ವಾರ ಮೂರು….. :)))

  ಕಳೆದ ವಾರ ಫೇಸ್ ಬುಕ್ ನಲ್ಲಿ ಚಿಕ್ಕಲ್ಲೂರು ಅನ್ನೋ ಹೆಸರು ನೋಡಿ ಆಶ್ಚರ್ಯವಾಗಿತ್ತು.  ಹಿರಿಯ ಪತ್ರಕರ್ತರಾದ ಕುಮಾರ ರೈತ ಅವರು ಚಿಕ್ಕಲ್ಲೂರು ಜಾತ್ರೆಯ ಚಿತ್ರಗಳನ್ನು ಫೇಸ್ ಬುಕ್ ನಲ್ಲಿ ಹಂಚಿಕೊಳ್ಳುವುದರ ಜೊತೆಗೆ "ಜನಪದ ನಾಯಕ ಸಿದ್ದಪ್ಪಾಜಿ ಸ್ಮರಣೆಗೆ ಚಾಮರಾಜನಗರ ಜಿಲ್ಲೆ, ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರಿನಲ್ಲಿ ಜಾತ್ರೆ ನಡೆಯುತ್ತದೆ. ಜ. 27ರಂದು ನಾನು ಹೋಗಿದ್ದೆ. ಅಲ್ಲಿನ ಚಂದ್ರಮಂಡಲದ ಬೆಂಕಿ ಎತ್ತ ಹೆಚ್ಚು ಉರಿಯುವುದೋ ಅತ್ತ ಮುಂದಿನ ಹಂಗಾಮಿನಲ್ಲಿ ಸಮೃದ್ಧತೆ ಇರುತ್ತದೆ ಎಂಬುದು ನಂಬಿಕೆ" ಎಂಬ ಸಾಲನ್ನು  ಫೋಟೋಗಳ … Read more

ಕಾರ್ನಾಡರ “ಹಯವದನ”

ಮನುಷ್ಯನ ಅಪೂರ್ಣತೆಯ ಬಗೆಗೆ ಆಲೋಚಿಸಲು, ಕಾರ್ನಾಡರ “ಹಯವದನ” ಓದಬೇಕು. ನಾಟಕ ಆರಂಭ ಆಗುವುದು ಗಣೇಶನ ಅಪೂರ್ಣತೆಯ ಉಲ್ಲೇಖನದಿಂದ. ಇಲ್ಲಿ ಕಂಡುಬರುವುದು ಬರೇ ಮೂರು ಮುಖ್ಯ ಪಾತ್ರಗಳು – ಪದ್ಮಿನಿ, ದೇವದತ್ತ ಹಾಗೂ ಕಪಿಲ. ಇಲ್ಲಿ ಅಪೂರ್ಣತೆಯ ಪ್ರತೀಕ ಅನ್ನುವಂತೆ ಹಯವದನನಿದ್ದಾನೆ.  ಇಲ್ಲಿನ ಕಥೆ ಸಾಮಾನ್ಯವಾಗಿ ಗೊತ್ತಿರುವಂತಹದೆ. ಯಾವುದೇ ಕಾರಣಕ್ಕೆ ಇಬ್ಬರು ಮನುಷ್ಯರ ತಲೆ ಅದಲು ಬದಲಾದರೆ, ತಲೆ ಇರುವವನನ್ನು ಅವನ ಹೆಸರಿನಿಂದ ಗುರುತಿಸುತ್ತೇವೆ, ಯಾಕೆಂದರೆ ತಲೆ ಮುಖ್ಯ. ಈ ಸಣ್ಣ ತುಣುಕನ್ನು ಹಿಡಿದುಕೊಂಡು ಕಾರ್ನಾಡರು ತುಂಬಾ ವಿಚಾರ … Read more

