Facebook

Archive for the ‘ಪ್ರವಾಸ-ಕಥನ’ Category

ಹಿಮಾಲಯವೆಂಬ ಸ್ವರ್ಗ (ಭಾಗ 4): ವೃಂದಾ ಸಂಗಮ್

ಇಲ್ಲಿಯವರೆಗೆ ನಾವು ಮೊದಲು ಹೋದದ್ದು ಥಾಯ್ಲ್ಯಾಂಡ್ ದೇಶದ ಚೈತ್ಯಕ್ಕೆ. ಇದು ಥಾಯಿ ಶೈಲಿಯ ಕಟ್ಟಡವಾಗಿದ್ದು ಸುಮಾರು ದೊಡ್ಡದಾಗಿದೆ. ಇದನ್ನು ಕಟ್ಟಿ 4೦ ವರ್ಷಗಳಾಗಿದ್ದವು (1998 ರಲ್ಲಿ). ಬುದ್ಧನ ಪ್ರತಿಮೆ ನಾಲ್ಕುವರೆ ಟನ್ ಭಾರದ ಅಷ್ಟಧಾತು ಎಂಬ ಸಾಮಗ್ರಿಯಿಂದ ಮಾಡಲ್ಪಟ್ಟಿದೆಯಂತೆ. ಚಿನ್ನದ ಪಾಲೀಶ್ ಹಾಕಿರುವ ಈ ಪ್ರತಿಮೆಯ ವೆಚ್ಚ ಹದಿನಾರು ಲಕ್ಷ ರುಪಾಯಿಗಳಾಗಿದ್ದವಂತೆ. ಪ್ರತಿಮೆಯನ್ನು ಇಲ್ಲಿಯ ರೀತಿಯಂತೆ ಒಂದು ಗಾಜಿನ ಪೆಟ್ಟಿಗೆಯಲ್ಲಿರಿಸಲಾಗಿದೆ. ಚೈತ್ಯವು ಬಹಳ ಸುಂದರವಾಗಿದೆ – ಗೋಡೆಗಳು, ನೆಲ, ಮೇಲಿನ ಛಾವಣಿ ಎಲ್ಲ ಸುಂದರವಾದ ರಂಗು-ರಂಗಾದ ಕೆತ್ತನೆ/ಚಿತ್ರಕಲೆಗಳಿಂದ […]

ಹಿಮಾಲಯವೆಂಬ ಸ್ವರ್ಗ (ಭಾಗ 3): ವೃಂದಾ ಸಂಗಮ್

ಇದುವರೆಗೂ ಶಿವನೇ ನಮಗೆ ಕಣ್ಮಾಯ ಮಾಡಿದ್ದನೋ ತಿಳಿಯದು. ಅಲ್ಲಿಯೇ ಸೈಕಲ್ ರಿಕ್ಷಾದಲ್ಲಿ ನಮ್ಮಿಂದ ತಪ್ಪಿಸಿಕೊಂಡ ಅವರೆಲ್ಲರೂ ಕೂಡ ಇದೇ ರೀತಿ ಕಾಯ್ದು ಹುಡುಕಿ, ಇದಿಷ್ಟೂ ಪೂಜೆ ಮುಗಿಸಿಕೊಂಡ ನಿಂತಿದ್ದಾರೆ. ಸರಿ ಎಲ್ಲರೂ ಒಂದಾಗಿ ಕೃಷ್ಣ ಮಠಕ್ಕೆ ಹಿಂದಿರುಗಿದೆವು. ಅಲ್ಲಿ ಧಾರ್ಮಿಕ ಕಾರ್ಯಗಳನ್ನು ಮಾಡಿಸುವವ ಚಿಕ್ಕ ವಯಸ್ಸಿನ ಹುಡುಗ. ವೇದವ್ಯಾಸ, ಅನಂತಪುರ ಜಿಲ್ಲೆಯವನಂತೆ. ನೋಡಲು ಉಡುಪಿ ಮಠದವರಂತೆಯೇ ಇದ್ದ. ತಮಾಷೆಯಾಗಿ ಮಾತಾಡುತ್ತಿದ್ದ. ತೆಲಗು ಕನ್ನಡ ಎರಡೂ ಗೊತ್ತಿತ್ತು. ಅವನು ಬನಾರಸ ವಿಶ್ವವಿದ್ಯಾಲಯದಲ್ಲಿ ಸಂಗೀತ ವಿಭಾಗದಲ್ಲಿ ಕೊಳಲು ವಿದ್ವತ್ ಕಲಿಯುತ್ತಿದ್ದಾನಂತೆ. […]

