ನಾನು ಮತ್ತು ಗ್ವಾಡು: ಸಚಿನ್ ಎಂ. ಆರ್.

“ಥೂ.. ಯಾಕಪ್ಪಾ ನನ್ ಜೀವನ ಹಿಂಗೇ??? ಓ ಮೈ ಗ್ವಾಡ್ ಯಾಕೆ ನೀ ನನ್ನ ಹಿಂಗೆ ಮಾಡಿದೆ? ತಲೆಯಲ್ಲಿ ಯಾಕೆ ಯಾವಾಗ್ಲೂ ಪ್ರಶ್ನೆಗಳು ಏಳ್ತಾ ಇರ್ತವೆ? ಉತ್ತರ ಮಾತ್ರ ಯಾಕೆ ಸಿಗುತಿಲ್ಲ?? ಎಕೆ ಎಲ್ಲವೂ ಹೀಗೆ ಅಯೋಮಯ?” ಅಂತ ತಲೆಯಲ್ಲಿ ಒಂದೇ ಸಮನೆ ಪ್ರಶ್ನೆಗಳೆಲ್ಲ ಗಿರಕಿ ಹೊಡೆಯುತ್ತಾ ಕುಂತಿದ್ದವು.ಏನಾದರಾಗಲಿ ದೇವರನ್ನೇ ಕೇಳೋಣ ಅಂದುಕೊಂಡೆ!! ಆದರೆ ಕೇಳೋದು ಹೆಂಗೆ? ವೈಫೈ, ಬ್ಲೂಟೂಥ್ ಯೂಸ್ ಮಾಡೋದು ನಮ್ ಗಾಡ್‍ಗೆ ಗೊತ್ತಿಲ್ಲ. ಆದರೂ ಕನೆಕ್ಟಿವಿಟಿ ಮಾಡಿ ನನ್ನ ಪ್ರಶ್ನೆಗೆ ಉತ್ತರ ಪಡೆಯಲೇ … Read more

ಯಮಾಲಯದಲ್ಲಿ ಗಿಜಿ ಗಿಜಿ: ಶ್ರೀಕಾಂತ್ ಮಂಜುನಾಥ್

ಕೊರವಂಗಲ ವಂಶವೃಕ್ಷದಲ್ಲಿ ನವಗ್ರಹಗಳಾದ ಚಿಕ್ಕಪ್ಪ ದೊಡ್ಡಪ್ಪಂದಿರ ಗಂಡು ಮಕ್ಕಳಲ್ಲಿ ನಡೆಯುವ ತಮಾಷೆ ಮಾತುಗಳಿಗೆ ಮಿತಿಯಿಲ್ಲ. ಅಂಥಹ ಸಾಗರದಷ್ಟು ನಡೆದ, ನೆಡೆಯುವ ಚರ್ಚೆಗಳನ್ನು, ವಿಷಯಗಳನ್ನು ಹೆಕ್ಕಿ ಹೆಕ್ಕಿ ಮೆಲುಕು ಹಾಕುತ್ತ ನಮ್ಮ ಭೇಟಿಗಳನ್ನು ಇನ್ನಷ್ಟು ಸುಮಧುರ ಕ್ಷಣಗಳನ್ನಾಗಿ ಮಾಡಿಕೊಳ್ಳುತ್ತೇವೆ. ಒಂಭತ್ತು ಗ್ರಹಗಳು ಪ್ರಚಂಡ ಪ್ರತಿಭೆಗಳು ಒಬ್ಬರಿಗೊಬ್ಬರು, ಒಬ್ಬರಿಂದ ಒಬ್ಬರು, ಒಬ್ಬರಿಗಾಗಿ ಒಬ್ಬರು ಜೊತೆ ನಿಲ್ಲುತ್ತೇವೆ. ನಮ್ಮ  ಹಿಂದಿನ ಹಾಗು ಮುಂದಿನ ಪೀಳಿಗೆಗೆ ಸೇತುವಾಗಿ ನಿಲ್ಲುವ ನಾವುಗಳು ನಮ್ಮ ಮಕ್ಕಳಿಗೆ ಒಂದು  ಸಂಸ್ಕಾರದ ಹಾದಿಯನ್ನು ತೋರಬೇಕು ಅನ್ನುವುದಷ್ಟೇ ನಮ್ಮ ಕಳಕಳಿ. ಇಂತಹ ಒಂದು … Read more

