ಮನಸು ಜಿಜ್ಞಾಸೆಗಳ ಹುತ್ತ: ಹೃದಯಶಿವ

'ಈ ಹಾಡನ್ನು ಬೇರೆ ಯಾರಿಂದಲಾದರೂ ಬರೆಸಿಬಿಡಿ ಪ್ಲೀಸ್, ನನ್ನಿಂದ ಸಾಧ್ಯವಾಗುತ್ತಿಲ್ಲ' ಎಂದು ಶ್ರೀನಗರ ಕಿಟ್ಟಿ ಅಭಿನಯಿಸುತ್ತಿರುವ ಚಿತ್ರವೊಂದರ ಸಂಗೀತ ನಿರ್ದೇಶಕರೊಬ್ಬರಿಗೆ ನಾನು ತಿಳಿಸಿದಾಗ ನಿನ್ನೆ ಸಂಜೆಯ ಗಡಿ ದಾಟಿ ರಾತ್ರಿ ಆವರಿಸಿತ್ತು. ಇಷ್ಟಕ್ಕೂ ಇತ್ತೀಚಿಗೆ ನನ್ನ ಆರೋಗ್ಯ ಆಗಾಗ ಕೈ ಕೊಡುತ್ತಿರುತ್ತದೆ. ನಾನು ಲವಲವಿಕೆಯಿಂದಿರಲು ಎಷ್ಟೇ ಪ್ರಯತ್ನಿಸಿದರೂ ಜ್ವರ, ಶೀತ, ಕೆಮ್ಮು, ಮೈ ನೋವು ಅಡ್ಡಿಯುಂಟುಮಾಡುತ್ತವೆ. ಅಲ್ಲದೆ ಕಳೆದ ವಾರ ಪೂರ್ತಿ ಬಿಡುವಿಲ್ಲದೆ ಬರೆದಿದ್ದೆ. ಸಮಯಕ್ಕೆ ಸರಿಯಾಗಿ ಊಟ, ನಿದ್ರೆ, ವಿಶ್ರಾಂತಿ ಇರಲಿಲ್ಲ. ಅದು ನೆಪವಾದರೂ ಸದಾ … Read more

ಎಲ್ಲೋ ಹುಡುಕಿದೆ ಇಲ್ಲದ ದೇವರ: ಹನುಮಂತ ಹಾಲಿಗೇರಿ ಬರೆದ ಕತೆ

ಊರಾಗ ಸಿಕ್ಕಾಪಟ್ಟಿ ಮಳೆಯಾಗಿ ಎಲ್ಲ ಮನೆ ಬಿದ್ದಾವು. ನಮ್ಮ ಮನಿನೂ ಸೊರಾಕ ಹತೈತಿ. ಈ ಸಲ ಊರಿಗೆ ಬಂದು ಹೋಗಪಾ ಎಂದು ಅವ್ವ ಹೇಳಿದ್ದು ನೆನಪಾಗಿ ಈ ಸಲ ಹಬ್ಬದ ಸೂಟಿ ಉಪಯೋಗ ಮಾಡಿಕೊಳ್ಳುವುದಕ್ಕೋಸ್ಕರವಾದರೂ ಊರಿಗೆ ಹೋಗಲೇ ಬೇಕೆನಿಸಿದ್ದರಿಂದ ರಾತ್ರಿ ಕೆಲಸ ಮುಗಿದ ಮೇಲೆ ನೇರವಾಗಿ ರೂಮಿಗೆ ಹೋಗಿ ಒಂದೆರಡು ಪ್ಯಾಂಟು-ಶರಟುಗಳನ್ನು ಬ್ಯಾಗಿಗೆ ತುರುಕಿಕೊಂಡು ಬಸ್ಸು ಹತ್ತಿದೆ.  ಬೆಳಗ್ಗೆ ಬಸ್ ಇಳಿದಾಗ ಬಸ್ ನಿಲ್ದಾಣದ ಛಾವಣಿಯೊಳಗ ಮತ್ತು ರಡ್ಡೆರ ಕಾಂಪ್ಲೆಕ್ಸ್‌ನೊಳಗ ಊರ ಜನ ಅನ್ನ ಬೇಯಿಸಿಕೊಳ್ಳುತ್ತಿದ್ದುದು ಕಂಡು … Read more

