ಹೆಣ್ಣು:ಎರಡು ಚಿತ್ರಗಳು-ರೇಷ್ಮಾ ಎ.ಎಸ್.

ಗೆಳತಿಯ ತಂಗಿ ಅಂಜಲಿಗೆ ಮಗುವಾಗಿದೆ, ಮೂರನೆಯದು. ನರ್ಸಿಂಗ್ ಹೋಂಗೆ ಮಗು-ಬಾಣಂತಿಯನ್ನು ನೋಡಲು ಹೋಗಿದ್ದೆ. ಮುದ್ದಾದ ಹೆಣ್ಣು ಮಗು ತೊಟ್ಟಿಲಲ್ಲಿ  ಮಲಗಿತ್ತು. ಗುಲಾಬಿ ಬಣ್ಣ, ಕಪ್ಪು ಗುಂಗುರು ಕೂದಲು, ಸುಂದರ ಮಗು. ಆದರೆ ಮಗುವಿನ ತಾಯಿಯ ಕಣ್ಣುಗಳು ಕೆಂಪಡರಿ ಊದಿಕೊಂಡಿದ್ದವು, ತುಂಬಾ ಅತ್ತ ಹಾಗೆ. ಗೆಳತಿ ಮತ್ತು ಅವಳ ತಾಯಿಯ ಮುಖ ಒಣಗಿ ಕಳಾಹೀನವಾಗಿತ್ತು. ಆಶ್ಚರ್ಯದಿಂದ ಕಾರಣ ಕೇಳಿದಾಗ ಬಾಣಂತಿ ಬಿಕ್ಕಳಿಸಿ ಅಳತೊಡಗಿದಳು. ಗೆಳತಿ ಸಪ್ಪೆ ಮುಖದಿಂದಲೇ ಬಾಯಿಬಿಟ್ಟಳು. "ಈ ಸಾರಿ ಗಂಡು ಮಗೂನೇ ಆಗುತ್ತೇಂತ ಎಲ್ರೂ ತುಂಬಾ … Read more

ಇಲಿ ಪಾಶಾಣ ಮಾರುವವನ ಜೀವನ ಪ್ರೀತಿ: ನಟರಾಜು ಎಸ್. ಎಂ.

ಜಲ್ಪಾಯ್ಗುರಿಯ ಮಧ್ಯ ಭಾಗದಲ್ಲಿ ಒಂದು ಪುಟ್ಟ ನದಿ ಹರಿಯುತ್ತೆ. ಆ ನದಿಯ ಹೆಸರು ಕರೋಲ. ಬಹುಶಃ ಬೆಂಗಾಲಿಯಲ್ಲಿ ಕರೋಲ ಅಂದರೆ ಹಾಗಲಕಾಯಿ. ಈ ನದಿಗೆ ಅಲ್ಲಲ್ಲಿ ಪುಟ್ಟ ಪುಟ್ಟ ಸೇತುವೆಗಳಿವೆ. ಅಂತಹ ಒಂದು ಪುಟ್ಟ ಸೇತುವೆ ದಿನ್ ಬಜಾರ್ ಮೋಡ್ ಎನ್ನುವ ಜಾಗದ ಬಳಿ ಇದೆ. ದಿನ್ ಬಜಾರ್, ಜಲ್ಪಾಯ್ಗುರಿಯಲ್ಲಿ ವ್ಯಾಪಾರ ವಹಿವಾಟು ನಡೆಯುವ ಒಂದು ಪ್ರಮುಖ ಜಾಗ. ನಾನು ಮನೆಯಿಂದ ಆಫೀಸಿಗೆ ಹೊರಡಬೇಕಾದರೆ ಈ ದಿನ್ ಬಜಾರ್ ಅನ್ನು ದಾಟಿಯೇ ಹೋಗಬೇಕು. ನನ್ನ ಮನೆಯಿಂದ ಆಫೀಸಿಗೆ … Read more

