ರೌಡಿ ದನ: ಅಖಿಲೇಶ್ ಚಿಪ್ಪಳಿ ಅಂಕಣ

ಸಾಗರದ ವಿನೋಬ ನಗರದ ಒಂದು ಸಣ್ಣ ಮನೆಯಲ್ಲಿ ವಾಸಿಸುತ್ತಿರುವ ಕುಟುಂಬದ ಯಜಮಾನನ ಹೆಸರು ಸೂರಪ್ಪ. ಮನೆ, ಮನೆ ಮುಂದೆ ೧೦ ಅಡಿ ಅಗಲ ೧೦ ಉದ್ದದ ಚಿಕ್ಕದಾದ ಒಂದು ದಿನಸಿ ಅಂಗಡಿ. ಜೀವನೋಪಾಯಕ್ಕೆ. ಹಳೆಯದಾದ ಮನೆಯಾದರೂ ಹಿಂಭಾಗದಲ್ಲಿ ಸಾಕಷ್ಟು ಜಾಗವಿತ್ತು. ಅಪ್ಪನ ಕಾಲದಲ್ಲಿ ಕಟ್ಟಿದ ಮನೆಯಾದ್ದರಿಂದ, ಮುಚ್ಚಿಗೆ, ತೊಲೆ, ದೊಡ್ಡ-ದೊಡ್ಡ ಚಿತ್ತಾರದ ಕಂಬಗಳು, ನಾಗಂದಿಗೆ, ಕಪಾಟು ಎಲ್ಲವಕ್ಕೂ ಮರಗಳ ಬಳಕೆಯಾಗಿದೆ. ಹೀಗೆ ಸಾಗಿ ಹಿಂದುಗಡೆ ಹತ್ತು ಕಾಲ್ನಡೆಗಳನ್ನು ಕಟ್ಟಿಕೊಳ್ಳಲು ಕೊಟ್ಟಿಗೆಯು ಇದೆ. ಸೂರಪ್ಪನವರ ತಂದೆಯ ಕಾಲದಲ್ಲಿ ಕೊಟ್ಟಿಗೆ … Read more

ಕೆಂಗುಲಾಬಿ (ಭಾಗ 5): ಹನುಮಂತ ಹಾಲಿಗೇರಿ

ಹುಬ್ಬಳ್ಳಿಯೊಳಗ ಮಂಡೇ ಬಜಾರಕ ದೊಡ್ಡ ಹೆಸರು. ಅವತ್ತು ಸೋಮವಾರವಾದ್ದರಿಂದ ಮಂಡೇ ಬಜಾರ್‌ನತ್ತ ಹೆಜ್ಜೆ ಬೆಳೆಸಿದೆ. ಇಲ್ಲಿ ೧೦ ರೂ.ಗಳಿಗೆ ಏನಿಲ್ಲ, ಏನುಂಟು. ಒಂದೊಳ್ಳೆಯ ಅಂಗಿ, ಹವಾಯಿ ಚಪ್ಪಲಿ, ಲುಂಗಿ, ಟವೆಲ್ಲು, ಒಳ ಉಡುಪು, ಬಾಂಡೆ ಸಾಮಾನುಗಳು ಏನೆಲ್ಲವನ್ನು ಖರೀದಿಸಬಹುದು. ಆದರೆ ಇವೆಲ್ಲ ಸೆಕೆಂಡ್ ಹ್ಯಾಂಡ್‌ಗಳು, ನಿಜವಾಗಿ ಹೇಳಬೇಕೆಂದರೆ ಜಾತ್ಯತೀತತೆ ಆಚರಣೆಗೆ ಮಂಡೆ ಬಜಾರ್ ಒಂದು ಸಂಕೇತವಿದ್ದಂತೆ. ಇಲ್ಲಿನ ಒಳ ಉಡುಪುಗಳನ್ನು ಮೊದಲ್ಯಾರೋ ಧರಿಸಿರತಾರೆ. ಈಗ ಅದು ಮತ್ಯಾರ ಮೈಗೋ ಅದು ಅಂಟಿಕೊಂಡು ಅವರ ಬೆವರು ವಾಸನೆಗೆ ಹೊಂದಿಕೊಳ್ಳುತ್ತದೆ. … Read more

