ಹೊಟ್ಟೆ ಗಟ್ಯಾ, ಸೊಂಟ ಗಟ್ಯಾ?: ಸೂರಿ ಹಾರ್ದಳ್ಳಿ

ಲೇಖನ ಬರೆದರೆ ರುಚಿಕಟ್ಟಾಗಿರಬೇಕು, ಓದುಗರಿಗೆ ರುಚಿಸಬೇಕು. ಸಾಹಿತ್ಯದಲ್ಲಿ ರಸಕವಳ ಇರಬೇಕು, ಅದರಲ್ಲಿ ಮಸಾಲೆಯೂ ಇರಬೇಕು ಎಂತೆಲ್ಲಾ ನಮ್ಮ ಹಿರಿಯ ಸಾಹಿತಿಯೊಬ್ಬರು ಉಪದೇಶಿಸಿದ್ದರಿಂದ ಈ ನನ್ನ ಲೇಖನವು ಊಟದ ಬಗ್ಗೆ, ಅದರಲ್ಲಿಯೂ ವಿಶೇಷ ಭೂರಿಭೋಜನದ ವಿಷಯವನ್ನೊಳಗೊಂಡಿದೆ. ನೀವೆಲ್ಲಾ ಬಾಯಿಯಲ್ಲಿ ನೀರು ಬರಿಸಿಕೊಳ್ಳುತ್ತಾ ಇದನ್ನು ಓದುತ್ತೀರಿ, ಖಾದ್ಯಾದಿಗಳ ರುಚಿಯನ್ನು ಕಲ್ಪಿಸಿಕೊಳ್ಳುತ್ತಾ ಒಣ ತೇಗಿಗೆ ಪಕ್ಕಾಗುತ್ತೀರಿ ಎಂದುಕೊಂಡಿದ್ದೇನೆ. ಬನ್ನಿ, ಉಡುಪಿಯ ಬ್ರಾಹ್ಮಣರ ವಿವಾಹದ ಸಮಾರಂಭಕ್ಕೆ ನುಗ್ಗೋಣ. ಓ.. ಆಗಲೇ ಎಲೆ ಹಾಕಿಬಿಟ್ಟಿದ್ದಾರೆ. ಬನ್ನಿ, ಕುಳಿತುಕೊಳ್ಳೋಣ. ನೋಡಿ, ಓ ಅಲ್ಲಿ, ನೆಲದ ಮೇಲೆ ಎಲೆ … Read more

ಧರೆಗೆ ದೊಡ್ಡವರು: ಹೃದಯಶಿವ

ಮಹಾಕಾವ್ಯಗಳೆಂದರೆ ಕೇವಲ ರಾಮಾಯಣ, ಮಹಾಭಾರತಗಳಷ್ಟೇ ಅಲ್ಲ. ಭಾರತದ ಮಟ್ಟಿಗೆ ನೋಡುವುದಾದರೆ ಪ್ರತಿಯೊಂದು ಪ್ರದೇಶಕ್ಕೂ ತನ್ನದೇ ಆದ ಸಂಸ್ಕೃತಿ ಇದೆ. ತನ್ನದೇ ಆದ ನೆಲದ ಗುಣವಿದೆ. ಹಾಗೆಯೇ, ತನ್ನ ಪರಂಪರೆಯಿಂದ ರೂಪುತಳೆದದೈವ ಪುರುಷರ, ಸಾಂಸ್ಕೃತಿಕ ನಾಯಕರ ಕುರಿತಾದ ಮೌಖಿಕ ಕಾವ್ಯಗಳಿವೆ. ಅಂಥವುಗಳಲ್ಲಿ 'ಮಂಟೇಸ್ವಾಮಿ ಕಾವ್ಯ'ವೂ ಪ್ರಮುಖವಾದುದು. ಕರ್ನಾಟಕದ ದಕ್ಷಿಣ ಭಾಗದ ಸೋಲಿಗರು, ಕುರುಬರು, ಬೇಡರು, ಪರಿವಾರದವರು, ಉಪ್ಪಾರರು ಹಾಗೂ ಆದಿ ಕರ್ನಾಟಕ ಆದಿ ದ್ರಾವಿಡರೂ ಆದ ಹೊಲೆಯರು, ಮಾದಿಗರು ಈ ಕಥನವನ್ನು ಹಾಡುವವರಾಗಿದ್ದಾರೆ. ಇವರನ್ನೇ ನೀಲಗಾರರೆಂದು ಕರೆಯಲ್ಪಡುವುದು. ನೀಲಗಾರರೆಂದರೆ … Read more