ಓ ನಾಗರಾಜ ಅಪ್ಪಣೆಯೇ…

  ನಮ್ಮ ಆಫೀಸಿನ ಎದುರು ಬೈಕುಗಳು ಸಾಲಾಗಿ ನಿಲ್ಲುವ ಜಾಗದಲ್ಲಿ ಮೊನ್ನೆ ನಾಗರಹಾವೊಂದು ಬಂದು ಮಲಗಿತ್ತು. ಅದೇನು ಬೈಕಿನಂತೆ ಸರದಿ ಸಾಲಿನಲ್ಲಿ ಇರಲಿಲ್ಲ. ಯಾರದೋ ಬೈಕಿನ ಟ್ಯಾಂಕ್ ಕವರ್‌ನಲ್ಲಿ ಬೆಚ್ಚಗೆ ಪವಡಿಸಿತ್ತು. ಸದ್ಯ ಬೈಕಿನ ಸವಾರನಿಗೆ ಅದೇನು ಮಾಡಲಿಲ್ಲ. ಗಾಬರಿಯಿಂದ ಇಳಿದು ಯಾವುದೋ ಚರಂಡಿ ಹುಡುಕಿಕೊಂಡು ಹೋಯಿತು. ಆವತ್ತೆಲ್ಲ ಆ ಹಾವಿನ ಬಗ್ಗೆ ಗುಲ್ಲೋ ಗುಲ್ಲು. ಅಲ್ಲಿದ್ದವರೆಲ್ಲ ಹಾವು ಅಲ್ಲಿಗೆ ಏಕೆ ಬಂತು ಎಂಬುದರ ಬಗ್ಗೆ ಒಂದು ವಿಚಾರಸಂಕಿರಣಕ್ಕೆ ಆಗುವಷ್ಟು ಮಾತಾಡಿದರು ಎನ್ನಿ. ಹಾವುಗಳು ಯಾರಿಗೆ ತಾನೆ … Read more

ಅಂತರಂಗದ ಗಂಗೆ

ಆಫೀಸ್‍ಗೆ ಮುಂಚೆ ಬರುವ ಅಭ್ಯಾಸವಿದ್ದರೆ ಇದೊಂದು ಮುಜುಗರ. ಒಳಗೆಲ್ಲ ಕಸ ಗುಡಿಸುತ್ತಿದ್ದರು. ಹಾಗಾಗಿ ಸೆಕ್ಷನ್ನಿನ ಹೊರಗೆ ನಿಂತಿದ್ದೆ. ನಾನು  ನಿಂತಿರುವುದನ್ನು  ಗಮನಿಸಿದ ಆಕೆ ಬೇಗ-ಬೇಗ ಎಂಬಂತೆ ಗುಡಿಸಿ, ಹಾಗೆ ಒಳಗಿದ್ದ ಡಸ್ಟ್ ಬಿನ್ ಗಳ ಎಲ್ಲ ಕಾಗದಗಳನ್ನು ಒಂದೆ ಬ್ಯಾಸ್ಕೆಟ್ ಗೆ ಹಾಕಿಹೊರಬಂದಳು. ಒಳಗೆ ಗುಡಿಸಿದಾಗ ಎದ್ದ  ಧೂಳು ಸ್ವಲ್ಪ  ಸರಿಯಾಗಲಿ ಎಂದು ಒಂದೆರಡು ನಿಮಿಷ ನಿಂತಿದ್ದೆ. ಆಕೆ ಒಳಗಿನಿಂದ ತಂದ ಕಸವನ್ನೆಲ್ಲಹೊರಗಿನ ದೊಡ್ಡ ಕಸದಡಬ್ಬಿಗೆ ಹಾಕುವ ಮುನ್ನ ಅದೇನೋ  ಗಮನಿಸಿದಳು.  ಈ ಅಕ್ಷರಜ್ಞಾನವಿಲ್ಲದಿರುವ ಕೆಲಸದವರಲ್ಲಿ ಒಂದು … Read more

