ಹುಟ್ಟು ಹಬ್ಬದ ಶುಭಾಶಯಗಳು ಸರ್: ರೇಣುಕಾ ಶಿಲ್ಪಿ, ಹೂವಿನಹಡಗಲಿ.

ಕನ್ನಡ ಸಾರಸ್ವತ ಲೋಕದಲ್ಲಿ ತಮ್ಮದೇ ಆದ ವಿಶಿಷ್ಟ ಕಥನ ಶೈಲಿಯಿಂದ ಜನಪ್ರಿಯರಾಗಿರುವ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕ್ರತ ಕತೆಗಾರ ಕುಂ.ವೀರಭದ್ರಪ್ಪ ಅವರಿಗೆ ಇದೇ ಅಕ್ಟೋಬರ್ 1 ರಂದು ಜನ್ಮದಿನದ ಸಂಭ್ರಮ. ಈ ಸುಸಂದರ್ಭದಲ್ಲಿ ‘ಕುಂವೀ ಯವರಿಗೆ ಈ ಕಿರು ಪರಿಚಯಾತ್ಮಕ ಲೇಖನದ ಮೂಲಕ ಶುಭ ಕೋರುವ ಪುಟ್ಟ ಪ್ರಯತ್ನವಿದು. ನಾನು ಮೊದಲ ಬಾರಿ ಅವರನ್ನು ಕಂಡದ್ದು ನನ್ನ ಹೈಸ್ಕೂಲು ದಿನಗಳಲ್ಲಿ. ಸರಿಸುಮಾರು ಹದಿನೈದು ವರ್ಷಗಳ ಹಿಂದೆ, ನನ್ನೂರು ಹೂವಿನಹಡಗಲಿಯಲ್ಲಿ- ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ … Read more

ಕೊಲ್ಕತ್ತ-ದಿಘಾ ನಾಲ್ಕು ದಿನದ ಪ್ರವಾಸ (ಭಾಗ 2): ಶಿವು ಕೆ.

(ಇಲ್ಲಿಯವರೆಗೆ) ಮೊದಲ ಭಾರಿಗೆ ಅಲ್ಲಿನ ಲೋಕಲ್ ರೈಲು ನಿಲ್ದಾಣದೊಳಗೆ ಕಾಲಿಟ್ಟಿದ್ದೆ. ಎಷ್ಟೊಂದು ಜನ ಅಂತೀರಿ! ನೂರಾರು ಸಾವಿರಾರು ಜನರು ತಮ್ಮ ಕೆಲಸ ಕಾರ್ಯಗಳಿಗೆ ಸಿದ್ದರಾಗಿ ಬರುವ ರೈಲುಗಾಡಿಗಳಿಗೆ ಕಾಯುತ್ತಿದ್ದರು. ಆ ಕ್ಷಣದಲ್ಲಿ ಮಲ್ಲೇಶ್ವರಂ ರೈಲು ನಿಲ್ದಾಣ ನೆನಪಾಯ್ತು. ಸದಾ ಶಾಂತವಾಗಿರುವ ನಮ್ಮ ಮಲ್ಲೇಶ್ವರಂ ರೈಲು ನಿಲ್ದಾಣವೆಲ್ಲಿ! ಗಿಜಿಗುಟ್ಟುವ ಈ ನಿಲ್ದಾಣವೆಲ್ಲಿ! ಖಂಡಿತ ಹೋಲಿಸಕೊಳ್ಳಬಾರದು ಸುಮ್ಮನೆ ಇಲ್ಲಿನ ದೃಶ್ಯಗಳನ್ನು ಕಣ್ತುಂಬಿಕೊಳ್ಳುತ್ತಾ ಆಸ್ವಾದಿಸಬೇಕೆಂದುಕೊಂಡು ಅಭಿಜಿತ್ ಡೆ ಮತ್ತು ಇತರರೊಂದಿಗೆ ನಾನು ರೈಲು ನಿಲ್ದಾಣದ ಪ್ಲಾಟ್ ಫಾರಂ ಕಡೆಗೆ ನಡೆದೆ. ಆಗಲೇ … Read more

