Facebook

Archive for the ‘ಸರಣಿ ಬರಹ’ Category

ಹೊಸ ವರುಷದೊಂದಿಗೆ ಬೆಸೆಯಲಿ ಸ್ನೇಹ- ಸಂಬಂಧಗಳು: ವೇದಾವತಿ ಹೆಚ್. ಎಸ್.

ಮನುಷ್ಯನ ಜೀವನ ಎಷ್ಟೊಂದು ವಿಚಿತ್ರ. ಬೇಕು ಬೇಕು ಎನ್ನುತ್ತಾ ಸಾಗುವಾಗ ವಯಸ್ಸಿನ ಅರಿವು ಮರೆತು ಹೋಗುತ್ತದೆ. ಹೊಸ ವರ್ಷದ ಸಂತೋಷ ಒಂದು ಕಡೆ ಇದ್ದರೆ, ಈ ಹಿಂದಿನ ವರುಷಗಳು ಹೇಗೆ ಕಳೆದು ಹೋದವು ಎಂಬುದು ಮೆಲುಕು ಹಾಕುವುದು ಮರೆತಿರುತ್ತಾನೆ. ನಾಗಾಲೋಟದಲ್ಲಿ ಸಾಗುತ್ತಿರುವ ಜೀವನ ಯಾವಾಗಲೂ ನಾಳೆಯದನ್ನೇ ಯೋಚಿಸಿ ಜೀವನದಲ್ಲಿ ತನಗಾಗಿ ಬರುವಂತಹ ಇಂದಿನ ದಿನದ  ಸಂತೋಷವನ್ನು ಕಳೆದು ಕೊಳ್ಳುತ್ತಾನೆ. ಹಿಂದಿನ ಕಾಲದಲ್ಲಿ ಹಬ್ಬಗಳಲ್ಲಿ ಹೊಸ ವರ್ಷಗಳ ಆಚರಣೆಯನ್ನು ಮಾಡುವ ಸಂಪ್ರದಾಯವಿತ್ತು. ಮನೆಯವರೆಲ್ಲ ಒಂದೆಡೆ ಸೇರಿ ಸಂಭ್ರಮಿಸುತ್ತಿದ್ದ ದಿನಗಳವು. […]

ಸ್ತ್ರೀ ಸಾಮರ್ಥ್ಯ ಮತ್ತು ಅವಕಾಶಗಳು: ನಾಗರೇಖಾ ಗಾಂವಕರ

ಡಾ. ಸೌಮ್ಯ ಸ್ವಾಮಿನಾಥನ್ ವಿಶ್ವ ಆರೋಗ್ಯ ಸಂಸ್ಥೆಯ ಭಾರತದ ಪ್ರತಿನಿಧಿಯಾಗಿ ಈ ತಿಂಗಳ ಮೊದಲ ವಾರವಷ್ಟೇ ಆಯ್ಕೆಯಾಗಿದ್ದಾರೆ. ಭಾರತದ ಮಟ್ಟಿಗೆ ಪ್ರಪ್ರಥಮ ಬಾರಿಗೆ ಒಬ್ಬ ಮಹಿಳೆ ಆಯ್ಕೆಯಾಗಿರುವುದು ಸ್ತ್ರೀ ಸಮಾಜ ಹೆಮ್ಮೆ ಪಡುವಂತಹ ಸಂಗತಿ. ಮಹಿಳೆಗೆ ಅಸಾಧ್ಯವೆನ್ನುವಂತಹ  ಜವಾಬ್ದಾರಿ ಯಾವುದು ಇಲ್ಲ ಎಂಬುದಕ್ಕೆ  ಸಾಕ್ಷಿಯಾಗುತ್ತಿದ್ದಾರೆ. ಸ್ತ್ರೀ ಜಾಗತಿಕ ರಂಗದಲ್ಲಿ ಪುರುಷನಿಗೆ ಸಮಾನವಾಗಿ ಮಿಂಚುವ ಯಾವ ಸಾಮಥ್ರ್ಯದಲ್ಲೂ ಕಡಿಮೆಯಿಲ್ಲ. ಹಾಗಾಗಿ ಮಹಿಳೆ ಮತ್ತು ಮಹಿಳಾ ಜಗತ್ತು ಇಂದು ವ್ಯಾಪಕ ಅರ್ಥ ಹಾಗೂ ವಿಸ್ತಾರವನ್ನು ಪಡೆದುಕೊಳ್ಳುತ್ತಿದೆ.  ಜಾಗತಿಕ ಸಮೀಕ್ಷೆಯ ಪ್ರಕಾರ […]