ಮುಂಗಾರು ಮಳೆ ಮತ್ತು ಗಾಳಿಪಟ:ವಾಸುಕಿ ರಾಘವನ್ ಅಂಕಣ

                ಯೋಗರಾಜ್ ಭಟ್ಟರ ಚಿತ್ರಗಳ ಬಗೆಗಿನ ಚರ್ಚೆಗಳು ಯಾವಾಗಲೂ ಸ್ವಾರಸ್ಯಕರವಾಗಿರುತ್ತವೆ. “ಭಟ್ರು ಏನ್ ಸೂಪರ್ ಆಗಿ ಹಾಡುಗಳನ್ನ ಡೈಲಾಗುಗಳನ್ನ ಬರೀತಾರೆ ಗುರೂ, ಸಕ್ಕತ್ತು ತಮಾಷೆಯಾಗಿ ಇರುತ್ತಪ್ಪಾ” ಅನ್ನುವುದರಿಂದ ಹಿಡಿದು “ಭಟ್ರು ಪಿಚ್ಚರಲ್ಲಿ ಅದೇ ಬೇಜವಾಬ್ದಾರಿ ಉಡಾಫೆ ಹೀರೋ, ಸುಮ್ನೆ ಉದ್ದುದ್ದ ಡೈಲಾಗ್ ಹೊಡ್ಕೊಂಡು ಅಲೀತಾ ಇರ್ತಾರಪ್ಪ ಅಷ್ಟೇ, ಛೇ ಅವ್ರು ಬೇರೆ ಥರ ಯಾವುದಾದರೂ ಫಿಲಂ ಮಾಡ್ಬೇಕಪ್ಪಾ” ಅನ್ನುವವರೆಗೂ ಅಭಿಪ್ರಾಯಗಳು ಕೇಳಿಬರುತ್ತವೆ! “ಭಟ್ಟರ ಬೆಸ್ಟ್ ಫಿಲಂ ಯಾವುದು?” … Read more

ರಿಟೈರಾದ ದೇವರು : ಪ್ರಶಸ್ತಿ ಅಂಕಣ

"ದೇವರು ರಿಟೈರಾಗುತ್ತಿದ್ದಾನೆ"!!. ಕೆಲವರಿಗೆ ಈ ಶೀರ್ಷಿಕೆಯೇ ವಿಚಿತ್ರವೆನಿಸಿದರೆ ಉಳಿದವರಿಗೆ ನಾನಿಂದು ಯಾರ ಬಗ್ಗೆ ಹೇಳಹೊರಟಿರುವೆನೆಂದು ಹೊಳೆದಿರಬಹುದು. ಹಾಂ, ಹೌದು . ಹೇಳಹೊರಟಿರುವುದು ಇಂದಷ್ಟೇ ತನ್ನ ಕ್ರಿಕೆಟ್ ಜಗತ್ತಿನ ಎಲ್ಲಾ ಪ್ರಕಾರಗಳಿಂದ ಕ್ರಿಕೆಟ್ ಲೋಕದ ದಿಗ್ಗಜನ ಬಗ್ಗೆ. ದಾಖಲೆಗಳ ಮೇಲೆ ದಾಖಲೆಗಳ ಬರೆಯುತ್ತಾ ಹೋದ ಅವನೆಲ್ಲಾ ದಾಖಲೆಗಳು ಕ್ರಿಕೆಟ್ ಪ್ರಿಯರಿಗೆ ಎರಡರ ಮಗ್ಗಿಯಂತೆ ನೆನಪಲ್ಲಿದ್ದರೂ ದಾಖಲಾಗದ ಹಲವು ಸವಿನೆನಪುಗಳು ಅವನ ಆಟದ ಸುತ್ತ. ಕ್ರಿಕೆಟ್ ಜಗತ್ತಿನ ಬಂಗಾರದ ಮನುಷ್ಯ, ಹೆಸರಲ್ಲೇ ಚಿನ್ನ ಇಟ್ಟುಕೊಂಡಿರೋ ಸಚಿನ್ ಎಂದು ಯಾರಾದರೂ ಅಂದರೂ … Read more