ಶಾಪ (ಭಾಗ-೧):ಪಾರ್ಥಸಾರಥಿ ಎನ್

ನನಗೆ ಆ ಮನೆಗೆ ಬರುವ ಅಗತ್ಯವೇನಿರಲಿಲ್ಲ. ಊರಹೊರಗಿನ ದುರ್ಗಾ ದೇವಾಲಯದಲ್ಲಿ ಕುಳಿತಿದ್ದ ನನ್ನನ್ನು ಅವನಾಗಿಯೇ ಮಾತನಾಡಿಸಿದ. ಅವನ ಹೆಸರು ಶ್ರೀನಿವಾಸ. "ಎಲ್ಲಿಂದ ಬರುತ್ತಿದ್ದೀರಿ?" ಅವನು ನನ್ನನ್ನು ಕುತೂಹಲದಿಂದ ಪ್ರಶ್ನಿಸಿದ. ಪ್ರಶ್ನೆ ಸರಿಯಾಗಿಯೆ ಇತ್ತು, ಹಾಗಾಗಿ ಉತ್ತರಿಸಿದೆ "ಉತ್ತರದ ಹರಿದ್ವಾರದಿಂದ ಹೊರಟವನು ಹಾಗೆಯೆ ಸುತ್ತುತ್ತ ಬಂದೆ, ಈಗ ನಿಮ್ಮ ಊರಿಗೆ ಬಂದಿರುವೆ". ಮತ್ತೆ ಕುತೂಹಲದಿಂದ ಪ್ರಶ್ನಿಸಿದ, "ರಾತ್ರಿ ಉಳಿಯುವ ಏರ್ಪಾಡು ಹೇಗೆ, ಎಲ್ಲಿ ಇಳಿದುಕೊಳ್ಳುವಿರಿ?" ನನಗೆ ಆ ರೀತಿಯ ಪ್ರಶ್ನೆಗಳು ಕಾಡುತ್ತಲೆ ಇರಲಿಲ್ಲ. ಇರುವೆನು ಎನ್ನುವಾಗ ರಾತ್ರಿಯೇನು, ಹಗಲೇನು, ಮುಂದಿನ … Read more

ನಾನ್-ವೆಜ್ ಬರ್ಥಡೇ ಪಾರ್ಟಿ:ಸುಮನ್ ದೇಸಾಯಿ ಅಂಕಣ

ನನ್ನ ನಾದಿನಿ ರುಕ್ಕುನ ಮಗನ್ನ ಹುಟ್ಟಿದ ಹಬ್ಬದ ಪಾರ್ಟಿಗೆ ಹೋಗಿದ್ದೆ. ಮನಿ ಟೆರೇಸ್ ಮ್ಯಾಲೆನ ಎಲ್ಲಾ ಅರೇಂಜ್ಮೆಂಟ್ ಮಾಡಿದ್ಲು. ಎಲ್ಲಾ ಕಡೆ ಲೈಟಿನ ಸರಾ ಹಾಕಿದ್ರು. ಅದ್ರ ಟೆರೇಸ್ ತುಂಬ ಅಲ್ಲಲ್ಲೇ ಅಲಂಕಾರಕ್ಕಂತ ಪ್ರಾಣಿಗೋಳ ಗೊಂಬಿ ನಿಲ್ಲಿಸಿದ್ರು. ನೋಡಿದ್ರ ಯಾವದೋ ಝೂ ಒಳಗ ಬಂಧಂಗ ಅನಿಸ್ತಿತ್ತು. ಯಾಕೊ ವಿಚಿತ್ರ ಅನಿಸಿದ್ರು, ಸಣ್ಣ ಹುಡುಗರಿಗೆ ಪ್ರಾಣಿ ಅಂದ್ರ ಭಾಳ ಸೇರತಾವ ಅದಕ್ಕ ಇರಬಹುದು ಅಂತ ಅನ್ಕೊಂಡೆ. ಯಾಕಂದ್ರ ನನ್ನ ಮಗಾನೂ ಪ್ರಾಣಿ ಪ್ರಿಯನ ಇದ್ದಾನ. ಸಣ್ಣಾಂವ ಇದ್ದಾಗ ನಮ್ಮತ್ತಿಯವರು … Read more

