ಕಪ್ಪು ಮಣ್ಣಿನಲಿ ಹೂತಿಟ್ಟ ಕರುಣೆ: ಸಚೇತನ

ಬಂದೂಕಿನಿಂದ ಹೊರಟ ಕಾಡತೂಸು ಕೊಲ್ಲುವದು ಕೇವಲ ಗುರಿಯಾಗಿ ನಿಂತ ಮನುಷ್ಯನನ್ನು ಮಾತ್ರವಲ್ಲ, ಒಂದು ಜನಾಂಗದ ಬದುಕನ್ನು. ಸತ್ತವರು ಬೂದಿಯಾದರು ಬದುಕಿ ಉಳಿದವರು ಸತ್ತವರ ಪ್ರೇತಗಳಾಗುವರು. ಹಿಂಸೆ ಕೋಣೆಯೊಳಗೆ ಕಿಟಕಿಗಳಿಲ್ಲ, ಒಳ ಹೊಕ್ಕರೆ ಹೊರಬರಲು ಬಾಗಿಲುಗಳಿಲ್ಲ.  "ನಿನ್ನ ಬಂದೂಕುಗಳನ್ನು ಗೌರವಿಸು, ಇವತ್ತಿನಿಂದ ಅವು ನಿನ್ನ ತಂದೆ ತಾಯಿ. "  ಆಟದ ಬಂದೂಕಿನಲ್ಲಿ, ಆಟದ ವಯಸ್ಸಿನಲ್ಲಿನ ಮಕ್ಕಳನ್ನುದ್ದೇಶಿಸಿ ಹೇಳಲಾಗುತ್ತಿದೆ. ಆಫ್ರಿಕಾದ ಯಾವುದೋ ಮೂಲೆಯ ಹಳ್ಳಿಯೊಂದರ ಪುಟ್ಟ  ಜೀವಗಳು ಥರಗುಟ್ಟುತ್ತ ಈ ಮಾತನ್ನು ಕೇಳುತ್ತಿವೆ. ಎದುರಿಗೆ ನಿಂತ, ಬಂದೂಕು ಹಿಡಿದ  ವ್ಯಕ್ತಿಗಳ … Read more

ಮುಗಿಲಿನ ತುಂಬ ಮುತ್ತಿನ ಬೀಜ: ಸಚೇತನ

ನೀಲ ಪಟದ ಮೇಲೆ ಚಿತ್ರಗಳು ಸಾಕಷ್ಟಿದ್ದರೂ ಕೆಲವೊಮ್ಮೆ ದಟ್ಟ ವಿಷಾದವೊಂದು ತೆಳ್ಳಗೆ ಆವರಿಸಿರುತ್ತದೆ. ಅಂಕಿಯ ಲೆಕ್ಕಕೆ ಸಿಗದ ಚುಕ್ಕಿಗಳನ್ನೆಲ್ಲ  ಕಪ್ಪು ಮೋಡ ಮುಚ್ಚಿಟ್ಟಿರುತ್ತದೆ. ಆಕಾಶ ಕಪ್ಪಲ್ಲ, ಕಡು ನೀಲ, ಚುಕ್ಕಿ  ಖಾಲಿಯಾಗದ ಕಾಲ.   ಸು ರಂ ಎಕ್ಕುಂಡಿ ಕವನವೊಂದರ ಕೆಲವು ಸಾಲುಗಳು : ಮುಗಿಲಿನ ತುಂಬ ಮುತ್ತಿನ ಬೀಜ  ಬಿತ್ತುವವರೇ ಇಲ್ಲ  ಬಣ್ಣದ ಲೋಕದ ಬೆಳಕಿನ ತೇರ  ಎಳೆಯುವವರೇ ಇಲ್ಲ  ನಂದನವನದ ರೆಕ್ಕೆಯ ಕುದುರೆಯ  ಹತ್ತುವವರೆ ಇಲ್ಲ  ಕಡಲಿನ ಭಗವದ್ಗೀತೆಗೆ ಭಾಷ್ಯವ  ಬರೆಯುವವರೇ ಇಲ್ಲ  ನಮಗೂ … Read more