ಗಾಂಧಿಯನ್ನು ಕೊಂದವರ್‍ಯಾರು?:ಅಖಿಲೇಶ್ ಚಿಪ್ಪಳಿ ಅಂಕಣ

ಭೌತಿಕವಾದ ಗಾಂಧಿಯನ್ನು ಕೊಂದಿದ್ದು ನಾಥುರಾಮ್ ಗೋಡ್ಸೆ. ಗಾಂಧಿಯನ್ನು ಕೊಂದ ತಾನು ನೇಣಿಗೇರಿ ಸತ್ತ. 600 ಚಿಲ್ಲರೆ ರಾಜರನ್ನು ಹೊಂದಿದ ಪುರಾತನ ಭಾರತವನ್ನು ಒಡೆದಾಳಿ, ಗುಲಾಮಗಿರಿಗೆ ತಳ್ಳಿ ಮೆರೆದಿದ್ದು ಸೂರ್ಯ ಮುಳುಗದ ಸಾಮ್ರಾಜ್ಯವೆಂದು ಕರೆಯಲಾಗುವ ಬ್ರೀಟಿಷರ ಹೆಗ್ಗಳಿಕೆ. ದೇಶಾಭಿಮಾನ ಮತ್ತು ಸ್ವಾಭಿಮಾನ ಮೇಳೈಸಿ, ಗುಲಾಮತನಕ್ಕೆ ಒಗ್ಗಿಹೋಗಿದ್ದ ಲಕ್ಷಾಂತರ ಭಾರತೀಯರಿಗೆ ಸ್ವದೇಶಿ, ಸ್ವಾಭಿಮಾನ, ಸ್ವಾತಂತ್ರ್ಯವೆಂಬ ಊರುಗೋಲುಗಳನ್ನು ನೀಡಿ ಎಬ್ಬಿಸಿ ನಿಲ್ಲಿಸಿದವರಲ್ಲಿ ಗಾಂಧಿ ಪ್ರಮುಖರು. ಇದಕ್ಕಾಗಿಯೇ ಗಾಂಧಿಯನ್ನು ಇಡೀ ದೇಶ ರಾಷ್ಟ್ರಪಿತನೆಂದು ಒಪ್ಪಿಕೊಂಡಿದೆ. ಸ್ವಾತಂತ್ರ್ಯ ಪಡೆದ ನಂತರದಲ್ಲಿ ರಚಿತವಾದ ಸರ್ಕಾರಗಳ ಧೋರಣೆಗಳು … Read more

ತೆರೆದ ಮನೆ ಬಾಗಿಲಿಗೊಂದು ಬೆಳಕಿನ ತೋರಣ:ಹೃದಯಶಿವ ಅಂಕಣ

ರಸಋಷಿಯ ರಮ್ಯಲೋಕದೆಡೆಗೆ ಬಾಲ್ಯದಲ್ಲಿ ಆಂಗ್ಲ ಸಾಹಿತ್ಯದ ವ್ಯಾಮೋಹಕ್ಕೊಳಗಾಗಿ ಹಲವು ಆಂಗ್ಲಕವಿತೆಗಳನ್ನು ಬರೆದರೂ ಕ್ರಮೇಣ ಕನ್ನಡ ಸಾಹಿತ್ಯ ಕೃಷಿಗೆ ಕೈ ಹಾಕಿ ಇಂದು ಕನ್ನಡ, ಕರ್ನಾಟಕದಷ್ಟೇ ಪ್ರಾಮುಖ್ಯತೆ ಪಡೆದಿರುವ ಕೆ.ವಿ.ಪುಟ್ಟಪ್ಪನವರು 1904ರಲ್ಲಿ ಶಿವಮೊಗ್ಗ ಜಿಲ್ಲೆ, ತೀರ್ಥಹಳ್ಳಿ ತಾಲೂಕಿನ ಕುಪ್ಪಳ್ಳಿ ಎಂಬ ಗ್ರಾಮದಲ್ಲಿ ಹುಟ್ಟಿದವರು. ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ್ತ ಮಲೆನಾಡಿನೊಂದಿಗೆ ಆಟವಾಡುತ್ತ, ಮೋಹಕ ಮಂಜಿನೊಂದಿಗೆ ಮಾತಿಗಿಳಿಯುತ ಬೆಳೆದ ಇವರು ಮೂಲತಃ ನಿಸರ್ಗದ ಆರಾಧಕರಾಗಿದ್ದರು.  ಪ್ರೌಢರಾಗುತ್ತಾ ಹೃದಯ ವಾಸ್ತವಕ್ಕೆ ತೆರೆದುಕೊಳ್ಳುತ್ತಿದ್ದಂತೆಯೇ ತಮ್ಮ ಅಂತಃಸತ್ವಕ್ಕೆ ಅಕ್ಷರ ರೂಪ ಕೊಡುತ್ತಾ ಹೋದಂಥವರು. ಹೊಸ ತಲೆಮಾರಿನ, … Read more