ಕೆಂಚಣ್ಣನ ತಿಥಿಯೂ… ವಿ.ಸಿ.ಪಿ. ಕಥೆಯೂ…! :ಹೃದಯಶಿವ ಅಂಕಣ

"ಬತ್ತು… ಬತ್ತು… ಬತ್ತು… ಇನ್ನೇನ್ ಬಂದೇ ಬುಡ್ತು… ಅಗೋ ಬತ್ತಾದೆ… ಸದ್ದು ಕೇಳ್ತಾದೆ… ಅಲ್ನೋಡು ಧೂಳು ಏಳ್ತಾದೆ… ಬತ್ತು… ಬತ್ತು.. ಬಂದೇsss ಬುಡ್ತು !  ಆಕು  ಪಾಕು  ವೆತ್ತೆಲೆ  ಪಾಕು  ಅಮಾ  ಡುಮಾಡೇ….  ಅಸ್ಕಿಣಕಣ  ಪಿಸ್ಕಿಣಕಣ ಅಮಾ  ಡುಮಾಡೇ!!"  ಎಂದು  ಎರಡೋ, ಮೂರೋ  ಓದುವ  ವಯಸ್ಸಿನಲ್ಲಿದ್ದ  ನಾವೆಲ್ಲ  ಖುಷಿಯಿಂದ ಸಂಭ್ರಮಿಸುತ್ತಿದ್ದಂತೆಯೇ  ಅತೀ  ಕೆಟ್ಟ  ಮಣ್ಣರೋಡಿನಲ್ಲಿ  ತುಂಬಿದ ಬಿಮ್ಮನ್ಷೆಯಂತೆ  ಏದುಸಿರು  ಬಿಡುತ್ತಾ  ನಮ್ಮೂರಿಗಿದ್ದ  'ಮೂರು  ಗಂಟೆ  ಬಸ್ಸು'  ಮೂರೂವರೆಗೋ, ಮೂರೂ ಮುಕ್ಕಾಲಿಗೋ  ನೇರವಾಗಿ ನಾವಿದ್ದಲ್ಲಿಗೇ  ಬಂದು ನಿಂತು ದೂರದಿಂದ … Read more