ಸಾಯಲೇ ಬೇಕು ಎಲ್ಲರಲ್ಲಿನ ಸೀಸರ್: ಸಚೇತನ

ಷೇಕ್ಸ್ ಪಿಯರ್ ಎನ್ನುವ ಸದಾ ತುಂಬಿ ಹರಿಯುವ ನದಿಯಿಂದ ಮೊಗೆ ಮೊಗೆದು ತೆಗೆದ ಅದೆಷ್ಟೋ ಸಾವಿರ ಸಾವಿರ ಬೊಗಸೆ ನೀರು ಲೆಕ್ಕವಿಲ್ಲದಷ್ಟು  ಸಾಹಿತ್ಯದ ಬೀಜಗಳನ್ನು ಹೆಮ್ಮರವಾಗಿಸಿ ಫಲ ಕೊಡುತ್ತಿದೆ.  ಕರುಣೆ ಕ್ರೌರ್ಯ ಪ್ರೀತಿ ಹಾಸ್ಯ ಪ್ರೇಮ ಮೋಸ ಎಲ್ಲ  ಮಾನವೀ ಭಾವಗಳ ಸಮಪಾಕವನ್ನು ನಾವೆಲ್ಲರೂ ಅದೆಷ್ಟೋ ಸಲ ರುಚಿಕಟ್ಟಾಗಿ ಉಂಡಿದ್ದರೂ ಯಾವತ್ತಿಗೂ ಅವು ಸಾಕು ಎನಿಸಿಲ್ಲ. ಹರಿಯುವ ನದಿಯಿಂದ ಕೈ ಒಡ್ಡಿ ಕುಡಿದ ಸಿಹಿ ನೀರು ಮತ್ತೆ ಮತ್ತೆ ಬೇಕೆನಿಸಿದೆ. ಸೀಸರ್ ಎನ್ನುವ ದುರಂತ ನಾಯಕನ ಕತೆಯಿಂದ … Read more

ಬಿಳಿಯ ಕರುಣೆಯ ಮೇಲೆ ಕಪ್ಪು ಕ್ರೌರ್ಯದ ಕಲ್ಲು: ಸಚೇತನ

ಮನುಷ್ಯ ! ಪ್ರೀತಿಸುವ ದ್ವೇಷಿಸುವ, ಕಾಡುವ ಕಾಡಿಸುವ, ಹೆದರುವ ಹೆದರಿಸುವ, ಅಳಿಸುವ ಸೃಷ್ಟಿಸುವ, ಕರುಣೆಯ ಕ್ರೌರ್ಯದ ಮನುಷ್ಯ. ಧರ್ಮದ ಹೆಸರಿನಲ್ಲಿ ಹಸಿದ ಹೊಟ್ಟೆಗೆ  ತುತ್ತು  ಅನ್ನ  ಕೊಡುವ ಮನುಷ್ಯ ಅದೇ ಧರ್ಮದ ಹೆಸರಿನಲ್ಲಿ ಅನ್ನಕ್ಕೆ ವಿಷವನ್ನಿಕ್ಕಬಲ್ಲ.  ಆದಿ ಮಾನವ ನಂತರದ ಆಧುನಿಕ ಮಾನವ  ಬದುಕಿಗೊಂದು ಶಿಸ್ತಿನ ಚೌಕಟ್ಟು ಬೇಕು ಎಂದು ಸೃಷ್ಟಿಸಿದ ಧರ್ಮದ ಸರಳ ರೇಖೆಗಳನ್ನ ತಿರುಚಿ ವಕ್ರವಾಗಿಸಿ ಸುಂದರ ರಂಗೋಲಿಯ ಸಾಲುಗಳನ್ನು ಕುಣಿಕೆಯಾಗಿಸಿ ಕುತ್ತಿಗೆಗೆ ಬಿಗಿಯಬಲ್ಲ ಮನುಷ್ಯ.  ಕ್ರೌರ್ಯ ಮತ್ತು ಕರುಣೆ ಒಂದೇ ಮುಖದ ಎರಡು … Read more

