ವಿಶ್ವ ಕವಿತಾ ದಿನದ ವಿಶೇಷ ಕಾವ್ಯಧಾರೆ

ಕನ್ನಡಿಯಲ್ಲಿ ಕಂಡದ್ದು ಕಾಲ ತದೇಕ ಚಿತ್ತದಿ ಕನ್ನಡಿಯನ್ನೆ ಯಾಕೋ ಮೈಮರೆತು ದಿಟ್ಟಿಸಿದ ಕ್ಷಣ ಕಂಡೊಂದು ನೆರಿಗೆಗೆ ಪಿಚ್ಚೆನಿಸಿತು ಬುನಾದಿ!  ನಾನು ಸುಳ್ಳೋ ಕನ್ನಡಿ ಸುಳ್ಳೋ ಕಾಯದ ಕಾಲಕ್ಕೆ ಒಡಂಬಡಿಕೆ ಪತ್ರ ಬಿಂಬಿಸುವೆ … ಅರ್ಧ ತೆರೆದ ಬಾಗಿಲ ಸಂಧಿಯಲಿ ಇಣುಕಿ ನಕ್ಕ ಬಾಲ್ಯ ಈಗ ತಾಳೆ ಹಾಕಿ ಗುಣಿಸಿದರೂ, ಗುನುಗಿದರೂ ಉತ್ತರವಿಲ್ಲದ ಲೆಕ್ಕಾಚಾರಕ್ಕೆ ನನ್ನ ನೋಡಿ ನಗುತ್ತದೆ ಕಂದ ಸವೆಸಿದ ಮಜಲುಗಳ ಮುಖದಲಿ ಬಿದ್ದರೆ ಮಾತ್ರನೇ ಚೂರಾಗುವ ಕನ್ನಡಿಯಲಿ ಕಾಣುವ ನೂರಾರು ಮುಖಗಳು! ಕಂಡ ಒಂದೇ ಒಂದು … Read more

ಕಾ೦ಗರುಗಳ ನಾಡಲ್ಲೊ೦ದು ಕಾ೦ಗರೂ ಐಲ್ಯಾ೦ಡ್: ಅರ್ಪಿತ ಮೇಗರವಳ್ಳಿ.

ಮೆಲ್ಬೋರ್ನ್‍ನಲ್ಲಿ ಪ್ರತಿವರ್ಷ  ನವೆ೦ಬರ್ ತಿ೦ಗಳ ಮೊದಲ ಮ೦ಗಳವಾರ ’ಮೆಲ್ಬೋರ್ನ್ ಕಪ್ ಡೆ’ ಇರುತ್ತದೆ. ಆಸ್ಟ್ರೇಲಿಯಾದ ಪ್ರತಿಷ್ಠಿತ ಕುದುರೆ ರೇಸ್ ನೆಡೆಯುವ ಈ ದಿನದ೦ದು ಮೆಲ್ಬೋರ್ನ್‍ನಲ್ಲಿ ಸಾರ್ವಜನಿಕ ರಜೆ ಇರುತ್ತದೆ. ಹೀಗಾಗಿ ಸೋಮವಾರ ರಜೆ ತೆಗೆದುಕೊ೦ಡು ನಾಲ್ಕು ದಿನ ದಕ್ಷಿಣ  ಆಸ್ಟ್ರೇಲಿಯಾದ ಕಡೆ ಪ್ರವಾಸ ಹೋಗಿಬರಲು ಯೋಜನೆ ರೂಪಿಸಿದೆವು. ಮೆಲ್ಬೋರ್ನ್‍ನಿ೦ದ ಸುಮಾರು ೭೨೫ ಕಿ.ಮಿ. ದೂರವಿರುವ ದಕ್ಷಿಣ ಆಸ್ಟ್ರೇಲಿಯಾದ ರಾಜಧಾನಿ ಆಡಿಲೇಡಿಗೆ ಆರು ಜನ ಕನ್ನಡಿಗರ ತ೦ಡದೊ೦ದಿಗೆ ಡ್ರೈವ್ ಮಾಡಿಕೊ೦ಡು ಹೊರಟೆವು. ದಕ್ಷಿಣ ಆಸ್ಟ್ರೇಲಿಯಾದಲ್ಲಿ ಇರುವ ನಾಲ್ಕು ದಿನದಲ್ಲಿ … Read more