ಹೀಗೊಂದು ಪ್ರಸಂಗ: ಗವಿಸ್ವಾಮಿ

ಮೊನ್ನೆ ಬೈಕಿನಲ್ಲಿ ಪಕ್ಕದ ಹಳ್ಳಿಗೆ ಹೊರಟಿದ್ದೆ. ಹೊರಡುವಾಗಲೇ ಸೂಜಿಗಾತ್ರದ ಹನಿಗಳು  ಗಾಳಿಯಲ್ಲಿ ಚದುರಿಕೊಂಡು ಉದುರುತ್ತಿದ್ದವು.  ಜನರ ಓಡಾಟ ಮಾಮೂಲಿನಂತೆಯೇ ಇತ್ತು.ಒಂದು ಮೈಲಿಯಷ್ಟು ಮುಂದೆ ಹೋಗುವಷ್ಟರಲ್ಲಿ  ಸೂಜಿ ಗಾತ್ರದ ಹನಿಗಳು  ದಬ್ಬಳದ ಗಾತ್ರಕ್ಕೆ ತಿರುಗಿದ್ದವು. ಎದುರುಗಾಳಿ ಬೀಸುತ್ತಿದ್ದರಿಂದ  ಹನಿಗಳು ಮುಖವನ್ನು ಅಡ್ಡಾದಿಡ್ಡಿ ಪಂಕ್ಚರ್ ಮಾಡತೊಡಗಿದವು. ಅಲ್ಲೇ ರಸ್ತೆ ಬದಿಯಲ್ಲಿದ್ದ ಹುಣಸೆಮರದಡಿಯಲ್ಲಿ ಗಾಡಿ ನಿಲ್ಲಿಸಿ ಫೇಸ್ ಬುಕ್ ಓಪನ್ ಮಾಡಿದೆ. ನೋಟಿಫಿಕೇಶನ್ ಐಕಾನ್ ಖಾಲಿ ಹೊಡೆಯುತ್ತಿತ್ತು. ಒಂದು ಫ್ರೆಂಡ್ ರಿಕ್ವೆಸ್ಟ್ ಬಂದಿತ್ತು. ಸಡನ್ನಾಗಿ ಓಕೆ ಕೊಡುವುದು ಬೇಡ, ನಿಧಾನಕ್ಕೆ ಕನ್ಫರ್ಮ್ ಮಾಡಿದರಾಯಿತು ಎಂದುಕೊಂಡು … Read more

ಆಕ್ಸಿಡೆಂಟ್:ವಾಸುಕಿ ರಾಘವನ್ ಅಂಕಣ

ಶಂಕರ್ ನಾಗ್ ನಿಜಕ್ಕೂ ಸಿನಿಮಾ ವ್ಯಾಕರಣ ಕಲಿತಿದ್ದು ಎಲ್ಲಿ? ಅದು ರಂಗಭೂಮಿಯ ಅನುಭವದಿಂದ ಬಂದ ಸೆನ್ಸಿಬಿಲಿಟಿಯಾ? ಅಥವಾ ಬೇರೆ ದೇಶದ ಚಿತ್ರಗಳನ್ನ ಹೆಚ್ಚಾಗಿ ನೋಡಿ ಆ ಶೈಲಿಯಿಂದ ಪ್ರಭಾವಿತರಾಗಿದ್ರಾ? ನನಗೆ ಗೊತ್ತಿಲ್ಲ! ಆದರೆ ಅವರ ನಿರ್ದೇಶನದ ಚಿತ್ರಗಳಲ್ಲಿ ಒಂದು ವಿಭಿನ್ನವಾದ ಛಾಪು ಇರುತ್ತದೆ. ಅವರ ನಿರ್ದೇಶನದ “ಆಕ್ಸಿಡೆಂಟ್” ನನ್ನ ಮೆಚ್ಚಿನ ಚಿತ್ರಗಳಲ್ಲೊಂದು. ಚಿತ್ರದ ಕಥೆ ಬಹಳ ಸರಳ, ಆದರೆ ಅದನ್ನು ಹ್ಯಾಂಡಲ್ ಮಾಡಿರುವ ಶೈಲಿ ಅದ್ಭುತ. ಮಂತ್ರಿ ಧರ್ಮಾಧಿಕಾರಿಯ ಮಗ ದೀಪಕ್ ತನ್ನ ಗೆಳೆಯ ರಾಹುಲ್ ಜೊತೆ … Read more