ಹಿಮಾಲಯವೆಂಬ ಸ್ವರ್ಗ (ಭಾಗ 2): ವೃಂದಾ ಸಂಗಮ್

ಹರನ ಜಡೆಯಿಂದ, ಹರಿಯ ಅಡಿಯಿಂದ, ಋಷಿಯ ತೊಡೆಯಿಂದ ಇಳಿದು ಬಂದ ಗಂಗೆ, ಸಗರನ ಮಕ್ಕಳಿಗೆ ಮೋಕ್ಷ ಕೊಟ್ಟ ಗಂಗೆ, ಭೀಷ್ಮ ಪಿತಾಮಹನ ತಾಯಿ ಗಂಗೆ, ಶಂತನು ಮಹರಾಜನ ಪ್ರೇಮಿ ಗಂಗೆ, ಜಹ್ನು ಋಷಿಯಿಂದ ಜಾಹ್ನವಿಯಾದ ಗಂಗೆ, ಭಗೀರಥನಿಂದ ಭಾಗೀರಥಿಯಾದ ಗಂಗೆ, ಪರಮ ಪಾವನೆ, ಪ್ರತಿಯೊಬ್ಬ ಭಾರತೀಯನ ಮನೆಯಲ್ಲಿರುವ ಗಂಗೆ, ‘ಗಂಗೆಗೇ ಕೊಳೆ ಸೋಕದು ಪಾಪದಾ ಫಲ ತಟ್ಟದು’ ಎಂದು ನಾವು ಮಲಿನಗೊಳಿಸಿದ ಗಂಗೆ, ಕೋಟ್ಯಾನು ಕೋಟಿ ಭಾರತೀಯರ ಪಾಪ ತೊಳೆದು ಈಗ ಕೋಟ್ಯಾನು ಕೋಟಿ ರೂಪಾಯಿಯ ಒಡತಿಯಾಗಿ […]

ಹಿಮಾಲಯವೆಂಬ ಸ್ವರ್ಗ (ಭಾಗ 1): ವೃಂದಾ ಸಂಗಮ್

ದೇಶ ನೋಡು ಅಥವಾ ಕೋಶ ಓದು ಅಂತಾರೆ. ಈಗೆಲ್ಲ ವರ್ಷಕ್ಕೊಂದು ಫಾರಿನ್ ಟ್ರಿಪ್ ಜಸ್ಟ ಕಾಮನ್ ಆಗಿದೆ. ಊರು ಸುತ್ತೋದು ಅಥವಾ ದೇಶ ಸುತ್ತೋದು ತುಂಬಾ ಅನುಭವಗಳನ್ನ ನೀಡುತ್ತವೆ ಅಂತನೇ ಈ ಮಾತು ಹಿರಿಯರು ಹೇಳುವುದು. ಈ ಅನುಭವಗಳನ್ನು ಪಡೆಯುವುದಕ್ಕಾಗಿಯೇ ಈಗಿನ ಕಾಲದವರಿಗಾಗಿ ಟ್ರೆಕ್ಕಿಂಗ್ ರಾಫ್ಟಿಂಗ ಎಲ್ಲಾ ಇವೆ. ಆದರೂ ಕೂಡಾ ಹಿಂದಿನ ಕಾಲದ ಪವಿತ್ರ ಯಾತ್ರೆಗಳೂ ಇನ್ನೂ ಚಾಲ್ತಿಯಲ್ಲಿವೆ. ಅಮರನಾಥ ಯಾತ್ರೆ ಮುಂತಾದವುಗಳಿಗೆ ಎಷ್ಠೋ ದಿನ ಕಾಯಬೇಕಾಗುತ್ತದೆ.  ಕಾಶೀಯಾತ್ರೆ ಎಂದರೆ ನೆನಪಾಗುವುದು, ತ್ರಿವೇಣಿಯವರು ತಮ್ಮ ಕಾಶೀಯಾತ್ರೆ […]