ಚೈತ್ರಳೆಂಬ ಚಿಗುರೆ ಮರಿ ಚಿಗುರಿದ ಹೊತ್ತು: ಷಡಕ್ಷರಿ ತರಬೇನಹಳ್ಳಿ

ಕಳೆದ ಕೆಲವು ತಿಂಗಳುಗಳಿಂದ ನಮ್ಮ ಮನೆಯಲ್ಲಿ ಯಾರು ಮಾತನಾಡಿದರೂ ಅವಳು ಗರ್ಭದರಿಸಿದ ಬಗ್ಗೆಯೇ ಚರ್ಚೆ. ಅವಳು ನಮ್ಮ ಮನೆಗೆ ಬಂದು ಎಷ್ಟು ತಿಂಗಳುಗಳಾದವು? ಆದರೂ ಯಾಕೆ ಅವಳು ಇನ್ನೂ ಮರಿ ಹಾಕಲಿಲ್ಲ? ಎಂಬೆಲ್ಲ ಅನೇಕರ ತೀರದ ಕುತೂಹಲಗಳಿಗೆ ಉತ್ತರವೆಂಬಂತೆ ಅವಳು ಗರ್ಭದರಿಸಿದ ಸೂಚನೆ ನೀಡಿ ನಮ್ಮೆಲ್ಲರ  ಪ್ರಶ್ನೆಗಳಿಗೆ ಉತ್ತರಿಸಿದ್ದಳು. ಅವಳು ನಮ್ಮ ಮನೆಗೆ ಬಂದ ಮೊದಲ ದಿನಗಳ ನೆನಪು ಇನ್ನೂ ಹಸಿರಾಗಿದೆ. ಇವಳ ಅಕ್ಕ ನನ್ನವಳ ತವರೂರಿನಿಂದ ಬಂದ ಶ್ವೇತ ನಮ್ಮ ತೋಟದಲ್ಲಿ ಅಂಡಲೆದು ಹಸಿರುಕ್ಕುವ ಸೊಪ್ಪು … Read more

ಯಾರಪ್ಪನ ಮನೆ ಗಂಟು ಏನ್ ಹೋಗ್ಬೇಕಾಗೈತಿ: ಅಮರ್ ದೀಪ್ ಪಿ.ಎಸ್.

  ಹೈಸ್ಕೂಲ್ ದಿನಗಳಲ್ಲಿ ನಮ್ಮ ಮೇಷ್ಟ್ರು ಒಬ್ಬರಿದ್ದರು. ಬಿಡಿ, ಒಬ್ಬರಲ್ಲ ಬಹಳ ಮಂದಿ ಗುರುಗಳಿದ್ದಾರೆ. ಅವರಲ್ಲಿ ಒಬ್ಬರು ಸಂಕಪ್ಪ ಅಂತಿದ್ದರು. ಈಗ ನಿವೃತ್ತಿಯಾಗಿ ನಮ್ಮೂರಲ್ಲೇ ಇದ್ದಾರೋ ಅವರ ಸ್ವಗ್ರಾಮ ಹಡಗಲಿ ತಾಲೂಕಿನ ಉತ್ತಂಗಿಯಲ್ಲಿದ್ದಾರೋ ಗೊತ್ತಿಲ್ಲ. ಅವರು ನಮ್ಗೆ ಗಣಿತ ವಿಷಯ ತಗಳ್ಳೋರು.  ಆದರೆ ಅವರ ಇಂಗ್ಲೀಷು ಚೆನ್ನಾಗಿತ್ತು.  ಎತ್ತರದ, ಸ್ಥೂಲ ದೇಹವನ್ನು ಹೊತ್ತು ಕ್ಲಾಸ್ ರೂಮಿಗೆ  "ಎ ಸ್ಕ್ವೇರ್ ಪ್ಲಸ್ ಬಿ ಸ್ಕ್ವೇರ್ ಇಸ್ ಇಕ್ವಲ್  ಟು ………. " ಹೇಳುತ್ತಲೇ ಎಂಟ್ರಿ ಕೊಡುತ್ತಿದ್ರು. ಸುಮ್ನೆ ಕುಳಿತೆವೋ … Read more