ನಾನು ಬಡವ?:ಗುರುಪ್ರಸಾದ್ ಕುರ್ತಕೋಟಿ

ಮೂರ್ತಿ ಯಾವುದೋ ಒಂದು ಪುಸ್ತಕದಲ್ಲಿ ಗಹನವಾಗಿ ಮುಳುಗಿದ್ದವರು ನಿಟ್ಟುಸಿರು ಬಿಟ್ಟು ಹೀಗೆ ಅರುಹಿದರು… ಮೂರ್ತಿ: "ಗುರು, ಹಿಂದಿನ ಕಾಲದಲ್ಲಿ ನಮ್ಮ ದೇಶದಲ್ಲಿ ಎಂಥಾ ಸುಭಿಕ್ಷೆ ಇತ್ತಂತೆರೀ… ನಿಮಗೊತ್ತಾ? ಆಗ ವಿಜಯನಗರ ಸಾಮ್ರಾಜ್ಯದಲ್ಲಿ ಮುತ್ತು, ರತ್ನ, ಬಂಗಾರಗಳನ್ನ ತರಕಾರಿಗಳ ತರ ಸಂತೆಲಿ ಮಾರುತ್ತಿದ್ದರಂತೆ!" ಗುರು: "ಹೌದು, ಆದ್ರೆ ಆಗಿನ ಕಾಲಕ್ಕೆ ಈಗಿನ ಕಾಲಕ್ಕೆ ಅಷ್ಟೆಲ್ಲಾ ಡಿಫರನ್ಸು ಇಲ್ಲಾ ಬಿಡ್ರೀ." ಮೂ: "ಅಧೆಂಗ್ರೀಪಾ?" ಗು: "ಈಗ ತರಕಾರಿಗಳನ್ನ ಮುತ್ತು, ರತ್ನ, ಬಂಗಾರಗಳ ರೇಟಿನಲ್ಲಿ ಮಾರ್ತಾರೆ ಅಷ್ಟೆ!!" ಮೂ: "ಹ್ಹ ಹ್ಹ … Read more

ಗಲ್ಲಿ ಕ್ರಿಕೆಟ್ಟು, ಲಗೋರಿ ಹಾಗೂ ಫೆರಾರಿ:ಪ್ರಶಸ್ತಿ ಅಂಕಣ

ಇತ್ತೀಚೆಗೆ ಹಿಂದಿಯ "ಫೆರಾರಿ ಕಿ ಸವಾರಿ" ಅನ್ನೋ ಚಿತ್ರ ನೋಡ್ತಾ ಇದ್ದಾಗ ಯಾಕೋ ಬಾಲ್ಯದ ದಿನಗಳು ಬೇಡವೆಂದರೂ ನೆನಪಾದವು. ಬಾಲ್ಯದ ನೆನೆಪುಗಳೆಂದ ತಕ್ಷಣ ನೆನಪಾಗಿದ್ದು ಶಾಲೆಯ ಮಾಸ್ತರೋ, ತಿಂದ ಏಟುಗಳೋ, ಸುತ್ತಿದ ನೆಂಟರ ಮನೆಗಳೋ, ಅಪ್ಪ-ಅಮ್ಮನ ಬೆಚ್ಚನೆ ಬೈಗುಳ/ಅಪ್ಪುಗೆಗಳೋ ಅಲ್ಲ. ಆ ಸಿನಿಮಾ ನೆನೆಸಿದ್ದು ನಮ್ಮ ಬಾಲ್ಯದ ಲಗೋರಿ, ಗೋಲಿ, ಕ್ರಿಕೆಟ್ಟುಗಳ ನೆನಪುಗಳನ್ನ. MRF, ಬ್ರಿಟಾನಿಯ ಬ್ಯಾಟುಗಳನ್ನ ಟೀವಿಯಲ್ಲಿ ಮಾತ್ರ ನೋಡುತ್ತಾ ನಮ್ಮದೇ ದಬ್ಬೆ (ಅಡಿಕೆ ಮರವನ್ನು ಕೊಯ್ದು ಮಾಡಿದ), ಮರದ ದಿಮ್ಮಿಯ ಬ್ಯಾಟುಗಳಲ್ಲಿ, ಅದೂ ಇಲ್ಲದಿದ್ದಾಗ … Read more