ಸಾಲದ ವಿಷಯ (ಕೊನೆಯ ಭಾಗ): ಸೂರಿ ಹಾರ್ದಳ್ಳಿ

(ಇಲ್ಲಿಯವರೆಗೆ) ಈ ಘಟನೆಯ ನಂತರ ನಿಮಗೆ ನನ್ನ ರೂಪ ಅಸಹ್ಯವಾಗಿ ಕಾಣಿಸುತ್ತದೆ. ನಾನು ಎಲ್ಲಾ ದುರ್ಗುಣಗಳ ಘನೀಕೃತ ರೂಪವಾಗಿ, ಕೀಚಕನಾಗಿ, ವೀರಪ್ಪನ್ ಆಗಿ ಕಾಣುತ್ತೇನೆ. ಆದರೆ ಏನೂ ಮಾಡಲಾಗದ ಪರಿಸ್ಥಿತಿ ನಿಮ್ಮದು. ನನ್ನದು ಮೃದು ಹೃದಯ. ಇಲ್ಲ ಎಂದು ಹೇಳಿ ನಿಮ್ಮನ್ನು ಗಾಸಿಗೊಳಿಸಲು ಇಷ್ಟವಿಲ್ಲ. ಅದಕ್ಕಾಗಿ ನಾನು, ’ರೀ, ಗೆಳೆಯನೊಬ್ಬನಿಗೆ ಎರಡು ಲಕ್ಷ ಕೊಟ್ಟಿದ್ದೆ. ಎರಡು ವಾರ ಬಿಟ್ಟು ಕೊಡ್ತೀನಿ ಎಂದು ಹೇಳಿದ್ದಾನೆ. ನೀವು ಎರಡು ವಾರ ಬಿಟ್ಟು ಬನ್ನಿ, ಕೊಟ್ಟರೆ ನಿಮಗೆ ಖಂಡಿತಾ ಹತ್ತು ಸಾವಿರ … Read more

ಸಾಲದ ವಿಷಯ (ಭಾಗ 2): ಸೂರಿ ಹಾರ್ದಳ್ಳಿ

(ಇಲ್ಲಿಯವರೆಗೆ) ಈಗಿನ ಕಾಲದಲ್ಲಿ ಕ್ರೆಡಿಟ್ ಕಾರ್ಡಿಲ್ಲದವನು, ಮೊಬೈಲ್ ಫೋನಿರದವನು ಶ್ವಾನಕಿಂತ ಕಡೆಯೆಂದ ಸರ್ವಜ್ಞ! ದೂರವಾಣಿ ಮಾಡಿ ತಲೆ ತಿನ್ನುವ ಕ್ರೆಡಿರ್ಟ್ ಕಾರ್ಡು ಕಂಪನಿಯವರನ್ನು ನಾನು ಒಮ್ಮೆ ಸತಾಯಿಸಿದ್ದು ಹೀಗೆ. ’ಸರ್, ದಯವಿಟ್ಟು ನಿಮ್ಮ ಕೆಲ ನಿಮಿಷಗಳನ್ನು ಬಳಸಿಕೊಳ್ಳಲೇ?’ ಕರ್ಣಾನಂದಕರ ದನಿ, ಆಂಗ್ಲ ಭಾಷೆಯಲ್ಲಿತ್ತು. ’ಸರಿ, ಹೇಳಿ,’ ’ನಾವು… ಬ್ಯಾಂಕಿನವರು. ನಿಮಗೆ ಕ್ರೆಡಿಟ್ ಕಾರ್ಡನ್ನು ಫ್ರೀಯಾಗಿ ಕೊಡುತ್ತೇವೆ.’ ನಾನು ಅವಳ ಮಾತು ಮುಂದುವರಿಸುವ ಮೊದಲೇ ಹೇಳಿದೆ, ’ಹೌದಾ? ನನಗೆ ನಿಜವಾಗಿಯೂ ಕ್ರೆಡಿಟ್ ಕಾರ್ಡಿನ ಅವಶ್ಯಕತೆ ಇದೆ. ನಾನು ಈಗಾಗಲೇ … Read more

ಮೇರಾ ಲವ್ಲೀ ಕನ್ನಡ…!!: ಸಚಿನ್ ಎಂ. ಆರ್.