ಮೂರು ಕಾವ್ಯಗಳು

ಮನಸ್ಸೆಂಬ ಚಿಟ್ಟೆ ************* ಚಿಟ್ಟೆ ಚಿಟ್ಟೆ ಬಣ್ಣದ ಚಿಟ್ಟೆ  ನೋಡಲು ಕಣ್ಣುಗಳು ಸಾಲದು ಮೈಯ ಮೇಲೆಲ್ಲಾ ಕಪ್ಪು ಕಂಗಳು ನೋಡುಗರ ಕಣ್ಮನ ಸೆಳೆಯುವುದು    ಅಲ್ಲಿಂದಿಲ್ಲಿಗೆ ಹಾರುವೆ  ಹಿಡಿಯಲು ಹೋದರೆ ಓಡುವೆ  ಜಗದ ಸೃಷ್ಟಿಯ ಮೆಚ್ಚಲೇ ಬೇಕು  ನಿನಗೆ ನೀನೆ ಸಾಟಿಯಿರಬೇಕು    ಒಮ್ಮೆ ಇಲ್ಲಿ ಒಮ್ಮೆ ಇನ್ನೆಲ್ಲೋ  ಹಾರುವ ನಿನ್ನನು ನೋಡಿದರೆ  ಮನಸು ಕೂಡ ನಿನ್ನೊಡನೆಯೇ  ಕುಣಿಯುತ ಹೊರಡುವುದು ಬೇರೆಡೆಗೆ !! -ಅರ್ಪಿತಾ ರಾವ್  ನವಮಾಸ  ********* ನವಮಾಸ ಬಂದಿದೆ ಆಹ್ಲಾದವ ತಂದಿದೆ ಎನ್ನ ಬಾಳಿನಲ್ಲಿ … Read more

ಕಾಂಟೆಕ್ಸ್ಟ್

ಮನುಷ್ಯನ ಭಾವನೆಗಳು ಸಾರ್ವತ್ರಿಕ. ಆದರೆ ಅವುಗಳ ಅಭಿವ್ಯಕ್ತಿ ಬದಲಾಗುತ್ತದೆ – ಬೇರೆ ಬೇರೆ ದೇಶಗಳಲ್ಲಿ, ಭಾಷೆಗಳಲ್ಲಿ, ಕಾಲಘಟ್ಟಗಳಲ್ಲಿ ಕಾಣಬರುವ ರೀತಿಯಲ್ಲಿ ಭಿನ್ನತೆಯಿರುತ್ತದೆ. ಇದನ್ನು ‘ಕಾಂಟೆಕ್ಸ್ಟ್’ ಅಂತೀನಿ ನಾನು. ಈ ಕಾಂಟೆಕ್ಸ್ಟ್ ಗೊತ್ತಿದ್ದಾಗ ಮಾತ್ರ ಕೆಲವು ಪಾತ್ರಗಳು, ಸನ್ನಿವೇಶಗಳು, ಚಿತ್ರಗಳನ್ನು ಅಪ್ಪ್ರಿಶಿಯೇಟ್ ಮಾಡಲಿಕ್ಕೆ ಸಾಧ್ಯ! ಇದಕ್ಕೆ ಉದಾಹರಣೆಯಾಗಿ ಒಂದಕ್ಕಿಂತ ಒಂದು ವಿಭಿನ್ನವಾಗಿರುವ ಎರಡು  ಮಹಾನ್ ಚಿತ್ರಗಳ ಬಗ್ಗೆ ಹೇಳಲು ಇಷ್ಟಪಡುತ್ತೇನೆ – “೧೨ ಆಂಗ್ರಿ ಮೆನ್” ಹಾಗು “ದಿ ಗುಡ್, ದಿ ಬ್ಯಾಡ್ ಅಂಡ್ ದಿ ಅಗ್ಲಿ”. ಪ್ರತಿಯೊಬ್ಬ … Read more