ಅಂದಾಜ್ ಅಪ್ನಾ ಅಪ್ನಾ:ವಾಸುಕಿ ರಾಘವನ್ ಅಂಕಣ

ಸಿನಿಮಾ ವಿಮರ್ಶಕ ರಾಜಾ ಸೇನ್ ಅವರು ಒಂದು ಆರ್ಟಿಕಲ್ ಅಲ್ಲಿ ಹೀಗೆ ಬರೆದಿದ್ದ ನೆನಪು. ಆಮೀರ್ ಖಾನ್ ಅವರ ಈ ಚಿತ್ರ ನೆನಪಿದೆಯಾ ನಿಮಗೆ? ಇದರಲ್ಲಿ ನಾಯಕಿಯನ್ನು ಅತಿಯಾಗಿ ಇಷ್ಟಪಡುವ ನಾಯಕ, ತಲೆಗೆ ಬಲವಾದ ರಾಡ್ ಇಂದ ಪೆಟ್ಟು ತಿಂದು, ತನ್ನ ನೆನಪಿನ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ. ಇದರಿಂದಾಗಿ ಮುಂದೆ ಚಿತ್ರವಿಚಿತ್ರವಾದ ಘಟನೆಗಳು ಜರುಗಿ, ಅವನನ್ನು ಫಜೀತಿಗೆ ಒಡ್ಡುತ್ತವೆ. ಗೊತ್ತಾಯ್ತಾ? ನೀವೂ “ಘಜಿನಿ” ಅಂದು ಬಿಟ್ರಾ? ಛೆ! ಇದೇ ನೋಡಿ, ಈಗಿನ ನೂರು ಕೋಟಿ ಗಳಿಕೆಯ ಸಾಧಾರಣ ಚಿತ್ರಗಳ … Read more

ಕೆಂಗುಲಾಬಿ (ಭಾಗ 13): ಹನುಮಂತ ಹಾಲಿಗೇರಿ

(ಇಲ್ಲಿಯವರೆಗೆ) ಅವತ್ತು ಪೂರ್ತಿ ನಾನು ರೂಮಿನಲ್ಲಿ ಏಳಲೂ ಆಗದೆ ಮಲಗಲು ಆಗದೆ ಬಿದ್ದುಕೊಂಡಿದ್ದೆ. ಕಿವಿಯಲ್ಲಿ ಶಾರಿಯ ಮಾತುಗಳೆ ಗುಂಯ್ಗುಡುತ್ತಿದ್ದವು. ಒಂದಿಷ್ಟು ಮಂಪರು, ಒಂದಿಷ್ಟು ಅರೆ ಎಚ್ಚರ ಮತ್ತೆ ಮಂಪರು. ಶಾರಿ ಬದುಕಿನ ಗೋಳಿಗೆ ಇತಿಶ್ರೀ ಹಾಡುವುದೆಂತು ಎಂದು ಯೋಚಿಸಿದ್ದೇ ಬಂತು. ಒಮ್ಮೊಮ್ಮೆ ನೆಮ್ಮದಿಯಿಂದ ಇರುವ ನಾನು ಶಾರಿಯ ಗದ್ದಲದಲ್ಲಿ ಯಾಕೆ ಸಿಲುಕಿಕೊಳ್ಳಬೇಕು? ನಾನು ಮೊದಲಿನಂತಾಗಬೇಕಾದರೆ ಶಾರಿಯನ್ನು ಮತ್ತೆ ಭೇಟಿಯಾಗಲೇಬಾರದು ಎನಿಸಿತು. ಆದ್ರೆ ಮನಸ್ಸಿಗೆ ಒಗ್ಗಲಿಲ್ಲ. ವರದಿ ತಯಾರಿಸಿಕೊಂಡು ಬಾ ಎಂದ ರಾಜನ್ ಹೇಳಿದ್ದು ನೆನಪಾಯಿತು. ಈಗ ಆಗಿರೋದನ್ನ … Read more