ಮೌನವೊಂದು ಸಾಗುತಿಹುದು ಬದುಕು ಬಿಟ್ಟು: ಸಚೇತನ

  ವಿಶಾಲ ಮರುಭೂಮಿಯ ಮರಳಿನ ಮೇಲೆ ಬಿಸಿಲು ಚೆಲ್ಲುತ್ತ ನಿಂತ ನೀಲ ಆಕಾಶಕ್ಕೆ ಒಂದೇ ಬಣ್ಣ, ಕಪ್ಪು, ಬಿಳಿ, ಕಡು ನೀಲ, ಕಡುಗಪ್ಪು, ಬಂಗಾರ, ಹಳದಿ ಯಾವುದೇ ಬಣ್ಣಗಳಿಲ್ಲದ ಮೋಡಗಳ ಅಡಿಯಲ್ಲಿರುವವರ ಬದುಕು ಕೂಡ, ಬಣ್ಣಗಳಿಲ್ಲದ ಬದುಕು. ಈ ನೀಲ ಆಕಾಶದ ಕೆಳಗೆ  ಇರಾಕ್ ಮತ್ತು ಟರ್ಕಿ ನಡುವಿನ ಮರುಭೂಮಿಯಂತ ಪ್ರದೇಶದಲ್ಲಿ ಕುರ್ದಿಶ್ ಎನ್ನುವ ನಿರಾಶ್ರಿತರ ಕ್ಯಾಂಪ್ ಇದೆ. ಇರಾಕ್ ಮತ್ತು ಅಮೇರಿಕಾದ ಯುದ್ಧೋನ್ಮಾದದ ಹರಿತ ಧೂಳು ಎಲ್ಲೆಲ್ಲು ತುಂಬಿದೆ. ಯುದ್ಧವೆಂದರೆ ಸೈನಿಕರ ಬಡಿದಾಟವಲ್ಲ, ಬಂದೂಕುಗಳ ಶಬ್ದಗಳಲ್ಲ, … Read more

ಅರ್ಥವೆಂಬ ಭ್ರಮೆಯ ಚೌಕಟ್ಟು: ಸಚೇತನ

ಹಿಂದಿನ ವಾರ ಇದೇ ಅಂಕಣದಲ್ಲಿ, ನೀಯೊರಿಯಲಿಸ್ಟಿಕ್ ಸಿನಿಮಾಗಳ ಬಗ್ಗೆ ಚರ್ಚಿಸಿದ್ದೆವು. ನೈಜತೆಗೆ ಅತೀ ಹತ್ತಿರವಾಗಿರುವ ಈಸಿನಿಮಾ ಪ್ರಕಾರಗಳ ಬಗ್ಗೆ ಇರುವ ದೊಡ್ಡ ಆರೋಪವೆಂದರೆ ನೀಯೊರಿಯಲಿಸ್ಟಿಕ್, ರಿಯಲಿಸ್ಟಿಕ್  ಅಥವಾ ಆರ್ಟ್ ಸಿನಿಮ ಎನ್ನುವ ವಿಭಾಗದ ಸಿನಿಮಾಗಳು ಅರ್ಥವಾಗಲಾರವು ಎಂದು.  ಬರಹದಲ್ಲಿ ರಿಯಲಿಸ್ಟಿಕ್ ಎನ್ನುವದನ್ನ ವೈಭವೀಕರಣ ಇಲ್ಲದ ಎಲ್ಲ ಸಿನಿಮಾಕ್ಕೆ ಪರ್ಯಾಯ ಪದವಾಗಿ  ಬಳಸಲಾಗುವದು.    ಸಿನಿಮಾ ಎನ್ನುವದು ಪಾತ್ರ ಮತ್ತು ಅದರೊಟ್ಟಿಗಿನ ಇತರ ಅನೇಕ ಪಾತ್ರಗಳ ನಡುವಿನ ಕಾರ್ಯ, ಮಾತು, ಘಟನೆ, ಭಾವನೆ ಇವುಗಳ ಸರಮಾಲೆ.  ಸರಪಳಿಯ ಕೊಂಡಿಗಳಂತೆ … Read more

