Facebook

Archive for the ‘ನಟ್ಟು ಕಾಲಂ’ Category

ಅನಿಲ್ ರೇವೂರ ಅವರ ಪಂಚಾವರಂ: ನಟರಾಜು ಎಸ್. ಎಂ.

ಇಸವಿ 2014 ರಲ್ಲಿ ಮಹದೇವಣ್ಣನ ಆಹ್ವಾನ ಸ್ವೀಕರಿಸಿ ಸಂಸ ಬಯಲು ರಂಗಮಂದಿರದಲ್ಲಿ ಗೆಳೆಯ ಹನುಮಂತ ಹಾಲಗೇರಿ ವಿರಚಿತ "ಊರ ಸುಟ್ಟರೂ ಹನುಮಪ್ಪ ಹೊರಗೆ" ನಾಟಕ ನೋಡಿ ಬೆರಗಾಗಿದ್ದೆ. ಆ ದಿನ ಮಹದೇವಣ್ಣ (ಮಹಾದೇವ ಹಡಪದ) ಆ ನಾಟಕದಲ್ಲಿ ಪಾತ್ರ ವಹಿಸಿದ್ದ ಅನಿಲ್ ರೇವೂರ ಅವರ ಪರಿಚಯ ಮಾಡಿಕೊಟ್ಟಿದ್ದರು. ನಂತರದ ದಿನಗಳಲ್ಲಿ ಎಫ್ ಬಿ ಯಲ್ಲಿ ಅನಿಲ್ ಗೆಳೆಯರಾದರು. ಇಸವಿ ಎರಡು ಸಾವಿರದ ಹದಿನಾರರಲ್ಲಿ ಅನಿಲ್ ನಿರ್ದೇಶನದ ನಾಟಕಕ್ಕೆ ರಾಷ್ಟ್ರಮಟ್ಟದ ಯುವಜನೋತ್ಸವದಲ್ಲಿ ಚಿನ್ನದ ಪದಕ ಸಿಕ್ಕಿದೆ ಎಂಬ ಸುದ್ದಿ […]

ಅನ್ನದಾತನೊಬ್ಬನ ಜೊತೆ ಇಡೀ ದಿನ..: ನಟರಾಜು ಎಸ್. ಎಂ.

 ಚಳಿಯ ಕಾರಣಕ್ಕೆ ವಾಕಿಂಗ್ ಮತ್ತು ಜಾಗಿಂಗ್ ಅನ್ನು ಅಕ್ಷರಶಃ ನಿಲ್ಲಿಸಿಬಿಟ್ಟಿದ್ದ ನಾನು ಇತ್ತೀಚೆಗೆ ಶಿವರಾತ್ರಿಯ ತರುವಾತ ಚಳಿ ಕಡಿಮೆ ಆದ ಕಾರಣ ಬೆಳಿಗ್ಗೆ ಅಥವಾ ಸಂಜೆ ಮತ್ತೆ ವಾಕ್ ಶುರು ಮಾಡಿದ್ದೆ. ಆಫೀಸಿನ ದಿನಗಳಾದರೆ ಸಂಜೆ ಐದೂವರೆ ಆರು ಗಂಟೆ ಆಗುತ್ತಿದ್ದಂತೆ ಆಫೀಸಿನಿಂದಲೇ ಸೀದಾ ತೀಸ್ತಾ ನದಿಯ ಪಕ್ಕದಲ್ಲಿರುವ ಕಟ್ಟೆಯ ಮೇಲೆ ಒಂದೂ ಒಂದೂವರೆ ಗಂಟೆ ತಪ್ಪದೆ ವಾಕ್ ಮಾಡುತ್ತೇನೆ. ಇವತ್ತು ಭಾನುವಾರ ರಜೆ ಇದ್ದುದರಿಂದ ಬೆಳಿಗ್ಗೆ ಬೇಗನೆ ಎದ್ದವನು ರೆಡಿಯಾಗಿ ಮಾರ್ನಿಂಗ್ ವಾಕ್ ಗೆಂದು ತೀಸ್ತಾ ನದಿಯ […]

ಟೀ, ಕಾಫಿ ಮಾರುವ ಹುಡುಗ: ನಟರಾಜು ಎಸ್. ಎಂ.