ಕಾಗಿ ಕಾಗಿ ಕವ್ವಾ…:ಸುಮನ್ ದೇಸಾಯಿ ನಗೆ ಅಂಕಣ

ಮುಂಝಾನೆ ಹತ್ತು ಗಂಟೆ ಸುಮಾರ ನಾ ಆಫೀಸನ್ಯಾಗ ಇದ್ದೆ. ನಮ್ಮ ತಮ್ಮನ ಫೋನ್ ಬಂತು. ಇಗ ಇನ್ನ ಹೊಸದಾಗಿ ಮದುವಿ ಮಾಡಕೊಂಡಾನ. ಮದ್ವಿಕಿಂತಾ ಮದಲ ಯಾವಾಗರೆ ಒಮ್ಮೆ ಫೋನ್ ಮಾಡಾಂವಾ ಈಗೀಗ ಎರಡ ದಿನಕ್ಕ ಒಮ್ಮೆ ಮಾಡತಿದ್ದಾ. ತನ್ನ ಗೋಳ ತೋಡ್ಕೊತಿದ್ದಾ.  ಪಾಪ ಇತ್ಲಾಕಡೆ ಅಮ್ಮ ಮತ್ತ ಅತ್ಲಾಕಡೆ ಹೆಂಡ್ತಿ ಕೈಯ್ಯಾಗ ಸಿಕ್ಕು ’ಧೋಬಿ ಕಾ ಕುತ್ತಾ ನಾ ಘರ್ ಕಾ ನ ಘಾಟ್ ಕ’ ಅನ್ನೊಹಂಗ ಆಗಿತ್ತು ನನ್ನ ತಮ್ಮನ ಬಾಳು. ಆವತ್ತು ಫೋನ್ ಮಾಡಿದಾಗನೂ … Read more

ತುರುಬಿಗೆ ತರುಬಿದ ಮನಸು: ನಾಗರಾಜ ಅಂಗಡಿ

ನಾನು ಪಿ.ಯು.ಸಿ ವಿದ್ಯಾರ್ಥಿಗಳಿಗೆ ಕನ್ನಡ ಪಾಠ ಮಾಡುತ್ತಿದ್ದೆ. ಅದು ಚಂದ್ರಶೇಖರ ಕಂಬಾರವರ ಆಹ್ವಾನವೆಂಬ ಪದ್ಯವನ್ನು  ವಿಶ್ಲೇಷಿಸುತ್ತಿರುವಾಗ ಆ ಪದ್ಯದಲ್ಲಿಯ ಒಂದು ಸಾಲು  ಹಳೆಯ ಪ್ರಕೃತಿಯ ತುರುಬು ಜಗ್ಗಿ ಆಚೆಗೆ ನೂಕಿ ಎಂಬುದು ಗಕ್ಕನೆ ನನ್ನ ಮನಸ್ಸು ತರುಣಿಯ ತುರುಬಿಗೆ ವಾಲಿಸಿತು. ಪಾಠವನ್ನು ಮುಗಿಸಿ ಬಂದ ಮೇಲೆ ತುರುಬಿನ ಬಗ್ಗೆಯೇ ಚಿಂತೆಯೇ ಶುರುವಾಯಿತು. ಹಾಗೆ ನೋಡಿದರೆ ಪಂಪನಿಂದ ಹಿಡಿದು ಕುವೆಂಪುವರೆಗೆ ಕೂದಲಿನ ಬಗ್ಗೆ ಬರೆಯದವರೇ ಇಲ್ಲವೆಂದು ಹೇಳಬೇಕು. ನಾರಿಗೆ ಗುಣವೇ ಶೃಂಗಾರವೆಂಬಂತೆ ನಾರಿಗೆ ಕೇಶವೇ ಶೃಂಗಾರವೆಂದು ಹೇಳಬಹುದು. ನಾರಿಗೆ … Read more

ಗೃಹ ಪ್ರವೇಶ, ಹುಟ್ಟುಹಬ್ಬ, ಸನ್ಮಾನ ಮತ್ತು ಸಂಗೀತದ ಹೊನಲು: ಅಮರ್ ದೀಪ್ ಪಿ.ಎಸ್.

