Facebook

Archive for the ‘ಕಾವ್ಯಧಾರೆ’ Category

ಪಂಜು ಕಾವ್ಯಧಾರೆ

 ತಂಪ ಸೂಸುವ ತುಂಟ‌ ಚಂದ್ರಮ, ಚದುರಿ ಹೋದನು ಚಹರೆ ಮರೆತು.. ಚಿಲುಮೆ ಒಲುಮೆಯ ಗಾಳಿ ಬೀಸಿ, ಚಂದ್ರ ವಾಚುತ ನಕ್ಕನು..! ಅಬಲೆ ಮಣಿ ನಿನ್ನ ನೋಟಕೆ , ರಸಿಕನಾದೆನು ಭಯವ ಮರೆತು.. ಕನಸ‌ಕಂಡೆನು ಇಂದು ನಾನು, ಹೊಸಲೋಕಕೆ ಪಯಣ ಕಲಿತು..! ಅರಿಯಲಾಗದ ಅರಿವಿನನುಭವ, ಅರಿತೆ ನಾನು ಒಲವಿನಿಂದ.. ಅಮಲು ನೀಡುವ ದಿವ್ಯ‌ಔಷಧಿ.. ಪ್ರೀತಿ ಎನ್ನುವುದ..! ಹರಿದು ಹೋಗದ ಜಾಲವಿದು, ಕರಗಿ ಹೋಗದ ಅರಗಿದು.. ಹರಿದು ಕರಗಿ ಹೋಯಿತೆಂದರೆ, ಹ್ರದಯ ಉರಿಯದೆ ಇರುವುದೇ?!! **** ಪ್ರತಿಫಲಿಸುವ ಹ್ರದಯದ, ಮಿಡಿತವ […]

ಪಂಜು ಕಾವ್ಯಧಾರೆ

ದಯಾಮಯಿ ಎಂದು ಬರೆಯಲೆ,  ಸುಂದರಿ ಎಂದು ಬರೆಯಲೆ, ಪ್ರಿಯತಮೆ ಎಂದು ಬರೆಯಲೆ, ನಾನು ಕಂಗೆಟ್ಟಿ ಬಿಟ್ಟಿದ್ದೇನೆ  ನಿಮಗೆ ಈ ಪತ್ರದಲ್ಲಿ ಏನು ಬರೆಯಲು ಎಂದು ಈ ನನ್ನ ಪ್ರೇಮ ಪತ್ರ ಓದಿ ನೀನು ಕುಪಿತಗೊಳ್ಳದಿರು; ನೀನೆ ನನ್ನ ಜೀವನ , ನೀನೆ ನನ್ನ ಉಸಿರು, ನೀನೆ ನನ್ನ ಆರಾಧನೆ; ನಾನು ನಿನಗೆ ಸೂರ್ಯನಿಗೆ ಹೋಲಿಸುತ್ತಿದ್ದೆ ,  ಆದರೆ ಇದರಲ್ಲಿ ಉರಿಯುವ ಬೆಂಕಿ ಇದೆ; ನಾನು ನಿನಗೆ ಹುಣ್ಣಿಮೆಯ ಚಂದ್ರ ನಿಗೆ ಹೋಲಿಸುತ್ತಿದ್ದೆ,  ಆದರೆ ಇದರಲ್ಲಿ ಕಪ್ಪು ಛಾಯೆ […]

ಪಂಜು ಕಾವ್ಯಧಾರೆ

 ಆಡು ನವಿಲೇ    ಕನಸುಗಳ ಬಚ್ಚಿಟ್ಟು ಕಾಡದಿರು ಹೀಗೆ ಬೆಚ್ಚುತ್ತ ನೋಡದಿರು ಎದೆಹೂವು ನಲುಗೆ ।।   ನೆನಪು ಬುತ್ತಿಯು ಚೆಲ್ಲಿ ಈಗ ಚೆಲ್ಲಾಪಿಲ್ಲಿ ಕಿರಿಬೊಗಸೆಯಲ್ಲದನು ಮೊಗೆಯುವುದು ಹೇಗೆ ।।   ಜೊತೆ ಜೊತೆಗೆ ನಡೆವಲ್ಲಿ ಬೀಸಿ ಸುಂಟರಗಾಳಿ ಮರೆಯಾದ ಹೆಜ್ಜೆಗಳು ಹೆಚ್ಚಿಸಿವೆ ಬೇಗೆ।।   ಎದೆಯಲ್ಲಿ ಎದೆ ಬೆರೆತು ಹಾಡು ಹೊಮ್ಮಿರುವಂದು ಯಾವ ಗಂಟಲ ಗಾಣ ಒತ್ತಿದ್ದು ಹಾಗೆ ।।   ನುಡಿಸು ನೀ 'ಗೋವಿಂದ' ಕೊಳಲಿಗುಸಿರನ್ನೂಡಿ ಕರಗಿ ಎದೆ ನವಿಲಾಡಿ ಬಿಚ್ಚುತ್ತ ಸೋಗೆ।।   […]