ಪಾತ್ರಗಳು ಎಂದರೆ ಯಾರು ?: ಸಚೇತನ

ಸಿನಿಮಾದ ತೆರೆಯ ಮೇಲೆ ಬಣ್ಣ ಹಚ್ಚಿ ಮುಖವಾಡವೊಂದವನ್ನು ಮೆತ್ತಿಕೊಂಡು, ಕೃತಕವಾದ ಪಾತ್ರ ಸ್ವರೂಪಿ ಭಾವಗಳನ್ನು ಆವಾಹಿಸಿಕೊಂಡು, ಸಿದ್ಧ ಸನ್ನಿವೇಶಗಳಿಗೆ, ಪ್ರಮಾಣಬದ್ಧವಾಗಿ ಅಭಿನಯಿಸುವದೇ ? ಪಾತ್ರ ಎಲ್ಲಿಯೋ ಇರುವಂತದ್ದಲ್ಲ, ನಮ್ಮ ನಿಮ್ಮ ನಡುವಿನಿಂದಲೇ ಎದ್ದು ಬಂದಂತಹ  : ಮುಂದಿನ ಮನೆಯ ಕಾಲೇಜಿನ ಹುಡುಗಿ, ಕಳ್ಳೆ  ಕಾಯಿ ಮಾರುತ್ತಿರುವ ಬಿಹಾರಿ ಹುಡುಗ, ಸಿಗ್ನಲ್ಲುಗಳಲ್ಲಿ ಬಲೂನು ಮಾರುತ್ತಿರುವ ಪೋರಿ, ಸರಕ್ಕನೆ ಸಿಂಬಳ ಒಳಗೆಳೆದುಕೊಳ್ಳುವ ಚಿಕ್ಕ ಬಾಲಕ,  ಮಸಾಲೆ ದೋಸೆ ತಿಂದು ಟೀ ಗೆ ಕಾಯುತ್ತಿರುವ ಪಕ್ಕದ ಟೇಬಲ್ ನ ಜೋಡಿ, ಗ್ಯಾಸ್ … Read more

ಕತ್ತಲಡಗಿಸಲು ಹಣತೆಯೊಂದು ಸಾಕು: ಸಚೇತನ

ಕ್ಲಾಸಿನಲ್ಲಿ ಪಾಠ ಓದಲು  ಎದ್ದು ನಿಂತ ಪುಟ್ಟ ಕಂದಮ್ಮ  ಭಯಗೊಂಡಿದ್ದಾನೆ, ಸಣ್ಣನೆಯ ನಡುಕ ಮೈ ತುಂಬಾ ಹರಡಿ ತುಟಿಯ ತುದಿಯಲ್ಲಿ ಕುಳಿತಿದೆ, ತೊದಲಿದರೆ ಎನ್ನುವ ಆತಂಕ ಆ ಚಿಕ್ಕ ಕಣ್ಣುಗಳನ್ನು ದಾಟಿ ಹೊರ ಬರುತ್ತಿದೆ,   ಕೈಯಲ್ಲಿ ಅಂಗಿಯ ತುದಿಯನ್ನು ಹಿಡಿದು ಎಳೆಯುತ್ತಿದ್ದಾನೆ, ಶಕ್ತಿಮೀರಿ ಹೊರಡಿಸಿದ ಮಾತು ಬೆಚ್ಚನೆಯ ಗೂಡಿನಿಂದ ಕೆಳಬಿದ್ದ ನಡುಗುವ ಗುಬ್ಬಚ್ಚಿಯಂತೆ,ಮುದ್ದಾಗಬೇಕಿದ್ದ ಮಾತು ಮೊದ್ದಾಗಿದೆ, ತೊದಲು. ಕಂದಮ್ಮನ ಕಣ್ಣಿನಿಂದ ಮಾತು ಹೊರಬರುತ್ತಿಲ್ಲ ಶಬ್ದಗಳು ಹನಿಗಳಾಗಿವೆ.  ಇಲ್ಲಿಯೂ ಹಾಗೆ ಕಥೆಯ ನಾಯಕ ಅಂತಿಥವನಲ್ಲ, ಅವನು ಬ್ರಿಟಿಷರ … Read more