ನಾನು ಇತ್ತೀಚಿಗೆ ಕಂಡಂಥ ಪ್ರಸಂಗವೊಂದನ್ನು ಹಂಚಿಕೊಳ್ಳಬಯಸುತ್ತೇನೆ . ನಿಜ, ಬೇರೆಲ್ಲೋ ಈ ತರಹ ಭಾವನಾತ್ಮಕ ಕಾರ್ಯಕ್ರಮಗಳು ನಡೆದಿರಬಹುದಾದರೂ ನಾನು ವಯುಕ್ತಿಕವಾಗಿ ಇದನ್ನು ಕಂಡದ್ದು ಮಾತ್ರ ನನಗೆ ಹೊಸ ಅನುಭವ .  ಕೊಪ್ಪಳಕ್ಕೆ ಬಂದ  ನಂತರ ಇತ್ತೀಚಿಗೆ ನಾನು ತಬಲಾ ಕಲಿಯಲು ಸೇರಿಕೊಂಡ ಶ್ರೀ ಗವಿಸಿದ್ದೇಶ್ವರ ಮಠದ ಸಂಗೀತ ಪಾಥಶಾಲೆಯಲ್ಲಿ ಸಂಪರ್ಕಕ್ಕೆ ಬಂದ ಹಿರಿಯ ಸ್ನೇಹಿತರಾದ ಶ್ರೀ ಶ್ರೀನಿವಾಸ ಜೋಷಿ ಇವರು ಶಿಕ್ಷಣ ಇಲಾಖೆಯಲ್ಲಿ ಸೇವೆಯಲ್ಲಿದ್ದು,  ಪ್ರಸ್ತುತ ಕೊಪ್ಪಳ ಜಿಲ್ಲಾ ಸಂಸದರಾದ ಶ್ರೀ ಶಿವರಾಮೇಗೌಡ ಇವರ ಬಳಿ ಆಪ್ತ … Read more

ಸೈಬರ್ ಕ್ರಾಂತಿ ಮಾರಕವೇ?: ಸಂದೀಪ ಫಡ್ಕೆ, ಮುಂಡಾಜೆ

ಡಿಜಿಟಲ್ ತಂತ್ರಜ್ಞಾನವನ್ನು ಬಗಲಲ್ಲಿಟ್ಟುಕೊಂಡು ಇಲೆಕ್ಟ್ರಾನಿಕ್ ಮಾಧ್ಯಮ ಮತ್ತು ಸಾಮಾಜಿಕ ತಾಣಗಳು ವಿಶ್ವವನ್ನೇ ಅಂಗೈಯಲ್ಲಿ ತಂದು ಕೂರಿಸಿವೆ. ಎಲ್ಲ ಕ್ಷೇತ್ರಗಳ ವಿದ್ಯಮಾನ ಮತ್ತು ದೈನಂದಿನ ಬದುಕಿನ ಪುಟ-ಪುಟಗಳು ಮುಕ್ತವಾಗಿ ಹರಡಲು ಅನುವು ಮಾಡಿಕೊಟ್ಟಿದೆ. ಇಷ್ಟೇ ಅಲ್ಲದೇ, ವಿವಿಧ ಸಂಘಟನೆಗಳ ಪ್ರತಿಭಟನೆಗಳಿಗೆ ಕುಮ್ಮಕ್ಕು ನೀಡಲೂ ಇವು ಹಿಂಜರಿಯುವುದಿಲ್ಲ. ವಾಕ್ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಎಲ್ಲರ ಗಮನ ಸೆಳೆಯುವಂತೆ ಮಾಡುವ ಉದಾರ ಗುಣ ಸೈಬರ್ ಕ್ರಾಂತಿಯ ಬೆನ್ನೆಲುಬು. ವಿವಾದಾತ್ಮಕ ಹೇಳಿಕೆಗಳ ಮೂಲಕ ತಮ್ಮ ಬೇಳೆ ಬೇಯಿಸಿಕೊಳ್ಳುವ ಮಂದಿಗೆ ಹೇಳಿ ಮಾಡಿಸಿದಂತಿರುವ … Read more