ಸೀರೆಯ ಪರಿ: ಪದ್ಮಾ ಭಟ್॒

                                 ಅರೆ! ನಾನು ಸೀರೆಯನ್ನು ಉಟ್ಟುಕೊಳ್ಳುವಷ್ಟು ದೊಡ್ಡವಳಾಗಿಬಿಟ್ಟೆನಾ?  ಹೀಗಂತ ಮೊನ್ನೆ ಕಾಲೇಜಿನಲ್ಲಿ ನಡೆದ ನ್ಯಾಶನಲ್ ಸೆಮಿನರ್ ಗೆ ಎಲ್ಲರೂ ಕಂಪಲ್ಸರಿ ಸೀರೆಯನ್ನು ಉಡಲೇಬೇಕೆಂಬ ವಿಚಾರಕ್ಕೆ ಅನಿಸಿತ್ತು.. ಛೇ ನಾ ಸೀರೆ ಉಡಲ್ಲ ನಂಗೆ ಚನ್ನಾಗಿ ಕಾಣೋಲ್ಲ ಅಂತ ಎಷ್ಟೋ ಬಾರಿ sಕನ್ವಿನ್ಸ್ ಮಾಡಲು ಪ್ರಯತ್ನಿಸಿದ್ದೇನಾದ್ದರೂ ಫಲ ಕಂಡಿರಲಿಲ್ಲ. ಆದರೂ ಮನಸ್ಸಿನಲ್ಲಿ ಒಂದು ರೀತಿಯ ಸಂಭ್ರಮ ನನಗಂತ … Read more

ಹಳ್ಳಿಮೇಷ್ಟ್ರು: ಪತ್ರೇಶ್. ಹಿರೇಮಠ್

ಹಳ್ಳಿಮೇಷ್ಟ್ರು ಎಂದಾಕ್ಷಣ ಖ್ಯಾತ ನಟ ರವಿಚಂದ್ರನ್ ಚಲನಚಿತ್ರ ಕಥೆಯೆಂದು ಭಾವಿಸಿದರೆ ತಪ್ಪಾದೀತು. ಇದು ನಮ್ಮ  ಇಡೀ ಊರಿಗೇ ಊರೇ ಬಾಗಿ ಗೌರವಿಸುತ್ತಿದ್ದ ಹಳೆಯ ಪ್ರೀತಿಯ ಮೇಷ್ಟ್ರುಗಳ ವಿಷಯವಿದು. ಶಿಕ್ಷಕರಿಗೆ ದೇಗುಲ ನಿರ್ಮಿಸಿದ ನಾಡ ವಿದ್ಯಾವಂತರು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಾದ ಹಳ್ಳಿಯ ಹಳೆಯ ಮೇಷ್ಟ್ರುಗಳ ಬದುಕಿನ ಕಥಾ ಸರಮಾಲೆಯಿದು.   ಈಗ ಶಿಕ್ಷಕ ವೃತ್ತಿಯೆಂದರೆ ಬೆಳಿಗ್ಗೆ ಹತ್ತಕ್ಕೆ ಶಾಲೆಗೆ ಹೊರಡುವುದು, ಪ್ರಾರ್ಥನೆ,ಪಾಠ, ಮಾಡುವುದು ಪುನಃ ಸಂಜೆ ಐದಕ್ಕೆ ಮನೆಗೆ ಮರಳುವುದು. ಇದು ಇಂದಿನ ಬಹುತೇಕ ಶಿಕ್ಷಕರ ದಿನಚರಿ. ಈಗಿನ … Read more