 ಹಂಗೆ ಬಸ್ ಸ್ಟಾಪಲ್ಲಿ ಕಾಯ್ತಾ ಇದ್ದೆ (ಬಸ್ಸಿಗೆ)…!! ಪಕ್ಕದಲ್ಲಿ ಮೂವರು ಬುದ್ಧಿಜೀವಿಗಳು (ಬಿಳಿ ಗಡ್ಡ ಇದ್ದಿದ್ರಿಂದ ಹಂಗಂದುಕೊಂಡೆ) ಮಾತಾಡ್ತಾ ನಿಂತಿದ್ರು…!! ಅಷ್ಟರಲ್ಲಿ ಅಲ್ಲೇ ಇದ್ದ ಬಸ್ಸಿನಿಂದ ಇಳಿದುಬಂದ  ಸುಂದರ ಯುವತಿಯೊಬ್ಬಳು ನನ್ನತ್ರ ಅಡ್ರೆಸ್ಸ್ ತೆಲುಗಲ್ಲಿ ಕೇಳಿದ್ಳು..! ಕನ್ನಡ ಬರಲ್ಲ ಅಂತ ತೆಲುಗಲ್ಲೇ ಹೇಳಿದಳು ಕೂಡಾ.. ನಾನೂ ಒಬ್ಬ ಕನ್ನಡಿಗನಾದ್ದರಿಂದ ಅವಳ ವಿಳಾಸಾನ ತೆಲುಗಲ್ಲೇ ಹೇಳಿದೆ..!! ಇದು ನಮ್ಮ ಕನ್ನಡ ಬುದ್ಧಿಜೀವಿಗಳಿಗೆ ಸ್ವಲ್ಪ ರೇಗಿಸಿತು ಅನ್ಸತ್ತೆ..! “ತಮ್ಮಾ ಬಾ” ಅಂದ್ರು. ಹತ್ತಿರ ಹೋದೆ. “ನೀನ್ ಯಾವೂರು? ನಿನ್ ಭಾಷೆ … Read more

ಕಾಗೆ ಪಕ್ಷ! ಕೋಗಿಲೆ ಪಕ್ಷ!! : ಎಸ್.ಜಿ.ಶಿವಶಂಕರ್

ಅಲೆಅಲೆಯಾಗಿ ತೇಲಿ ಬಂತು ಕೋಗಿಲೆಯ ಮಧುರ ಸ್ವರ. ಕೇಳುತ್ತಲೇ ವಿಶಾಲೂ ಮುಖ ಅರಳಿತು, ಮಂದಹಾಸ ಮಿನುಗಿತು. ಉಲ್ಲಸಿತಗೊಂಡಳು! ಪೇಪರಿನಿಂದ ತಲೆ ಎತ್ತಿ ಸ್ವರ ಬಂದ ದಿಕ್ಕನ್ನು ಗುರುತಿಸಲು ಪ್ರಯತ್ನಿಸಿದಳು. ’ದರಿದ್ರ, ಮತ್ತೆ ಬಂದು ವಕ್ಕರಿಸಿತು’ ವಿಶ್ವ ಶಪಿಸಿದ! ವಿಶಾಲೂ ಬೆಚ್ಚಿದಳು! ಇಂತವರೂ ಇರ್ತಾರ? ಅಚ್ಚರಿಪಟ್ಟಳು! ಕೋಗಿಲೆಯ ಇಂಪಾದ ರಾಗವನ್ನು ದರಿದ್ರ ಎಂದು ಭಾವಿಸ್ತಾರಾ..? ಬೆಳ್ಳಂಬೆಳಿಗ್ಗೆ ಗಡ್ಡ ಮೀಸೆಗಳಿರುವ ಜಾಗದಲ್ಲಿ ಚೂರುಚೂರೇ ಬೆಳೆದು ’ನೀನು ಮುದುಕನಾಗುತ್ತಿರುವೆ’ ಎಂಬುದನ್ನು ಜಗಜ್ಜಾಹೀರು ಮಾಡಲು ಹವಣಿಸುತ್ತಿದ್ದ ಬಿಳಿಕೂದಲುಗಳನ್ನು ನಿರ್ದಯದಿಂದ ಬೋಳಿಸುವ, ನವನಾಗರೀಕ ಭಾಷೆಯಲ್ಲಿ … Read more