ಕೀನ್ಯಾದ ಸತಾವ್ ಮತ್ತು ಇಂಡಿಯಾದ ಘೆಂಡಾ: ಅಖಿಲೇಶ್ ಚಿಪ್ಪಳಿ

ಸತಾವ್ ಹೆಸರಿನ ಅವನೊಬ್ಬನಿದ್ದ. ೪೫ ವರ್ಷದ, ಭೀಮಕಾಯದ, ಬಾಳೆಯ ದಿಂಡಿನಷ್ಟು ಬೆಳ್ಳಗಿದ್ದ ದಂತವನ್ನು ಹೊಂದಿದ ಬೃಹತ್ ಗಾತ್ರದ ಗಂಭೀರವಾದ ಆನೆ ತ್ಸಾವೋ ಸಂರಕ್ಷಿತ ಅರಣ್ಯವನ್ನು ಅಕ್ಷರಷ: ಆಳಿದವ. ಇಡೀ ಜಗತ್ತಿನ ಅತಿ ದೊಡ್ಡ ಆನೆಗಳ ಪೈಕಿ ಒಬ್ಬನಾಗಿದ್ದ.  ಆಕಾಶದಿಂದ ಹಣಿಕಿದರೂ ಕಾಣುವಂತಿದ್ದ ಉದ್ದದ ಬಿಳಿ ಕೋರೆಯನ್ನು ಹೊಂದಿದ್ದ. ಒಂದೊಂದು ಕೋರೆಯೂ ೫೦ ಕೆ.ಜಿ.ಗಳಿಗಿಂತ ಜಾಸ್ತಿ ತೂಗುತ್ತಿದ್ದವು. ತ್ಸಾವೋ ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಭೇಟಿ ನೀಡುವ ಲಕ್ಷಾಂತರ ಪ್ರವಾಸಿಗರನ್ನು ತನ್ನ ದೈತ್ಯ ಗಾತ್ರ ಮತ್ತು ಕೋರೆಗಳಿಂದಾಗಿ ಗಮನ ಸೆಳೆಯುತ್ತಿದ್ದ. … Read more

ಪರಿಸರ ವಿನಾಶ ಮತ್ತು ಆರ್ಥಿಕ ಅಸಮಾನತೆಯಿಂದ ನಾಗರೀಕತೆಯ ಅಳಿವು: ಜೈಕುಮಾರ್.ಹೆಚ್.ಎಸ್

ಪ್ರಳಯ ಸಂಭವಿಸಿ ಇಡೀ ವಿಶ್ವವೇ ವಿನಾಶಗೊಳ್ಳುತ್ತದೆ ಎಂದು ಭವಿಷ್ಯ ಹೇಳಿದ ಸ್ವಾಮೀಜಿ-ಜ್ಯೋತಿಷಿಗಳು ಪ್ರಳಯ ಸಂಭವಿಸದೇ ಇದ್ದಾಗ ಸಬೂಬು ಹೇಳುವುದನ್ನು ಗಮನಿಸಿದ್ದೇವೆ. ವಿಶ್ವದಲ್ಲಿ ಮನುಷ್ಯ ಸಮಾಜ ಹೇಗೆ ವಿನಾಶಗೊಳ್ಳುತ್ತದೆ ಎಂಬುದಕ್ಕೆ ಹಲವು ವೈಜ್ಞಾನಿಕ ಸಂಶೋಧನೆಗಳು ನಡೆಯುತ್ತಲೇ ಇವೆ. ಮನುಷ್ಯ ಸಮಾಜವು ಒಂದೊಂದು ಅವಧಿಯಲ್ಲಿ ಸವೆಸಿರುವ ಕಾಲಘಟ್ಟವನ್ನು ನಾಗರೀಕತೆ ಎನ್ನುತ್ತೇವೆ. ಮಾನವ ಇತಿಹಾಸದ ಉದ್ದಕ್ಕೂ ಹಲವು ನಾಗರೀಕತೆಗಳು ಏಳಿಗೆ ಕಂಡು ಅವಸಾನ ಹೊಂದಿವೆ. ಮಾನವ ನಾಗರೀಕತೆಗಳು ಹೇಗೆ ಅವಸಾನ ಕಾಣುತ್ತವೆ ಎಂಬುದರ ಕುರಿತು ಇತ್ತೀಚೆಗೆ ಅಮೇರಿಕಾದ ನಾಸಾ ಸಂಸ್ಥೆಯ ನೆರವಿನಿಂದ … Read more

