಿದ ನೆನಪು. ಆ ಸಮಯಕ್ಕೆ ಆ ದಿನ ಹಾಗೆ ಅನ್ನಿಸಿದ್ದೂ ಸುಳ್ಳಲ್ಲ.. ಒಂದಷ್ಟು ದಿವಸಗಳ ಕಾಲ, ಆತ್ಮೀಯತೆಯಿಚಿದ ಇದ್ದವರಿಗೆ ವಿದಾಯ ಹೇಳುವಾಗ ನೀನಿಲ್ಲದೇ ನಾನಿರಲು ಸಾಧ್ಯವೇ ಇಲ್ಲವೇನೋ ಎಂಬಷ್ಟು ಬೆಸೆದುಕೊಂಡಿರುತ್ತೇವೆ..ಆದರೆ ಈ ಕಾಲ ಅನ್ನೋದು … Read more

ಆಸ್ಪತ್ರೆಯಲ್ಲಿ ಕಂಡ ದೃಶ್ಯಗಳು: ಶರತ್ ಹೆಚ್.ಕೆ.

ಆಸ್ಪತ್ರೆಯಲ್ಲಿ ಕಂಡ ದೃಶ್ಯಗಳು ಆಸ್ಪತ್ರೆ ಎಂಬ ಜಗದೊಳಗಿನ ಮರಿಜಗತ್ತಿಗೆ ಇರುವ ಮುಖಗಳು ಹತ್ತು ಹಲವು. ನೋವು-ನಲಿವು, ಮಾನವೀಯ-ಅಮಾನವೀಯ ಬಣ್ಣಗಳು ಅಲ್ಲಿನ ಗೋಡೆಯ ತುಂಬ ಆವರಿಸಿಕೊಂಡಿವೆ. ಆಸ್ಪತ್ರೆಯ ಅಂಗಳದಲ್ಲಿ ನನ್ನ ಕಣ್ಣು ಚಿತ್ರಿಸಿಕೊಂಡ ಕೆಲ ಕಪ್ಪು ಬಿಳುಪಿನ ದೃಶ್ಯಗಳು ಇಲ್ಲಿವೆ. ದೃಶ್ಯ ೧: ಜಗತ್ತಿಗೆ ಹೊಸ ಜೀವವೊಂದರ ಆಗಮನವಾಗಿದೆ. ಅದ ಕಂಡು ಅಲ್ಲಿರುವವರ ಮನದಿಂದ ಹರ್ಷದ ಹೊನಲು ಹೊಮ್ಮುತ್ತಿದೆ. ಅಲ್ಲೇ ಸನಿಹದಲ್ಲಿ ಹಿಂದೆಂದೋ ಜಗತ್ತಿಗೆ ಬಂದು, ಹಲವರ ಮನದಲ್ಲಿ ಸಂಭ್ರಮದ ತೇರು ಎಳೆದಿದ್ದ ಜೀವ ಜಗದ ವ್ಯವಹಾರ ಮುಗಿಸಿ, … Read more

“ಜೀವನದಲ್ಲಿ ಗುರಿ ಇರಲಿ”: ಹೊರಾ.ಪರಮೇಶ್ ಹೊಡೇನೂರು

ಅಂದು ತರಗತಿಯಲ್ಲಿ ಜೀವನ ಮೌಲ್ಯಗಳ ಬಗ್ಗೆ ಮಕ್ಕಳಿಗೆ ಹೇಳುವಾಗ, ಮುಂದೆ ಯಾರ್ಯಾರು ಏನಾಗಲು ಬಯಸುತ್ತೀರಿ? ಎಂದು ಕೇಳಿದೆ.ಕೆಲವರು ಮಾಮೂಲಿಯಂತೆ ಡಾಕ್ಟರ್, ಇಂಜಿನಿಯರ್, ಪೊಲೀಸ್, ಲಾಯರ್, ಕವಿ, ಬರಹಗಾರ, ಮುಖ್ಯಮಂತ್ರಿ, ಶಿಕ್ಷಕ…ಹೀಗೆ ಅನೇಕ ಆಯ್ಕೆಗಳನ್ನು ತಮ್ಮ ಅಭಿಲಾಷೆಯಂತೆ ಹೇಳಿಕೊಂಡರು. ಶಹಬ್ಬಾಸ್ ಗಿರಿ ಕೊಟ್ಟು, ಅವೆಲ್ಲವನ್ನು ಆಗಬೇಕಾದರೆ ಏನು ಪೂರ್ವ ತಯಾರಿ ಮಾಡಿಕೊಳ್ಳಬೇಕೆಂಬುದು ನಿಮಗೇ ಗೊತ್ತೇ ಎಂಬ ನನ್ನ ಮರು ಪ್ರಶ್ನೆಗೆ ಅವರು ತಲೆಯಾಡಿಸಿದರು. ಅವರಿಗ ವಿಷಯ ಮನದಟ್ಟು ಮಾಡಿಕೊಡಲು ಈ ಉದಾಹರಣೆ ಹೇಳಿದೆ. ಪತ್ರಿಕೆಗಳಲ್ಲಿ ನನ್ನ ಕತೆ, ಚುಟುಕ, … Read more

ಸಾಮಾನ್ಯ ಜ್ಞಾನ (ವಾರ 50): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಕೇಂದ್ರ ಸಾಹಿತ್ಯ ಅಕಾದೆಮಿ ನೀಡುವ ಯುವ ಪುರಸ್ಕಾರ ಕನ್ನಡದಲ್ಲಿ ಮೊದಲಿಗೆ ಯಾರಿಗೆ ದೊರಕಿದೆ? ೨.    ಕೋಲಂಬಸ್ ಪ್ರಪಂಚ ಯಾತ್ರೆಗೆ ಬಳಸಿದ ಹಡುಗಿನ ಹೆಸರೇನು? ೩.    ಮನುಷ್ಯನು ಹೀರುವ ಆಮ್ಲಜನಕದಲ್ಲಿ ಮೆದುಳು ಬಳಸಿಕೊಳ್ಳುವ ಶೇಖಡವಾರು ಪ್ರಮಾಣವೆಷ್ಟು? ೪.    ಹೊಗೆಸೊಪ್ಪನ್ನು ಭಾರತಕ್ಕೆ ಪರಿಚಯಿಸಿದ ದೇಶ ಯಾವುದು? ೫.    ವೇರಿಯಬಲ್ ಎನರ್ಜಿ ಸೈಕ್ಲೋಟ್ರಾನ್ ಸೆಂಟರ್ ಪರಮಾಣು ಸಂಶೋಧನಾ ಕೇಂದ್ರ ಎಲ್ಲಿದೆ? ೬.    ಸಿಮಿಲಿಪಾಲ್ ಹುಲಿ ಅಭಯಾರಭಣ್ಯ ಯಾವ ರಾಜ್ಯದಲ್ಲಿದೆ? ೭.    ರಂಗವಿಠಲ ಇದು ಯಾರ ಅಂಕಿತನಾಮವಾಗಿದೆ? ೮.   … Read more