ಪದ್ದಿಯ ಪತ್ರ: ಅಣ್ಣಪ್ಪ ಆಚಾರ್ಯ, ಹೊನ್ನಾವರ

ಪ್ರೀತಿಯ ಪತಿದೇವರಿಗೆ.., ನಿಮ್ಮ ಪ್ರಾಣಕಾಂತೆ ಪದ್ದಿಯ ‘ಸಕ್ಕರೆಗಿಂತ ಸಿಹಿ’ಯಾದ ಮುತ್ತುಗಳು..! ಏನ್ರೀ.., ನಾನು ಪ್ರೀತಿಯಿಂದ ನಾಲ್ಕು ಮಾತು ಬೈಯ್ದೆ ಅಂತ ಮನೆ ಬಿಟ್ಟು, ಆ ಸತ್ಯಾನಂದ ಸ್ವಾಮಿ ಆಶ್ರಮ ಸೇರುವುದಾ..? ಗಣೇಶನ ಹಬ್ಬಕ್ಕೆ ಬಿಗ್‍ಬಜಾರ್‍ನಲ್ಲಿ ಡಿಸ್ಕೌಂಟ್‍ನಿಂದ ನಾಲ್ಕು ಸೀರೆಯನ್ನು 2000 ರೂಪಾಯಿಗೆ ತಂದು 5000 ರೂಪಾಯಿ ಬಿಲ್ ತೊರಿಸಿದ್ದಕ್ಕೆ ಬೇಜಾರಾ..? ಅಥವಾ ಹಬ್ಬದ ದಿನ ನಾನು ಅಡುಗೆ ಮಾಡಿದ್ದಕ್ಕಾ..?! ರೀ.., ಇನ್ಮುಂದೆ ಹಬ್ಬದ ದಿನವೂ ನೀವೇ ಅಡುಗೆಮಾಡಿ. ಗಣೇಶನ ಹಬ್ಬದ ದಿನ ನಾನು ಮಾಡಿದ ಅಡುಗೆ ಎಷ್ಟು … Read more

ಕೊಠಡಿ ಪುರಾಣ: ಶ್ರೀವಲ್ಲಭ

ಮ್ಯಾಲಿನ ಈ ಶೀರ್ಷಿಕೆಯನ್ನು ನೋಡಿದಾಗ ನಿಮಗ ಗೊತ್ತಾಗಿರಬೇಕು ನಾ ಏನು ಹೇಳಲಿಕ್ಕೆ ಹೊ೦ಟೇನಿ ಅ೦ತ. ನೀವು ಅನ್ಕೊ೦ಡ ಹ೦ಗ ನಾನು ನನ್ನ ಮಾಸ್ತರಕಿ ವೇಳ್ಯಾದಾಗ ಕ್ಲಾಸ (ಕೊಠಡಿ) ಒಳಗ ಏನೇನು ಮಜಾ ಮಜಾ ಸುದ್ದಿ ಇರತಾವು ಅನ್ನೋದನ್ನ ಹೇಳತೆನಿ ಕೇಳ್ರಿ… ಈ ಹುಡುಗರು (ಹುಡುಗಿಯರು ಕೂಡ) ಒ೦ದು ಭಾಳ ವಿಚಿತ್ರ ಜನಾ೦ಗ ರೀ. ಮು೦ಜಾನೆ ಎದ್ದು ಠಾಕು ಠೀಕು ಅ೦ತ ತಯ್ಯಾರ ಆಗಿ ಅಗದಿ ಸೀರಿಯಸ್ ಮೂಡ್ ನ್ಯಾಗ ಕಾಲೇಜಿಗೆ ಬರತಾರ, ಇವತ್ತ ನಾ ಕ್ಲಾಸಿಗೆ ಚಕ್ಕರ ಹಾಕ೦ಗಿಲ್ಲಾ … Read more

