ಬುಂಡೆದಾಸನೆಂಬ ಹುಚ್ಚಯ್ಯ: ಹೃದಯಶಿವ

  ನಾನು ಹದಿನಾರನೇ ವಯಸ್ಸಿಗೆ ಹಳ್ಳಿಗಳನ್ನು ಬಿಟ್ಟಿದ್ದರೂ ಹಳೆಯ ಪರಿಚಿತರು ಮದುವೆ, ಗೃಹಪ್ರವೇಶ, ನಾಮಕರಣ, ಶಾಲಾಕಾಲೇಜುಗಳ ಸಮಾರಂಭ ಅಥವಾ ಯಾರಾದರು ಸತ್ತರೆ ಕರೆಯುತ್ತಾರೆ; ನನ್ನ ಬೇರುಗಳು ಎಂದಿಗೂ ಹಳ್ಳಿಗಳಲ್ಲಿಯೇ ಇರುವುದರಿಂದ ಇದೆಲ್ಲಾ ಸರ್ವೇ ಸಾಮಾನ್ಯ. ನನಗೆ ಸಾವಿನ ಮನೆಗಳ ಬಗ್ಗೆ ಬೇಜಾರು. ಏಕೆಂದರೆ ನನಗದು ನಾಟಕದ ವಾತಾವರಣದ ನೆನಪು ತರುತ್ತದೆ. ಜೀವಂತವಾಗಿದ್ದಾಗ ಎಷ್ಟೋ ಸಲ ಮಕ್ಕಳ, ಸೊಸೆಯಂದಿರ ಕಾಲು ಕಸವಾಗಿ ಬದುಕಿದ ವೃದ್ಧರ ಹೆಣದ ಮುಂದೆ ಅವರ ಬಂಧುಗಳೆನಿಸಿಕೊಂಡವರೆಲ್ಲಾ ಕೂತು ಗೊಳೋ ಅಂತ ಅಳುವ ಪ್ರೊಫೆಶನಲ್ ಪಾತ್ರಧಾರಿಗಂತೆ … Read more

‘ಮುನ್ನಿ’ಯ ಕಾರ್ ಗ್ರಾಫಿಟಿ: ಆದರ್ಶ ಸದಾನ೦ದ ಅರ್ಕಸಾಲಿ

ಇನ್ನೇನು ಹಾಸ್ಪಿಟಲ್ ಗೆ ಹೋಗ್ಬೇಕು, ಅವಸರದಲ್ಲಿ ಕಾರಿನ ಕೀಲಿಯನ್ನು ತೆಗೆದುಕೊ೦ಡು, ಬ್ಯಾಗನ್ನು ತೆಗೆದುಕೊ೦ಡು ಹೊರಡುವದರಲ್ಲಿದ್ದೆ, ಅಷ್ಟರಲ್ಲಿ ಗೇಟಿನಲ್ಲಿ ನೈಟಿಯಲ್ಲೊ೦ದು ಹೆ೦ಗಸಿನ ಆಕಾರ ಪ್ರತ್ಯಕ್ಷವಾಯಿತು. "ಡಾಕ್ಟ್ರು ಹೋಗುವದರಲ್ಲಿದ್ದೀರಾ?" ಏದುರುಸಿಕೊ೦ಡು ಕೇಳಿತು. "ಹೌದು" ( ಎಪ್ರನ್ ಹಾಕಿ, ಹಾಸ್ಪಿಟಲ್ ಬ್ಯಾಗನ್ನು ಹಾಕಿಕೊ೦ಡು, ಈ ರೀತಿ ವೇಷದಲ್ಲಿ ಮದುವೆ ಮೆರವಣಿಗೆಗಾ ಹೊರಟಿದ್ದೀನಿ? ) "ಒ೦ದ್ನಿಮ್ಷ ತಡಿರಿ, ಸಿಟ್ಟು ಮಾಡ್ಕೋಬೇಡಿ" ಮನಸ್ಸಿನಲ್ಲಿ ಒ೦ದು ರೀತಿಯ ಸಿಟ್ಟು ಬ೦ದರೂ, ಮುಖದಲ್ಲಿ ಅದರ ಗ೦ಧ ಸ್ವಲ್ಪವೂ ಸುಳಿಯದ೦ತೆ, ಮುಗುಳ್ನಗುತ್ತಾ "ಏನಾಗಬೇಕಿತ್ತು? " ಅ೦ತ ನನಗೊತ್ತಿರೋ ಅತೀವ … Read more