ದೇವಾಲಯ, ದೇವರ .. ಸರಳವಾಗಿ ಅರ್ಥೈಸಿದ ವಚನಕಾರರು!: ಕೆ ಟಿ ಸೋಮಶೇಖರ ಹೊಳಲ್ಕೆರೆ

ಇಂದು ಹಣ, ಅಧಿಕಾರ, ಆಸ್ಥಿ, ವಸ್ತು, ಒಡವೆ, ವಾಹನಗಳು ಇದ್ದವರಿಗೆ ಜನ ಹೆಚ್ಚು ಗೌರವ ಕೊಡುತ್ತಿದ್ದಾರೆ. ಮಾನ, ಮನ್ನಣೆ ನೀಡುತ್ತಿದ್ದಾರೆ. ಪ್ರಯುಕ್ತ ಜನ ಅದನ್ನು ಗಳಿಸಲು ಶತಾಯ ಗತಾಯ ಶ್ರಮಿಸುತ್ತಿದ್ದಾರೆ. ಇವರು ಗಳಿಸುವ ಏಕಮೇವ ಉದ್ದೇಶ ಹೊಂದಿ ಶೀಘ್ರವಾಗಿ ಸಂಪತ್ತು ಗಳಿಸಲು ಇರುವ ಮಾರ್ಗಗಳು ಯಾವು ಎಂದು ಹುಡುಕುತ್ತಿದ್ದಾರೆಯೇ ವಿನಾ ಒಳ್ಳೆಯ, ನೀತಿಯುತ ಮಾರ್ಗ ಯಾವುದು ಎಂದು ಹುಡುಕುತ್ತಿಲ್ಲ! ಗಳಿಸುವುದು ಮುಖ್ಯ ವಿನಾ ಮಾರ್ಗ ಮುಖ್ಯವಲ್ಲ! ಎಂದು ಭಾವಿಸಿದುದರಿಂದ ಅನ್ಯ ಮಾರ್ಗದಿಂದ ದುಡಿಯುವಂತಾಗಿದೆ. ಧರ್ಮ, ಅರ್ಥ, ಕಾಮ, […]

ಲಿಂಗ ಸಾಮರಸ್ಯತೆ  ಮತ್ತು ಸ್ತ್ರೀ ಸಂವೇದನೆ: ನಾಗರೇಖಾ ಗಾಂವಕರ

ನನ್ನೊಳಗಿನ ತುಡಿತಗಳು ಅವನಿಗೆ ಅರ್ಥವಾಗುವುದಿಲ್ಲ. ಅವನದೇನಿದ್ದರೂ ತನ್ನ ಮೇಲುಗಾರಿಕೆಯ ನೆಲೆಯಲ್ಲಿಯೇ ನನ್ನನ್ನು ಉದ್ದರಿಸುವ ನಿಲುವು. ಇದು ಧೀಮಂತ ವ್ಯಕ್ತಿತ್ವ ಎನ್ನಿಸಿಕೊಳ್ಳುವ ಪ್ರತಿಯೊಬ್ಬ ಸಜ್ಜನ ಪುರುಷನ ಲಕ್ಷಣ. ಹೆಣ್ಣು ದುರ್ಬಲೆ ಎಂಬ ಧೋರಣೆಯ ಅಂಚಿನಿಂದ ಆತನಿನ್ನೂ ಹೊರಬಂದಿಲ್ಲ. ಅವಳ ಮಾನಸಿಕ ಸಾಮಥ್ರ್ಯ ತನಗೆ ಮಿಕ್ಕಿದ್ದರೂ ಒಪ್ಪಲಾರ. ಅದು ಅವರಿಬ್ಬರ ಜಗತ್ತಿಗೆ ಅನ್ವಯಿಸಿ ಹೇಳುವಾಗ ಹೆಂಗಸರ ಬುದ್ಧಿ ಮೊಣಕಾಲ ಕೆಳಗೆ ಎಂದು ಉದ್ಘರಿಸುವ ಹಲವು ಮುಖಗಳು ಸದಾ ನಮ್ಮ ಸುತ್ತಮುತ್ತ ಸಂಚರಿಸುತ್ತಿರುತ್ತವೆ. ಅದಕ್ಕಾಗೆ ಪ್ರತ್ಯೇಕ ಸ್ತ್ರೀ ಪ್ರಜ್ಞೆಯ ಸ್ತ್ರೀ ಸಂವೇದನೆಯ […]