ಅರ್ಥವಿಲ್ಲ ತತ್ವವಿಲ್ಲ ಅಸಂಗತವೆ ಸತ್ವವೆಲ್ಲ: ಸಚೇತನ

ಅಸಂಗತವಾಗಿರುವ ಕಥೆ ಅಥವಾ ಸಿನಿಮಾಕ್ಕೆ  ಅದೃಶ್ಯವಾದ ಶಕ್ತಿಯೊಂದಿದೆ. ಅಸಂಗತ ಸಾಹಿತ್ಯಕ್ಕೆ ತಂತ್ರ, ಹೆಣೆದ ಬಲೆಯಂತ ಉದ್ದೇಶಪೂರಿತ ಕಥಾವಸ್ತು, ಕಥಾವಸ್ತುವಿಗೊಂದು ಕೊನೆ, ಕೊನೆಯಾಗುವದಕ್ಕೆ  ಒಂದು ತಿರುವು, ರೋಚಕತೆ, ಕೊನೆಯಾಗಿದ್ದಕ್ಕೆ ಒಂದು ನೀತಿ ಇವ್ಯಾವುದು ಇಲ್ಲ.  ಬಹುತೇಕ ಸಲ ಅಸಂಗತ ಕಥಾಲೋಕದಲ್ಲಿ  ನಮ್ಮ ಕಲ್ಪನೆಗೆ ನಿಲುಕಿರದ  ಘಟನೆಗಳು ನಡೆಯುವದು, ಮಾತುಗಳು ಕೇಳಲ್ಪಡುವದು ಸಾಮಾನ್ಯ.  ಅಸಂಗತತೆ ತನ್ನನ್ನು ತಾನು  ಓದುಗ ಅಥವಾ ಕೇಳುಗ ಅಥವಾ ನೋಡುಗನ ದೃಷ್ಟಿ, ಕಲ್ಪನೆ, ತೀರ್ಮಾನಕ್ಕೆ  ಒಪ್ಪಿಸಿಕೊಂಡಿರುತ್ತದೆ.  ಸ್ಪಷ್ಟವಾಗಿ ಹೇಳಿರದ, ಪ್ರಕಟವಾಗಿ ಬಿಚ್ಚಿಟ್ಟಿರದ ಅರ್ಥವೊಂದು ನಮ್ಮಲ್ಲಿ ಹುಟ್ಟುವಂತೆ … Read more

ಕಪ್ಪು ಚಿಮಣಿಯ ಹಿಂದೆ ಕಳೆದು ಹೋದ ಗೆರೆಗಳು: ಸಚೇತನ

ಬರ್ಲಿನ್ ನಗರದ ಎಲ್ಲ ರಸ್ತೆಗಳಲ್ಲಿ 'ಬ್ರೂನೋ' ಎನ್ನುವ ಪುಟ್ಟ ಬಾಲಕ ಮತ್ತವನ ಗೆಳೆಯರ  ಗಾಡಿ ಹಾದು ಹೋಗುತ್ತದೆ. ಮಳೆ ಸುರಿದ ಬೀದಿಗಳಲ್ಲಿ, ಮಹಿಳೆಯರು ಮತ್ತವರ ಪುರುಷರು ಆರಾಮವಾಗಿ ಚಹಾ ಹೀರುತ್ತಿರುವ ಕೆಫೆಗಳ ಬಳಿ, ಹೊಸದಾಗಿ ತಂದ ಕೈ ಚೀಲದಂತ ಬಟ್ಟೆ ಧರಿಸಿದ ಸೈನಿಕರನ್ನು ಹೊತ್ತು ಕುಳಿತ ಮೋಟಾರಿನ ಬಳಿ,  ಬಟ್ಟೆ ಅಂಗಡಿಯ ಎದುರಿನಲ್ಲಿ ನಿಲ್ಲಿಸಿದ ಬೊಂಬೆಯಂತೆ ಒಂದೆ ಸಮನೆ ನಿಂತೆ ಇರುವ ದ್ವಾರಪಾಲಕರ ಬಳಿ  ಹಾದು ಮನೆಯ  ಎದುರು ಗೆಳೆಯರನ್ನು ಬೀಳ್ಕೊಟ್ಟು ಕೈ ತೋಟದ ಮೂಲಕ ಮನೆ … Read more