ಐ!!! ಇರುವೆ: ಅಖಿಲೇಶ್ ಚಿಪ್ಪಳಿ

ಎಲ್ಲಾ ಕಾಲದಲ್ಲೂ ಇರುವೆಗಳು ಮನುಷ್ಯನಿಗೆ ಉಪದ್ರವಕಾರಿಗಳೇ ಸೈ ಎಂದು ಸಾಮಾನ್ಯ ತಿಳುವಳಿಕೆ. ಸಂಜೆ ದೇವರ ಮುಂದೆ ಹಚ್ಚಿರುವ ದೀಪದ ಹಣತೆ (ಹಿತ್ತಾಳೆಯದ್ದು) ಬೆಳಿಗ್ಗೆ ನೋಡಿದರೆ ಬಣ್ಣ ಬದಲಾಯಿಸಿ ಕಪ್ಪಾಗಿದೆ, ದೀಪ ನಂದಿಹೋಗಿದೆ. ಹಣತೆಯ ಮೇಲೆ ಅಗಣಿತ ಸಂಖೈಯ ಇರುವೆಗಳು. ಬೆಳಿಗ್ಗೆ ಮತ್ತೆ ದೀಪ ಹಚ್ಚುವ ಮುಂಚೆ ಇರುವೆಗಳನ್ನೆಲ್ಲಾ ದೂರ ಓಡಿಸಬೇಕು. ಹಣತೆಯ ಒಳಗೆ ಎಣ್ಣೆಯಲ್ಲಿ ಬಿದ್ದು ಸತ್ತ ಮತ್ತಷ್ಟು ಅಸಂಖ್ಯ ಇರುವೆಗಳು. ಕೈ-ಕಾಲಿಗೆ ಕಚ್ಚುವ ಜೀವಂತ ಇರುವೆಗಳು ಇಷ್ಟಕ್ಕೇ ಮುಗಿಯಲಿಲ್ಲ, ಅಕ್ಕಿ ಡಬ್ಬದ ಬಾಯಿ ತೆಗೆದರೆ ಅಕ್ಕಿಯಲ್ಲೂ … Read more

ಮನೆಯೆ ಮೊದಲ ಪಾಠಶಾಲೆ: ಸುಮನ್ ದೇಸಾಯಿ

ಮೊನ್ನೆ ಗದಗ ಜಿಲ್ಲೆಯ ೬ನೇ ಸಾಹಿತ್ಯ ಸಮ್ಮೆಳನಕ್ಕ ಹೋಗಿದ್ದೆ. ಅಲ್ಲೆ ಮಕ್ಕಳ ಕಾವ್ಯವಿಹಾರ ಅನ್ನೊ ಒಂದು ಮಕ್ಕಳ ಕವಿಗೊಷ್ಠಿ ಎರ್ಪಡಿಸಿದ್ರು. ಮಕ್ಕಳು ಏನ ಕವಿತೆ ಬರಿಬಹುದು ಅಂತ ಕೂತುಹಲದಿಂದ ನೋಡ್ಲಿಕತ್ತಿದ್ದೆ. ವೇದಿಕೆ ಮ್ಯಾಲೆ ಒಂದ ಹತ್ತು ಮಕ್ಕಳಿದ್ರು. ಕವಿಗೊಷ್ಠಿ ಶುರುವಾದ ಮ್ಯಾಲೆ ಅ ಮಕ್ಕಳ ಪ್ರತಿಭೆ ನೋಡಿ ಆಶ್ಚರ್ಯ ಅನಿಸ್ತು. ಒಬ್ಬರಕಿಂತಾ ಒಬ್ಬರು ಸುಂದರವಾದ ಕವನಗಳನ್ನ ರಚಿಸಿದ್ರು. ಆ ಕವನಗಳಳೊಗ ಬೆರಗು, ಸೊಗಸು, ಮತ್ತ ಪ್ರಸ್ತುತ ಸಮಾಜದಲ್ಲಿಯ ಸಮಸ್ಯೆಗಳ ನೆರಳಿತ್ತು. ಮಕ್ಕಳ ಈ ಸೂಷ್ಮ ಗ್ರಹಣ ಶಕ್ತಿ … Read more