ಬಾಲ್ಯ ವಿವಾಹವೆಂಬ ಪಿಡುಗು:ಅಖಿಲೇಶ್ ಚಿಪ್ಪಳಿ ಅಂಕಣ

 [ನವಂಬರ್ ೧೪ ಮಕ್ಕಳ ದಿನಾಚರಣೆ. ಸ್ವತಂತ್ರ ಲಭಿಸಿ ೬೬ ವರ್ಷಗಳು ಸಂದರೂ ಭಾರತದಲ್ಲಿ ಹಾಗೂ ವಿಶ್ವದಲ್ಲಿ ಅವಧಿಪೂರ್ವ ವಿವಾಹಗಳು ನಡೆಯುತ್ತವೆ. ಮಕ್ಕಳನ್ನು ಮಧುಮಕ್ಕಳನ್ನಾಗಿ ಮಾಡಿ ಅವರ ಜೀವನವನ್ನು ದುರ್ಭರ ಮಾಡುವ ಪದ್ಧತಿಯಿದೆ. ಸರ್ವರಿಗೂ ಸಮಾನ ಶಿಕ್ಷಣ ಲಭಿಸಿದಾಗ ಈ ಅನಿಷ್ಟ ಪದ್ಧತಿ ನಿಲ್ಲಬಹುದು ಎಂಬ ಆಶಾಭಾವನೆಯೊಂದಿಗೆ ಮಕ್ಕಳ ದಿನಾಚರಣೆ ನಿಮಿತ್ತ ಈ ಲೇಖನ]       ಬಾಲ್ಯ ಎಂಬುದು ಪ್ರತಿಯೊಬ್ಬರ ಜೀವನದಲ್ಲಿ ಅತ್ಯಂತ ಸುಂದರವಾದ, ಮಧುರವಾದ ಕ್ಷಣಗಳು. ಬಾಲ್ಯವೆಂಬುದು ಪ್ರಕೃತಿಯ ಪ್ರತಿಯೊಂದನ್ನು ಅಚ್ಚರಿಯಿಂದ ಗಮನಿಸುವ ಹಂತ, … Read more

ಪೂರ್ವ ಹಾಗೂ ಈಶಾನ್ಯ ಭಾರತದ ಪ್ರವಾಸ (ಭಾಗ 4): ಗುರುಪ್ರಸಾದ ಕುರ್ತಕೋಟಿ

(ಹಿಂದಿನ ಭಾಗ ಓದಲು ಇಲ್ಲಿ ಕ್ಲಿಕ್ಕಿಸಿ)          ಅವತ್ತು ಬೆಳಿಗ್ಗೆ ದಾರ್ಜಿಲಿಂಗ್ ಗೆ ವಿದಾಯ ಹೇಳಿ ಕಾಲಿಮ್ ಪಾಂಗ್‍ಗೆ  ನಮ್ಮ ಸವಾರಿ ಸಾಗಿತ್ತು. ಮಾರ್ಗ ಮಧ್ಯದಲ್ಲಿ ಒಂದು ಅದ್ಭುತ ಜಾಗದಲ್ಲಿ ಟ್ರೆಕ್ಕಿಂಗ್‍ಗೆ ಕರೆದೊಯ್ಯುವುದಾಗಿ ಭರವಸೆ ಕೊಟ್ಟು ನಮ್ಮನ್ನು ಕುತೂಹಲಿಗಳನ್ನಾಗಿರಿಸಿದ್ದ ನಮ್ಮ ನೀ ಮಾ. ನಾವು ಹೊರಟು ಸುಮಾರು ಎರಡು ಗಂಟೆಗಳಾಗಿತ್ತೇನೊ ಲಾಮಾ ಹಟ್ಟಾ ಅನ್ನುವ ಒಂದು ಹಳ್ಳಿಯಲ್ಲಿ ನಮ್ಮ ಗಾಡಿ ನಿಂತಿತು. ಅದು ಮುಖ್ಯ ರಸ್ತೆಯಲ್ಲೇ ಇರುವ ಒಂದು ಹಳ್ಳಿ. ವಿಚಿತ್ರವೆಂದರೆ ಅಲ್ಲಿಂದಲೂ ಕಾಂಚನಜುಂಗಾದ ಮತ್ತೊಂದು … Read more

