Facebook

Archive for the ‘ಪಂಜು ಅಖಾಡ’ Category

ಜಾತಿವ್ಯವಸ್ಥೆಯ ಕಪ್ಪುಕನ್ನಡಕ: ಅನುರಾಧ ಪಿ. ಸಾಮಗ

ಹಲ ದಿನಗಳ ಹಿಂದೆ ಪ್ರಸಿದ್ಧ ದಿನಪತ್ರಿಕೆಯೊಂದರಲ್ಲಿ ಪ್ರಕಟವಾದ ಒಂದು ಲೇಖನ ಕಣ್ಸೆಳೆದಿತ್ತು. ಅದು ಪುರಂದರದಾಸರನ್ನು ಕರ್ಣಾಟಕ ಸಂಗೀತದ ಪಿತಾಮಹನೆಂದು ಕರೆಯುವುದರ ವಿರುದ್ಧ ಎತ್ತಿದ ದನಿಯಾಗಿತ್ತು. ಅಲ್ಲಿ ಸಂಗೀತಕ್ಕವರ ಕೊಡುಗೆಯ ಪ್ರಮಾಣವಾಗಲಿ, ಕರ್ಣಾಟಕ ಸಂಗೀತದ ಆ ತಲೆಮಾರುಗಳಿಂದ ಈ ತಲೆಮಾರಿನವರೆಗಿನ ಸಂವಹನದಲ್ಲಿ ಅವರ ಕೆಲಸದ ಪಾತ್ರವೇನು ಎಂಬುದಾಗಲಿ ಲೇಖಕರಿಗೆ ಪ್ರಸ್ತುತವೆನಿಸದೆ, ಪುರಂದರರು ಕೀಳ್ಜಾತಿಯೆನುವ ವ್ಯವಸ್ಥೆಯ ಸದಸ್ಯರಾಗಿರದೆ ಇದ್ದು, ಒಂದು ಸಂಸ್ಕೃತಿಯ ಪಿತಾಮಹನೆನಿಸಿಕೊಂಡದ್ದು ಅವರನ್ನು ಕಾಡಿದಂತಿತ್ತು. ಅದರಲ್ಲಿ ಸ್ಪಷ್ಟವಾಗಿ ಉಲ್ಲೇಖಿತವಾದ ಪುರಂದರರಿಗೊಲಿಯದೆ ಕೃಷ್ಣ ಕನಕನಿಗೊಲಿದಿದ್ದ ಎಂಬ ಪದಗಳೇಕೋ ಬಹಳ ಕಾಡುತ್ತಲೇ […]

ತಪ್ಪಿತಸ್ಥರಿಗೆ ಮರಣದಂಡನೆಯೊಂದೇ ಶಿಕ್ಷೆಯೇ? :ರುಕ್ಮಿಣಿ ಎನ್.

ಕಳೆದ ಡಿಸೆಂಬರ್ ನಲ್ಲಿ ನಡೆದ ದೆಹಲಿ ಅತ್ಯಾಚಾರ ಕೇಸು ಎಲ್ಲರ ಮನದಲ್ಲೂ ಹಸಿಗೋಡೆಯ ಮೇಲೆ ಹರಳು ನೆಟ್ಟಂತಿದೆ. ಸುದ್ದಿ ಹರಡುತ್ತಿದ್ದಂತೆ, ಅತ್ಯಾಚಾರಿಗಳ ವಿರುದ್ಧ ಕೇಳಿ ಬಂದ ಮಾತುಗಳು: “ಅತ್ಯಾಚಾರಿಗಳಿಗೆ ಮರಣ ದಂಡನೆ ವಿಧಿಸಬೇಕು”, “ಲಿಂಗ ನಿಷ್ಕ್ರಿಯಗೊಳಿಸಬೇಕು”. ಹೀಗೆ ಮಾಡಿದರೆ ತಪ್ಪಿತಸ್ಥರಿಗೆ ತಮ್ಮ ತಪ್ಪಿನ  ಅರಿವಾಗಬಲ್ಲುದೆ? ತಪ್ಪನ್ನು ತಿದ್ದಿಕೊಳ್ಳಲು ಅವಕಾಶಗಳೇ ಇಲ್ಲವೇ? ಅವರುಗಳು ಮಾಡಿದ್ದು ದೊಡ್ಡ ತಪ್ಪು ನಾನು ಒಪ್ಪುವೆ. ಆದರೆ, ತಪ್ಪು ತಿದ್ದಿಕೊಳ್ಳಲು ಅವಕಾಶ ನೀಡದೆ ಮರಣದಂಡನೆ ವಿಧಿಸುವುದು ಅದೆಷ್ಟು ಸರಿ ಎನ್ನುವುದು ನನ್ನ ಪ್ರಶ್ನೆ. ನಮ್ಮ […]