ಗುಂಡು ಕೊರೆದ ಮೊಳಕಾಲಿನ ಕಲೆಯೂ ಆ ದಿನಗಳ ನೆನಪೂ…: ಷಡಕ್ಷರಿ ತರಬೇನಹಳ್ಳಿ

ಮೊನ್ನೆ ಕಾಲ ಮೇಲೆ ಕಾಲ್ ಹಾಕಿ ಕುಳಿತು ಪ್ರಜಾವಾಣಿ ಓದುತ್ತಿದ್ದೆ. ಅದೇ ಎಡಗಾಲಿನ ಕಲೆ ಅವನ ನೆಚ್ಚಿನ ಚಿಣ್ಣರ ಚಿತ್ತಾರ ಅಂಕಣ ನೋಡಲು ಬಂದ ಅನಿಶನ ಕಣ್ಸೆಳೆದಿತ್ತು. “ಏನಪ್ಪಾ ಈ ಕಲೆ? ಯಾಕೆ ಅದು ಅಷ್ಟು ಅಗಲಕ್ಕಿದೆ? ಎಂದ. ನಾನು “ಸಣ್ಣವನಿದ್ದಾಗ ಬಿದ್ದು ಏಟು ಮಾಡಿಕೊಂಡಿದ್ದೆ ಕಣೋ, ಅದೇ ಮಚ್ಚೆಯಂತೆ ಉಳಿದು ಬಿಟ್ಟಿದೆ” ಎಂದರೂ ಅವನ ಕುತೂಹಲದ ಕಣ್ಣುಗಳಲ್ಲಿನ್ನೂ ಸಂಶಯ ಇಂಗಿರಲಿಲ್ಲ. ಆ ಕಲೆಯನ್ನೇ ಮುಟ್ಟಿ ಮುಟ್ಟಿ ನೋಡಿ, ಅಲ್ಲಿ ಗುಂಡಿ ಬಿದ್ದಿರುವಂತ ಅದರ ಅನುಭವ ಪಡೆದುಕೊಂಡ … Read more

ತಿಪ್ಪಣ್ಣ ಸರ್ಕಲ್: ಅಮರ್ ದೀಪ್ ಪಿ.ಎಸ್.

ಹಿಂಗೇ ಓಣಿಯಲ್ಲಿನ ಈಶಪ್ಪನ ಗುಡಿ ಕಟ್ಟೆಗೆ ಪಕ್ಕದ ಮನೆ ರತ್ನಕ್ಕನ  ಮನೆಯಿಂದ ತಂದ ಪೇಪರ್ ಓದ್ತಾ ಕುಂತಿದ್ದೆ .   ಗುಡಿ ಎದುರಿಗಿನ ದಾರಿ ಏಕಾ ಇದ್ದದ್ದರಿಂದ ಅಷ್ಟೂ ದೂರದಿಂದ ಬರೋರು ಹೋಗೋರು ಎಲ್ಲಾ ಕಾಣಿಸೋರು. ದಿನ ಭವಿಷ್ಯ ನೋಡೋ ಚಟ ನನ್ನ ಪಕ್ಕದ ನನ್ನಂಥ ನಿರುದ್ಯೋಗಿಗೆ.  ಅವನೂ ನಂಜೊತೆ ಓದಿದೋನೇ. ಅವನಿಗೆ ಜಾತಕದ ಪ್ರಕಾರ ಗೌರ್ಮೆಂಟ್ ನೌಕ್ರಿ ಸಿಕ್ಕೇ ಸಿಗುತ್ತೆ ಅನ್ನೋ ಲೆಕ್ಕಾಚಾರದಲ್ಲಿ ದಿನಾ ಸರ್ಕಾರಿ ಜಾಹಿರಾತು ನೋಡೋದು ಅವನ ಅಭ್ಯಾಸವಾಗಿತ್ತು.  ಜೊತೆಗೆ  ಪಂಚಾಗದ ಹುಚ್ಚು … Read more