ಆ ಆಕೃತಿ…!: ಬಸವರಾಜು ಕ್ಯಾಶವಾರ

ಸಮಯ: ರಾತ್ರಿ 9.10 ಸ್ಥಳ: ಕಸ್ತೂರಬಾ ರಸ್ತೆ, ಕಂಠೀರವ ಕ್ರೀಡಾಂಗಣದ ಹತ್ತಿರ “ಧಗ್” ಅಂತು. ಥೇಟ್ ಬಂಡೆ ಕವನದಂತೆ; ಒಂದು ಬೆಂಕಿ ಕಡ್ಡಿ ತಲೆ ಸುಟ್ಟುಕೊಂಡು ಸತ್ತಿತ್ತು, ಕತ್ತಲಿನ ಜೊತೆ. ತೆಳು ಬಿಳಿ ಬಟ್ಟೆ ಸುತ್ತಿಕೊಂಡಿದ್ದ ಅಪ್ಸರೆಗೆ ಬೆಂಕಿ ಹಚ್ಚಲಾಗಿತ್ತು. ಆ ಅಪ್ಸರೆಯ ತಲೆ ಆ ಕೆಂದುಟಿಗಳನ್ನು ನುಂಗಿ ಹಾಕಿದ್ದವು. ಆ ಎರಡು ಕಣ್ಣುಗಳು ತಣ್ಣಗೆ ರೆಪ್ಪೆ ಬಡಿಯುತ್ತಿದ್ದವು. ಕತ್ತಲಿನ ಮಧ್ಯೆ ಆ ಬಿಳಿಗುಡ್ಡೆಗಳು  ಕಬ್ಬನ್ ಪಾರ್ಕ್ ನ ಕಬ್ಬಿಣದ ಬೇಲಿಯ ಹಿಂದಿನಿಂದ ನನ್ನನ್ನೇ ನೋಡುತ್ತಿದ್ದವು. ಆ … Read more

ಬೆಂಬಿಡದ ಭೂತ: ಗುರುಪ್ರಸಾದ ಕುರ್ತಕೋಟಿ

(ಅತೀಂದ್ರಿಯ ಅನುಭವದ ಕಥೆಗಳು – ಭಾಗ ೬) ಈ ಕಥೆ ನನ್ನ ಸಹೋದ್ಯೋಗಿ ರಮೇಶ ನಾಯಕ ಅವರಿಗಾದ ಅನುಭವದ ಎಳೆಯ ಮೇಲೆ ಹೆಣೆದದ್ದು — ನಾನು ಹುಟ್ಟಿ ಬೆಳೆದು ದೊಡ್ಡವನಾಗಿದ್ದು ಭಟ್ಕಳದಲ್ಲಿ. ನಮ್ಮ ಮನೆಯಿಂದ ಎಡವಿ ಬಿದ್ದರೆ ಸಮುದ್ರ! ಅಂದರೆ ಅದು ಅಷ್ಟು ಹತ್ತಿರದಲ್ಲಿದೆ ಅಂತ ಅರ್ಥ. ಅದು ಬೇರೆಯವರಿಗೆ ಕೇಳೋಕೆ ಚಂದ. ಪರ ಊರಿನಿಂದ ಒಂದೆರಡು ದಿನಕ್ಕೆ ಅಂತ ನಮ್ಮೂರಿಗೆ ಬಂದವರಿಗೆ ಸಮುದ್ರಕ್ಕೆ ಹೋಗಿ  ಸ್ನಾನ ಮಾಡಲು ಅಡ್ಡಿ ಇಲ್ಲ. ಅಲ್ಲೇ ಇರೋವ್ರಿಗೆ ಕಷ್ಟ. ಅದರ … Read more

ಟನ್ನು ಭಾರದ ಖುಷಿ ಹೊರುವಂತಿರಬೇ​ಕು ಟ್ರಿಪ್ಪು: ಅಮರ್ ದೀಪ್ ಪಿ.ಎಸ್.