ಲಗೂನ ಕಲ್ಲ್ ತುಗೋಳ್ರೀ: ಗುಂಡೇನಟ್ಟಿ ಮಧುಕರ

ನಾನೀಗ ಭಾಷಣ ಮಾಡಲು ನಿಮ್ಮ ಮುಂದೆ ನಿಂತಿದ್ದೇನೆ. ಸಂಘಟಕರು ಕೇವಲ ಐದೇ ನಿಮಿಷದಲ್ಲಿ ಮಾತುಗಳನ್ನು ಮುಗಿಸಬೇಕೆಂಬ ಅತ್ಯಂತ ಕಠಿಣ ನಿಬಂಧನೆಯೊಂದನ್ನು ನನ್ನ ಮುಂದೆ ಇಟ್ಟಿದ್ದಾರೆ. ಆದರೂ ನಾನು ಒಪ್ಪಿಕೊಂಡು ವೇದಿಕೆ ಮೇಲೆ, ಮೈಕ್ ಮುಂದೆ ನಿಂತು ಮಾತನಾಡುವ  ಧೈರ್ಯ ಮಾಡುತ್ತಿರುವೆ. ಈಗ ನಾನು ನನ್ನ ಮನದಲ್ಲಿ ನನ್ನ ಮಡದಿಯನ್ನು ನೆನೆದು ಧೈರ್ಯ ತಂದುಕೊಳ್ಳುತ್ತೇನೆ. ಏಕೆಂದರೆ ನಾನು ಐದೇ ನಿಮಿಷದಲ್ಲಿ ತಯಾರಾಗಬೇಕೆಂದು  ಮಡದಿಗೆ ಹೇಳಿದಾಗ, ಯಾವದೇ ಉದ್ವೇಗಕ್ಕೊಳಗಾಗದೆ, ಮುಖದ ಮೇಲೆ ಯಾವುದೇ ಭಾವ ತೋರಿಸದೆ, ಸಹಜವಾಗಿಯೇ ಒಪ್ಪಿಕೊಂಡು ಒಳಗೆ … Read more

ಹೆಂಡತಿಯೊಬ್ಬಳು ಮನೆಯೊಳಗಿದ್ದರೆ: ಉಪೇಂದ್ರ ಪ್ರಭು

’ಹೆಂಡ ಹೆಂಡ್ತಿ ಕನ್ನಡ ಪದಗೋಳ್ ಅಂದ್ರೆ ರತ್ನಂಗ್ ಪ್ರಾಣ" ಅನ್ನೋ ರಾಜರತ್ನಂ ಅವರ ಸಾಲು ಭಾಗಶಃ ನನಗೂ ಅನ್ವಯಿಸುತ್ತದೆ. ಯಾಕೆ ಭಾಗಶಃ ಅಂತೀರಾ? ಆ ಸಾಲಿನ ’ಹೆಂಡ್ತಿ’ ಅನ್ನೋ ಪದ ರತ್ನಂ ಅವರಿಗೆ ಪ್ರಾಣ ಆಗಿರಬಹುದು ಆದ್ರೆ ನನಗಲ್ಲ. ಇರಲಿ ಬಿಡಿ. ಅವಕಾಶ ಸಿಕ್ಕಾಗೆಲ್ಲ (ಹೆಂಡತಿಯ ಗೈರು ಹಾಜರಿಯಲ್ಲಿ) ವಿದೇಶಿ ಹೆಂಡದ ಜತೆ ಕನ್ನಡ ಪದಗಳು ನನ್ನ ಸಂಗಾತಿಗಳಾಗುತ್ತವೆ. ಇಂದೂ ಆಗಿದ್ದು ಅದೇ. ಹೆಂಡತಿ ಮುಖ ಉಬ್ಬಿಸಿಕೊಂಡು ತವರುಮನೆ ಸೇರಿದ್ದ ಕಾರಣ ವ್ಹಿಸ್ಕಿ ಜತೆ ಮೈಸೂರು ಅನಂತಸ್ವಾಮಿಯವರ … Read more