ಮೂಕಪ್ರೇಮ:ಅನಿತಾ ನರೇಶ್ ಮಂಚಿ ಅಂಕಣ

ಮನುಷ್ಯ ಕೂಡಾ ಪ್ರಾಣಿಗಳ ಕೆಟಗರಿಗೆ ಸೇರುತ್ತಾನಾದರೂ ತಾನು ಅವರಿಂದ ಮೇಲೆ ಎಂಬ ಗರಿಯನ್ನು ತಲೆಯ ಮೇಲೆ ಇಟ್ಟುಕೊಂಡೇ ಹುಟ್ಟಿ ಬರುತ್ತಾನೆ. ತಾನು ಎಲ್ಲಾ ಪ್ರಾಣಿಗಳನ್ನು ನನ್ನ ತಾಳಕ್ಕೆ ಕುಣಿಸಬಲ್ಲೆ ಎಂಬ ಹಮ್ಮು ಅವನದ್ದು. ಹಲವು ಬಾರಿ ಇದು ಸತ್ಯ ಎನ್ನಿಸಿದರೂ ಅವುಗಳೂ ಕೂಡಾ  ಬುದ್ಧಿವಂತಿಕೆಯಲ್ಲಿ ನಮ್ಮಿಂದ ಕಡಿಮೆಯಿಲ್ಲ ಎಂಬುದೇ ಪರಮಸತ್ಯ. ಇದಕ್ಕೆ ಹಲವು ನಿದರ್ಶನಗಳು ಅವುಗಳ ಒಡನಾಟವನ್ನಿಟ್ಟುಕೊಂಡವರ ನಿತ್ಯದ ಬದುಕಿನಲ್ಲಿ ಸಿಕ್ಕೇ ಸಿಗುತ್ತವೆ. ಇದರಲ್ಲಿ ಕೆಲವೊಂದು ನಗು ತರಿಸಿದರೆ ಇನ್ನು ಕೆಲವು ಪೇಚಿಗೆ ಸಿಕ್ಕಿಸುತ್ತವೆ.  ನಮ್ಮ ಮನೆಯ … Read more

ಸಾಮಾಜಿಕ ಕ್ರಾಂತಿಯ ಹರಿಕಾರ ಶ್ರೀ ನಾರಾಯಣ ಗುರು:ಅಶೋಕ್ ಕುಮಾರ್ ವಳದೂರು

"ಒಂದೇ ಜಾತಿ, ಒಂದೇ ಧರ್ಮ,ಒಬ್ಬನೇ ದೇವರು" ಎಂದು ಮನುಕುಲ ಕುಟುಂಬಕ್ಕೆ ಸಾರಿ ವಿಶ್ವ ಮಾನವ ಸಂದೇಶವನ್ನು ಕೇರಳದಿಂದ ಪ್ರಾರಂಭ ಮಾಡಿ ದೇಶದೆಲ್ಲೆಡೆ ಹಬ್ಬಿಸಿದ ಮಹಾನ್ ಸಂತ ಶ್ರೀ ನಾರಾಯಣ ಸ್ವಾಮಿ. "ಯಾರನ್ನೂ ದ್ವೇಷಿಸ ಬೇಡಿ, ಸಂಘಟನೆಯಿಂದ, ಶಿಕ್ಷಣದಿಂದ, ಉದ್ದಿಮೆಗಳನ್ನು ಸ್ಥಾಪಿಸುವ ಮೂಲಕ ದೇಶದ ಉನ್ನತಿಯನ್ನು ಸಾಧಿಸೋಣ" ಎಂದು ಒಂದು ಶತಮಾನಗಳ ಹಿಂದೆ ಈ ಜನಕ್ಕೆ ಸಾರಿದ ಗುರು ನಾರಾಯಣರ ಸಂದೇಶವು ವಾಸ್ತವದ ಅರ್ಥವನ್ನು ಪಡೆಯುವುದು ನಾವು ಕಾಣುತ್ತೇವೆ. ಹದಿನೆಂಟು ಹತ್ತೊಂಭತ್ತನೆಯ ಶತಮಾನಗಳು ಈ ನಾಡಿನಲ್ಲಿ ಐರೋಪ್ಯರು ವಸಾಹತುಗಳನ್ನು … Read more

