ಸೂಫಿ ಕತೆಗಳು: ಗೋವಿಂದ ರಾವ್ ವಿ. ಅಡಮನೆ
೧. ಮಂಗಗಳೂ ಟೊಪ್ಪಿಗಳೂ ಒಂದಾನೊಂದು ಕಾಲದಲ್ಲಿ ಜೀವನೋಪಾಯಕ್ಕಾಗಿ ಊರಿಂದೂರಿಗೆ ತಿರುಗುತ್ತಾ ಟೊಪ್ಪಿಗಳನ್ನು ಮಾರುತ್ತಿದ್ದ ಔರಂಗಝೇಬ್ ಎಂಬ ಯುವಕನಿದ್ದ. ಬೇಸಿಗೆಯ ಒಂದು ಅಪರಾಹ್ನ ವಿಶಾಲವಾದ ಬಯಲಿನಲ್ಲಿ ಪಯಣಿಸಿ ಸುಸ್ತಾಗಿದ್ದ ಔರಂಗಝೇಬನು ಯಾವುದಾದರೂ ತಂಪಾದ ಸ್ಥಳದಲ್ಲಿ ವಿರಮಿಸಿ ಒಂದು ಕಿರುನಿದ್ದೆ ಮಾಡುವ ಆಲೋಚನೆ ಮಾಡಿದ. ಸಮೀಪದಲ್ಲಿಯೇ ಇದ್ದ ಮಾವಿನ ಮರವೊಂದರ ಬುಡದಲ್ಲಿ ತನ್ನ ಚೀಲವನ್ನಿಟ್ಟು ಮಲಗಿ ನಿದ್ದೆ ಮಾಡಿದ. ಕೆಲವೇ ಕ್ಷಣಗಳಲ್ಲಿ ಗಾಢ ನಿದ್ದೆಗೆ ಜಾರಿದ. ಸ್ವಲ್ಪ ಸಮಯದ ನಂತರ ಎಚ್ಚರಗೊಂಡು ನೋಡುವಾಗ ಚೀಲದಲ್ಲಿ ಇದ್ದ ಟೊಪ್ಪಿಗಳೆಲ್ಲವೂ ಮಾಯವಾಗಿದ್ದವು. “ಛೇ, … Read more