ದದ್ದ ಬೂಗು ಕಟ್ಟಿದಾಗ !: ಪ್ರಜ್ವಲ್ ಕುಮಾರ್

ಹೊರಗಿನಿಂದ ಬರುತ್ತಿದ್ದ ಗಾಳಿಗೋ, ರೂಮಿನಲ್ಲಿ ತಿರುಗುತ್ತಿದ್ದ ಫ್ಯಾನ್ ಗಾಳಿಗೋ ಗೊತ್ತಿಲ್ಲ; ಗೋಡೆಗೆ ನೇತುಹಾಕಿದ್ದ ಕ್ಯಾಲೆಂಡರ್ ಆಚೀಚೆ ಅಲ್ಲಾಡುತ್ತಾ ಶಬ್ದ ಮಾಡುತ್ತಿತ್ತು. ಸಾಮಾನ್ಯವಾಗಿ ನನಗೆ ಮಲಗಿದ ಹತ್ತು-ಹದಿನೈದು ನಿಮಿಷಕ್ಕೆಲ್ಲಾ ನಿದ್ದೆ ಬರ್ತಿತ್ತು. ಇವತ್ತು ಹನ್ನೆರಡು ಘಂಟೆ ಆದ್ರೂ ನಿದ್ದೆ ಬರದೆ ಆಚೀಚೆ ಹೊರಳಾಡ್ತಾ ಇದ್ದ ನನ್ನನ್ನ ನೋಡಿ ಪಕ್ಕದಲ್ಲಿದ್ದ ರೂಮ್ ಮೇಟ್ ಕೇಳ್ದ. “ಯಾಕೋ? ಇನ್ನೂ ನಿದ್ದೆ ಬಂದಿಲ್ವಾ?” “ಇಲ್ಲಾ ಕಡೋ, ಬೂಗು ಕಟ್ಟಿದೆ” ಅಂದೆ. “ಏನು?! ಏನು ಕಟ್ಟಿದೆ?” ಜೋರಾಗಿ ನಗುತ್ತಾ ಮತ್ತೆ ಕೇಳಿದ. “ಬೂಗು! ಕಡೋ … Read more

ಆಂಗ್ಲ – ಕನ್ನಡ ಇತ್ತೀಚಿನ ನಿಘಂಟು, ಇತ್ಯಾದಿ : ಆರತಿ ಘಟಿಕಾರ್

1.       ಬೈತಲೆ ಬಟ್ಟು ಧರಿಸುವವಳು ಬೈತಲೆ ತಗೆಯಲೇ ಬೇಕೆಂಬ ನಿಯಮ ಇಲ್ಲ  ! 2.       ಸಾಮನ್ಯವಾಗಿ  ಡಾಕ್ಟರ್ ದಂಪತಿಗಳು  ತಮ್ಮ ಮಕ್ಕಳ ಹ್ಯಾಂಡ್ ರೈಟಿಂಗ್ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ. 🙂 3.       ವರ ಪೂಜೆಯ ಸಮಾರಂಭದಿಂದಲೇ  ಮದುವೆ  ಆಗುವವನ ಪೂಜೆ ಶುರುವಾಗುತ್ತದೆ. 🙂 4.       ಮನೆಗೆ ಬಂದ ನಂತರ ಮಾಮೂಲಿಗಿಂತಲೂ  ಹೆಚ್ಚು ಮೌನಿಯಾಗಿ  ಗಂಡ  ಕುಳಿತ್ತಿದ್ದರೆ (ಆಫೀಸಿನಲ್ಲಿ) ಏನಾದರೂ ಎಡವಟ್ಟು ಮಾಡಿಕೊಂಡಿದ್ದಾನೆಂದೇ ಅರ್ಥ. 5.       ಪೆನ್ ಅಂಗಡಿಗಳಲ್ಲಿ  ಹೊಸ ಪೆನ್ ಪರೀಕ್ಷಿಸುವವರೆಲ್ಲರೂ  ಅಲ್ಲಿದ್ದ ಪೇಪರ್ ಮೇಲೆ ಗೀಚೀಯೇ ನೋಡುತ್ತಾರೆ. (ಹೀಗಾಗಿ … Read more