ಪ್ರತಿಮೆಗಳ ಮೂಲಕ ಹೊಸ ಲೋಕಕ್ಕೆ ಸವಾರಿ ಹೊರಟ ಕವಿತೆಗಳು: ಶ್ರೀದೇವಿ ಕೆರೆಮನೆ

ನಿನ್ನ ಕವನಗಳು ಓದುಗರನ್ನು ಬೆಚ್ಚಿ ಬೀಳಿಸದಿದ್ದರೆ ಅವುಗಳಿಂದೇನು ಪ್ರಯೋಜನ ಬೋದಿಲೇರ್ ಹೇಳಿದ ಮಾತುಗಳನ್ನು  ನೆನಪಿಸಲೆಂದೇ ಹೊಸದೊಂದು ಕವನ ಸಂಕಲನ ಹೊರಬಂದಿದೆ. ನಾನು ಪದೇ ಪದೇ ಬೋದಿಲೇರ್ ಎಂದೇ ಕರೆಯುವ ಗೆಳೆಯ ವಿ. ಆರ್ ಕಾರ್ಪೆಂಟರ್ ಕವನ ಸಂಕಲನ ಹೊರಬಂದಿದೆ. ಕವನ ಸಂಕಲನದ ಮೊದಲ ಓದುಗಳಾಗಿ ನಾನೀಗಾಗಲೇ ನನ್ನ ಅನುಭವವನ್ನು ದಾಖಲಿಸಿದ್ದಾಗ್ಯೂ ಕೂಡ ಕಂಪ್ಯೂಟರ್ ಪರದೆಯಲ್ಲಿ ಇಣುಕಿಣುಕಿ ಓದುವುದಕ್ಕೂ, ಕೈಯ್ಯಲ್ಲಿಯೇ ಪುಸ್ತಕ ಹಿಡಿದು ಓದುವ ಸುಖಕ್ಕೂ  ಇರುವ ವತ್ಯಾಸ ಅಗಾಧವಾದದ್ದು. ಹೀಗಾಗಿ ಈಗಿನ ಅನುಭವಗಳು ಮತ್ತೂ ಭಿನ್ನವಾಗಿಯೇ ಇದೆ. … Read more