ಮಾನ್ ಫ್ರಂ ದಿ ಅರ್ಥ್: ಸಚೇತನ

  ಮನುಷ್ಯ…   ದ್ವಂದ್ವ…  ಅತೀ ಪುರಾತನ ಕಾಲದಿಂದಲೂ ಮನುಷ್ಯನನ್ನು ಕಾಡುತ್ತಿರುವ ದ್ವಂದ್ವ ' ಮನುಷ್ಯನೆಂದರೆ ಯಾರು ?" ಸ್ಥಿತಿ ಗತಿ ಮಿತಿ ಪರಿಮಿತಿ. ಎಲ್ಲವನ್ನು ಎಲ್ಲ ಕಾಲದಲ್ಲಿಯೂ ಕಾಡಿದ ಪ್ರಶ್ನೆ. ' ಮನುಷ್ಯ'  ಮನುಷ್ಯನ ಉಗಮವಾಗಿ, ಅಭ್ಯುದಯವಾಗಿ ಪ್ರಾಣಿಗಳ೦ತಿದ್ದ ಮನುಷ್ಯ ಕಾಲ ಕ್ರಮೇಣ ಕ್ರೋ ಮ್ಯಾಗ್ನನ್  ಆಗಿ ತನ್ನನ್ನು ತಾನು ನಾಗರೀಕತೆಯ ಅಚ್ಚಿನಲ್ಲಿ ಎರಕಗೊಳಿಸುತ್ತ ಬಂದಂತೆ, ಮನುಷ್ಯನ ರೂಪವೂ ಬದಲಾಯಿತು: ದೈಹಿಕವಾಗಿ ಮಾನಸಿಕವಾಗಿ. ದೇಹದ ಸ್ನಾಯುಗಳ ಮಾಂಸಖಂಡಗಳ  ಜೊತೆಗೆ  ಮನಸ್ಸಿನ ಬೆಳವಣಿಗೆಯಾದಂತೆ ಸಂಕುಲಗಳೊಂದು, ವರ್ಣಗಳೊಂದು ಕಡೆ … Read more

ಪ್ರೇಮದುತ್ಕಟತೆಯ ಅನಂತ ಹುಡುಕಾಟ: ಸಚೇತನ

ಉತ್ಕಟ ಪ್ರೇಮದ ಪ್ರಾತಿನಿಧಕವಾಗಿ ಹಲವಾರು ಸಿನಿಮಾಗಳು ಬಂದು ಹೋಗಿವೆ. ದುರಂತ ಪ್ರೇಮಕ್ಕೆ ಸಿನಿಮಾದ ರೂಪದಲ್ಲಿ  ಪರಂಪರಾಗತ ಸಾಕ್ಷಿ ಎನ್ನುವಂತೆ ನಾವು ಟೈಟಾನಿಕ್ ಸಿನಿಮಾವನ್ನು ನೋಡಿದ್ದೇವೆ, ದಿಲ್ ವಾಲೆ ದುಲ್ಹನಿಯಾ ಲೇ ಜಾಯೆಂಗೆ ಥರದ ಭಾರತೀಯ ಶೈಲಿಯ ಪ್ರೇಮದ ಹಂಬಲ ಮತ್ತು ತ್ಯಾಗವನ್ನು  ಕಂಡಿದ್ದೇವೆ.  ಆದರೆ ಸಿನಿಮಾವೊಂದರಲ್ಲಿನ ಪ್ರೇಮದ ಉತ್ಕಟತೆ ತೆರೆಯಾಚೆಗೆ ಸಾಗಿ ಪ್ರೇಕ್ಷನಲ್ಲಿ ಆಳಕ್ಕಿಳಿದು ನೆನಪಿನಲ್ಲಿ ಉಳಿಯುವದು,  ಪ್ರೀತಿಸಿದ ಪಾತ್ರಗಳೆರಡರ  ನಡುವಿನಲ್ಲಿ ಅತೀ ಆರ್ದವಾದ ಸಂಬಂಧವೊಂದು ಸಾಧ್ಯವಾದಾಗ ಹಾಗೂ ಅದಕ್ಕೆ ಪೂರಕವಾಗಿ  ಕ್ಯಾಮರಾ ಕಣ್ಣಿನಲ್ಲಿ  ಸೆರೆಯಾದಾಗಲೇ.   … Read more