ಚುಟುಕಗಳು: ಹರ್ಷ ಮೂರ್ತಿ

೧. ವಿರಹ ನೋಡಲು ನಿನ್ನನೆ ಪುನಃ ಕಾಡಿದೆ ಮನಸು ವಿನಃ ಬರಲು ನಾ ನಿನ್ನ ಸನಿಹ ತಡೆದಿದೆ ಈ ವಿರಹ   ೨. ಬೇಸ್ತು ಅದು ಕೂಡ blade ಕಂಪನಿ ಎಂದು ತಿಳಿದು ಬಂದಾಗ ಹಣ ಕಳೆದುಕೊಂಡ ಸ್ನೇಹಿತರ ಕಂಡು ಬಿದ್ದು ಬಿದ್ದು ನಕ್ಕಿದ್ದ ಗುಂಡ ದೊಡ್ಡದಾಗಿ.. ನಂತರ ಬಾಯಿ ಬಡಿದುಕೊಳ್ಳತೊಡಗಿದನು ತಾನೂ ಅಲ್ಲೇ ಹಣ ಇಟ್ಟಿದ್ದು ನೆನಪಾಗಿ!    ೩. ಶುದ್ಧ-ಅಶುದ್ಧ ಶುದ್ಧವಾಗಿದ್ದರೆ  holy.. ಕೆಟ್ಟು ಹೋಗಿದ್ದರೆ  ಪೋಲಿ!    ೪. ತರಲೆ ಪಕ್ಕದ್ಮನೆ ಹುಡುಗಿ … Read more

ಬಾಳವ್ವನ ಬಾಳುವೆ: ನೇಮಿನಾಥ ಬಸವಣ್ಣಿ ತಪಕೀರೆ

ಸಾವಕಾರ್ರ ನಂಗ ಐವತ್ತು ರೂಪಾಯಿ ಕೊಡ್ರಿ ಸಾವಕಾರ್ರ… ಮನೀಗಿ ಅಕ್ಕಿ ತಗೊಂಡು ಹೋಗಬೇಕ್ರಿ ಸಾವಕಾರ್ರ, ಐವತ್ತು ರೂಪಾಯಿ ಕೊಡ್ರಿ ಎಂದು ಅಂಗಲಾಚುತ್ತಿದ್ದ ಸಾರಾಯಿಯ ಅರೆ ನಶೆಯಲ್ಲಿದ್ದ ರಾಮಪ್ಪ. ಸಾವಕಾರ್ರ ಸಿದ್ದಪ್ಪನ ಮುಂದೆ.  ಅಲ್ಲೋ ರಾಮಾ!? ನೀ ಹೀಂಗ ದುಡದಿದ್ದ ರೊಕ್ಕ ಎಲ್ಲ ತಗೊಂಡು ಹೋಗಿ ಶೆರೇದ ಅಂಗಡ್ಯಾಗ ಇಟ್ಟರ ನಿನ್ನ ಹೆಂಡ್ತಿ ಮಕ್ಕಳ ಗತಿ ಏನಾಗಬೇಕೋ ಖೋಡಿ? ದಾರು ಕುಡ್ಯೋದು ಬಿಟ್ಟಬಿಡೋ! ಸಾವಕಾರ್ರ ಸಿದ್ದಪ್ಪ ಬುದ್ಧಿವಾದ ಹೇಳುತಿದ್ದ.  ಏನ್ ಮಾಡಲ್ರೀ ಸಾವಕಾರ್ರ ನಂಗ ಕುಡಿಲಿಕ್ಕಂದ್ರ ನಿದ್ದೀನ ಹತ್ತಂಗಿಲ್ಲ. … Read more

ಸೀರೆ ಎಕ್ಸ್‌ಚೇಂಜ್: ರಶ್ಮಿ.ಆರ್. ಕುಲಕರ್ಣಿ

ಮಹಿಳೆಯರು ಒಂದು ಕಡೆ ಸೇರಿದರೆ ಅವರಲ್ಲಿ ಚರ್ಚಿಸುವ ಮುಖ್ಯವಾದ ವಿಷಯಗಳೆಂದರೆ, ಸೀರೆ ಮತ್ತು ಚಿನ್ನದ ವಡವೆಗಳು,ಚಿನ್ನದ ಬೆಲೆ ಗಗನಕ್ಕೇರಿದ ಮೇಲೆ ಸೀರೆಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು  ಕೊಡುತ್ತಿದ್ದಾರೆ. ಭಾರತೀಯ ಸಂಸ್ಕೃತಿಯಲ್ಲಿ ಸೀರೆಗೆ ವಿಶಿಷ್ಟವಾದ ಸ್ಥಾನ ನೀಡಲಾಗಿದೆ. ಹಿಂದಿನ ಕಾಲದಲ್ಲಿ ಒಂಭತ್ತು ವಾರಿ ಸೀರೆಗಳಿದ್ದವು,  ಮುಂದೆ ಆರು ವಾರಿ ಸೀರೆಗಳು ಬಂದವು. ಈಗೀಗ ರೆಡಿ ಸೀರೆಗಳು ಮಾರುಕಟ್ಟೆಗೆ ಬಂದಿವೆ. ಸಲ್ವಾರ ಕಮೀಜ,ಸೀರೆ ಜೊತೆಗೆ ಪೈಪೋಟಿಗಿಳಿದರೂ ಕೂಡ ಸೀರೆ ತನ್ನದೇ ಆದ  ಸ್ಥಾನ ಉಳಸಿಕೊಂಡಿದೆ ಎನ್ನುವದಕ್ಕೆ ನಮ್ಮ ಮಹಿಳೆಯರೇ ಸಾಕ್ಷಿ.   … Read more

