Facebook

Archive for the ‘ಕಾಮನ ಬಿಲ್ಲು’ Category

ಪ್ರೀತಿಯ ಅತ್ತೆಯಾಗುವವಳಿಗೊಂದು ಪತ್ರ: ಪದ್ಮಾ ಭಟ್

                            ಪ್ರೀತಿಯ ಅಮ್ಮ.. ಅಮ್ಮನೆಂದು ಯಾಕೆ ಕರೆಯುತ್ತಿದ್ದಾಳೆ ಎಂದು ಯೋಚಿಸುತ್ತಿದ್ದೀಯಾ? ನೀನು ನನ್ನನ್ನು ಮಗಳೆಂದೇ ಕರೆದ ತಕ್ಷಣವೇ ನಿನ್ನನ್ನು ಅಮ್ಮನೆಂದು ಸ್ವೀಕರಿಸಿಬಿಟ್ಟೆ..ಅದಿರಲಿ.. ಆವತ್ತು ನೀ ಬರೆದ ಪತ್ರ ಓದುತ್ತಿದ್ದಂತೆಯೇ  ಕಣ್ಣಂಚಿನಲ್ಲಿ ಸಣ್ಣಗೆ ನೀರು ಒಸರಿತ್ತು..  ಜಗತ್ತಿನ ಎಲ್ಲರಿಗೂ ನಿನ್ನಂತಹ ಅತ್ತೆಯೇ ಸಿಕ್ಕಿದ್ದರೆ ಎಂದು ಅನಿಸಿದ್ದೂ ಹೌದು.. ನಿನ್ನಿಂದ ಕಲಿಯಬೇಕಾದದ್ದು ಬಹಳಷ್ಟು ಇದೆ ಎಂದು ಅನಿಸಿತ್ತು. ನಿನ್ನ ಪತ್ರವು ಕೇವಲ […]

ನನ್ನೆಲ್ಲಾ ಭಾವಗಳಿಗೆ ನಿನ್ನ ಪ್ರೀತಿಯ ಲೇಪನ..: ಪದ್ಮಾ ಭಟ್

          ಕೂಸೆ.. ನಿನ್ ಸಂತಿಗೆ ಮಾತಾಡ್ತಾ ಇದ್ರೆ, ಸಮಯ ಹೋಗೋದೇ ಗೊತ್ತಾಗ್ತಿಲ್ಲೆ.. ಅದೆಂತಕ್ಕೆ ನೀ ಯಂಗೆ ಅಷ್ಟು ಇಷ್ಟ ಆದೆ.. ಅಂತಾ ಪದೇ ಪದೇ ಹೇಳುವ ನಿನಗೆ ನನ್ನಿಂದ ಉತ್ತರ ಕೊಡುವುದು ಕಷ್ಟ.. ಅದೇ ಆ ದಿನ. ಆ ಮುಸ್ಸಂಜೆಯ ಕೋಲ್ಮಿಂಚಿನಲಿ, ನಿನ್ನ ಮುಖವಷ್ಟೇ ಕಾಣುತ್ತಿದ್ದ ತುಸು ಬೆಳಕು, ಹೃದಯದ ಬಡಿತ ಇಷ್ಟು ಜೋರಾಗಿದ್ದನ್ನು ನಾನೆಂದೂ ಕೇಳಿರಲಿಲ್ಲ.. ಚಳಿಯಿಂದ ಮೈ ಕೊರೆಯುತ್ತಿತ್ತು.. . ಮೌನದ ಆಳದೊಳಗೆ , ಆಡಲಾಗದ ಮಾತುಗಳನ್ನೆಲ್ಲಾ ಕಣ್ಣುಗಳೇ […]