ಕುರುಂಬಿಲನ ಪಂಚಾಂಗ: ಅಶೋಕ್ ಕುಮಾರ್ ವಳದೂರು (ಅಕುವ)

ಶೈಲೇಶ ಅದೆಷ್ಟು ವರ್ಷಗಳ ನಂತರ ಉಡುಪಿಗೆ ಬಂದಿದ್ದ. ಸದ್ಯ ಕಟಪಾಡಿಯಲ್ಲಿರುವ ತನ್ನ ಅಕ್ಕನ ಮನೆಗೆ ಬಂದು ಇಳಿಯುವುದೇ ಸುಲಭವಾಗಿ ಬಿಟ್ಟಿದ್ದೆ. ಅದು ಹೈವೇಗೆ ತಾಗಿ ಕೊಂಡೆ ಇರುವುದು ಕಾರಣ ಕೂಡಾ. ಮುಂಬೈಯಿಂದ ಬಸ್ಸು ಹಿಡಿದರೆ ಮನೆಯ ಅಂಗಳದಲ್ಲೇ ಉಳಿಯುವ ವ್ಯವಸ್ಥೆ ಅದು.ಇತ್ತೀಚೆಗೆ ತಾನು ಹುಟ್ಟಿ ಬೆಳೆದ ಅಜ್ಜನ ಊರು ಹೇರೂರಿನ ಕಡೆ ಹೋಗದೆ ಅನೇಕ ವರ್ಷಗಳೇ ಕಳೆದಿದ್ದವು.ಕಟಪಾಡಿಯಿಂದ ಒಳಮಾರ್ಗ ಶಂಕರಪುರದಿಂದ ಕಾರ್ಕಳ ಕಡೆ ಹೋಗುವ ಬಸ್ಸನ್ನು ಕಂಡಾಗ ಒಮ್ಮೆ ಹೇರೂರಿಗೆ ಹೋಗಿ ಬರುವ ಮನಸ್ಸಾಯಿತು. ಅಂದು ಶನಿವಾರ. … Read more

ಮೂವರ ಕವಿತೆಗಳು: ಶ್ರೀದೇವಿ ಕೆರೆಮನೆ, ಶಿವಕುಮಾರ್ ಸಿ., ಸ್ವರೂಪ್ ಕೆ.

ಕಣ್ಣೀರಿಗೂ ಅರ್ಹಳಲ್ಲ ನನ್ನ ಹೆಣದ ಮುಖದ ಮೇಲೆ  ನಿನ್ನ ಬಿಸಿ ಬಿಸಿ ಕಣ್ಣ ಹನಿ….  ಅಯ್ಯೋ ನೀನು ಅಳುತ್ತಿದ್ದೀಯಾ ಬೇಡ ಗೆಳೆಯಾ ನಿನ್ನ ಕಣ್ಣೀರು ನನ್ನನ್ನು ಪಾಪ ಕೂಪಕ್ಕೆ ತಳ್ಳುತ್ತದೆ ನರಕದ ಬಾಗಿಲಿನಲ್ಲಿ ನಿಲ್ಲಿಸುತ್ತದೆ ನನಗೆ ಗೊತ್ತು ನಿನ್ನ ಕಣ್ಣೀರಿಗೂ ನಾನು ಅರ್ಹಳಲ್ಲ ಬದುಕಿದ್ದಷ್ಟು ದಿನವೂ ನಿನ್ನ ಕಣ್ಣಲ್ಲಿ  ನೀರೂರಿಸುತ್ತಲೇ ಇದ್ದೇನೆ ನನ್ನ ಬಿರು ನುಡಿಗೆ ನೀನು ನಡುಗುತ್ತಲೇ ಕಾಲಕಳೆದಿದ್ದೀಯಾ ನನ್ನ ಪ್ರೇಮದ ಹಸಿವಿಗೆ ಸ್ಪಂದಿಸಲಾಗದೇ ಕಂಗಾಲಾಗಿದ್ದೀಯಾ ನನ್ನ ಪ್ರೇಮದ ಉತ್ಕಂಟತೆಗೆ ಉತ್ತರಿಸಲಾಗದೇ ಮೌನತಾಳಿದ್ದೀಯಾ ನಿನ್ನ ಅಕಾಲಿಕ … Read more

ಕೊಳೆಯ ಜಾಡು ಹಿಡಿದು: ಪ್ರಶಸ್ತಿ. ಪಿ.