ಮಾತೃ ಭಾಷೆಗೆ ಸಿಕ್ಕ ಮನ್ನಣೆ

  ಹಚ್ಚೇವು ಕನ್ನಡದ ದೀಪ  ಕರು ನಾಡ  ದೀಪ  ಸಿರಿನುಡಿಯ ದೀಪ ಒಲವೆತ್ತಿ ತೋರುವಾ ದೀಪ l            ನಾಲ್ಕು ವರ್ಷಗಳ ಹಿಂದೆ ಮೊದಲ ಬಾರಿಗೆ ಭಾರತದ ನನ್ನ ಹಳ್ಳಿ ಬಿಟ್ಟು ಈ ಮರುಭೂಮಿಗೆ ಬಂದು ಇಳಿದಾಗ ಅಸಾಧ್ಯ ಭಯ ಇತ್ತು. ದೇವರೇ! ಹೇಗೆ ನಾನು ಬದುಕಿ ಉಳಿದೇನಾ ಅಂತ. ಆದರೆ ನಾನು ಇದ್ದ ಜಾಗ ತುಂಬಾ ಸುರಕ್ಷಿತವಾಗಿತ್ತು. ನನ್ನ ಬಹು ಮಹಡಿ ಕಟ್ಟಡದಲ್ಲಿ ಹಾಗೂ ಸುತ್ತಲೂ ಎಲ್ಲವೂ ಇತ್ತು. ಕ್ಲಿನಿಕ್, … Read more

ನನ್ನೊಳಗಿನ ಗುಜರಾತ…! ಭಾಗ 3

ಯಾರಿಗುಂಟು ಯಾರಿಗಿಲ್ಲ…!! ಇದನ್ನು ಅದೃಷ್ಟ ಅನ್ನುತ್ತಿರೊ ಅಥವಾ ದುರಾದೃಷ್ಟ ಅನ್ನುತ್ತಿರೊ ನಾನರಿಯೆ. ಆದರೆ, ನಾನು ಮಾತ್ರ ಬಾಲ್ಯದಲ್ಲಿಯೇ ಈ ಬದುಕಿನ ಆದಿ ಅಂತ್ಯಗಳೆಂಬ ಜನನ ಮರಣಗಳನ್ನು ಬಲು ಸನಿಹದಿಂದ ಕಣ್ಣು ತುಂಬ ಕಂಡವನು. ಅವುಗಳ ಅರ್ಥವನ್ನು ತಿಳಿಯುವ ಮೊದಲೇ ಬೆಳ್ಳಿ ಪರದೆಯ ಮೇಲೆ ಮೂಡಿ ಬರುವ ಅದ್ದೂರಿ ವೈಭವಿಕ ಚಲನಚಿತ್ರದ ದೃಶ್ಯದಂತೆ ಎರಡರ ಜೀವಂತ ದೃಶ್ಯವಿದ್ಯಮಾನಗಳನ್ನು ಕಂಡು, ಬುದ್ಧಿ ಬೆಳೆಯುತ್ತಿದ್ದಂತಯೇ ಅವುಗಳ ಆಳ ಮತ್ತು ವಿಸ್ತಾರಗಳನ್ನು ತಿಳಿಯುವ ಪ್ರಯತ್ನಕ್ಕೆ ಇಳಿದವನು. ಪುಟ್ಟು ಊರಲ್ಲಿ ಹುಟ್ಟಿ, ಗ್ರಾಮೀಣ ಬದುಕನ್ನು … Read more