ಬೆಳ್ಳಿತೆರೆಯಲ್ಲಿ `ಮೇಲುಕೋಟೆ’ಯ ದೃಶ್ಯಕಾವ್ಯ!: ದಂಡಿನಶಿವರ ಮಂಜುನಾಥ್

ಕನ್ನಡವೂ ಸೇರಿದಂತೆ ವಿವಿಧ ಭಾಷೆಗಳ ಸಿನಿಮಾಗಳನ್ನು ನೋಡುತ್ತಿದ್ದಾಗ ಖಂಡಿತಾ ನೀವು ಅದರಲ್ಲಿ ಕಲ್ಯಾಣಿಯೊಂದರ ಹಿನ್ನೆಲೆ ಹೊಂದಿರುವ ಬೆಟ್ಟದ ತುದಿಯಲ್ಲಿ ದೇವಾಲಯದ ಗೋಪುರದ ದೃಶ್ಯವನ್ನು ಆಗಾಗ ನೋಡುತ್ತಿರುತ್ತೀರಿ.  ಹೆಚ್ಚಾಗಿ ಕಾಡುಗಳ ದೃಶ್ಯಗಳಲ್ಲಿ ಈ ಸ್ಥಳದ ಪರಿಚಯ ನಿಮಗಾಗಿರುತ್ತದೆ. ಇದು ನಮ್ಮ ನಾಡಿನ ಸ್ಥಳವೇ ಆಗಿದೆ ಎಂದು ತಿಳಿದಾಗ ನಿಜಕ್ಕೂ ನಿಮಗೆ ಆಶ್ಚರ್ಯವಾಗುವುದರಲ್ಲಿ ಅನುಮಾನವೇ ಇಲ್ಲ. ಅದುವೇ ಮೇಲುಕೋಟೆಯ ಮೋಹಕ ದೃಶ್ಯಕಾವ್ಯ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಈ ಸ್ಥಳ ಹಲವು ಭಾಷೆಗಳ ಚಿತ್ರರಂಗದವರನ್ನು ತನ್ನತ್ತ ಆಕರ್ಷಿಸುವುದರಲ್ಲಿ ಯಶಸ್ವಿಯಾಗಿದೆ. ಉತ್ತಮ ಶೂಟಿಂಗ್ ಸ್ಪಾಟ್ […]

ಶಿಲ್ಪ ಕಲೆಯ ತವರು: ಕೈದಾಳ: ದಂಡಿನಶಿವರ ಮಂಜುನಾಥ್

ಮುಂಬೈನಿಂದ ಬಂದಿದ್ದ ಗೆಳೆಯ ಸಿನಿಮಾ ಛಾಯಾಗ್ರಾಹಕ ಶಿವಕುಮಾರ್ ಮತ್ತು ನಾನು ತುಮಕೂರಿನಿಂದ ಬೆಳ್ಳಂಬೆಳಿಗ್ಗೆ ಚಹಾ ಕುಡಿದು ಶಿಲ್ಪಕಲೆಯ ತವರೂರಾದ ಕೈದಾಳದತ್ತ ಪ್ರಯಾಣ ಬೆಳೆಸಿದವು. ಸೂರ್ಯ ಆಗ ತಾನೇ ಉದಯಿಸಿದ್ದರೂ ಸಹ ಚುಮುಚುಮು ಚಳಿಯ ವಾತಾವರಣ ನಮ್ಮ ಮನಸ್ಸಿಗೆ ಮುದ ನೀಡುತ್ತಿತ್ತು. ಕನ್ನಡನಾಡಿನ ಶಿಲ್ಪಕಲೆಗಳಿಗೆ ಪ್ರಸಿದ್ಧವಾದ ದೇವಾಲಯಗಳನ್ನು ಕೆತ್ತಿದ ಅಮರಶಿಲ್ಪಿ ಎಂದು ಹೆಸರಾದ ಜಕಣಾಚಾರಿಯ ಜನ್ಮಸ್ಥಳವನ್ನು ನೋಡುವ ಕುತೂಹಲ ನಮ್ಮಲ್ಲಿತ್ತು. ತುಮಕೂರು ನಗರದಿಂದ ಕುಣಿಗಲ್ ಮಾರ್ಗದಲ್ಲಿ ಕೇವಲ ನಾಲ್ಕು ಕಿಲೋಮೀಟರ್ ಸಾಗಿದ ನಮ್ಮ ಕಾರು ಕೆಲವೇ ನಿಮಿಷಗಳಲ್ಲಿ ಗೂಳೂರು […]