ನಮ್ಮ ಕಥಾನಾಯಕ ರವಿ ಕಳೆದ ದೀಪಾವಳಿಯ ವೇಳೆ ತನ್ನವ್ವನಿಗೆ ಟೂರಿಗೆ ಹೋಗಿ ಬರುತ್ತೇನೆಂದು ಹೇಳಿ ನಾಲ್ಕೈದು ದಿನ ನಾಪತ್ತೆಯಾಗಿದ್ದ. ಮಧ್ಯೆ ಮಧ್ಯೆ ಮನೆಗೆ ಫೋನ್ ಮಾಡಿ ತಾನು ಎಲ್ಲಿದ್ದೇನೆ ಯಾವಾಗ ಮನೆಗೆ ಬರುತ್ತೇನೆ ಎಂಬುದನ್ನು ಅವನು ಹೇಳುತ್ತಿದ್ದ ಕಾರಣ ಮನೆಯವರಿಗೆ ಹಬ್ಬದ ಸಮಯದಲ್ಲಿನ ಅವನ ಟೂರಿನ ಉದ್ದೇಶದ ಅರಿವಾಗಿರಲಿಲ್ಲ. ಟೂರಿನಿಂದ ಮನೆಗೆ ವಾಪಸ್ಸು ಬಂದವನು ಒಂದು ದಿನ ರಾತ್ರಿ ಅವ್ವನ ಎದುರು ಬಿಕ್ಕಿ ಬಿಕ್ಕಿ ಅತ್ತುಬಿಟ್ಟಿದ್ದ. ಆತನ ದುಃಖದ ಹಿಂದಿನ ಸತ್ಯ ಮತ್ತು ಆ ಟೂರಿನ ಉದ್ದೇಶ ರವಿಯ […]

ಅಪರಿಚಿತರು ಪರಿಚಿತರಾದಾಗ: ನಟರಾಜು ಎಸ್.ಎಂ.

ಜಲ್ಪಾಯ್ಗುರಿಯಲ್ಲಿ ರಾಜ್ ಗಂಜ್ ಎಂಬ ಬ್ಲಾಕ್ ಇದೆ. ಬ್ಲಾಕ್ ಎಂದರೆ ನಮ್ಮ ಕಡೆಯ ತಾಲ್ಲೂಕು. ಆ ಬ್ಲಾಕು ಒಂದು ಕಡೆ ಬಾಂಗ್ಲಾ ದೇಶಕ್ಕೆ ಅಂಟಿಕೊಂಡಿದೆ. ಅಂದರೆ ಬಾಂಗ್ಲಾ ದೇಶದ ಬಾರ್ಡರ್ ಈ ಬ್ಲಾಕ್ ನಲ್ಲಿದೆ. ಆ ಬ್ಲಾಕಿನ ಬಾರ್ಡರ್ ನಲ್ಲಿರುವ ಒಂದು ಊರಿನಲ್ಲಿ ಒಮ್ಮೆ ಜಾಂಡೀಸ್ ಕೇಸ್ ಗಳು ಪತ್ತೆಯಾಗಿದ್ದವು. ಅದರ ಇನ್ ವೆಸ್ಟಿಗೇಷನ್ ಗೆ ಅಂತ ಹೋಗಿದ್ದೆ. ನನ್ನ ಜೊತೆ ನಮ್ಮ ಸರ್, ಒಂದಿಬ್ಬರು ಆಫೀಸ್ ಸ್ಟಾಫ್, ವಾಟರ್ ಟೆಸ್ಟಿಂಗ್ ಲ್ಯಾಬೋರೇಟರಿಯಿಂದ ಬಂದಿದ್ದ ಟೆಕ್ನಿಷಿಯನ್ ಮತ್ತು […]

ಇಲಿ ಪಾಶಾಣ ಮಾರುವವನ ಜೀವನ ಪ್ರೀತಿ: ನಟರಾಜು ಎಸ್. ಎಂ.