ಲಾಸ್ಟ್ ಬೇಂಚ್: ಪದ್ಮಾ ಭಟ್

ಲೇ ಮಚ್ಚ ಇವತ್ತಾದ್ರೂ ಬೇಗ ಕ್ಲಾಸಿಗೆ ಹೋಗೋಣ  ಇಲ್ಲಾಂದ್ರೆ ಹಿಂದಿನ ಬೇಂಚಿನಲ್ಲಿ ಯಾರಾದ್ರೂ ಕೂತ್ಕೊಂಡ್ ಬಿಡ್ತಾರೆ.. ಆಮೇಲೆ ದಿನವಿಡೀ ಮುಂದಿನ ಬೇಂಚೆ ಗತಿ.. ಎಂದು ಆತ ಹೇಳುತ್ತಿದ್ದ.. ಅರೇ! ಹಿಂದಿನ ಬೇಂಚಿಗೆ ಇಷ್ಟೆಲ್ಲಾ ಕಾಂಫೀಟೇಶನ್ನಾ? ಎಂದು ಅಂದ್ಕೋಬೇಡಿ ಕಾಲೇಜಿನಲ್ಲಿ ಯಾವಾಗಲೂ ಮುಂದಿನ ಬೇಂಚಿಗಿಂತ ಹಿಂದಿನ ಬೇಂಚಿಗೆ, ಕಾಂಫೀಟೇಶನ್ ಜಾಸ್ತಿ.. ಇಷ್ಟವಿಲ್ಲದ ಪ್ರೊಫೆಸರ್ ಪಾಠವನ್ನು ಮುಂದಿನ ಬೇಂಚಿನಲ್ಲಿ ಕೂತರೆ ಕಷ್ಟಪಟ್ಟು ಕೇಳಲೇಬೇಕಾಗುತ್ತದೆ. ಆದರೆ ಹಿಂದಿನ ಬೇಂಚು ಎನ್ನುವುದು ಒಂಥರಾ ಮನೆ ಇದ್ದಂಗೆ, ಡೆಸ್ಕಿನ ಒಳಗೆ ಪತ್ತೇದಾರಿ ಕಾದಂಬರಿಯನ್ನು ಓದಬಹುದು, […]

ಆ ಬೆಳದಿಂಗಳ ರಾತ್ರಿಯಲಿ ಒಂಟಿತನ: ಪದ್ಮಾ ಭಟ್

ಅದೊಂದು ಸುಂದರ ಬೆಳದಿಂಗಳ ರಾತ್ರಿ.. ತಂಪು ತಂಗಾಳಿ ಎದೆಗೆ ಸೋಕಿರಲು ಕನಸುಗಳ ಪದಗುಚ್ಚವುಕವಲೊಡೆದು ಬಂದಿತು.ನಕ್ಷತ್ರಗಳನ್ನು ಎಣಿಸುತ್ತಾ ಎಣಿಸುತ್ತ ಚಂದಿರನ ನಗೆಯನು ನೋಡುತ್ತಿದ್ದೆ. ಭಾವನೆಗಳ ಹೊಸ್ತಿಲು ನೆಲಕೆ ತಾಕದಂತೇ ಹಾರುತಿರಲು ಮನಸಿಗೆ ಮುದ ನೀಡುವ ಬಚ್ಚಿಟ್ಟ ನವಿಲುಗರಿ. ಆಗಲೇ ಕಾಡುವಒಂಟಿತನ. ಕೆಲವೊಂದು ಸಮಯಕ್ಕೆ, ಯೋಚನೆಗಳಿಗೆ ಆಸ್ಪದ ನೀಡುವ ಒಂಟಿತನ. ಆ ಒಂಟಿತನವು ಕೆಲವು ಬಾರಿಅತ್ಯಂತ ಖುಷಿಯನ್ನುಕೊಡುತ್ತದೆ.ಕನಸುಗಳ ಲೋಕಕ್ಕೆ ಒಬ್ಬಂಟಿಯಾಗಿರುವಾಗ ಮಾತ್ರ ಹೋಗಲು ಸಾಧ್ಯ. ಕನಸೇ ಬದುಕನ್ನು ನನಸೆಂದು ಮಾಡುವೆ ಎಂದು ಕೇಳಿಕೊಳ್ಳಲು ಅವಕಾಶ ನೀಡುವುದು. ಬೇಕಾದ ಹಾಗೆ ತಿರುಗಿಸಿ […]