ಶನಿವಾರ , ಭಾನುವಾರ ಬಂತಂದ್ರೆ ಬಟ್ಟೆ ತೊಳೆಯೋದಿತ್ತಲ್ವಾ ಅನ್ನೋದು ದುತ್ತಂತ ನೆನಪಾಗುತ್ತೆ. ರೂಮಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಬಟ್ಟೆಗಳು, ನಾ ನಿನ್ನ.. ಬಿಡಲಾರೆ ಅಂತ ಹಾಡುತ್ವೆ. ಏನು ಮಾಡೋದು ? ಬಟ್ಟೆಗಳ ತೊಳಿದೇ ಮನಬಂದಲ್ಲಿ ಎಸೆದು ಒಂದು ವಾರದ ತನಕ ದ್ವೇಷ ಸಾಧಿಸಬಹುದು. ಆದ್ರೆ ಆಮೇಲೆ ? ಸೋಮವಾರ ಮತ್ತೆ ಆಫೀಸಿಗೆ ಹೋಗೋಕೆ ಅವೇ ಬಟ್ಟೆಗಳು ಬೇಕಲ್ವಾ ?  ಮುದುರಿಬಿದ್ದ ಬಟ್ಟೆಗಳನ್ನ ನೆನೆಸೋಕೆ ಹೋದಾಗ ಅವುಗಳ ಕಾಲರ್ರು, ತೋಳುಗಳಲ್ಲಿ ಜಮಾವಣೆಯಾದ ಮಣ್ಣು ನೋಡಿ ಇಷ್ಟು ಕೊಳೆಯಾಗೋ ತರ ಏನು … Read more

ಮಳೆಯೆ೦ಬ ಮಧುರ ಆಲಾಪ: ಸ್ಮಿತಾ ಅಮೃತರಾಜ್.

ಒ೦ದು ಬರಸಿಡಿಲು, ಕಿವಿಗಡಚಿಕ್ಕುವ ಗುಡುಗು,ಕಣ್ಣು ಕೋರೈಸುವ ಮಿ೦ಚು. ಇವೆಲ್ಲ ಮಳೆ ಬರುವ ಮುನ್ನಿನ ಪೀಠಿಕೆಯಷ್ಟೆ. ಮತ್ತೆ ಇದ್ಯಾವುದೇ ತಾಳ ಮೇಳಗಳಿಲ್ಲದೆ, ಅ೦ಜಿಕೆ ಅಳುಕಿಲ್ಲದೆ ದಿನವಿಡೀ ಸುರಿಯುತ್ತಲೇ ಇರುತ್ತದೆ ಒ೦ದು ಧ್ಯಾನಸ್ಥ ಸ್ಥಿತಿಯ೦ತೆ. "ಮಳೆ" ಇದು ಬರೇ ನೀರ ಗೆರೆಯಲ್ಲ.ಕೂಡಿಟ್ಟ ಬಾನಿನ ಭಾವದ ಸೆಲೆ.ಬಾನ ಸ೦ಗೀತ ಸುಧೆ ಮಳೆಯಾಗಿ ಹಾಡುತ್ತಿದೆ.ಎ೦ಥ ಚೆ೦ದದ ಆಲಾಪವಿದು.. ಮಳೆ ಶುರುವಾದಾಗ ಒ೦ದು ತರಹ, ನಿಲ್ಲುವಾಗ ಮತ್ತೊ೦ದು,ಬಿರುಸಾಗಿ ಸುರಿಯುವಾಗ  ಇನ್ನೊ೦ದು, ಮಳೆ ಪೂರ್ತಿ ನಿ೦ತ ಮೇಲೂ ಕೊನೆಯದಾಗಿ ಉರುಳುವ ಟಪ್ ಟಪ್ ಹನಿಯ ರಾಗವೇ … Read more