ಫಿಟ್ಟಿಂಗ್ ನಲ್ಲಿ ಫಿಕ್ಸಿಂಗ್ ಫಿಕ್ಸು..!: ಎಂ. ಆರ್. ಸಚಿನ್

ಇವ ಸುಮ್ನೆ ಗೀಚ್ತಾನೆ, ಸೀರಿಯಸ್ ಆಗ್ಬೇಡಿ..!! ಮೊನ್ನೇ ದಾರೀಲಿ ಒಬ್ನೇ ನಡೆದುಕೊಂಡು ಹೋಗ್ತಾ ಇದ್ದೇ. ಎಳಿಯೋಕೆ ಯಾರ ಕಾಲೂ ಸಿಗದೇ, ಜೊತೆಗೆ ಯಾರೂ ಇಲ್ದೆ, ಸಿಕ್ಕಾಪಟ್ಟೆ ಬೋರಾಗ್ತಾ ಇತ್ತು. ಅದೇ ಸಮಯಕ್ಕೆ ಸರಿಯಾಗಿ ಒಂದು ನಾಲ್ಕೈದು ಮಂದಿ ಕೈಲಿ ಕೆಲ ಕ್ರಿಕೇಟ್ ಆಟಗಾರರ ಮಕಕ್ಕೆ ಮಸಿ ಬಳಿದ ಪಟ, ಬ್ಯಾನರ್ ಎಲ್ಲ ಹಿಡಿದು, ಘೋಷಣೆ ಕೂಗುತ್ತಾ ತಮ್ಮ ಹಳೇ ಚಪ್ಪಲಿಯಿಂದ ಪಟಪಟ ಅಂತಾ ಬಾರಿಸುತ್ತಿದ್ದರು. ನಾ ಕೇಳಿದೆ "ಸಾರ್ ಎಂಥಾ ಆಗ್ತಾ ಉಂಟು ಇಲ್ಲಿ? ನೀವ್ಯಾಕೆ ಈ … Read more

ಅಳಿಯವಾಂತರಗಳು: ಜಯಪ್ರಕಾಶ ಅಬ್ಬಿಗೇರಿ

‘ಅಳಿಯ’ಎಂದೊಡನೆ ಅವನ ಬಗೆಗೆ ಕುತೂಹಲವಾಗುವುದುಂಟು. ಅಳಿಯ, ಅಳಿಯತನ, ಇವು ಸಂಸಾರಕ್ಕೆ ಸಂಬಂಧಿಸಿದ ಹೊಸ ಪದಗಳಲ್ಲದಿದ್ದರೂ ಕೂಡ ಈ “ಅಳಿಯ” ಎಂಬ ಪದದಲ್ಲಿ  ಹೊಸ ಚೇತನ, ಹೊಸ ಕ್ರಿಯೆ, ಅಡಗಿದೆ ಎಂದೆನಿಸುತ್ತದೆ. ಈ ಅಳಿಯಂದಿರಲ್ಲಿ ಅನೇಕ ಪ್ರಕಾರಗಳುಂಟು. ಅಕ್ಕನ ಮಗ, ಹೆಂಡತಿಯ ತಮ್ಮ, ಮಗಳ ಗಂಡ, ಹೀಗೆ ಅನೇಕ ಅಳಿಯಂದಿರು ನಮಗೆ ಕಾಣಸಿಗುತ್ತಾರೆ. ಇನ್ನು ಕೆಲವರು ಮೊದಲು ಭಾವಿ ಅಳಿಯಂದಿರಾಗಿ ನಂತರ ಸ್ವಂತ ಅಳಿಯಂದಿರಾಗುವುದು ಸಾಮಾನ್ಯವಾಗಿದೆ. ಕೆಲವು ಭಾವಿ ಅಳಿಯಂದಿರು ಮದುವೆಗಿಂತ ಮೊದಲೇ ಬೋರಿಂಗ್ ಅಳಿಯರಾಗಿ ನಂತರ ಸ್ವಂತ … Read more