ಬೆಟ್ಟದ ಅ೦ಗಳದಲ್ಲೊ೦ದು ದಿನ

ಈ ಬಾರಿಯ ರಜಾ ಮಜಾವನ್ನು ಅನುಭವಿಸಲು ಮಿತ್ರರೆಲ್ಲ ಸೇರಿ ಭೂ ಲೋಕದ ‘ಸ್ವರ್ಗ’ ಕೊಡಗಿಗೆ ಹೋಗುವುದೆ೦ದು ತೀರ್ಮಾನಿಸಿದೆವು. ನಮ್ಮ ಪ್ರವಾಸದ ಮುಖ್ಯ ವೀಕ್ಷಣಾ ತಾಣವಾಗಿ ಆರಿಸಿಕೊ೦ಡದ್ದು ಮುಗಿಲುಪೇಟೆಯೆ೦ದೇ ಖ್ಯಾತಿ ಗಳಿಸಿರುವ ಮಾ೦ದಲಪಟ್ಟಿ ಪರ್ವತ ಸಾಲುಗಳನ್ನು. ಅ೦ತೆಯೇ ನಿಗದಿತ ದಿನಾ೦ಕದ೦ದು ಮು೦ಜಾನೆ ಉಡುಪಿಯಿ೦ದ ಮ೦ಗಳೂರಿಗಾಗಿ ಕೊಡಗಿಗೆ ಹೊರಟೆವು,ಹೊರಟಾಗ ಮು೦ಜಾನೆ ೫ಃ೩೦. ಮು೦ಜಾನೆಯ ಚುಮು ಚುಮು ಚಳಿಯಲ್ಲಿ ಗಾಡಿ ಓಡಿಸುವುದು ತು೦ಬಾ ಮಜವಾಗಿತ್ತು. ನಾನು ಜೀವನದಲ್ಲಿ ಮೊತ್ತ ಮೊದಲ ಬಾರಿಗೆ ಸೂರ್ಯೋದಯ ನೊಡಿದ್ದೇ ಅ೦ದು ! ಹಾಗೂ ಸೂರ್ಯ ನನ್ನ … Read more

ಇಬ್ಬರ ಚುಟುಕಗಳು

  ನಿಸ್ವಾರ್ಥ.. ಒಕ್ಕಲಿಗ ನೆಟ್ಟ ಗಿಡ ಇಂದು ದೊಡ್ಡ ಮರವಾಗಿ ನೆರಳಾಗಿ ನಿಂತಿದೆ ದಣಿದ ದೇಹಕೆ ಯಾವ ಭೇದವನ್ನು ತೋರದೆ ಫಲ! ಭೂ ತಾಯಿ ಕೊಟ್ಟ ನೀರಿಂದ ರೈತ ಸುರಿಸಿದ ಬೆವರಿಂದ ಫಲಸಿಕ್ಕಿತು! ಹೊಟ್ಟೆಗೆ ಅನ್ನ ಜೊತೆಗೆ ಮುಚ್ಚಿಕೊಳ್ಳಲು ಮಾನ!! -ಮಂಜು ವರಗಾ   ಕಣ್ಣೀರು ಅತ್ತುಬಿಡು ಎಂದಾಗ,  ಬರದ ಹನಿ, ಅಳಬೇಡ ತಡೆಯೆಂದಾಗ, ಉಕ್ಕಿ ಹರಿವ ಧಾರೆ!! ಹೃದಯ ಇದ್ದಾಗ,  ಕೊಂಚವೂ ಗೋಚರಿಸದ , ತನ್ನನ್ನೇ ಕೊಟ್ಟು ಬರಿದಾದ ಮೇಲೆ,  ಭಾರ ತೋರುವ,  ಏಕೈಕ  ವೈಚಿತ್ರ್ಯ!! … Read more

ಹೂವು, ಮರ, ಬಾನು

               ಮುರಳಿ ಮೋಹನ್ ಕಾಟಿ                                    ಪ್ರಸಾದ್ ಶೆಟ್ಟಿ ವಿ.ಸೂ.: ಹೂವಿನ ಚಿತ್ರಗಳನ್ನು ಪ್ರಸಾದ್ ಶೆಟ್ಟಿಯವರು ಲಾಲ್ ಬಾಗ್ ನ ಪುಷ್ಪಮೇಳದಲ್ಲಿ ತೆಗೆದಿದ್ದಾರೆ.             ಕೊನೆಯ ಮೂರು ಚಿತ್ರಗಳನ್ನು ಮುರಳಿ ಮೋಹನ್ ರವರು ತೆಗೆದಿದ್ದಾರೆ.