ನೋವಿನ ಸಮುದ್ರದ ಮೇಲೆ ಸತ್ತ ಮನುಷ್ಯನ ನಡೆದಾಟ: ಸಚೇತನ

  ಡೆಡ್ ಮ್ಯಾನ್ ವಾಕಿಂಗ್ ನೋಡಿಬಿಡು ಪ್ರೀತಿಯ ಮುಖದಲ್ಲಿನ  ಆ ಕಣ್ಣುಗಳ ಅವಳ ಕಣ್ಣುಗಳ ದಿಟ್ಟಿಸು ಓ  ಅಲ್ಲೊಂದು ಶಾಂತಿಯಿದೆ. ಇಲ್ಲ, ಯಾವುದೂ ಸಾಯುವದಿಲ್ಲ ಈ ದಿವ್ಯ ಬೆಳಕಿನಲ್ಲಿ. ಮೂವತ್ತು ವರ್ಷದ ಜೀವನ ಕಳೆಯಲು ಕೇವಲ ಒಂದು ಘಂಟೆಯ  ಈ ಪವಿತ್ರ ಬೆಳಕು ಮಾತ್ರ  ಸಾಕು. ಕೇವಲ ಒಂದು ಘಂಟೆ ದಯವಿಟ್ಟು ಬಂದು ಹೋಗು ! ಮರಣ ಅಥವಾ ಬದುಕು ಇವೆರಡರ ಮಧ್ಯದ ಸೂಕ್ಷ್ಮತೆಗಳನ್ನು ಬಿಡಿಸಿಡುವ  ಟಿಮ್ ರಾಬಿನ್ಸನ್ ನಿರ್ದೇಶನದ  ಡೆಡ್  ಮ್ಯಾನ್ ವಾಕಿಂಗ್ ಎನ್ನುವ ಶಕ್ತಿಯುತ … Read more

ಮೌನ ಕ್ಯಾನ್ವಾಸಿನಲ್ಲೊಂದು ಕುಸುರಿ – ಬಾರನ್: ಸಚೇತನ ಭಟ್

ಮಧ್ಯ ಪ್ರಾಚ್ಯದ ವಿಶಿಷ್ಟ ದೇಶ ಇರಾನ್, ಸಿನಿಮಾ ಜಗತ್ತಿನಲ್ಲಿ ತನ್ನದೇ ಆದ ಮಹತ್ವದ ಸ್ಥಾನ ಪಡೆದಿದೆ. ಇರಾನಿನ ಭಾಷೆಯಾದ ಪರ್ಷಿಯಾ ಭಾಷೆಯಲ್ಲಿ ತಯಾರಾಗುವ ಸಿನಿಮಾಗಳಿಗೆ, ಅಲ್ಲಿನ ಪ್ರಸಿದ್ಧ ಜಮಖಾನದ ಸೂಕ್ಷ್ಮ ಕುಸುರಿ ಕೆಲಸದ ಪ್ರಭಾವವಿದೆ. ಜಗತ್ತಿನ ೩೦ ಪ್ರತಿಶತ ಜಮಾಖಾನಗಳು ಇರಾನಿ ಜನರ ಪಳಗಿದ ಕುಸುರಿಯಲ್ಲಿ ನೇಯಲ್ಪಡುತ್ತವೆ ಹಾಗೂ ಜಮಖಾನದೆಡೆಯಲ್ಲೆ ಬೆಳೆದ ಇರಾನಿನ ಸಿನಿಮಾ ಜಗತ್ತು,  ಜಮಖಾನದ ಕುಸುರಿಯಷ್ಟೇ ಅದ್ಭುತವಾದ ಚೆಂದನೆಯ ಆಪ್ತವಾದ ಮೆತ್ತಗಿನ ಮೋಹಕವಾದ ಸರಳವಾದ ಕಲಾಕೃತಿಯನ್ನು  ಪರದೆಯಲ್ಲಿ ಮೂಡಿಸಿಬಿಡುತ್ತದೆ.  ಇರಾನಿ ಸಿನಿಮಾಗಳ ಜೀವಾಳವೆಂದರೆ ಸರಳತೆ … Read more