Facebook

Archive for the ‘ಕಥಾಲೋಕ’ Category

ಬದುಕು ಮಾಯೆ: ಮಂಜುನಾಥ ಹೆಗಡೆ

ಪ್ರತಾಪ್ ಚೆಂಬರ್ ನಲ್ಲಿ ಕುಳಿತು ಮಂಕಾಗಿದ್ದ, ಆಗಷ್ಟೆ ಸುನಯನಾ ಜೊತೆ ಕೊನೆ ಬಾರಿ ಮಾತನಾಡಿದ್ದ. ಐದು ವರ್ಷಗಳ ಪ್ರೀತಿಗೆ ಕೊನೆಯ ಮಾತಿನೊಂದಿಗೆ ಪರದೆ ಎಳೆದಿದ್ದಳು ಅವಳು. ಪ್ರತಾಪ್ ನೊಂದಿದ್ದ, ಕೆಲಸಕ್ಕೆ ನಾಲ್ಕು ದಿನ ರಜಾ ಹಾಕಿ ಹೋಗಲು ತೀರ್ಮಾನಿಸಿ ರಜಾ ಅರ್ಜಿ ರೆಡಿಮಾಡುತ್ತಿದ್ದ. ಆಗ ನೀತಾ ಮೆ ಐ ಕಮಿನ್ ಎನ್ನುತ್ತ ಬಾಗಿಲು ತಳ್ಳಿ ನಗುತ್ತ ಬಂದಳು, ಆದರೇ ಪ್ರತಾಪ್ ಮುಖನೋಡಿ ಒಮ್ಮೆ ದಿಗಿಲಾಯಿತು, ಮೌನ ಆವರಿಸಿತು ಇಬ್ಬರ ನಡುವೆ. ಪ್ರತಾಪ್ ಟೇಬಲ್ ಮೇಲಿನ ಲೀವ್ ಲೆಟರ್ […]

ನೆನಪಿನ ಪಯಣ – ಭಾಗ 3: ಪಾರ್ಥಸಾರಥಿ ಎನ್  

ಇಲ್ಲಿಯವರೆಗೆ ಆಗ ವಿಚಿತ್ರ ಗಮನಿಸಿದೆ,  ಜ್ಯೋತಿಗೆ ಸಂದ್ಯಾಳ ಮಾತು ಕೇಳಿಸುತ್ತಿದೆ ಎಂದು ನನಗನ್ನಿಸಲಿಲ್ಲ. ಹೀಗೇಕೆ ಆಕೆಯನ್ನು ನಾನು ಹಿಪ್ನಾಟಾಯಿಸ್ ಏನು ಮಾಡಿಲ್ಲ, ಮೊದಲಿಗೆ ನನಗೆ ಆ ಹಿಪ್ನಾಟೈಸ್ ಅಥವ ಸಂಮೋಹನ ವಿದ್ಯೆಯ ಬಗ್ಗೆ ಗೊತ್ತು ಇಲ್ಲ. ಆದರೆ ಇಲ್ಲಿ ಏನೋ ವಿಚಿತ್ರವಾದಂತಿದೆ  ನಾನು. ’ ಜ್ಯೋತಿ ಸಮಾದಾನ ಪಟ್ಟುಕೊಳ್ಳಿ ಅದೇಕೆ ಎಲ್ಲ ದುಃಖದ ವಿಷಯವನ್ನೆ ನೆನೆಯುತ್ತಿರುವಿರಿ, ನೀವು ಎದ್ದೇಳಿ, ಸ್ವಲ್ಪ ಕಾಪಿ ಕುಡಿಯಿರಿ ಮತ್ತೆಂದಾದರು , ಈ ಪ್ರಯೋಗ ಮುಂದುವರೆಸೋಣ, ಇಂದಿಗೆ ಸಾಕು ಅಲ್ಲವೇ' ಎಂದೆ ' […]