ಹೆಸರಿಡದ ಕಥೆಯೊಂದು (ಭಾಗ 2): ಪ್ರಶಸ್ತಿ ಪಿ.

ಇಲ್ಲಿಯವರೆಗೆ ಕೈಯಲ್ಲಿದ್ದ ಕರಗಿದ ಐಸ್ ಕ್ಯಾಂಡಿ ಪಟ್ಟಣಕ್ಕೆ ಬಂದು ಕಳೆದೇ ಹೋಗುತ್ತಿರುವ ಕಾಲದ ಬಗ್ಗೆ, ಇನ್ನೂ ದೊರಕದ ಭದ್ರ ಕೆಲಸದ ನೆನಪ ಹೊತ್ತು ತಂತು. ಬಂದೊಂದು ತಿಂಗಳಿನಲ್ಲೇ ಒಂದು ದಿನವೂ ಬಿಡದೆ ಇಂಟರ್ವ್ಯೂಗಳಿಗೆಂದು ಅಲೆದಿದ್ದರೆ ಏನಾದ್ರೂ ಕೆಲಸ ದಕ್ಕುತ್ತಿತ್ತೇನೋ. ಆದ್ರೆ ದಿನಾ ಅಲೆಯಲು ದುಡ್ಡೆಲ್ಲಿ ? ಕೆಲಸ ಹುಡುಕ್ತಿದಾನೆ ಬೇಕಾಗತ್ತೆ ಅಂತ ಅಪ್ಪ ತಿಳಿದು ಕೊಟ್ಟರೆ ತಾನೆ ಇವನಿಗೆ ದುಡ್ಡು ? ಸ್ನೇಹಿತರತ್ರ ಎಷ್ಟಂತ ಕೇಳೋದು ? ಕಂಡರೆ ಸಾಲ ಕೇಳ್ಬೋದು ಅಂತ ಇವನ ಕಾಲೇಜು ಗೆಳೆಯರೆಲ್ಲಾ … Read more

ಸಾಮಾನ್ಯ ಜ್ಞಾನ (ವಾರ 20): ಮಹಾಂತೇಶ್ ಯರಗಟ್ಟಿ

ಪ್ರಶ್ನೆಗಳು: ೧.    ೦೩.೦೨.೨೦೧೩ರಂದು ಬಿಡುಗಡೆಯಾದ ಖುಷ್ವಂತನಾಮ ದಿ ಲೆಸೆನ್ಸ್ ಆಫ್ ಮೈ ಲೈಫ್ ಈ ಕೃತಿಯ ಕರ್ತೃ ಯಾರು? ೨.    ವಾರಣಾಸಿ ಯಾವ ನದಿ ದಡದ ಮೇಲಿದೆ? ೩.    ಪ್ರಕೃತಿ ಚಿಕಿತ್ಸೆ ಕುರಿತು ಪುಸ್ತಕ ಬರೆದ ಭಾರತದ ಪ್ರಧಾನಿ ಯಾರು? ೪.    ಟೆನ್ನಿಸ್‌ನಲ್ಲಿ ಗ್ರಾಂಡ್ ಸ್ಲ್ಯಾಮ್ ಟೆನಿಸ್ ಪ್ರಶಸ್ತಿ ಪಡೆದ ಪ್ರಥಮ ಭಾರತೀಯ ಯಾರು? ೫.    ಕಿತ್ತೂರು ಚೆನ್ನಮ್ಮ ಚಿತ್ರದ ನಿರ್ದೇಶಕರು ಯಾರು? ೬.    ೭೪ನೇ ಸಂವಿಧಾನ ತಿದ್ದುಪಡಿಯ ಕಾಯ್ದೆ ಯಾವುದಕ್ಕೆ ಸಂಬಂಧಿಸಿದೆ? ೭.    ೨೦೧೨ ಡಿಸೆಂಬರ್ … Read more