ವಾಕಿಂಗ್ ಅನ್ನೋ ಸ್ನೇಹಿತೆ: ಪದ್ಮಾ ಭಟ್

                     ಹೆಲ್ದೀ ಲೈಫ್ ಅನ್ನೋದು ಈಗ ಉಳ್ಳವರ ಅಥವಾ ಪೇಟೆಯವರ ಸ್ವತ್ತಾಗಿ ಮಾತ್ರ ಉಳಿದಿಲ್ಲ.. ಬದಲಾಗಿ ಹಳ್ಳಿಯ ಮೂಲೆ ಮೂಲೆಗೂ ಅದರ ಛಾಪು ಪಸರಿಸಿದೆ..ನನ್ ಹೊಟ್ಟೆ ಸಣ್ಣಗಾಗಬೇಕು, ನನ್ ಟೆನ್ಶನ್ ಕಡಿಮೆಯಾಗಬೇಕು, ಬಳುಕುವ ಸೊಂಟ ನಂಗಿರಬೇಕು ಎಂಬ ಬೇಕುಗಳ ನಡುವೆಯೇ, ಜನರಲ್ಲಿ ಆರೋಗ್ಯಕರ ಜೀವನವನ್ನು ತಮ್ಮದಾಗಿಸಿಕೊಳ್ಳಬೇಕೆಂಬ ಅರಿವು ಮೂಡಿದೆ.  ರೋಗ ಬಂದ್ಮೇಲೆ ಕಡಿಮೆ ಮಾಡೋದಿಕ್ಕೆ ಸಾಹಸ ಪಡೋದಕ್ಕಿಂದ, ಬರದೇ ಇದ್ದ ರೀತಿ ಜೀವನಶೈಲಿ ರೂಢಿಸಿಕೊಳ್ಳಬೇಕೆಂಬ […]

ಹೊಸ ವರುಷದಿ ಹೊಸ ಮನಸು: ಪದ್ಮಾ ಭಟ್

                   ಹೊಸ ವರುಷವು ಪ್ರತೀ ವರುಷವೂ ಬರುತ್ತದೆ.. ಕಳೆದು ಹೋದ ಹಳೆಯ ವರುಷದ ನೆನಪಿನಲಿ ನವ ವರುಷವನ್ನು ಸ್ವಾಗತಿಸುತ್ತ, ಹೊಸ ಕನಸುಗಳನು ಬಿಚ್ಚಿಡಲು ಶುರು ಮಾಡಿರುತ್ತೇವೆ.. ಪ್ರತೀ ಸಲದಂತೆ ಈ ಸಲವೂ ಏನಾದರೂ ಹೊಸದಾದ ಪ್ಲ್ಯಾನ್ ಮಾಡಬೇಕು.. ಹೊಸ ಯೋಜನೆಗಳು ಹೊಸ ವರುಷದಿಂದಲೆ ಜಾರಿಗೆ ಬರಲೆಂಬ ಕಟುವಾದ ನಿರ್ಧಾರವನ್ನೂ ತೆಗೆದುಕೊಂಡು ಬಿಟ್ಟಿರುತ್ತೇವೆ.. ಅದೇ ಹಳೆಯ ಕೆಟ್ಟ ಚಟಗಳನ್ನು ಬಿಡಬೇಕು ಎಂತಲೋ, ಹೊಸದಾದ ಕೆಲಸವನ್ನು ಶುರು ಮಾಡಿಕೊಳ್ಳಬೇಕೆಂತೋ, […]