ಹಿಮಾಲಯದಲ್ಲೊಂದು ಸೈಕಲ್ ಪಯಣ: ಡಾ. ಸುಪ್ರಿಯಾ ಸಿಂಗ್

                        ಹಿಮಾಚಲ ಪ್ರದೇಶದ ಮನಾಲಿಯಿಂದ ಜಮ್ಮು ಕಾಶ್ಮೀರದ ಲೇಹ್, ಲಡಾಖ್‍ಗೆ  ಸೈಕಲ್ ಪಯಣ ಮಾಡುವುದು, ವಿಶ್ವದ ಅತ್ಯಂತ ಕಠಿಣ ಮತ್ತು ಸಾಹಸದ ಪಯಣಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ.   ಹಿಮಾಲಯದ ಸೌಂದರ್ಯ ಸವಿಯುತ್ತ ಸಾಗುವ ಪಯಣ ಸಂತೋಷ ನೀಡುವುದು ನಿಜ, ಆದರೆ ಸೈಕಲ್ ಸವಾರನ ಕೌಶಲ್ಯ, ತಾಳ್ಮೆ ಮತ್ತು ಧೈರ್ಯವನ್ನು ಪರೀಕ್ಷಿಸುವಲ್ಲಿ ರಸ್ತೆಗಳು ಮೊದಲು. ಕೆಲವಡೆ ಚೆನ್ನಾಗಿರುವ ರಸ್ತೆಗಳಿದ್ದರೆ, ಅನೇಕ ಕಡೆ ಕಚ್ಚಾ […]

ಎಪ್ಪತ್ತೇಳು ಮಲೆಯ ಸುಂದರ ಪ್ರವಾಸಿ ತಾಣ ಮಲೆಯ ಮಹದೇಶ್ವರ ಬೆಟ್ಟ: ವಸಂತ ಬಿ ಈಶ್ವರಗೆರೆ

ಅಮೂಲ್ಯ ಸಸ್ಯರಾಶಿ, ಜೀವರಾಶಿಗಳಿಂದ ತುಂಬಿದಂತ ಪ್ರದೇಶ, ಬಿಸಿಲಿನ ಕಿರಣಗಳು ಭುವಿಗೆ ಸೋಂಕದಂತಿರುವ ದಟ್ಟ ಕಾನನ, ಒಂದಾನೊಂದು ಕಾಲದಲ್ಲಿ ಕುಖ್ಯಾತ ನರಹಂತಕ ಕಾಡುಗಳ್ಳ ವೀರಪ್ಪನ್ ಆಶ್ರಯ ತಾಣವೂ ಆಗಿದ್ದ ಪ್ರವಾಸಿ ತಾಣವೇ, ಮಲೆಯ ಮಹದೇಶ್ವರ ಬೆಟ್ಟ. ಒಂದು ಕಾಲದಲ್ಲಿ ವೀರಪ್ಪನ್ ಅಡಗುತಾಣವಾಗಿದ್ದಾಗ, ಮಲೆಯಮಹದೇಶ್ವರ ಬೆಟ್ಟಕ್ಕೆ ಬರೋದಕ್ಕೆ ಜನರು ಭಯ ಪಡುತ್ತಿದ್ದರು. ಸಂಜೆ 6 ಗಂಟೆಯ ನಂತ್ರ ಕೊಳ್ಳೆಗಾಲದಿಂದ, ಮಲೆ ಮಹದೇಶ್ವರ ಬೆಟ್ಟಕ್ಕೆ ಹೋಗವ ಮಾರ್ಗವನ್ನ ಮುಚ್ಚಲಾಗುತ್ತಿತ್ತು. ಆದರೇ ಆ ಕಾಲ ಹಿಂದೆ ಸರಿಸು, ನರಹಂತಕ ವೀರಪ್ಪನ್ ಇತಿಹಾಸದ ಪುಟಗಳಲ್ಲಿ […]