ಒಂದೇ ಕಡೆ ಅದೇ ಕೆಲಸ, ಅದೇ ರಸ್ತೆ, ಓಡಾಟ, ಮನೆ, ಮಂದಿ, ಮಾತು, ಜೀವನ ಕ್ರಮ ಒಮ್ಮೊಮ್ಮೆ ಬೋರಾಗುತ್ತೆ.   ಆಗಾಗ ಒಂದೆರಡು ದಿನಗಳ ಮಟ್ಟಿಗಾದರೂ ಹೊರಗಡೆ ತಿರುಗಾಡಿ ಬರಬೇಕು. ಹೋಗಿ ಬಂದೆವೆಂದರೆ, ಮನಸ್ಸು ದಿಗ್ಗನೇ ಎದ್ದು "ನಾನ್ ಫ್ರೆಶ್ ಆದ್ನೆಪ್ಪಾ" ಅಂತೇನೂ ಹೇಳುವುದಿಲ್ಲ.  ಆದರೆ, ಗೆಳೆಯರು ಸೇರಿ ರುಟೀನು ತಪ್ಪಿಸಿಕೊಂಡ ಖುಷಿಗೋ ಅಥವಾ ಹೊಸ ಜಾಗ,  ಸಧ್ಯಕ್ಕೆ ಹತ್ತಿರವಿಲ್ಲದ ಕೆಲಸ, ದುಡಿಮೆ, ಟೆನ್ಶನ್ ಎಲ್ಲಾನು ಮರೆತು ಖುಷ್ ಖುಷಿಯಾಗಿ  ಪರಿಸರ, ನದಿ ತೀರ, ಐತಿಹಾಸಿಕ ಸ್ಥಳ, … Read more

ಹುಲಿಯೋ, ಸುಂದರಾಂಗಿಯೋ?: ಜೆ.ವಿ.ಕಾರ್ಲೊ

ಹುಲಿಯೋ, ಸುಂದರಾಂಗಿಯೋ? ಮೂಲ: ಫ್ರ್ಯಾಂಕ್ ಸ್ಟೊಕ್ಟನ್ ಅನುವಾದ: ಜೆ.ವಿ.ಕಾರ್ಲೊ ಬಹಳ ಬಹಳ ವರ್ಷಗಳ ಹಿಂದೆ ಒಬ್ಬ ರಾಜ ರಾಜ್ಯವನ್ನಾಳುತ್ತಿದ್ದ. ತನ್ನ ನೆರೆಯ ಲ್ಯಾಟಿನ್ ಸಾಮ್ರಾಜ್ಯದ ಪ್ರಭಾವದಿಂದಾಗಿ ಅವನು ತೋರಿಕೆಗೆ ನಾಗರಿಕನಾಗಿ ಕಾಣುತ್ತಿದ್ದನಾದರೂ, ಮೂಲತಃ ತುಂಬಾ ಕ್ರೂರಿಯಾಗಿದ್ದ, ಚಂಚಲ ಸ್ವಭಾವದವನಾಗಿದ್ದ. ಯಾವ ಗಳಿಗೆಯಲ್ಲಿ ಅವನ ಯೋಚನೆಗಳು ಹೇಗೆ ತಿರುಗುತ್ತವೆಂದು ಊಹಿಸಲು ಯಾರಿಗೂ ಸಾಧ್ಯವಿರಲಿಲ್ಲ. ಅವನೇ ಅವನ ಆಪ್ತ ಸಲಹಾಕಾರನಾಗಿದ್ದ ಮತ್ತು ಆ ಗಳಿಗೆಯಲ್ಲೇ ತೀರ್ಮಾನಿಸಿ ಜಾರಿಗೊಳಿಸುತ್ತಿದ್ದ. ಅವನ ರಾಜ್ಯಭಾರ ಯಾವುದೇ ಅಡ್ಡಿ ಆತಂಕಗಳಿಲ್ಲದೆ ಸರಾಗವಾಗಿ ನಡೆಯುತ್ತಿದ್ದರೆ ಅವನು ತುಂಬಾ … Read more