ನಿರಂತರತೆಯಲಿ ನಾನೊಂದು…?:ಅವಿನಾಶ್ ಸೂರ್ಯ

ಕೆಲವೇ ಕ್ಷಣದಲ್ಲಿ ಸೂರ್ಯ ಪ್ರತಿ ದಿನದ ಮುಕ್ತಾಯಕ್ಕೆ ಪೂರ್ಣ ವಿರಾಮ ತೆಗೆದುಕೊಳ್ಳುವ ಸಮಯ. ಬೆಳಕು ತನ್ನ ಅಸ್ತಿತ್ವ ಕಳೆದುಕೊಂಡು ಕತ್ತಲೆಯಲ್ಲಿ ಮರೆಯಾಗುವ ವೇಳೆಗೆ, ಮನಸಿನ ಮೂಲೆಯಲ್ಲಿ ಕುಳಿತ ಅನಾಮಿಕನ ಪ್ರಶ್ನೆಯೊಂದು ನೆನಪಾಯಿತು! ಪ್ರಶ್ನೆಗೆ ಉತ್ತರ ಸಿಗುವುದೋ ಇಲ್ಲವೋ? ಇಲ್ಲ ಶಾಶ್ವತವಾಗಿ ಕಾಲದ ಅನಂತತೆಯ ಪಥದಲ್ಲಿ ಎಲ್ಲವೂ ಬದಲಾಗುವುದೋ ಇಲ್ಲವೋ ತಿಳಿಯದು. ಯಾವುದಕ್ಕೂ ಇಲ್ಲಿ ಉತ್ತರ ಪ್ರಶ್ನೆಗಳಿಲ್ಲ. ಅಂದ ಹಾಗೆ ನನ್ನನ್ನು ಪರಿಚಯ ಮಾಡಿಕೊಳ್ಳುವ ವಿಷಯವೇ ಮರೆಯಿತು ನೋಡಿ, ಮಹಾನಗರದ ಒಂದು ಉದ್ಯಾನದಲ್ಲಿ ನಾನೊಂದು ಕುರ್ಚಿ. ಏನಪ್ಪಾ ಕುರ್ಚಿಯದೇನು … Read more

ಎರೆಡು ಕವಿತೆಗಳು:ಅನಿತಾ, ಶಾಂತಿ ಅಪ್ಪಣ್ಣ

ಸಣ್ಣ ತಪ್ಪಿಗಾಗಿ ಎದುರು ನಿಂತು ನೀ ನಿಂದಿಸುವಾಗ ಹೆದರಿದ ನನ್ನ ಮೊಗವ ಕಂಡು ಮೌನ ತಳೆವ ಆ ನಿನ್ನ ಒಲವಿನ ಪರಿ ಚಂದ…   ಮುಸ್ಸಂಜೆಯಲಿ ಮುತ್ತಿಟ್ಟು, ಮರು ಮುತ್ತಿಗಾಗಿ ಕಾಯುವಾಗ ಕೊಡದೆ ನಾ ಕಾಡುವಾಗ, ಹುಸಿಕೋಪಗೊಂಡ ಆ ನಿನ್ನ ಮುದ್ದು ಮೊಗ ಚೆಂದ….   ನಾ ಮಾಡಿದ ಚೇಷ್ಟೆಯನ್ನೆಲ್ಲಾ ಮರೆತು, ನೀ ನನ್ನ ಮಗುವಂತೆ ಎಂದು ಎದೆಗಪ್ಪಿ ಸಂತೈಸುವ ಆ ನಿನ್ನ ಸಹನೆಯ ಗುಣ ಚೆಂದ…   ನಿನ್ನ ಪ್ರೀತಿಯ ನನ್ನೆದುರು ನಿರೂಪಿಸಿ, ಕಾಯುವಾಗ ನನ್ನ ಸಮ್ಮತಿಗಾಗಿ, … Read more