ಗೊತ್ತಿಲ್ಲದ ನಿನ್ನ ಬಗೆಗೊಂದಿಷ್ಟು: ಪದ್ಮಾ ಭಟ್

ನಿನ್ನ ಬಗ್ಗೆ ಏನಾದರೂ ಬರೀಲೇಬೇಕು.. ಬರೀತಾನೇ ಇರ್ತೀನಿ. ತುಂಬಾತುಂಬಾ ಯೋಚಿಸ್ತೀನಿ.. ಸ್ನೇಹಿತೆಯರ ಗುಂಪಿನಲ್ಲಿ ಕನಸನ್ನು ಹಂಚಿಕೊಂಡು ಒಮ್ಮೆಲೇ ತಲೆಯನ್ನು ಕೆಳಗೆ ಮಾಡಿ ಮುಖ ಕೆಂಪಗೆ ಮಾಡಿಕೊಳ್ಳುತ್ತೀನಿ.. ಪ್ರೀತಿ ಪ್ರೇಮಗಳ ಬಗ್ಗೆ ಚಿಕ್ಕ ಚಿಕ್ಕ ಕವನಗಳನ್ನು ಬರೆದಾಗ ಎಷ್ಟೋ ಜನರು ಕೇಳಿದ್ದುಂಟು..ನಿಂಗೆ ಲವರ್ ಇಲ್ವಾ? ಅಂತ. .ಇಲ್ಲಾ ಎಂದು ನಿಜವನ್ನೇ ಹೇಳಿದ್ದೇನೆ.. ನೀನು ಯಾರೆಂದೇ ಗೊತ್ತಿಲ್ಲ ನೋಡು ನಂಗೆ..ಎಲ್ಲಿದ್ದೀಯೋ, ಹೇಗಿದ್ದೀಯೋ ಏನ್ ಮಾಡಾ ಇದ್ದೀಯೋ..ಒಂದೂ ಗೊತ್ತಿಲ್ಲ ನಿ॒ನ್ನ ಬಗ್ಗೆ ಸಾಸಿವೆಯಷ್ಟೂ ಗೊತ್ತಿಲ್ಲ ಮುಂದೆ ನೀನೆಂದೋ  ಬರುವೆಯಲ್ಲ..ನಿನ್ನ ಜೊತೆಗೆ ಬದುಕನ್ನು […]

ನೆಮ್ಮದಿಯೆಂಬುದೊಂದು ಭಾವ..: ಪದ್ಮಾ ಭಟ್

ಮಧ್ಯಾಹ್ನದ ಬಿಸಿಲಿನಲ್ಲಿ , ಛತ್ರಿ ಹಿಡಿದು ಒಂದಷ್ಟು ದೂರ ಸಾಗಿದ್ದೆ. ರಸ್ತೆ ಬದಿಯಲ್ಲಿ ಟೆಂಟು ಹಾಕಿಕೊಂಡು , ಅರ್ಧ ಹರಿದ ಬಟ್ಟೆಯಲ್ಲಿದ್ದ ಹೆಂಗಸೊಬ್ಬಳು ರೊಟ್ಟಿ ಸುಡುತ್ತಿದ್ದರೆ,  ಪಕ್ಕದಲ್ಲಿಯೇ ಇದ್ದ ಮರಳು ರಾಶಿಯಲ್ಲಿ ಅವಳ ಇಬ್ಬರು ಮಕ್ಕಳು ಆಟವಾಡುತ್ತಿದ್ದರು.. ಆ ನಗುವು ಬಡತನವನ್ನೆಲ್ಲಾ ಮರೆಮಾಚಿತ್ತು. ಖುಷಿಯಿಂದಿರಲು ದುಡ್ಡು  ಬೇಕೆಂಬುದಿಲ್ಲ ಎಂಬುದನ್ನು ಮತ್ತೆ ಮತ್ತೆ ಹೇಳುವಂತಿತ್ತು.. ಸ್ವಲ್ಪ ಹೊತ್ತು ಅಲ್ಲಿಯೇ  ನಿಂತು ನೋಡುತ್ತಿದ್ದವಳಿಗೆ ಎಲ್ಲಾ ಇದ್ದೂ ಖುಷಿಯಿಂದಿರಲು ಸಾಧ್ಯವಿಲ್ಲ.. ಏನೂ ಇಲ್ಲದೇ ಇರುವ ಇವರು ಅದೆಷ್ಟು ನಗುತ್ತಿದ್ದಾರಲ್ಲ ಎಂದೆನಿಸಿದ್ದು ಸುಳ್ಳಲ್ಲ.  […]

ಅವನ ಮೌನದಲಿ ನಾನು ಧ್ವನಿಸಬೇಕಿದೆ: ಪದ್ಮಾ ಭಟ್, ಇಡಗುಂದಿ.