ಕ್ರಾಂತಿಯೆಂಬ ಭ್ರಾಂತಿ: ಅಖಿಲೇಶ್ ಚಿಪ್ಪಳಿ

ರೈತನಿಗೆ ಮಣ್ಣಿನ ಮಗ ಎನ್ನುತ್ತಾರೆ. ರೈತ ದೇಶದ ಬೆನ್ನೆಲುಬು ಎಂದು ಹೊಗಳಿದ್ದಾರೆ. ಈ ದೇಶದಲ್ಲಿರುವ ೧೨೦ ಕೋಟಿ ಜನಸಂಖ್ಯೆಯ ಸಿಂಹಪಾಲು ಮಂದಿ ರೈತಾಪಿ ವೃತ್ತಿಯನ್ನೇ ಅವಲಂಬಿಸಿಕೊಂಡು ಬದುಕುತ್ತಿದ್ದಾರೆ. ಆದರೆ ಅನ್ನದಾತನ ಬದುಕು ಹೇಗಿದೆ? ಗ್ರಾಮೀಣ ಭಾರತದ ರೈತ ಹೇಗಿದ್ದಾನೆ? ಪ್ರಪಂಚದ ಎಲ್ಲಾ ಸಾಂಪ್ರಾದಾಯಿಕ ರೈತರ ಬದುಕು ವಾತಾವರಣವನ್ನು ಅವಲಂಭಿಸಿದೆ. ಭಾರತದ ಕೃಷಿ ಪ್ರದೇಶದ ೭೦% ಪ್ರದೇಶ ಮಳೆಯಾಧಾರಿತವಾಗಿದೆ. ಕಾಲ-ಕಾಲಕ್ಕೆ ಮಳೆಯಾದರೆ ಮಾತ್ರ ರೈತನ ಬದುಕು ತುಸು ಹಸನಾಗುತ್ತದೆ. ಬೀಜ ಬಿತ್ತುವಾಗ ಬರಗಾಲ, ಕೊಯ್ಲಿನ ಸಂದರ್ಭದಲ್ಲಿ ಅತಿವೃಷ್ಟಿಯಾದಲ್ಲಿ ರೈತನ … Read more

ಮೂರು ಕವಿತೆಗಳು: ಚೆನ್ನ ಬಸವರಾಜ್, ನವೀನ್ ಪವಾರ್, ವಾಮನ ಕುಲಕರ್ಣಿ

ಕೊಕ್ ಕೊಕ್ ಕೊಕ್ಕೋ….!! ಲೇ… ಕುಮುದಾ, ಜಾಹ್ನವಿ, ವೈಷ್ಣವಿ ಎದ್ದೇಳ್ರೇ… ಬೆಳಗಾಯ್ತು ; ಕೋಳಿ ಮನೆಯೊಳಗೆಲ್ಲೋ.. ಬಂದು, ಕೊಕ್ ಕೊಕ್ ಕೊಕ್ಕೋ…. ಎಂದು ಕೂಗಿದ ಸದ್ದು ಹಾಳಾದ್ದು ಅದ್ಹೇಗೆ ಮನೆ ಹೊಕ್ಕಿತೋ… ಏನೋ?  ಎಲ್ಲಾ ನನ್ನ ಪ್ರಾರಬ್ಧ ಕರ್ಮ ಇನ್ನೇನು ಕಾದಿದೆಯೋ  ಇದ ಕೇಳಿಸಿಕೊಂಡು ಅಕ್ಕಪಕ್ಕದವರು ನಗದಿರರು ನಮ್ಮ ಏನೆಂದು ತಿಳಿದಾರು, ಅನುಸೂಯಮ್ಮನ ಮೊಮ್ಮಕ್ಕಳು ಕೋಳಿ ತಿನ್ನುವರೆಂದು ಊರೆಲ್ಲಾ ಹೇಳಿ ಕೊಂಡು ತಿರುಗಾಡಿದರೆ  ಇನ್ನು ನಾ ತಲೆಯೆತ್ತಿ ಹೊರಗೆಲ್ಲೂ ಓಡಾಡುವಂತಿಲ್ಲ  ಅಯ್ಯೋ …. ಅಜ್ಜೀ… ಸುಮ್ಮನೆ ಮಲಗ … Read more