ಮದ್ಲ ಮನಿ ಗೆದ್ದು, ಆಮ್ಯಾಲೆ ಮಾರ ಗೆದೀಬೇಕು!:ಸುಮನ್ ದೇಸಾಯಿ ಅಂಕಣ

          ಮೊನ್ನೆ ಟಿವ್ಹಿ ಒಳಗ ಒಂದ ಕ್ವಿಜ್ ಶೋ ನೋಡ್ಲಿಕತ್ತಿದ್ದೆ. ಭಾಗವಹಿಸಿದವರು ಸುಮಾರು ೧೬ ರಿಂದ್ ೧೮ ವಯಸ್ಸಿನ ಒಟ್ಟು ಎಂಟ ಮಂದಿ ಇದ್ರು. ನಾಲ್ಕ ಗುಂಪ ಮಾಡಿದ್ರು. ಒಂದ ಗುಂಪಿನ್ಯಾಗ ಇಬ್ಬರು, ಭಾಗವಹಿಸಿದ ಹುಡುಗರ ಪರಿಚಯ ಮಾಡಿಕೊಟ್ಟು, ಪ್ರಶ್ನೆಗಳನ್ನ ಕೇಳಲಿಕ್ಕೆ ಶುರು ಮಾಡಿದ್ರು. ಎಷ್ಟ ಸರಳ ಪ್ರಶ್ನೆ ಅದು," ಕೌರವರ ತಂದೆ ಯಾರು?" ಅದಕ್ಕ ಅವರು ಕೊಟ್ಟ ಉತ್ತರಾ "ಅರ್ಜುನ" ಅಂತ. ಅದನ್ನ ಕೇಳಿ ನಾ ದಂಗ ಬಡಧಂಗ ಕುತಿದ್ದೆ. ನಮ್ಮ … Read more

ಯಮಾಲಯದಲ್ಲಿ ಗಿಜಿ ಗಿಜಿ: ಶ್ರೀಕಾಂತ್ ಮಂಜುನಾಥ್

ಕೊರವಂಗಲ ವಂಶವೃಕ್ಷದಲ್ಲಿ ನವಗ್ರಹಗಳಾದ ಚಿಕ್ಕಪ್ಪ ದೊಡ್ಡಪ್ಪಂದಿರ ಗಂಡು ಮಕ್ಕಳಲ್ಲಿ ನಡೆಯುವ ತಮಾಷೆ ಮಾತುಗಳಿಗೆ ಮಿತಿಯಿಲ್ಲ. ಅಂಥಹ ಸಾಗರದಷ್ಟು ನಡೆದ, ನೆಡೆಯುವ ಚರ್ಚೆಗಳನ್ನು, ವಿಷಯಗಳನ್ನು ಹೆಕ್ಕಿ ಹೆಕ್ಕಿ ಮೆಲುಕು ಹಾಕುತ್ತ ನಮ್ಮ ಭೇಟಿಗಳನ್ನು ಇನ್ನಷ್ಟು ಸುಮಧುರ ಕ್ಷಣಗಳನ್ನಾಗಿ ಮಾಡಿಕೊಳ್ಳುತ್ತೇವೆ. ಒಂಭತ್ತು ಗ್ರಹಗಳು ಪ್ರಚಂಡ ಪ್ರತಿಭೆಗಳು ಒಬ್ಬರಿಗೊಬ್ಬರು, ಒಬ್ಬರಿಂದ ಒಬ್ಬರು, ಒಬ್ಬರಿಗಾಗಿ ಒಬ್ಬರು ಜೊತೆ ನಿಲ್ಲುತ್ತೇವೆ. ನಮ್ಮ  ಹಿಂದಿನ ಹಾಗು ಮುಂದಿನ ಪೀಳಿಗೆಗೆ ಸೇತುವಾಗಿ ನಿಲ್ಲುವ ನಾವುಗಳು ನಮ್ಮ ಮಕ್ಕಳಿಗೆ ಒಂದು  ಸಂಸ್ಕಾರದ ಹಾದಿಯನ್ನು ತೋರಬೇಕು ಅನ್ನುವುದಷ್ಟೇ ನಮ್ಮ ಕಳಕಳಿ. ಇಂತಹ ಒಂದು … Read more