ಒಂದು ದಿನ ಆರು ಸುತ್ತಾಣ: ವಸಂತ ಬಿ ಈಶ್ವರಗೆರೆ

ಸೂರ್ಯ ಪುತ್ರರಾಗಿ ಬಿಟ್ಟಿರುವ ನಮಗೆಲ್ಲ, ಸಿಗೋದು ಒಂದೇ ಒಂದು ದಿನ ವಾರಾಂತ್ಯ ರಜೆ. ಆ ರಜೆಯನ್ನೇ ಹೊಂದಿಸಿಕೊಂಡ ಪ್ರವಾಸಕ್ಕೆ ಸಿದ್ದವಾದರೇ, ಖಂಡಿತ ಒಂದೇ ದಿನದಲ್ಲಿ ಆರು ಸುತ್ತಾಣಗಳನ್ನ ಬೆಂಗಳೂರಿಗೆ 75 ಕಿಲೋ ಮೀಟರ್ ದೂರದ ಚಿನ್ನದ ನಾಡು ಕೋಲಾರ ಜಿಲ್ಲೆಯ ಸುತ್ತಮುತ್ತಲಿನಲ್ಲಿ ನೋಡಬಹುದು. ಧಾರ್ಮಿಕ ಸ್ಥಳಗಳಾದ ಈ ಪ್ರವಾಸಿತಾಣಗಳಿಗೆ ಭೇಟಿ ಕೊಟ್ಟು, ಭಕ್ತಿಯ ಭಾವನೆಯನ್ನ ಮನದಲ್ಲಿ ತುಂಬಿಕೊಳ್ಳುತ್ತಾ, ಸಂಭ್ರಮದಲ್ಲಿ ಒಂದೇ ಒಂದು ರಜೆಯ ಮಜೆಯನ್ನ ಅನುಭವಿಸಬಹುದು.  ಜಾಲೀ ರೈಡ್ ಮಾಡೋ ಪ್ರವಾಸ ಹೊರಟರೂ, ಸಂಸಾರ ಸಮೇತರಾಗಿ ಹೊರಟರೂ, […]

ಕಲೆಯ ಬೀದಿಯಲ್ಲೊಂದು ಹುಡುಗಾಟದ ಹುಡುಕಾಟ: ಭಾಗ್ಯಾ ಭಟ್.

  ಹಸಿರ ನಾಡಲ್ಲಿ, ಕಾಫೀ ಘಮದಲ್ಲಿ, ಸುರಿವ ತುಂತುರು ಮಳೆಯಲ್ಲಿ, ಬೀಳೋ ಮಂಜು ಹನಿಗಳ ಜೊತೆ ಆಟವಾಡೋ ತವಕದಲ್ಲಿ. ಎಲ್ಲವೂ ಇದೆ ಈ ಊರಲ್ಲಿ. ಖುಷಿಯಾದಾಗ ಕುಣಿಯೋಕೆ, ಬೇಜಾರಾದಾಗ ಸುಮ್ಮನೇ ಕೂರೋಕೆ, ಪ್ರಶಾಂತವಾಗಿ ಮನದೊಟ್ಟಿಗೆ ಮಾತಾಡೋಕೆ, ವಾರಾಂತ್ಯಕ್ಕೊಂದು ಚಂದದ ಅಪ್ಪುಗೆಯ ವಿದಾಯ ಹೇಳೋಕೆ, ಸ್ನೇಹಿತರ ಜೊತೆ ಮಸ್ತಿ ಮಾಡೋಕೆ. ..ಎಲ್ಲಾ ಭಾವಗಳಿಗೂ ಸಾಥ್ ನೀಡೋಕೆ ಬೇರೆ ಬೇರೆಯದೇ ಸ್ಥಳಗಳಿವೆ ಇಲ್ಲಿ ಎಲ್ಲಾ ಭಾವಗಳನ್ನೂ ಅದರದರದೇ ರೀತಿ ಜೋಪಾನ ಮಾಡೋಕೆ. ..ಪ್ರಕೃತಿಯ ಜೊತೆಗಿನ ಒಡನಾಡಿಗಳಿಗೆ ತೀರಾ ಖುಷಿ ಆಗೋ […]