ಪಂಜು ಕಾವ್ಯಧಾರೆ

ದಾನಾ ಮಾಂಝಿ ಮೂಲ : ವಿಶ್ವನಾಥ ಪ್ರಸಾದ ತಿವಾರಿ (ಅಧ್ಯಕ್ಷರು, ಕೇಂದ್ರ ಸಾಹಿತ್ಯ ಅಕಾಡೆಮಿ, ದಿಲ್ಲಿ)  ಬರೀ ದಾನಾ ಮಾಂಝಿಯದಲ್ಲ ಈ ದೈನ್ಯತೆಯ ಕಥೆ..! ಭ್ರಮೆಯಿರಲಿಲ್ಲ ‘ದಾನಾ’ನಿಗೆ ಇರಲಿಲ್ಲ ಯಾರಿಂದಲೂ ಆಸೆ ಇರಲಿಲ್ಲ ಯಾರ ಮೇಲೂ ಸಿಟ್ಟು ಭಾವನೆಗಳಿದ್ದವು, ವೇದನೆಗಳಿದ್ದವು ಸೋಲು ಇತ್ತು ಹಾಗೂ ಮೌನವೂ ದಾನಾ ತನ್ನ ಹೆಂಡತಿ ‘ಅಮಂಗ’ಳ  ಹೆಣವನ್ನು ಚಾಪೆಯಲ್ಲಿ ಸುತ್ತುವಾಗ ಭೂಮಿಯೂ ನಾಚಿ ನೀರು ನೀರಾಗಿ ಭೂಮಿಗಿಳಿದಿತ್ತು ತಲೆತಗ್ಗಿಸಿತ್ತು ಕಲ್ಲೂ ತನ್ನ ಕಲ್ಲೆದೆಯ ಮೇಲೆ ಕಲ್ಲು ಹೊತ್ತುಕೊಂಡಿತ್ತು ಅವಳ ನಿರ್ಜೀವ ದೇಹವನ್ನೆತ್ತಲು […]

ಪಂಜು ಕಾವ್ಯಧಾರೆ

ಮೌಲ್ಯ    ನೀ ಉಸಿರಾಡುವ ಗಾಳಿ ನಾ , ತಂಗಾಳಿಗೆ ನೀ ಕೊಡುವ ಮೌಲ್ಯ ನನಗಿಲ್ಲ….  ನಡೆದಾಡುವ ಹಾದಿ ನಾ, ಮೆಟ್ಟಿಗೆ ನೀ ನೀಡುವ ಮೌಲ್ಯ ನನಗಿಲ್ಲ …..  ಬಾಯಾರಿದಾಗ ಕುಡಿವ ಜಲ ನಾ, ಅದರ ನಡುವೆ ತೇಲಾಡುವ ಮಂಜುಗಡ್ಡೆಗಿರುವ ಮೌಲ್ಯ ನನಗಿಲ್ಲ…  ದಣಿದಾಗ ಸುಡುಬಿಸಿಲಲ್ಲಿ ಆಶ್ರಯಿಸುವ ಮರ ನಾ, ನೆರಳಿಗಿರುವ ಮೌಲ್ಯ ನನಗಿಲ್ಲ…..  ಭಾವನೆಗಳನ್ನು ಬೆಸೆದು ಹರವಿ  ಕೊನೆಗೂ  ಒಂದು ಕವನವಾಗುವೆ ನಾ, ಅದ ಬರೆಯುವ ಹಾಳೆಗಿರುವ ಮೌಲ್ಯ ನನಗಿಲ್ಲ….  ಗೀಚುವ ಲೇಖನಿಗಿದೆ ಬೆಲೆ, ಪಾಪ!!ಕೈಗಳಿಗೇ […]