ಸ್ನೇಹ ಭಾಂದವ್ಯ (ಭಾಗ 6): ನಾಗರತ್ನಾ ಗೋವಿಂದನ್ನವರ

ಇಲ್ಲಿಯವರೆಗೆ ಇತ್ತ ರೇಖಾಳ ಮನೆಯಲ್ಲಿ ರಾಧಮ್ಮ ನೋಡ್ರಿ ನಾವು ನಮ್ಮ ರೇಖಾಳಿಗೆ ಮದುವೆ ಮಾಡಬೇಕೂರಿ ಎಂದು ಗಂಡನಿಗೆ ಹೇಳಿದಳು. ಅದಕ್ಕೆ ಶಿವಾನಂದ ಮಾಡೋಣ ಬಿಡು ಈಗ ಅವಳಿಗೇನು ವಯಸ್ಸಾಗಿರೋದು ಎಂದು ಮಾತು ತೇಲಿಸಿದನು. ರೇಖಾಳಿಗೆ ವಾರ್ಷಿಕ ಪರೀಕ್ಷೆಯು ಹತ್ತಿರ ಬಂದಿದ್ದರಿಂದ ಓದುವುದು ಹೆಚ್ಚಾಗಿ ಊರಿಗೆ ಬರಲು ಸಾಧ್ಯವಾಗಲಿಲ್ಲ. ಅವಳು ಸುಧಾಳಿಗೆ ಪರೀಕ್ಷೆಗೆ ಹಾಜರಾಗಲು ಪತ್ರ ಬರೆದಳು. ಅದನ್ನೊದಿದ ಸುಧಾಳಿಗೆ ಗೆಳತಿಗೆ ತನ್ನ ಬಗ್ಗೆ ಇರುವ ಕಾಳಜಿಯನ್ನು ಕಂಡು ರೇಖಾಳ ಬಗ್ಗೆ ಅಭಿಮಾನ ಮೂಡಿತು. ಒಂದು ದಿನ ಅವಳು … Read more

ಸಾಮಾನ್ಯ ಜ್ಞಾನ (ವಾರ 3): ಮಹಾಂತೇಶ್ ಯರಗಟ್ಟಿ

೧. ಕನ್ನಡದ ಮೊದಲ ರಾಜಮನೆತನ ಯಾವುದು? ೨. ಸತತವಾಗಿ ಮೂರು ಅಖಿಲ ಭಾರತದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಏಕೈಕ ಕನ್ನಡಿಗ ಯಾರು..? ಯಾವ ವರ್ಷ? ೩. ಕನ್ನಡ ನಾಡಿನ ಮೊದಲ ಗಣಿತಜ್ಞ ಯಾರು? ೪. ಕರ್ನಾಟಕದಲ್ಲಿ ಸಾವಿರ ಕಂಬಗಳ ಬಸದಿ ಎಲ್ಲಿದೆ? ೫. ಕನ್ನಡದ ಮೊದಲ ಶಿಲ್ಪಿ ಯಾರು? ೬. ಕನ್ನಡದ ಮೊದಲು ಬೆರಳಚ್ಚುವಿನ ಯಂತ್ರವನ್ನು ರೂಪಿಸಿದವರು ಯಾರು? ೭. ಕನ್ನಡದ ಉಪಮಾ ಲೋಲ ಕವಿ ಯಾರು? ೮. ೧೯೩೦ರಲ್ಲಿ ಪ್ರಕಟವಾದ ಗೋವಿಂದಪೈ ಅವರ ಮೊದಲ … Read more