ಮೂರು ಕವಿತೆಗಳು: ಪ್ರವೀಣ್ ಡಿ. ಕಟೀಲ್, ರಮೇಶ್ ನೆಲ್ಲಿಸರ, ಬಸವರಾಜ ಕದಮ್

ಅಷ್ಟಕ್ಕೂ ಮಳೆಯೆಂದರೆ… ಅವಳೇಕೆ ನೆನಪಾಗುತ್ತಾಳೆ…? ಈ ಮಳೆಗೂ ಈಶಾನ್ಯಕ್ಕೂ ಸಂಬಂಧವಿದೆ, ಮೊದಲ ಈಶಾನ್ಯ ಮಾರುತಗಳೇ ಮೊದಲಮಳೆ ತರುತ್ತವೆ, ಬದುಕಲ್ಲೂ ಅಷ್ಟೇ ಮೊದಲ ಮಳೆ ತಂದವಳು ಈಶಾನ್ಯದವಳು,ಆ ಮುಂಗಾರುಮಳೆ ಇನ್ನೂ ಇದೆ, ಈ ಮೊದಲಪ್ರೇಮವೇ ಹೀಗೆಯೇ, ಎಲುಬಿಲ್ಲದ ನಾಲಗೆ ಬೇಡವೆಂದರೂ ನೋವಿದ್ದ ಹಲ್ಲಿನ ಕಡೆ ಹೊರಳುವ ಹಾಗೆ, ವರ್ಷಾನುಗಟ್ಟಲೆ ಜೊತೆಯಾಗಿದ್ದ ಪ್ರೀತಿ ಏಕಾ ಏಕಿ ಕೈಬಿಟ್ಟು ಹೋದಾಗ ನಡುದಾರಿಯಲ್ಲೇ ಆಗೋ ಆಘಾತಕ್ಕೆ ಶವದಂತಾದ ದೇಹಕ್ಕೆ ನೆತ್ತಿಯ ಮೇಲೆ ಬಿದ್ದ ಮಳೆ ಹನಿ ಮಾತ್ರ ಸಮಾಧಾನ, ಸಾಂತ್ವಾನ ನೀಡಬಲ್ಲುದು, ಪ್ರೀತಿಯೆಂದರೆ … Read more

ಮಂಗನಿಂದ ದಾನವ:ಅಖಿಲೇಶ್ ಚಿಪ್ಪಳಿ ಅಂಕಣ

ತಳವಾರ ತಿಮ್ಮ ಬೆಳಗಿನ ಗಂಜಿ ಕುಡಿದು, ನಾಡಕೋವಿಯನ್ನು ಹೆಗಲಿಗೆ, ಮಶಿ, ಚರೆ, ಗುಂಡುಗಳ ಚೀಲವನ್ನು ಬಗಲಿಗೆ ಹಾಕಿ ಹೊರಡುತ್ತಿದ್ದಂತೆ, ಅವನ ಹೆಸರಿಲ್ಲದ ಬೇಟೆ ನಾಯಿ ಬಾಲ ಅಲ್ಲಾಡಿಸುತ್ತಾ ತಿಮ್ಮನನ್ನು ಹಿಂಬಾಲಿಸಿತು. ಬೆಳಗಿನಿಂದ ಸಂಜೆಯವರೆಗೂ ಹತ್ತಾರು ಮೈಲು ಸುತ್ತಿ ಮಂಗನನ್ನು ಅಡಿಕೆ ತೋಟದಿಂದ ಓಡಿಸುವುದು ತಿಮ್ಮನ ವೃತ್ತಿ. ಹೀಗೆ ವರ್ಷಗಟ್ಟಲೇ ನಡೆದು-ನಡೆದು ತಿಮ್ಮನ ಅಂಗಾಲು ಗಟ್ಟಿಯಾಗಿದೆ. ಸಣ್ಣ-ಪುಟ್ಟ ಮುಳ್ಳುಗಳು ತಾಗುವುದಿಲ್ಲ. ಹಾಗಾಗಿ ತಿಮ್ಮ ಚಪ್ಪಲಿ ಮೆಟ್ಟುವುದಿಲ್ಲ. ತನ್ನ ಮನೆಯಿಂದ ತೋಟ ಕಾಯುವ ಊರಿಗೆ ಹೋಗಲು ಸುಮಾರು ಒಂದು ಮೈಲಿ … Read more