ಪಂಜು ಕಾವ್ಯಧಾರೆ

ಕಂಗೊಳಿಸೋ ಕಣ್ಣಲಿ ಮೂಡಿಸುದೆ ಮುಗುಳ್ನಗೆಯನ್ನ ಬಂಧಿಯಾಗಲು ಕಾಯುತಿರುವೆ ಚಿನ್ನ ನನ್ನ ಚಿನ್ನ   ಕಣ್ಣಂಚಿನ ನೋಟದಲಿ ಸೆರೆ ಹಿಡಿರುವೆ ನನ್ನ ಮನ ಮೋಹಿಸುವ ನಿನ್ನ ಪಿಸು ಮಾತುಗಳೆ  ಚೆನ್ನ ನೀ ತಿರುಗೆ ನೋಡುವ ಆ ನೋಟ ಬಹು ರೋಮಾಂಚನ ಕಂಗೊಳಿಸೋ ಕಣ್ಣಲಿ ಮೂಡಿಸುದೆ ಮುಗುಳ್ನಗೆಯನ್ನ ಸದಾ ನಿನ್ನ ನೋಡುವ ಆಸೆ ಮುಚ್ಚದೆ ಕಣ್ಣ ರೆಪ್ಪೆಯನ್ನ ಸವಿಯಲು ಕಾತುರ ನಿನ್ನ ತುಟಿ ಅಂಚಿನ ಸಿಹಿ ಜೇನನ್ನ ಸೆರೆ ಹಿಡಿದು ಬಂಧಿಸು ನಿನ್ನ ಮನಸಲಿ ನನ್ನ ಬಂಧಿಯಾಗಲು ಕಾಯುತಿರುವೆ ಚಿನ್ನ […]

ಪಂಜು ಕಾವ್ಯಧಾರೆ

ಮುಂಜಾನೆ ಮುಂಬಾಗಿಲು ಗುಡಿಸಿ  ಸಾರಿಸಿ ರಂಗೋಲಿ ಬರೆದು ತುಟಿಮೇಲೆ ನಗು ಹೊದ್ದುಕೊಳ್ಳಬೇಕು ಬೈಯ್ಯುವವರ ಮುಂದೆ ಬಿಲ್ಲಾಗಬೇಕು ಮೊಗ್ಗುಮೈಯ್ಯಲ್ಲಿ ಮನೆತುಂಬ ತಿರುಗಬೇಕು ಹೊಗಳಿದರೆ ಹೂವಾಗಬೇಕು ಹಕ್ಕಲ್ಲ ಎಸೆದ ರೊಟ್ಟಿಯ ಚೂರು        ಕತ್ತಲ ಕೊನೆದೀಪ        ಆರುವತನಕ        ತಾನಾಗಿದ್ದುಕೊಂಡು        ನಾನೆಂಬುವರಿಗೆಲ್ಲ ಹೂಂಗುಟ್ಟು        ಅಳಬೇಕೆಂದುಕೊಳ್ಳುತ್ತಲೇ ನಕ್ಕು        ನಗುವಲ್ಲೂ ಕಣ್ಕೊನೆಯುಕ್ಕಿ        ಕತ್ತಲ ಕೊನೆಯಾಟಕ್ಕೂ ಹಾಸಿಕೊಂಡು […]

ಪಂಜು ಕಾವ್ಯಧಾರೆ

"ಬಡತನ ಬಂದಿದೆ" ಬೆಳೆದು ನಿಂತಿರುವ ಪೈರು ಸೊರಗುತ್ತಿದೆ, ನೀರಿಲ್ಲದೇ ಇಲ್ಲಿ ಮಳೆಗೆ ಬಡತನ ಬಂದಿದೆ ! ಎರಡು ಹೃದಯಗಳಲ್ಲಿ  ಅರಳಿದ ಪ್ರೀತಿಯು ವೈಮನಸ್ಸಿನ ತಾಪಕ್ಕೆ  ಬೇರೆ-ಬೇರೆ ಆಗಿವೆ ಇಲ್ಲಿ ಪ್ರೀತಿಗೆ ಬಡತನ ಬಂದಿದೆ ! ದಣಿವರಿಯದ ದೇಹಕ್ಕೆ ದಣಿವಾಗಿ ಹಾಸಿಗೆ ಹಿಡಿದು ಮಲಗಿದೆ  ಇಲ್ಲಿ ಆರೋಗ್ಯಕ್ಕೆ ಬಡತನ ಬಂದಿದೆ ! ವೈದ್ಯನಲ್ಲಿ ಕಾಯಿಲೆಗೆ ಅಸ್ತ್ರವಿದೆ ಆ ಅಸ್ತ್ರ ಪಡೆಯಲು ಇಲ್ಲಿ ಬಡವನ ಜೇಬಿಗೆ ಬಡತನ ಬಂದಿದೆ ! ನನ್ನೊಳಗೂ ಕೆಚ್ಚದೆಯ ಕಿಚ್ಚಿದೆ ಹೊತ್ತಿಸಿಬೇಕೆಂದರೇ.. ಮನಸ್ಸು ಕಣ್ಣೀರಲ್ಲಿ ಮುಳುಗಿ […]