ಕನಸುಗಳನೊಮ್ಮೆ ಹರವಿ ಕುಳಿತೆ.. ಸಾಲಾಗಿ ಕಂಡುಕೊಂಡೆ ಅವನ ಬಗೆಗಿನ ಕನಸುಗಳನ್ನು.. ಇಷ್ಟರ ವರೆಗೆ ಎಷ್ಟೋ ಜನರು ಕೇಳಿದಾರೆ.. ನಿಂಗೆ ಬಾಯ್ ಫ್ರೆಂಡ್ ಇಲ್ವಾ? ಅಂತ..ಇಲ್ಲಾ ಅಂತ ನಾ ಹೇಳಿದ್ದಕ್ಕೆ , ನೀನು  ವೇಸ್ಟ್ ಅಂತ ಅವಳ್ಯಾರೋ ಹೇಳಿದಾಗ ನನಗೇನು ಬೇಸರವಾಗಲಿಲ್ಲ.. ಏಕೆಂದರೆ ಅಪ್ಪ ಅಮ್ಮನ ಮುದ್ದು ಮಗಳು ನಾನು.. ಅವರು ಹೇಳಿದಂತೆ ಕೇಳುವುದು ಇಷ್ಟ.. ಬಹುಶಃ ನನ್ನ ಹುಡುಗನನ್ನು ದೇವರು ತುಂಬಾ ಪುರುಸೊತ್ತು ಮಾಡಿಕೊಂಡು ಸೃಷ್ಟಿಸಿರಬಹುದೇನೋ..ಅದಕ್ಕೇ ಅವನು ಇನ್ನೂ ಕನಸಾಗಿಯೇ ಉಳಿದದ್ದು.. ಊಹೂಂ ಅದೇ ಹಳೇ ಕಾಲದಂತೆ […]

ಅಜ್ಜಿಯ ಕತೆ: ಪದ್ಮಾ ಭಟ್, ಇಡಗುಂದಿ.

                 ಒಂದಾನೊಂದು ಕಾಲದಲ್ಲಿ ಒಂದೂರಲ್ಲಿ.. ಎಂದೇ ಆರಂಭವಾಗುತ್ತಿದ್ದ ಅಜ್ಜಿಯ ಕತೆಯು ಯಾವುದೋ ನೀತಿ ಪಾಠದೊಂದಿಗೋ ಜೀವನ ಮೌಲ್ಯಗಳೊಂದಿಗೋ ಮುಗಿಯುತ್ತಿದ್ದವು. ದಿನದ ಎಲ್ಲಾ ಚಟುವಟಿಕೆಗಳಲ್ಲಿ ಕತೆಯೂ ಸಹ ಒಂದಾಗಿತ್ತು. ರಾಮಾಯಣ ಮಹಾಭಾರತದಂತಹ ಪಾತ್ರಗಳು ಮಕ್ಕಳ ಪಾಲಿನ ಹೀರೋಗಳಾಗಿರುತ್ತಿದ್ದವು. ಅಜ್ಜಿ ಅಜ್ಜಿ ಕತೆ ಹೇಳಜ್ಜಿ ಎಂದ ಕೂಡಲೇ ಒಂದು ಚೂರೂ ಬೇಸರ ಮಾಡಿಕೊಳ್ಳದೆ ಹೇಳುತ್ತಿದ್ದಳು. ಇಡೀ ದಿನವೂ ಯಾವುದೋ ಕೆಲಸಗಳಿಂದಲೋ ಅಥವಾ ಇನ್ಯಾವುದರಿಂದಲೋ ಬ್ಯೂಸಿಯಾಗಿರುತ್ತಿದ್ದ ಅಜ್ಜಿಗೂ ಮೊಮ್ಮಕ್ಕಳಿಗೆ ಕತೆ ಹೇಳುವುದೆಂದರೆ […]