ಅಮ್ಮಾ ಕ್ಷಮಿಸು: ನಂದಾ ಹೆಗಡೆ

ದಿನಪತ್ರಿಕೆಯೊಂದಕ್ಕೆ ನನ್ನ ಅತ್ತೆಯವರ ಅಡಿಗೆ ರೆಸಿಪಿಯನ್ನ ಕಳುಹಿಸಿದ್ದೆ. ಆದರೆ ಈಗ ಆರು ತಿಂಗಳಿನಿಂದಲೂ ಪ್ರತೀ ವಾರ ಕಾಯುತ್ತಲೇ ಇದ್ದೇನೆ. ಆದರೆ ಅದು ಪ್ರಕಟವಾಗಲೇ ಇಲ್ಲ. 83 ವರ್ಷದ ನನ್ನ ಅತ್ತೆಯವರ ಜೀವನೋತ್ಸಾಹದ ಬಗ್ಗೆ ಚಿಕ್ಕ ಮಾಹಿತಿಯನ್ನೂ ಕೂಡ ಬರೆದು ಒಪ್ಪವಾಗಿಯೇ ಕಳುಹಿಸಿದ್ದೆ ಅಂದುಕೊಂಡಿದ್ದೆ. ಆದರೂ ಯಾಕೋ ಪ್ರಕಟವಾಗಲಿಲ್ಲ. . . . . . . . . ಅವರ ಮಾನದಂಡವೇನೋ. . . . . . . . ಅಂದುಕೊಳ್ಳುತ್ತಿರುವ ಹಾಗೇ ನನ್ನ ಉದ್ಯೋಗದ […]

ನೆನಪಿನ ಪಯಣ: ಬಾಗ – 2: ಪಾರ್ಥಸಾರಥಿ ಎನ್

ಇಲ್ಲಿಯವರೆಗೆ ನೆನಪಿನ ಪಯಣದ ಪ್ರಯೋಗ ಪ್ರಾರಂಭ:  ಆನಂದ ಹೇಳಿದಂತೆ ರೂಮಿನ ಮಂಚದಲ್ಲಿ ಜ್ಯೋತಿ ಮಲಗಿದಳು, ತಂಪಾಗಿರಲೆಂದೆ ಏಸಿ ಆನ್ ಮಾಡಿದೆವು. ಆನಂದನ ಪೀಯುಸಿ ಓದುತ್ತಿದ್ದ ಮಗ ಶಶಾಂಕ್ ಮನೆಯಲ್ಲಿರಲಿಲ್ಲ ಅವನ ಸ್ನೇಹಿತರ ಜೊತೆ ಯಾವುದೋ ಟೂರ್ ಅಂತ ಹೋಗಿದ್ದ. ಹಾಗಾಗಿ ನಮ್ಮಗಳದೆ ಸಾಮ್ರಾಜ್ಯ.  ಶ್ರೀನಿವಾಸಮೂರ್ತಿಗಳು ಮಾತ್ರ ಈಗಲೂ ಆತಂಕದಲ್ಲಿದ್ದರು ರೂಮಿನಲ್ಲಿ ಒಂದು ದೀಪ ಬಿಟ್ಟು ಎಲ್ಲ ದೀಪವನ್ನು ಆನಂದ ಆರಿಸಿದ. ಜ್ಯೋತಿ ಮಾತ್ರ ನಗುತ್ತಿದ್ದಳು. ಅವಳಿಗೆ ಎಂತದೊ ಮಕ್ಕಳ ಆಟದಂತೆ ತೋರುತ್ತಿತ್ತು ಅನ್ನಿಸುತ್ತೆ. ಜ್ಯೋತಿ ಆರಾಮವಾಗಿ ಅನ್ನುವಂತೆ […]