ಪಕ್ಷಾಂತರ ಮತ್ತು ಪೂಜಾಯಣ:ವಿಜಯ್ ಹೆರಗು

  ಎಂದಿನಂತೆ ನಮ್ಮ ಕೆಂಚ, ಸೀನ, ಸಿದ್ದ, ನಾಣಿ ಎಲ್ಲಾರೂ ಬಂದು ಅವರ ಮಾಮೂಲಿ 'ಅಡ್ಡಾ' ರಾಮಣ್ಣನ ಟೀ ಅಂಗಡಿ ಮುಂದೆ ಕೂತ್ಕೊಂಡು ಹರಟೆ ಹೊಡೀತಾ ಇದ್ರು. ನಮ್ ಸಿದ್ದ ಅಲ್ಲಿ ಇದ್ದ ಅಂದ್ಮೇಲೆ ರಾಜಕೀಯದ ಮಾತು ಬರಲೇಬೇಕು..   ಸಿಧ್ಧ : ಲೋ ಕೆಂಚ ಇಷ್ಯಾ ಗೊತ್ತಾಯ್ತಾ ? ನಮ್ ಪೂಜಾ ಗಾಂಧೀ ಫ್ಯಾನ್ ಹಿಡ್ಕಂಡು ನೇತಾಡ್ತಾ ಅವಳಂತೆ.!!?? ಕೆಂಚ : ಅಯ್ಯೋ ಬುಡ್ಲಾ ಆ ಸ್ಟೋರಿ ಗೊತ್ತಿಲ್ವಾ ನಿಂಗೆ. ಆಯಮ್ಮಾ ಮೊನ್ನೆ ಹೊರೆ ಹೊತ್ಕೊಂಡು ಹೋಯ್ತಾ ಇದ್ಲು. … Read more

ಕೊಂಕು….ಕೊಂಚ ಕಚಗುಳಿಗೆ !: ಸಂತೋಷ್ ಕುಮಾರ್ ಎಲ್ ಎಮ್

  ಕೆಲ ಸುದ್ದಿಗಳು ಟಿವಿಯಲ್ಲಿ ಬಂದಾಗ ಒಮ್ಮೊಮ್ಮೆ ನಾವು ಹೀಗೆ ಮಾತಾಡಿಕೊಳ್ಳುವುದುಂಟು. ಇದು ಆ ಕ್ಷಣದಲ್ಲಿ ಬರುವ ತಕ್ಷಣದ ಪ್ರತಿಕ್ರಿಯೆ. ಕೇವಲ ಹಾಸ್ಯದ ದೃಷ್ಟಿಯಿಂದಷ್ಟೇ ಈ "ಕೊಂಕು" ಬರಹ. ಯಾವುದೇ ಕೊಂಕನ್ನು ವೈಯುಕ್ತಿಕವಾಗಿ ತೆಗೆದುಕೊಳ್ಳಬಾರದಾಗಿ ವಿನಂತಿಸಿಕೊಳ್ಳುತ್ತಾ… ಸುದ್ದಿ: ಕೇವಲ ಜನಸೇವೆ ಸಾಕು, ನನಗೆ ಅಧಿಕಾರ ಬೇಡ- ಯೆಡ್ಡಿ ಕೊಂಕು: ಸುಮ್ನಿರಿ ಸಾರ್, ಜನರಿಗೆ ಆಸೆ ತೋರಿಸಬೇಡಿ!! ಸುದ್ದಿ: ಲಾರಿ ಮಗುಚಿ, ತುಂಬಿದ್ದ ನ್ಯೂಸ್ ಪೇಪರ್ ಗಳೆಲ್ಲ ಚೆಲ್ಲಾಪಿಲ್ಲಿ ಕೊಂಕು: ನಾಳೆ ಈ ಸುದ್ದಿ ಜನಗಳಿಗೆ ಹೇಗೆ ತಲುಪುತ್ತೆ … Read more