ಅಳುವಿನಲ್ಲಡಗಿದೆ ಬಾಳು: ಸಂಗೀತ ರವಿರಾಜ್

ಹೀಗೊಂದು ಶುಭನುಡಿಯಿದೆ " ಒಂದೇ ಹಾಸ್ಯದ ಬಗ್ಗೆ ಮತ್ತೆ ಮತ್ತೆ ನಗುವುದಿಲ್ಲವಾದರೆ, ಒಂದೇ ಸಂಗತಿ ಬಗ್ಗೆ ಮತ್ತೆ ಮತ್ತೆ ಅಳುವುದ್ಯಾಕೆ?  ಮತ್ತೆ ಮತ್ತೆ ತೇಲಿ ಬರುವ ಅಳು ಒಂದು ರೀತಿಯಲ್ಲಿ ಅಪ್ಯಾಯಮಾನವಾದ ಸಂಗತಿ. ಅಳುವೆನ್ನುವುದು ಮನುಷ್ಯನ ಎಲ್ಲಾ ಮೂಲಭೂತ ಕ್ರಿಯೆಗಳಂತೆ ಸಹಜವೋ? ಅದೊಂದು ಕಲೆಯೋ? ಸಾಂಧರ್ಭಿಕವೋ? ತಿಳಿಯಲೊಲ್ಲುದು. ಆದರು ಬೇಸರವಾದಾಗ ಅಳುವುದು ಮಾತ್ರ ಸಹಜ. ಅಳುವ ಗಂಡಸರನ್ನು ನಂಬಬೇಡ ಎನ್ನುತ್ತದೆ ಗಾದೆ. ಈ ಗಾದೆ ಚಾಲ್ತಿಗೆ ಹೇಗೆ ಬಂತೆಂದು ಯೋಚಿಸಿದರೆ ಅಳು ಯಾವಾಗಲೂ ಹೆಣ್ಣಿಗೆ ಕಟ್ಟಿಟ್ಟ ಬುತ್ತಿ … Read more

ಗುರುಭ್ಯೋ ನಮ: ಪ್ರಶಸ್ತಿ

ಬದುಕ ಪಯಣಕೆ ಬೆಳಕನಿತ್ತಿಹ ಪ್ರಣತಿ ಗುರುವರ್ಯ ಹುಡುಗು ಮುದ್ದೆಯ ಪ್ರತಿಮೆಯಾಗಿಸಿ ನಿಂತ ಆಚಾರ್ಯ ಸಕಲವಿದ್ಯೆಯ ಮಳೆಯಗಯ್ದಿಹೆ ಮುನಿಸ ಮೋಡದಲಿ ಕಷ್ಟ ಸುಡುತಿರೆ, ಜೀವವಳುತಿರೆ ಸಹಿಸಿ ಮೌನದಲಿ ನಳಿನಿ ಮೇಲಣ ಹನಿಯ ತರದಲಿ ತಪ್ಪ ಮಸ್ತಕದಿ ಸರಿಸಿ ಹರಿಸಿದೆ ಜ್ಞಾನ ಬೆಳಕನು ತೊಳೆದ ಬುದ್ದಿಯಲಿ |೧| ಅರಿವಿಗೆ ನಿಲುಕದ ಮಾತುಗಳಲ್ಲಿ ಗುರುವಿನ ನಿಲುವುಗಳೆಷ್ಟಿಹುದೋ ಕತ್ತಲ ಪಥದಲೂ ಹಾಕುವ ಹೆಜ್ಜೆಯ ತಿದ್ದಿಹ ಬುದ್ದಿಗಳೆಷ್ಟಿಹುದೊ  ಶಿಸ್ತನು ಕಲಿಸಿದೆ, ಬುದ್ದಿಯ ಬೆಳೆಸಿದೆ ಸವಾಯೀಯುತಲೆ ಜಡಮನಕೆ ತೊಲಗಿಸಿ ಮೌಢ್ಯತೆ, ಮೂಡಿಸಿ ಐಕ್ಯತೆ ನನ್ನನು ತೆರೆದಿಹೆ … Read more