ನೆನಪಿನ ಪಯಣ:  ಬಾಗ – 1: ಪಾರ್ಥಸಾರಥಿ ಎನ್

  ಅದು ಪ್ರಾರಂಭವಾದುದೆಲ್ಲ ಸಾದಾರಣವಾಗಿಯೆ ! ಕೆಲವರಿಗೆ ಅದೊಂದು ವರ ದಿಂಬಿಗೆ ತಲೆಕೊಟ್ಟ ಕ್ಷಣವೇ ನಿದ್ದೆ ಆವರಿಸುವುದು.  ನನ್ನಂತ ಕೆಲವರ ಪಾಡು ಕಷ್ಟ , ಮಲಗಿ ಎಷ್ಟು ಕಾಲವಾದರು ಹತ್ತಿರ ಸುಳಿಯದ ನಿದ್ರಾದೇವಿ. ನಿದ್ರಾದೇವಿಯನ್ನು ಅಹ್ವಾನಿಸಲು ಹೊಸ ಹೊಸ ರೀತಿಯ ಪ್ರಯೋಗ.  ಒಮ್ಮೆ ಕೆಲವು ರಾತ್ರಿ  ನಿದ್ದೆ ಬರಲಿ ಎನ್ನುವ ಕಾರಣಕ್ಕೆ ಮನಸನ್ನು ಒಂದೇ ಕಡೆ ಕೇಂದ್ರಿಕರಿಸಲು ಪ್ರಯತ್ನಿಸುತ್ತ, ಬೆಳಗ್ಗೆಯಿಂದ ರಾತ್ರಿಯ ತನಕ ಏನೆಲ್ಲ ಆಯಿತು ಎಂದು ನೆನೆಯುತ್ತ ಹೋದೆ. ಯಾರುಯಾರ ಜೊತೆಯೆಲ್ಲ ಮಾತನಾಡಿದೆ, ಬೆಳಗಿನ ತಿಂಡಿ […]

ನನ್ನವಳು: ಗಿರಿಜಾ ಜ್ಞಾನಸುಂದರ್

   ಎಲ್ಲೋ ತುಂಬಾ ಸದ್ದು ಕೇಳಿಸುತ್ತಿರುವಂತೆ ಅನುಭವ. ಕಣ್ಣು ತೆರೆಯಲು ಆಗುತ್ತಲೇ ಇಲ್ಲ. ರೆಪ್ಪೆಗಳು ತುಂಬಾ ಭಾರ. ತನ್ನ ಮೈ ತನ್ನ ಮತ್ತೆ ಕೇಳುತ್ತಿಲ್ಲ ಅನ್ನಿಸುತ್ತಿದೆ. ತನ್ನಷ್ಟಕ್ಕೆ ತಾನು ಅತಿ ನೋವು ಅನುಭವಿಸುತ್ತಿದೆ. ಸುತ್ತಲೂ ಮಷೀನ್ ಗಳ ಶಬ್ದ. ತನಗೇನಾಗುತ್ತಿದೆ ಎಂದು ತಿಳಿದುಕೊಳ್ಳಲು ಕಷ್ಟವಾಗುತ್ತಿದೆ. ಸ್ವಲ್ಪ ಸಮಯ ತೆಗೆದುಕೊಂಡ ಮೇಲೆ ತಿಳಿಯುತ್ತಿದೆ ನಾನು ಆಸ್ಪತ್ರೆಯಾ ಐ ಸೀ ಯು ವಾರ್ಡ್ನಲ್ಲಿದ್ದೀನಿ ಎಂದು. ಎದೆನೋವೆಂದು ಹೇಳಿದ್ದೊಂದೇ ನೆನಪು. ಆಮೇಲೇನಾಯಿತೋ ಗೊತ್ತಿಲ್ಲ. ಆಸ್ಪತ್ರೆ ನನ್ನನ್ನು ಆಲಂಗಿಸಿದೆ. ತನ್ನ ಅರೋಗ್ಯ ಹದಗೆಟ್ಟಿದೆ […]