ಎಲ್ಲ ಬರೆವವರೇ ಆದರೆ ಓದುವವರ್ಯಾರು?: ಪ್ರಶಸ್ತಿ ಪಿ. ಸಾಗರ

  ಇಂಥಾ ಗಂಭೀರ ಪ್ರಶ್ನೆಯ ಬಗ್ಗೆ ಒಂದು ಲೇಖನ ಬೇಕಿತ್ತಾ ಅಂತ ಯೋಚಿಸ್ತಾ ಇದ್ದೀರಾ ? ನೀವಷ್ಟೇ ಅಲ್ಲ. ನಾನೂ ಹಾಗೇ ಯೋಚಿಸಿದ್ದು. ನಾನೇ ಕೆಲ ಘಟನೆಗಳ ನೋಡಿ ಬೇಸತ್ತು, ರೋಸತ್ತು ಇದರ ಬಗ್ಗೆ ಬರೆಯಹೊರಟೆ ಅನ್ನುವುದರ ಬದಲು ಇತ್ತೀಚಿಗಿನ ಕೆಲ ವಿದ್ಯಮಾನಗಳು ಬೇರೆ ವಿಷಯಗಳಿಗಿಂತ ಇದಕ್ಕೇ ಹೆಚ್ಚು ಪ್ರಾಮುಖ್ಯತೆ ಕೊಟ್ಟು ಇದರ ಬಗ್ಗೆಯೇ ಈ ವಾರ ಬರೆಯುವಂತೆ ನನ್ನ ಪ್ರೇರೇಪಿಸಿದವು ಅಂದ್ರೆ ತಪ್ಪಾಗಲಾರದೇನೋ. ಅನಂತಮೂರ್ತಿಗಳ ನಿಧನದ ವೇಳೆ ಚರ್ಚೆಯಾದ ಕೃತಿಗಳಿರಬಹುದು. ಭೈರಪ್ಪನವರ ಯಾನದ ಬಗೆಗಿನ ಪರ-ವಿರೋಧ … Read more

ಹೆಣ-ಹೆಣ್ಣು:ನಳಿನ ಡಿ.

  ಭಾನುವಾರದ ಒಂದು ನಡುಮಧ್ಯಾಹ್ನ ಐದು ಹೆಣ್ತಲೆಗಳು ಲಕ್ಕಮ್ಮ ಕಾಲೇಜಿನ ಅರ್ಧ ಕಟ್ಟಿದ್ದ ಗಿಲಾವು ಮಾತ್ರ ಕಂಡ ಸಿಮೆಂಟ್ ಕಟ್ಟಡದೊಳಗೆ ರಿಂಗಣಿಸದೆ ಸುಮ್ಮನಿದ್ದ ದೂರವಾಣಿಯ ಸುತ್ತಾ ಸಂಭಾಷಿಸುತ್ತಿದ್ದವು. ಹೋದವಾರ ಅದೇ ಜಾಗದಲ್ಲಿ ನಡೆದಿದ್ದ ಅಲ್ಲಿನ ಅಟೆಂಡರನ ನಂಟಸ್ಥಿಕೆಯ ಓಸಿ ವಿವಾಹದ ಗಬ್ಬೆಲ್ಲಾ ಮೂಟೆಯಾಗಿ ಕಾಲೇಜಿನ ಮುಂದೆ ಬಿದ್ದಿದ್ದು, ಕೊಳೆತು ಬರುತ್ತಿದ್ದ ವಾಸನೆಗೆ ಮೂಗು ಮುಚ್ಚಿಕೊಂಡೇ ಅನಿವಾರ್ಯವಾಗಿ ಅಲ್ಲಿ ನೆರೆದಿದ್ದರವರು. ಗುಲ್ಬರ್ಗಾದಿಂದ ತರಭೇತಿಗಾಗಿ ಬಂದು ಅನ್-ಏಡೆಡ್ ಆಗಿದ್ದ ಕಾಲೇಜಿಗೆ ಸೇರಿಕೊಂಡು ಸೈ ಅನ್ನಿಸಿಕೊಳ್ಳಲು ಎಣಗುತ್ತಿದ್ದ ಅರಕೇರಿ, ಮಂಗಳೂರಿನ ಬಳಿ … Read more