ಸಾಮಾಜಿಕ ಸ್ಪಂದನೆ:ಪ್ರಶಸ್ತಿ ಅಂಕಣ

ನಾಳೆಯಿಂದ ಪೆಟ್ರೋಲ್ ದರ  ಮತ್ತೆ ತುಟ್ಟಿ.ಪಾಕಿಸ್ತಾನದಲ್ಲಿ ಅಷ್ಟಿದೆ, ಇನ್ನೆಲ್ಲೋ ಮತ್ತೆಷ್ಟೋ ಇದೆ. ಇಲ್ಲಿ ಮಾತ್ರ ಹೆಚ್ಚೆಂಬ ಮಾತು ಎಲ್ಲರ ಬಾಯಲ್ಲೂ. ಪೆಟ್ರೋಲ್ ದರ ಹೆಚ್ಚಳ, ಪದವೀಧರರಿಗೆ ಹೆಚ್ಚುತ್ತಿರೋ ನಿರೂದ್ಯೋಗ ಸಮಸ್ಯೆ,  ಹೆಚ್ಚುತ್ತಿರೋ ತಲೆಗಂದಾಯ, ಕೆಟ್ಟಿರೋ ರಸ್ತೆ  ಹೀಗೆ ಹುಡುಕ್ತಾ ಹೋದ್ರೆ ನೂರೆಂಟು ಅವ್ಯವಸ್ಥೆಗಳು ಇಲ್ಲಿ. ಭ್ರಷ್ಟ ಅಧಿಕಾರಿಗಳಿಂದ ಹಿಡಿದು ಬೇಜವಬ್ದಾರಿ ಸಹೋದ್ಯೋಗಿಯ ತನಕ , ಅಭಿವೃದ್ಧಿ ಸಹಿಸದ ನೆರೆಯವರಿಂದ ಹೆಜ್ಜೆಹೆಜ್ಜೆಗೂ ಮೂಗು ತಿವಿಯೋ ಜನರ ತನಕ  ಈ ಸಮಾಜದ ಬಗ್ಗೆ ಬಯ್ತಾ ಹೋದ್ರೆ ಅದು ಮುಗಿಯದ ಪಟ್ಟಿ. … Read more

ಕುವೆಂಪುರವರ ಕ್ರಾಂತಿ ಗೀತೆ: ದಿವ್ಯ ಆಂಜನಪ್ಪ

ಏನಾದರೂ ಆಗು, ನೀ ಬಯಸಿದಂತಾಗು, ಏನಾದರೂ ಸರಿಯೇ ಮೊದಲು ಮಾನವನಾಗು – ಎಂಬ ಮಾತಿನಿಂದ ಮಾನವನ ಮಾನವೀಯತೆಯನ್ನು ಕವಿ ಜಾಗೃತಗೊಳಿಸುವ ಪ್ರಯತ್ನವನ್ನು ನಡೆಸಿದ್ದಾರೆ. ಮನುಷ್ಯತ್ವವನ್ನೇ ಮರೆತಂತಹ ರಾಕ್ಷಸ ಕೃತ್ಯಗಳು ತಾಂಡವವಾಡುತ್ತಿರುವ ಕಾಲದಲ್ಲಿ ಇಂತಹ ಕವಿವಾಣಿಗಳು ಆಗಿಂದಾಗ್ಗೆ ಮನುಷ್ಯನ ಕಿವಿ ಮೇಲೆ ಬೀಳುತ್ತಿದ್ದಲ್ಲಿ ಸುಧಾರಣೆ ಕಾರ್ಯ ಸಾಧ್ಯವಾಗುವುದೆನೋ? ಎಂದೆನಿಸುತ್ತದೆ. ಇಂತಹದೇ ಸಂದೇಶ ಹೊತ್ತ ಮನುಜ ಮತಕ್ಕೆ ಒತ್ತನ್ನು ನೀಡಿದ ಅವರ ಕ್ರಾಂತಿಕಾರಿ ಗೀತೆಗಳ "ಅನಿಕೇತನ" ಕವನ ಸಂಕಲನದ "ಗುಡಿ, ಚರ್ಚು ಮಸಜೀದಿಗಳ ಬಿಟ್ಟು ಹೊರ ಬನ್ನಿ….ಎಂಬ ಕ್ರಾಂತಿ ಗೀತೆ. ಕವಿ ತಮ್ಮ ಈ ಗೀತೆಯಲ್ಲಿ ಸರ್ವ ಧರ್ಮ … Read more