ಶಶಿ (ಕೊನೆಯ ಭಾಗ): ಗುರುರಾಜ ಕೊಡ್ಕಣಿ

ಇಲ್ಲಿಯವರೆಗೆ ಮರುದಿನ ಬೆಂಗಳೂರಿಗೆ ತೆರಳಿದ ನನಗೆ ಒಂದು ಗಳಿಗೆಯೂ ಪುರುಸೊತ್ತು ಇಲ್ಲದಂತಾಗಿತ್ತು. ಕಂಪನಿಯ ವಾರ್ಷಿಕ ಸಮ್ಮೇಳನದ ಸಮಾರಂಭದಲ್ಲಿ ನನಗೆ ಬೆಸ್ಟ್ ರೆಪ್ರಸೆಂಟಿಟಿವ್ ಆಫ್ ದಿ ಇಯರ್’ ಪ್ರಶಸ್ತಿ ಬಂದಾಗ ನನ್ನ ಸಂತೋಷ ಹೇಳತೀರದು. ಕಂಪನಿಗೆ ಸೇರಿದ ಎರಡೇ ವರ್ಷಗಳಲ್ಲಿ ಇಂಥದ್ದೊಂದು ಪ್ರಶಸ್ತಿ ಪಡೆದುಕೊಳ್ಳುವುದು ನಿಜಕ್ಕೂ ಹೆಮ್ಮೆಯ ಸಂಗತಿಯೇ ಆಗಿತ್ತು. ಪ್ರಶಸ್ತಿ ಫಲಕ , ಪ್ರಶಸ್ತಿಪತ್ರ ಸ್ವೀಕರಿಸಿ ಕಂಪನಿಯ ರೀಜನಲ್ ಮ್ಯಾನೇಜರಿನೊಂದಿಗೆ ಸೆಲ್ಫಿ ತೆಗೆಸಿಕೊಳ್ಳುವಷ್ಟರಲ್ಲಿ ರಿಂಗಣಿಸಿದ ಫೋನಿನ ತೆರೆಯ ಮೇಲೆ ’ಅಮ್ಮ’ಎಂದು ತೋರಿಸುತ್ತಿತ್ತು. ತಕ್ಷಣ ಕರೆಯನ್ನು ಕಟ್ ಮಾಡಿ […]

ಮಲ್ಲಿಗೆಯ ದಂಡೆಯನು ಹಿಂಡಿದರೆ: ವೃಂದಾ ಸಂಗಮ

“ಜ್ಞಾನಪೂರ್ಣಂ ಜ್ಞಾನಂ ಜ್ಯೋತಿ. ನಿರ್ಮಲವಾದ ಮನವೇ ಕರ್ಪೂರದಾರತಿ.“  ಅಕ್ಕನ ಬಳಗದ ಭಜನೆ ಹಾಡು ಕಿವಿಗೊಮ್ಮೆ ಬಿದ್ದಾಗ ಅಲ್ಲೇ ಬಾಜೂಕ, ಮಠದಾಗ ಕೂತಿದ್ದ ಸ್ವಾಮಿಗಳು ಮೈ ಕೊಡವಿದರು. ಪ್ರತಿ ದಿನ ಅಕ್ಕನ ಬಳಗದಾಗ ಸಂಜೀ ಮುಂದ ಎಲ್ಲಾ ಸದಸ್ಯರೂ ಮನೀಗೆ ಹೋಗೋ ಮುಂದ ಬಸವಣ್ಣಗ ಒಂದು ಆರತಿ ಮಾಡತಾರ. ಆವಾಗ ಎಷ್ಟೇ ಭಜನಿ ಹಾಡಿದ್ದರೂ ಸೈತ, ಆರತಿ ಮಾಡುವಾಗ, ಈ ಹಾಡು ಹಾಡೇ ಹಾಡತಾರ. ದಿನಾ ಕೇಳೋ ಹಾಡೇ ಆದರೂ ಇವತ್ತ ಯಾಕೋ ಅವರ ಮನಸಿಗೆ ಚುಳುಕ್ ಅಂತು. […]