ಶಾಲೆ ಬಿಡುವ ಮಕ್ಕಳಿಗೆ ಯಾರು ಹೊಣೆ?:ಕೆ.ಎಂ.ವಿಶ್ವನಾಥ

ಕರ್ನಾಟಕ ರಾಜ್ಯದ ಶಿಕ್ಷಣದಲ್ಲಿ ಗುಣಾತ್ಮಕತೆ ತರಲು, ಗಣನೀಯವಾಗಿ ಶ್ರಮಿಸಲಾಗುತ್ತಿದೆ . ಶಿಕ್ಷಣ ಎಲ್ಲರ ಸೊತ್ತಾಗಬೇಕು. ಪ್ರತಿಯೊಂದು ಮಗು ಶಾಲೆಯ ಆಸರೆಯಲ್ಲಿ ತನ್ನ ಮುಗ್ಧ ಬಾಲ್ಯವನ್ನು ಕಳೆಯಬೇಕು. ಎನ್ನುವ ನಿಟ್ಟಿನಲ್ಲಿ ಹಲವಾರು ಯೋಜನೆಗಳು ಹೊರತರಲಾಗುತ್ತಿದೆ. ಪ್ರತಿಯೊಂದು ಯೋಜನೆಯೂ ಉತ್ತಮ ಅನುಪಾಲನೆ ಮಾಡಿದಾಗ ಮಾತ್ರ, ಶಿಕ್ಷಣದಲ್ಲಿ ಗುಣಾತ್ಮಕತೆ ತರಲು ಸಾಧ್ಯವಾಗುತ್ತದೆ. ಈಗಾಗಲೇ ನಮ್ಮ ರಾಜ್ಯ, ಶಾಲೆ ಬಿಟ್ಟ ಮಕ್ಕಳಲ್ಲಿ ಮೊದಲನೆ ಸ್ಥಾನವನ್ನು ಗಿಟ್ಟಿಸಿಕೊಂಡಿದೆ. ನೂರು ಯೋಜನೆಗಳು ಹೊರತಂದ ರಾಜ್ಯ ಸರಕಾರ, ಪ್ರತಿ ಹಂತದಲ್ಲಿ ಯೋಜನೆಯ ಸೂಕ್ತ ಪರಿಶೀಲನೆಯನ್ನು ಮರೆಮಾಚುತ್ತಿದೆ.  ರಾಜ್ಯದಲ್ಲಿ … Read more

ಸಾಮಾನ್ಯ ಜ್ಞಾನ (ವಾರ 45): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು:  ೧.    ಬಿರ್‍ಲಾ ಟೆಕ್ನಾಲಾಜಿಕಲ್ ಹಾಗೂ ಇಂಡಸ್ಟ್ರೀಯಲ್ ಮ್ಯೂಸಿಯಂ ಎಲ್ಲಿದೆ? ೨.    ಕೆಂಪು ತ್ರಿಕೋನ ಇದು ಯಾವುದರ ಸಂಕೇತವಾಗಿದೆ? ೩.    ಬಿಹಾರದ  ಗಾಂಧಿ ಎಂದು ಕರೆಯಲ್ಪಡುವ ವ್ಯಕ್ತಿ ಯಾರು? ೪.    ಪಂಡರಾಪುರ ಪ್ರಸಿದ್ಧ ಯಾತ್ರಾ ಸ್ಥಳ ಯಾವ ರಾಜ್ಯದಲ್ಲಿದೆ? ೫.    ಶಂಕರದೇವ ಪ್ರಶಸ್ತಿಯನ್ನು ಭಾರತದ ಯಾವ ರಾಜ್ಯ ಸರ್ಕಾರ ಪ್ರತಿಷ್ಟಾಪಿಸಿರುವ ಪ್ರಶಸ್ತಿಯಾಗಿದೆ? ೬.    ಭೂ ಮೇಲ್ಮೈನ ಅತ್ಯಂತ ಕೆಳ ಬಿಂದು ಯಾವುದು? ೭.    ಕಲ್ಯಾಣದಲ್ಲಿ ಅನುಭವ ಮಂಟಪ ಸ್ಥಾಪನೆ ಮಾಡಿದವರು ಯಾರು? ೮.    ಕಕ್ಷೆಯಲ್ಲಿ ಬಂದ ಮೊದಲ … Read more