ಪಂಜು ಕಾವ್ಯಧಾರೆ

ಶಾಂತಿಗೀತೆ ಮುಗಿಲು.. ಕೆಂಡಕಾರುವ ಅಗ್ನಿಪಾತ್ರೆ ನೆಲ.. ಕಿಚ್ಚು ಎಬ್ಬಿಸುವ ಒತ್ತಲು ಗಾಳಿ.. ಕೊಳ್ಳಿಹೊತ್ತಿಸುವ ಕಟುಕ ಮಳೆ.. ಬಾರದೆ ಕಾಡುವ ಇನಿಯ ನಾನು..  ನೆಲವಾಗಬೇಕು ಮಲೆನಾಡ ಕಾಡಂತೆ ಮುಗಿಲಾಗಬೇಕು ಹುಣ್ಣಿಮೆ ಇರುಳಂತೆ ನಾನು.. ಗಾಳಿಯಾಗಬೇಕು.. ಬೆಂದೊಡಲ ತಣಿಸಬೇಕು ಮಳೆಯಾಗಬೇಕು.. ನದಿಯಾಗಿ ಹರಿಯಬೇಕು ನಾನು.. ಹಕ್ಕಿಯಾಗಬೇಕು.. ಗಡಿಗಳಾಚೆ ಹಾರಬೇಕು ಮದ್ದುಗುಂಡು ಬರುವ ದಾರಿಹಾಯ್ದು ಆಚೆ  ಹೋಗಿ ಶಾಂತಿ ಸಾರಿ ಬರಬೇಕು ಸರಹದ್ದಿನಗುಂಟ ಮುಳ್ಳಿನ ಬೇಲಿ ನಿಬಿಡ ಸರಳುಗಳ ಪಂಜರ ಹೇಗೆ ಹಾರಲಿ? ಬೇಡ.. ಬೇಡ.. ಈ ಜೀವಾವಧಿ ಶಿಕ್ಷೆ.. ನೀಡಬೇಡ.. […]

ಪಂಜು ಕಾವ್ಯಧಾರೆ

ಪಾಣೀಗ್ರಹಣ ಎಲ್ಲೂ ಅವಳಿಗೊಂದು ಹೊಚ್ಚ ಹೊಸ ಸವಿಯಿರುವ ವರ ಸಿಗುತ್ತಿಲ್ಲ ದೇವಾನುದೇವತೆಗಳ ವರಗಳ ಸ್ಟಾಕ್ ಖಾಲಿಯಾಗಿದೆ…… ಹಣ್ಣು ರುಚಿಕಟ್ಟನ್ನು ಕಳೆದುಕೊಳ್ಳುತ್ತಾ ರಾಶಿ ಬಿದ್ದಿರುವ ವಸಂತಗಳ ಎಣಿಸುತ್ತಿದೆ ಮತ್ತೊಂದು ವಸಂತಕ್ಕೆ ಕಾದಿರುವ ಬೂರಗ ಸತ್ತಂತೆ ನಿಂತಿದೆ ತಪೋನಿರತತೆಯಲ್ಲಿ ವಸಂತ ಕಟ್ಟಲು ಬೇಕಿರುವ ಮತ್ತೆರೆಡು ಜತೆ ಕೈಗಳು ಇಲ್ಲೆ ಎಲ್ಲೋ ಅಡಗಿರಬಹುದೆಂದು ಉಳಿ ಸುತ್ತಿಗೆ ತೆಗೆದು ಕಟೆಕಟೆದು ನೋಡುತ್ತಿದ್ದಾಳೆ  ನಿರರ್ಥಕವಾಗಿ ಮನದ ಮಾದರಿ ಮಸಕಾಗುತ್ತಿರುವ ಹೊತ್ತಲ್ಲಿ ಅದು ತನ್ನದೇ ಚಿತ್ರ ! ನಿರಾಶೆಯ ಮಡುವು ಸಂತೋಷದ ಚಿಲುಮೆ ಒಟ್ಟೊಟ್ಟಿಗೆ ಕಣ್ಣಿ […]