ಶಶಿ (ಭಾಗ 2): ಗುರುರಾಜ ಕೊಡ್ಕಣಿ

ಇಲ್ಲಿಯವರೆಗೆ ಅಂದು ರಾತ್ರಿಯಿಡಿ ನಾನು ಶಶಿಯ ಬಗ್ಗೆ ಯೋಚಿಸುತ್ತಿದ್ದೆ. ಅವರ ಮನೆಯಲ್ಲಿ ನಡೆದ ಜಗಳ ಶಶಿಯ ಕುರಿತಾಗಿಯೇ ನಡೆದದ್ದು ಎನ್ನುವುದು ನನಗೆ ಬಹುತೇಕ ಖಚಿತವಾಗಿತ್ತು. ಇಬ್ಬರು ಹೆಣ್ಣುಮಕ್ಕಳ ಮದುವೆಯ ನಂತರ ನಂಜಮ್ಮನ ಮನೆಯಲ್ಲಿದ್ದಿದ್ದು ಶಶಿ, ಫಕೀರಪ್ಪ ಮತ್ತು ಆಶಾ ಮಾತ್ರ. ಅವರಿಬ್ಬರೂ ಮೂರನೆಯ ಹೆಂಗಸಿನ ಮೇಲೆ ಕೂಗಾಡುತ್ತಿದ್ದರೆಂದರೆ ಅದು ಶಶಿಯೇ ಆಗಿರಬೇಕೆನ್ನುವ ಅಂದಾಜು ನನಗಾಗಿತ್ತು. ಗುದ್ದಿದ್ದು ಸಹ ಶಶಿಯನ್ನೇ ಎಂಬುದು ಊಹಿಸಿಕೊಂಡಾಗ ನಿಜಕ್ಕೂ ನನಗೆ ಕಸಿವಿಸಿಯಾಯಿತು. ಅಂಥಹ ತಪ್ಪು ಅವಳೇನು ಮಾಡಿದ್ದಳೆಂದು ಊಹಿಸಲಾಗದೇ , ತೊಳಲಾಟದಲ್ಲಿಯೇ ನಿದ್ರೆ […]

ಜವಾಬ್ದಾರಿ: ಗಿರಿಜಾ ಜ್ಞಾನಸುಂದರ್

ವಿಭಾ ಅತಿ ಉತ್ಸಾಹದಿಂದ ತಾನು ಗೆದ್ದಿರುವ ಮೆಡಲ್ ಗಳು ಮತ್ತು ಸರ್ಟಿಫಿಕೇಟ್ ಗಳನ್ನೂ ಜೋಡಿಸುವುದರಲ್ಲಿ ಮುಳುಗಿದ್ದಳು. ಎಂಟು ವರ್ಷದ ವಿಭಾಗೆ ತಾನು ತನ್ನ ಅಣ್ಣ ವಿಶಾಲ್ ಗಿಂತ ಹೆಚ್ಚು ಪದಕಗಳನ್ನು ಗೆದ್ದಿರುವುದು ಎಲ್ಲಕ್ಕಿಂತ ಸಂತೋಷ ಕೊಟ್ಟಿತ್ತು. ಮನೆಗೆ ಬಂದವರಿಗೆಲ್ಲ ತನ್ನ ಗೆಲುವಿನ ಬಗ್ಗೆ ಹೇಳಿ ಅವರಿಂದ ಹೊಗಳಿಕೆಯನ್ನು ಪಡೆಯುವುದು ಒಂಥರಾ ಮಜಾ ಅನ್ನಿಸುತ್ತಿತ್ತು. ಆಗ ವಿಶಾಲ್ ನ ಮುಖ ಪೆಚ್ಚಾಗುವುದನ್ನು ಗಮನಿಸಲು ಮಾತ್ರ ಮರೆಯುತ್ತಿರಲಿಲ್ಲ. ಆಟ, ಪಾಠ, ಹಾಡು, ಕಲೆ ಎಲ್ಲದರಲ್ಲೂ ತನ್ನ ಇರುವಿಕೆಯನ್ನು ತೋರಿಸಬೇಕೆಂಬುದೇ ಅವಳ […]