ಬದುಕೆಂದರೆ ಪೂರ್ಣತ್ವದ ಕಡೆಗೆ ಸಾಗುವುದ?: ಕೆ ಟಿ ಸೋಮಶೇಖರ ಹೊಳಲ್ಕೆರೆ

 ‌ " ಇರುವುದೆಲ್ಲವ ಬಿಟ್ಟು ಇರದುದರೆಡೆಗೆ ತುಡಿವುದೇ ಜೀವನ " ಎಂದು ಗೋಪಾಲಕೃಷ್ಣ ಅಡಿಗರು ಹೇಳಿದ್ದಾರೆ. ಜೀವನ ಎಂದರೇನು ಎಂದು ಒಂದು ವ್ಯಾಖ್ಯೆಯಲ್ಲಿ ಹಿಡಿದಿಡುವುದು ಕಷ್ಟ. ಆದರೂ ಕೆಲವರು ಪ್ರಯತ್ನಿಸಿದ್ದಾರೆ ಅದು ಜೀವನವನ್ನೆಲ್ಲಾ ಒಂದೇ ವ್ಯಾಖ್ಯೆಯಲ್ಲಿ ಹಿಡಿದಿಟ್ಟಿದ್ದರೂ ಅವು ಪರಿಪೂರ್ಣ ಅನ್ನಿಸವು. ಏಕೆಂದರೆ ಜೀವನ ಹೇಗೆ ಬೇಕಾದರೂ ಇರಬಹುದು! ವಿಶಾಲವೂ ಆಗಬಹುದು, ಅತಿ ಕಿರಿದೂ ಆಗಬಹುದು! ಹಿಗ್ಗಿನ ಸುಗ್ಗಿಯಾಗಬಹುದು, ಬಿರು ಬಿಸಿಲ ಬೇಸಿಗೆಯಾಗಬಹುದು. ಕಷ್ಟಗಳ ಮಳೆಯಾಗಬಹುದು! ಸಾಧನೆಯ ಶಿಖರವೇ ಆಗಬಹುದು. ಭೂಮಿಯ ಮೇಲಿರುವವರಾರೂ ಪರಿಪೂರ್ಣರಲ್ಲ. ಹುಟ್ಟಿದ ಪ್ರಯುಕ್ತ […]

ಗರತಿ ಹಾಡುಗಳಲ್ಲಿ ಒಡಮೂಡಿದ ಸ್ತ್ರೀ ವೇದನೆಯ ಮುಖಗಳು: ನಾಗರೇಖಾ ಗಾಂವಕರ

  “ಹೆಣ್ಣಾಗಿ ಹುಟ್ಟೊಕ್ಕಿಂತ ಮಣ್ಣಾಗಿ ಹುಟ್ಟಿದರೆ ಮಣ್ಣಿನ್ಮೇಲೊಂದು ಮರವಾಗಿ ಹುಟ್ಟಿದರೆ ಪುಣ್ಯವಂತರಿಗೆ ನೆರಳಾಗಿ.” ಇದು ನಮ್ಮ ಜಾನಪದ ಗೀತೆಗಳಲ್ಲಿ ಬರುವ ಗರತಿಯ ಹಾಡಿನ ಒಂದು ತುಣುಕು.ಆಕೆ ಹೆಣ್ಣು.ಆಕೆಗೆ ಅದ್ಯಾಕೋ ಬದುಕು ಸಾಕಾಗಿದೆ. ಈ ಹೆಣ್ಣಿನ ಬದುಕಿನಲ್ಲಿ ಪುರುಷನ ಆತನ ಸಾಮಾಜಿಕ ನಿಲುವಿನ ಆಘಾತ ಚೇತರಿಸಿಕೊಳ್ಳಲಾಗದಂತಹ ನೋವು ನೀಡಿದೆ.ಅದಕ್ಕಾಗೆ ಆಕೆ ಮಣ್ಣಾಗಿ ಇಲ್ಲವೇ ಮರವಾಗಿ ಹುಟ್ಟಿದ್ದರೆ ಪುಣ್ಯವಂತರಿಗೆ ಆಸರೆಯಾಗಿ ನೆರಳಾಗಿ ಬದುಕಬಹುದಿತ್ತು.ಸ್ವಾರ್ಥ ರಹಿತಳಾದ ಆಕೆ ಇತರರಿಗೆ ನೆರಳಾಗಿಯೇ ತನ್ನ ಬದುಕಿನ ಸಾರ್ಥಕತೆಯನ್ನು ಬಿಂಬಿಸುತ್ತಾಳೆ.ಆದರೆ ಈ ಹೆಣ್ಣು ಜನ್ಮ ಎಷ್ಟು […]