ಜಲ್ಪಾಯ್ಗುರಿಯ ಮಧ್ಯ ಭಾಗದಲ್ಲಿ ಒಂದು ಪುಟ್ಟ ನದಿ ಹರಿಯುತ್ತೆ. ಆ ನದಿಯ ಹೆಸರು ಕರೋಲ. ಬಹುಶಃ ಬೆಂಗಾಲಿಯಲ್ಲಿ ಕರೋಲ ಅಂದರೆ ಹಾಗಲಕಾಯಿ. ಈ ನದಿಗೆ ಅಲ್ಲಲ್ಲಿ ಪುಟ್ಟ ಪುಟ್ಟ ಸೇತುವೆಗಳಿವೆ. ಅಂತಹ ಒಂದು ಪುಟ್ಟ ಸೇತುವೆ ದಿನ್ ಬಜಾರ್ ಮೋಡ್ ಎನ್ನುವ ಜಾಗದ ಬಳಿ ಇದೆ. ದಿನ್ ಬಜಾರ್, ಜಲ್ಪಾಯ್ಗುರಿಯಲ್ಲಿ ವ್ಯಾಪಾರ ವಹಿವಾಟು ನಡೆಯುವ ಒಂದು ಪ್ರಮುಖ ಜಾಗ. ನಾನು ಮನೆಯಿಂದ ಆಫೀಸಿಗೆ ಹೊರಡಬೇಕಾದರೆ ಈ ದಿನ್ ಬಜಾರ್ ಅನ್ನು ದಾಟಿಯೇ ಹೋಗಬೇಕು. ನನ್ನ ಮನೆಯಿಂದ ಆಫೀಸಿಗೆ […]

ಹುಡುಗಿ ಕಚ್ಚಿದ್ರೆ ಲೈಫೇ ಊದಿಕೊಳ್ಳುತ್ತೆ: ನಟರಾಜು ಎಸ್. ಎಂ.

ಇತ್ತೀಚೆಗೆ ಒಂದು ದಿನ ಹಾಸಿಗೆಯ ಮೇಲೆ ಮಲಗಿ ವಿರಮಿಸುತ್ತಿದ್ದಾಗ ಒಂದು ಇರುವೆ ಹಾಸಿಗೆಯ ಸುತ್ತ ಮುತ್ತ ಸುಮ್ಮನೆ ಅಡ್ಡಾಡುತ್ತಿದ್ದುದ ನೋಡಿ ಸುಮ್ಮನಾಗಿದ್ದೆ. ಎಲ್ಲೆಲ್ಲೋ ಅಡ್ಡಾಡಿ ಬಂದ ಆ ಇರುವೆ ಕೊನೆಗೆ ಹಾಸಿಗೆಯ ಮೇಲೆ ಚಾಚಿದ್ದ ನನ್ನ ಕೈ ಬೆರಳ ಮೇಲೆ ಹತ್ತಿ ಹರಿದಾಡುತ್ತಿತ್ತು. ಆ ಇರುವೆಯ ಹರಿದಾಡುವಿಕೆಯನ್ನು ಮುಗುಳ್ನಗುತ್ತಾ ನೋಡಿದ ನಾನು ಅದು ನನ್ನ ಬೆರಳನ್ನು ಕಚ್ಚುವಾಗ "ಇರುವೆ ತಾನೆ ಬಿಡು ಕಚ್ಚಲಿ. ಇರುವೆ ಕಚ್ಚಿದರೆ ಹೆಚ್ಚೆಂದರೆ ಕಚ್ಚಿದ ಜಾಗ ಒಂಚೂರು ಉರಿದು ಕೆಂಪಾಗಿ ಒಂದು ಸಣ್ಣ […]