ಬಲಿಯಾಗದಿರಲಿ ಯುವಜನತೆಯ ಮನಸು..ಕನಸು: ಪದ್ಮಾ ಭಟ್

ಅವನು ತುಂಬಾ ಬುದ್ದಿವಂತನಾಗಿದ್ದರೂ ಕೆಟ್ಟ ಚಟಗಳ ಸಹವಾಸದಿಂದ ಬದುಕನ್ನೇ ಸ್ಮಶಾನದತ್ತ ಒಯ್ದುಬಿಟ್ಟ..ಊರಿನಲ್ಲಿರುವ ಅಪ್ಪಅಮ್ಮ ತನ್ನ ಮಗ ಚನ್ನಾಗಿ ಓದುತ್ತಿದ್ದಾನೆಂದು ಹಾಸ್ಟೇಲಿನಲ್ಲಿಟ್ಟರೆ ಡ್ರಗ್ಸ್‌ ಜಾಲಕ್ಕೆ ಬದುಕನ್ನು ಬಲಿಯಾಗಿಸಿಕೊಂಡ..ಇದು ಉದಾಹರಣೆಯಷ್ಟೇ.. ಇಂತಹ ಹಲವಾರು ವಿಚಾರಗಳು ದೈನಂದಿನ ಬದುಕಿನಲ್ಲಿ ನಡೆಯುತ್ತಲೇ ಇರುತ್ತದೆ..ಎಷ್ಟು ಬುದ್ದಿವಂತನಾದರೇನು? ಗುಣವಿದ್ದರೇನು..? ಬದುಕು ಯಾರಿಗೂ ಯಾವತ್ತೂ ಪದೇ ಪದೇ ಅವಕಾಶಗಳನ್ನು ಕೊಡುವುದಿಲ್ಲ..ಯಾರ ಜೊತೆಗೂ ಅವರಿಗೆ ಬೇಕಾದ ಹಾಗೆ ಹೊಂದಾಣಿಕೆಯನ್ನು ಮಾಡಿಕೊಳ್ಳುವುದೂ ಇಲ್ಲವಲ್ಲ. ಇಂದಿನ ಯುವಜನತೆಯು ಹಲವಾರು ಕ್ಷೇತ್ರಗಳಲ್ಲಿ ಬುದ್ದಿವಂತರೇ ಆಗಿದ್ದರೂ ಇಂತಹ ಕೆಟ್ಟ ಚಟಗಳು, ಇನ್ನೊಂದು ಕಡೆಯಿಂದ ಅವನತಿಯ … Read more

ಸಾಮಾನ್ಯ ಜ್ಞಾನ (ವಾರ 34): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು:  ೧. ಜಾಮೀಯ ಮಿಲಿಯ ಇಸ್ಲಾಮಿ ವಿಶ್ವವಿದ್ಯಾಲಯ ಎಲ್ಲಿದೆ? ೨. ಆರ್. ಎಫ್.ಕಿಟೆಲ್ಲರಿಗೆ ಗೌರವ ಡಾಕ್ಟರೇಟ್ ನೀಡಿದ ವಿಶ್ವವಿದ್ಯಾಲಯ ಯಾವುದು? ೩. ದೇವದಾಸ ಕೃತಿಯ ಲೇಖಕರು ಯಾರು? ೪. ಬಂದೂಕುಗಳಿಗೆ ಕೊಬ್ಬು ಹಚ್ಚುವುದನ್ನು ವಿರೋಧಿಸಿ ಬ್ರಿಟಿಷ್‌ರಿಂದ ಪ್ರಾಣ ಕಳೆದುಕೊಂಡ ವ್ಯಕ್ತಿ ಯಾರು? ೫. ಭಾರತದಲ್ಲಿ ಚಿನ್ನದ ನಾಣ್ಯಗಳನ್ನು ಮೊದಲು ಪರಿಚಿಯಿಸಿದವರು ಯಾರು? ೬. ಜಲಿಯನ್ ವಾಲಾಬಾಗ್ ಹತ್ಯಾಕಾಂಡಕ್ಕೆ ಕಾರಣವಾದ ಜನರಲ್ ಡಯರ್‌ನನ್ನು ಕೊಂದವರು ಯಾರು? ೭. ಅನ್ನಪೂರ್ಣ ಪರ್ವತ ಶಿಖರ ಎಲ್ಲಿದೆ? ೮. ಭಾರತದ ಪ್ರಥಮ ಪೈಲಟ್ … Read more