ನಾಟಕಕಾರರಾಗಿ ಕುವೆಂಪು (ಭಾಗ-14) : ಹಿಪ್ಪರಗಿ ಸಿದ್ದರಾಮ್

ಎರಡನೆಯ ಅಂಕದ ಮೊದಲನೆಯ ದೃಶ್ಯದಲ್ಲಿ ಅರಮನೆಯ ಹೆಬ್ಬಾಗಿಲ ಬಳಿ ಕಾವಲು ಕಾಯುತ್ತಾ ನಡುರಾತ್ರಿಯಲ್ಲಿ ಕೆಂಚಣ್ಣನಿರುವಾಗ ಹೊನ್ನಯ್ಯನೊಂದಿಗೆ ರಾಜಕುಮಾರ ಬಸವಯ್ಯ ಆಗಮಿಸುತ್ತಾನೆ. ಆ ಸಂದರ್ಭದ ಮದ್ಯರಾತ್ರಿಯ ಮೌನದಲ್ಲಿ ಬೆಳದಿಂಗಳ ಮಾಯೆಯನು ನೋಡಿ ಬಸವಯ್ಯನ ಮನಸ್ಸು ಸೌಂದರ್ಯೋಪಾಸನೆಯ ವರ್ಣನೆಯನ್ನು ಹೀಗೆ ಮಾಡುತ್ತಾನೆ : ನೋಡಿದೋ ಎಂತಹ ಶಾಂತಿ ಕಡಲಾಡುತಿದೆ ! ಎಂತಹ ಸೊಬಗು ಸುರೆಯಾಗಿಹುದು ಈ ನಮ್ಮ  ತಿರೆಯಲ್ಲಿ ! ಈ ಪ್ರಕೃತಿ ಸೌಂದರ್ಯವೆಮ್ಮನು  ಕೈಬೀಸಿ ಕರೆಯುತಿದೆ ಉತ್ತಮ ಪ್ರಪಂಚಕ್ಕೆ.  ………………………………………………………. ಸತ್ತಮೇಲೆಮೆಗೆ ಪುರಸತ್ತು ; ಆದರೀ ಚೆಲ್ವು ಸಿಗುವುದೇ? … Read more

ಕೊನೆಗಾಲದ ಕಥೆ ಹೇಳುವ ಚರ್ಚು:ಎಚ್.ಕೆ.ಶರತ್

ಒಂದೂರಿನ ಇತಿಹಾಸದ ಅಸ್ಥಿಪಂಜರದಂತಿರುವ ಚರ್ಚು, ಬರಗಾಲದ ಬವಣೆಯ ಬಿಡಿ ಚಿತ್ರಗಳನ್ನು ಕಟ್ಟಿಕೊಡುವ ಅಣೆಕಟ್ಟೆಯ ಹಿನ್ನೀರು, ವ್ಯವಧಾನ ಮತ್ತು ಧಾವಂತಕ್ಕೆ ರೂಪಕವಾಗಿ ನಿಂತಿರುವ ಸೇತುವೆ ಮತ್ತದರ ಮೇಲೆ ಚಲಿಸುವ ವಾಹನಗಳು, ಇಡೀ ಪರಿಸರಕ್ಕೆ ಸೊಗಸಾದ ಉಡುಗೆ ತೊಡಿಸುತ್ತಿರುವ ಸೂರ್ಯ, ಇರುವ ಅತ್ಯಲ್ಪ ನೀರಲ್ಲೇ ಬದುಕು ಕಟ್ಟಿಕೊಳ್ಳಲು ಬೆವರು ಹರಿಸುತ್ತಿರುವ ಶ್ರಮ ಜೀವಿಗಳು… ಹಾಸನದಿಂದ ಇಪ್ಪತ್ತು ಕಿಲೋ ಮೀಟರ್ ದೂರದಲ್ಲಿರುವ ಶೆಟ್ಟಿಹಳ್ಳಿ ಗ್ರಾಮದ ಹೊರವಲಯದಲ್ಲಿ ಸೇತುವೆ, ಚರ್ಚಿನ ಅಳಿದುಳಿದ ಭಾಗಗಳು ಮತ್ತು ಹೇಮಾವತಿ ಜಲಾಶಯದ ಹಿನ್ನೀರು ಸೇರಿ ನಿರ್ಮಿಸಿರುವ ಸುಂದರ … Read more