ಆಪರೇಷನ್ ಡೆಂಗ್ಯೂ (ಭಾಗ 2): ನಟರಾಜು ಎಸ್ ಎಂ

ಇಲ್ಲಿಯವರೆಗೆ ಸಿಲಿಗುರಿಯನ್ನು ಎರಡನೇ ಕೋಲ್ಕತ್ತಾ ಎನ್ನುತ್ತಾರೆ. ಸಿಲಿಗುರಿ ಈಶಾನ್ಯ ರಾಜ್ಯಗಳಿಗೆ ಹೆಬ್ಬಾಗಿಲು ಇದ್ದಂತೆ. ಇಂತಹ ಸಿಲಿಗುರಿಯನ್ನು ತಲುಪುತ್ತಿದ್ದಂತೆ ನಾವು ಮಾಡಿದ ಮೊದಲ ಕೆಲಸವೆಂದರೆ ಸಿಲಿಗುರಿಯ ನಕ್ಷೆಯನ್ನು ಒಂದು A4 ಹಾಳೆಯಲ್ಲಿ ಪ್ರಿಂಟ್ ಮಾಡಿಸಿಕೊಂಡೆವು. ಸಿಲಿಗುರಿಯ ನಕ್ಷೆಯನ್ನು ಪ್ರಿಂಟ್ ಮಾಡಿಸಿಕೊಂಡ ಕಾರಣವೇನೆಂದರೆ ಸಿಲಿಗುರಿಗೆ ಸೇರಿದ ಒಟ್ಟು 47 ವಾರ್ಡ್ ಗಳಲ್ಲಿ ನಮ್ಮ ಜಲ್ಪಾಯ್ಗುರಿಗೆ ಸೇರಿದ 14 ವಾರ್ಡ್ ಗಳಲ್ಲಿ ಯಾವ ವಾರ್ಡ್ ಗಳ ಜನರು ಡೆಂಗ್ಯೂ ಜ್ವರದಿಂದ ಹೆಚ್ಚು ಬಳಲುತ್ತಿದ್ದಾರೆ ಎಂಬುದನ್ನು ಮೊದಲು ತಿಳಿಯಬೇಕಿತ್ತು. ನಮ್ಮ ಬಳಿಯಿದ್ದ ಡಾಟಾ […]

ಆಪರೇಷನ್ ಡೆಂಗ್ಯೂ ಮೊದಲ ಭಾಗ: ನಟರಾಜು ಎಸ್ ಎಂ

ಆಗಷ್ಟ್ ತಿಂಗಳ ಮೊದಲ ವಾರದಲ್ಲಿ ತಾಲ್ಲೂಕು ಮಟ್ಟದ ಆಸ್ಪತ್ರೆಯೊಂದರ ರಿಪೋರ್ಟ್ ನಲ್ಲಿ 3 ಡೆಂಗ್ಯೂ ಜ್ವರದ ಕೇಸ್ ಗಳು ಹಳ್ಳಿಯೊಂದರಲ್ಲಿ ಪತ್ತೆಯಾಗಿವೆ ಎಂಬ ಈ ಮೇಲ್ ನಮ್ಮ ಪಬ್ಲಿಕ್ ಹೆಲ್ತ್ ವಿಭಾಗದ ಈ ಮೇಲ್ ಗೆ ಬಂದಿತ್ತು. ಮೂರ್ನಾಲ್ಕು ಡೆಂಗ್ಯೂ ಜ್ವರದ ಕೇಸ್ ಗಳು ಒಂದೇ ಊರಿನಲ್ಲಿ ಕಾಣಿಸಿಕೊಂಡಿರುವುದು ಡೇಂಜರ್ ಸಿಗ್ನಲ್ ಎಂದರಿತ ನಾವು ತಕ್ಷಣ ಆ ತಾಲ್ಲೂಕಿನ ವೈದ್ಯಾಧಿಕಾರಿಗೆ ಕರೆ ಮಾಡಿ ಕೇಸ್ ಗಳು ಪತ್ತೆಯಾಗಿರುವುದನ್ನು ದೃಢಪಡಿಸಿಕೊಂಡೆವು. ಮಾರನೆಯ ದಿನ ನಮ್ಮ ಟೀಮ್ ಆ ಹಳ್ಳಿಯನ್ನು […]