ಮಾಂಸಾಹಾರ ತಪ್ಪೆಂದರೆ ಸಸ್ಯಾಹಾರ ಸರಿ! ಹೇಗೆ?: ಕೆ ಟಿ ಸೋಮಶೇಖರ ಹೊಳಲ್ಕೆರೆ

ಮಂಗನಿಂದ ಮಾನವ ಎಂದು ಹೇಳುತ್ತೇವೆ. ಯಾವುದೋ ಕಾಲಘಟ್ಟದಲ್ಲಿ ಮಂಗ ಮಾನವನಾಗಿ ಬದಲಾದ ಎಂದು ಡಾರ್ವಿನ್ ವಿಕಾಸವಾದ ಹೇಳುತ್ತದೆ. ಮಂಗನೋ ಗೋರಿಲ್ಲಾನೋ ಚಿಂಪಾಂಜಿಯೋ ವಿಕಾಸ ಹೊಂದಿ ಮಾನವನಾಗಿ ಬದಲಾದ ಎಂಬುದನ್ನು ಎಲ್ಲರೂ ಓದಿದ್ದೇವೆ. ಈಗ ಇರುವ ಮಂಗ, ಗೊರಿಲ್ಲ , ಚಿಂಪಾಂಜಿಗಳು ಯಾವಾಗ ಮಾನವರಾಗುತ್ತವೆ? ಯಾಕೆ ಇನ್ನೂ ಮಾನವರಾಗಿಲ್ಲ? ಎಂದು ಕೆಲವರು ಪ್ರಶ್ನಿಸುತ್ತಾರೆ. ಈ ಪ್ರಶ್ನೆಗಳು ಮೇಲುನೋಟಕ್ಕೆ ಕಿಡಿಗೇಡಿಗಳ ಪ್ರಶ್ನೆಗಳೆನಿಸಿದರೂ ಒಮ್ಮೆ ಹೌದಲ್ಲಾ! ಈ ಮಂಗಗಳೆಲ್ಲ ಯಾವಾಗ ಮಾನವರಾಗಿ ಬದಲಾಗುತ್ತವೆ? ಯಾಕೆ ಇನ್ನೂ ಮಾನವರಾಗಿ ಬದಲಾಗಿಲ್ಲ? ಎಂಬ ಪ್ರಶ್ನೆ […]

ಮೌಲ್ಯಗಳ ಕುಸಿತ ಭ್ರಷ್ಟಾಚಾರಕ್ಕೆ ನಾಂದಿ: ಕೆ ಟಿ ಸೋಮಶೇಖರ ಹೊಳಲ್ಕೆರೆ.

      ಹಿಂದೆ ಪ್ರತಿ ಗ್ರಾಮದಲ್ಲಿ ರಾಮಾಯಣ,  ಮಹಾಭಾರತ, ಪುರಾಣ  ಕತೆಗಳು ಯಕ್ಷಗಾನ ಬಯಲಾಟ, ದೊಡ್ಡಾಟ, ತೊಗಲು ಗೊಂಬೆಯಾಟ  …. ಗಳಾಗಿ ಪ್ರದರ್ಶಿಸಲ್ಪಡುತ್ತಿದ್ದವು. ಓಲೆ ಬಸವ  … ಗಳ ಮೂಲಕವೂ ರಾಮ ಸೀತೆಯರ ಕತೆ ಜಾತ್ರೆ,  ಹಬ್ಬಹರಿದಿನಗಳಲ್ಲಿ ಪ್ರದರ್ಶಿಸಲ್ಪಡುತ್ತಿದ್ದು ಹಳ್ಳಿ ಜನರಿಗೆ ಮನರಂಜನೆ ಜತೆಗೆ ನೈತಿಕ ಮೌಲ್ಯಗಳನ್ನು ಬೆಳೆಸುವಲ್ಲಿ, ವ್ಯಕ್ತಿತ್ವ ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಪ್ರತಿ ಮನೆಗಳಲಿ ಗ್ರಾಮದ ದೇವಾಲಯಗಳಲಿ, ಪಂಚಾಯಿತಿ ಕಟ್ಟೆಗಳಲ್ಲಿ,  ಕಛೇರಿಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಆಗಾಗ ಹರಿಕಥೆ,  ಪುರಾಣ,  ಪುಣ್ಯಕಥೆ,  ಶಿವಲೀಲಾಮೃತ, […]