ನಾನು ಬಡವಿ ಆತ ಬಡವ ಒಲವೆ ನಮ್ಮ ಬದುಕು: ಪದ್ಮಾ ಭಟ್, ಇಡಗುಂದಿ

                    ನಾನು ಬಡವಿ ಆತ ಬಡವ  ಒಲವೆ ನಮ್ಮ ಬದುಕು ಬಳಸಿಕೊಂಡೆವದನೆ ನಾವು ಅದಕು ಇದಕು ಎದಕು.. ದ.ರಾ ಬೇಂದ್ರೆಯವರ ಈ ಹಾಡಿನ ಸಾಲು ಪದೇ ಪದೇ ನೆನಪಾಗತೊಡಗಿತ್ತು.. ಗೆಳೆಯಾ ಬಹುಶಃ ಪ್ರೀತಿ ಎಂಬ ಪದಕ್ಕೆ ಎಷ್ಟು ಆಪ್ತವಾದ ಸಾಲುಗಳು ಇವು ಅಲ್ವಾ? ಬದುಕಿನಲ್ಲಿ ಎಲ್ಲವೂ ಇದ್ದು ಪ್ರೀತಿಯೇ ಇಲ್ಲದಿದ್ದರೆ ಏನು ಚಂದ ಹೇಳು, ಆದರೆ ಬಡತನದಲ್ಲಿಯೂ ಪ್ರೀತಿಯಿದ್ದರೆ, ಅದನ್ನೇ ಎಲ್ಲಾದಕ್ಕೂ ಬಳಸಿಕೊಳ್ಳಬಹುದು..ಪ್ರೀತಿಯಿಂದ ಹೊಟ್ಟೆ … Read more

ಕಾಣದ ಅಪ್ಪನಿಗೆ: ಲಾವಣ್ಯ ಆರ್.

ಅಪ್ಪ, ಚಿಕ್ಕಂದಿನಲ್ಲಿ ಈ ಎರಡು ಅಕ್ಷರಗಳು ನನ್ನ ಮನಸ್ಸಿನಲ್ಲಿ ನೆಲೆಯೂರುವಂತೆ ನೀನು ಮಾಡಲಿಲ್ಲ, ನಾ ತೊದಲು ನುಡಿವಾಗ ನೀ ಬಂದು ಮುದ್ದಾಡಲಿಲ್ಲ, ನಡಿಗೆ ಕಲಿವ ಬರದಲ್ಲಿ ಬಿದ್ದಾಗ ನೀ ಬಂದು ನನ್ನ ಎತ್ತಿ ಸಂತೈಸಲಿಲ್ಲ, ಅಮ್ಮ ನನ್ನ ಹೊಡೆವಾಗ ನೀ ಬಂದು ಬಿಡಿಸಲು ಇಲ್ಲ, ಹಾಗೆಂದು ನಾನೆಂದಿಗೂ ನೀನು ಬೇಕೆಂದು ಬಯಸಲಿಲ್ಲ, ಒಂದುವೇಳೆ ಮನಸ್ಸು ನಿನ್ನ ಬಯಸಿದರು ಅದರ ಆಸೆಯನ್ನು ಶಮನಗೊಳಿಸುವಲ್ಲಿ ನಾನು ಯಶಸ್ವಿಯಾದೆ.  ಆದರೂ ಅಪ್ಪ ನಿನ್ನಿಂದ ಅನುಭವಿಸಿದ ನೋವುಗಳಿಗೆ ಲೆಕ್ಕವಿಲ್ಲ, ಹೇಗೆಂದು ಕೇಳುವೆಯ? ಪುಟ್ಟ … Read more

ಸಾಮಾನ್ಯ ಜ್ಞಾನ (ವಾರ 44): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ಏಷ್ಯಾ ಖಂಡದಲ್ಲಿಯೇ ಅತ್ಯಂತ ದೊಡ್ಡ ರೈಲು ಸಂಪರ್ಕ ಹೊಂದಿರುವ ದೇಶ ಯಾವುದು? ೨.    ಪುತಿನ ಇದು ಯಾರ ಕಾವ್ಯ ನಾಮ? ೩.    ವೆಸ್ಟ್ ಕೊಸ್ಟ್ ಪೇಪರ್ ಮಿಲ್ ಕಾರ್ಖಾನೆ ಕರ್ನಾಟಕದಲ್ಲಿ ಎಲ್ಲಿದೆ? ೪.    ಮನುಶ್ರೀ ಪ್ರಶಸ್ತಿ ಪಡೆದ ಪ್ರಥಮ ಮಹಿಳಾ ಸಾಹಿತಿ ಯಾರು? ೫.    ಮಲಯಾಳಂನ ಸಾಹಿತಿ ತಕಳಿ ಶಿವಶಂಕರ ಪಿಳ್ಳೈಯವರ ಯಾವ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರತಿದೆ? ೬.    ಬೆಂಗಳೂರಿನಲ್ಲಿ ಹೈಕೋರ್ಟ್ ಸ್ಥಾಪನೆಯಾದ ವರ್ಷ ಯಾವುದು? ೭.    ವಾಯುಭಾರ ಮಾಪಕ ಕಂಡು ಹಿಡಿದವರು … Read more