ಓಯಸಿಸ್: ನಿನಾದ (ಭಾಗ 4)

ಇಲ್ಲಿಯವರೆಗೆ ಇತ್ತ ಟೀಂ ಲೀಡರ್ ಹಂಜ್ಹಾ.. ನಿಗೆ ಮೈ ಪರಚಿ ಕೊಳ್ಳುವಂತೆ ಆಯಿತು. ಒಂದು ದಿನ ಸಮಯ ನೋಡಿ ಹೇಳಿ ಬಿಟ್ಟೆ. ನೋಡು ನಾನು  ಎಲ್ಲಿಯೂ ಸಲ್ಲುವೆ. ಹೀಗಾಗಿ ಮಾತ್ರ ನನ್ನ ಇಲ್ಲಿ ವಾಪಸು ಕರೆದರು. ನಿನಗೆ ನೀನ್ ಹೇಳಿದ್ದು  ನೆನಪಿದೆಯ??? ನೀ ಮಾತ್ರ ಇಲ್ಲೇ ಇರು… ಅಂದಾಗ ಅವನ ಮುಖ ನೋಡಬೇಕಿತ್ತು. ಆಗ ನಿನಾದ ೪ ವರ್ಷದ ಕೆಳಗಿನ ಒಂದು ದಿನದ ಕಹಿ ಘಟನೆ ಹೇಳಿದಳು. ಒಂದು ದಿನ ಶುಕ್ರವಾರ, ಮದ್ಯನ್ನ ಸರಿ ಸುಮಾರು ೨ … Read more

ಹರಟೆ ಕಟ್ಟೆಯ ಪದ್ಮಜಾ: ನಾಗರತ್ನಾ ಗೋವಿಂದನ್ನವರ

ಸುಮಾ : ಏನ್ರಿ ಆಶಾ ಇಷ್ಟೊತ್ತಾಯಿತು ಇನ್ನು ಪದ್ಮಜಾರ ಸುದ್ದಿನೇ ಇಲ್ಲಾ.   ಆಶಾ : ಹೌದು ಯಾಕೊ ಏನೋ ಇಷ್ಟೊತ್ತಾಯಿತು ಇನ್ನು ಬಂದಿಲ್ಲ ಅವರಿಲ್ಲ ಅಂದ್ರ ನಮ್ಮ ಹರಟೆ ಕಟ್ಟೆಗೆ ಕಳಾನ ಇರುದುಲ್ಲ ನೋಡ್ರಿ. ಸುಮಾ : ನೀವು ಹೇಳುವುದು ಖರೇ ಅದ ಏನರ ಹೊಸ ಸುದ್ದಿ ಚರ್ಚಾ ಮಾಡಾಕ ಸಿಗ್ತದ ಅಂದ್ರ ಅದು ಅವರಿಂದಾನ ಸಿಗೋದು ಅದಕ ಮತ್ತ ನಾವೆಲ್ಲ ಅವರನ್ನ ಹರಟೆ ಕಟ್ಟೆ ಪದ್ಮಜಾ ಅಂತ ಕರೆಯುದು…. ಹಾ ಹಾ ಹಾ!  ಅಲ್ಲಿ … Read more