ಸಂಜೆ ಬಂದಾಗ ಹೊಳೆಯುತ್ತಿರಬೇಕು ಸಿಂಕು-ಹೊರ ದುಡಿಮೆಯ ಯುವ ಮಹಿಳೆಯ ಅಭಿಲಾಷೆ: ನಾಗರೇಖಾ ಗಾಂವಕರ

ಸಂಜೆ ನಾನು ಬಂದಾಗ /ಹೊಳೆಯುತ್ತಿರಬೇಕು ಸಿಂಕು/ ಒಂದೂ ಪಾತ್ರೆಯಿಲ್ಲದೇ ಬಿದ್ದಿರದೇ ಹಾಸಿಗೆಯ ಮೇಲೆ ಒಂದು ವಸ್ತ್ರ/  ಎಲ್ಲವನ್ನೂ ಒಗೆದು ಒಣಹಾಕಿ/ಮನೆಯೆಲ್ಲ ವ್ಯಾಕ್ಯೂಮ್ ಮಾಡಿ/ ಒಂದು ಹನಿ ಬಿದ್ದಿರದೇ ಕಾಮೋಡಿನ  ಗೋಲದ ಮೇಲೆ/  ಬಾತ್ ರೂಮು ಕ್ಲೀನಾಗಿ ನಳನಳಿಸುತ್ತಿರಬೇಕು……….. ಆಗ ಮಾತ್ರ ನಾನು/ ಹೊಚ್ಚಗೆ ಮಿಂದು ಬಂದು/ ರುಚಿ ಅಡುಗೆಯ ಮಾಡಿ/ತಿನ್ನಿಸಬಲ್ಲೇ ನಿನಗೆ ಮುದ್ದು ಮಾಡುತ್ತ. ಎನ್ನುತ್ತಾರೆ  ಯುವ ಕವಯತ್ರಿ ಕಾವ್ಯಾ ಕಡಮೆ ನಾಗರಕಟ್ಟೆ ತಮ್ಮ “ಜೀನ್ಸ್ ತೊಟ್ಟ ದೇವರು” ಎಂಬ ಕವನ ಸಂಕಲನದ ಒಂದು ಕವನ. ಆಧುನಿಕತೆಯಲ್ಲಿ […]

ವ್ಯಕ್ತಿತ್ವದ ವಿಕಸನ: ಕೆ ಟಿ ಸೋಮಶೇಖರ ಹೊಳಲ್ಕೆರೆ.

        ಹೂವು ಅರಳುವುದನ್ನು ' ವಿಕಸನ  ' ಎನ್ನುತ್ತೇವೆ. ಹೂವು ಪೂರ್ಣವಾಗಿ ಅರಳಿದಾಗ ಅದರ ನಿಜವಾದ ಬಣ್ಣ, ಆಕಾರ ಪಡೆದು ಪೂರ್ಣ ಸೌಂದರ್ಯ ಹೊರಹೊಮ್ಮಿ ಸುಂದರವಾಗಿ ಕಾಣುತ್ತದೆ. ಪೂರ್ಣವಾಗಿ ವಿಕಸಿಸಿದಾಗ ಪರಿಮಳ ಹೊಮ್ಮುತ್ತದೆ. ಸುತ್ತಣ ಪರಿಸರವನ್ನು ಪರಿಮಳದಲ್ಲಿ ಮುಳುಗಿಸಿ ಸುವಾಸನೆ ಸೂಸಿ ಕ್ರಿಮಿ, ಕೀಟ, ಜೀವಿಗಳ ಆಕರ್ಷಿಸುತ್ತದೆ. ಮಧುಪಾತ್ರೆ ತೆರೆದು ದುಂಬಿಗೆ ಹಬ್ಬ ಉಂಟು ಮಾಡುತ್ತದೆ. ದುಂಬಿಯ ಝೇಂಕಾರ ಎಲ್ಲೆಡೆ ಮೊಳಗಲು ಕಾರಣವಾಗುತ್ತದೆ. ಮೊಗ್ಗು ಹಿಗ್ಗಿ ತಾನು ಸುಂದರವಾಗಿ ಕಾಣುವುದಲ್ಲದೆ ಗಿಡದ ಸೌಂದರ್ಯವನ್ನು […]