ವಿಜಯ್ ಹೆರಗು ಅವರ ಚುಟುಕಗಳು

ಕಲೆಗಾರ ಬದುಕುವುದೇ ಒಂದು ಕಲೆ- ನೀನೇ ಕಲೆಗಾರ ಭಾವನೆಗಳು ಹೊರಹೊಮ್ಮಿದರೆ ನೀನೇ ಕವಿ ಸ್ನೇಹ,ಪ್ರೀತಿ ಗಳಿಸಿದರೆ ನೀನೇ ಸಾಹುಕಾರ ಆಸೆ ಇದ್ದರೇ ಬದುಕು ಸಹಜ-ಸುಂದರ ಕಿವುಡು  ನನ್ನೆದೆಯ ಬೇಗುದಿಯ ಹೇಳಿಕೊಳ್ಳಲಿ ಹೇಗೆ? ದೇವರೂ ಕುಳಿತಿಹನು  ಜಾಣ ಕಿವುಡನ ಹಾಗೆ ಕತ್ತಲ ಜಗತ್ತು  ನಮ್ಮನಾಳುವ ನಾಯಕರೇ ಎಲ್ಲಿಹುದು ನಿಮ್ಮ ಚಿತ್ತ  ಸ್ವಲ್ಪ ಗಮನಹರಿಸಿ ನೀವಿತ್ತ  ದುಡ್ಡು ಮಾಡಿದ್ದು,ಸುಳ್ಳು ಹೇಳಿದ್ದು ಸಾಕುಮಾಡಿ ಬಡಜನರ ಬದುಕಿಗೆ ಬುಡ್ಡಿ ದೀಪದಷ್ಟಾದರೂ ಬೆಳಕು ನೀಡಿ ದಂ"ಪತಿ" ಮನೆಗೆ ಲೇಟಾಗಿ ಬಂದಾಗ ಹೆಂಡತಿ ಹಾಕುವಳು ಛೀಮಾರಿ … Read more

ಪುಟ್ಟ ಮತ್ತು ನಾಯಿ ಮರಿ: ವೆಂಕಟೇಶ್ ಮಡಿವಾಳ ಬೆಂಗಳೂರು.

ನಾಯಿ -ಮರಿಯನೊಂದ ಹಾಕಿತು ಮರಿಯ ದೇಹ ನೆಕ್ಕಿ ನೆಕ್ಕಿ ಶುಭ್ರಗೊಳಿಸಿತು ಹಸಿವಿನಿಂದ ಮರಿಯು ಕುಯ್ ಕುಯ್ ಎಂದಿತು ಶ್ವಾನದ್ವಯಕೆ ಹೊಟ್ಟೆ ಈಗ ಚುರ್ ಎಂದಿತು   ದೂರದಲ್ಲಿ ಯಾರೋ ಎಸೆದ ರೊಟ್ಟಿ ಬಂದು ಬಿದ್ದಿತು ರೊಟ್ಟಿ ತಿನ್ನಲೆಂದು ನಾಯಿ ಜಿಗಿಯಿತು ಆಗ ಅಡ್ಡ ಬಂದ ಬಸ್ಸು ಅದರ ಮೇಲೆ ನುಗ್ಗಿತು ಆಗ ತಾನೇ ಜನ್ಮವಿತ್ತ ನಾಯಿ ಮರಣ ಹೊಂದಿತು ಅದೇ ತಾನೇ ಭುವಿಗಿಳಿದ ಮರಿ ಅನಾಥವಾಯಿತು   ನಮ್ಮ ಪುಟ್ಟ ಆ ದೃಶ್ಯ ನೋಡಿದ ಮರಿಯ ತಂದು … Read more