Facebook

Archive for the ‘Uncategorized’ Category

ಹಿಂಗ್ ಕಣ್ಣೀರ್ ಹಾಕಿ ಎಷ್ಟೋ ವರ್ಷ ಆಗಿದ್ವು!: ಗುರುಪ್ರಸಾದ ಕುರ್ತಕೋಟಿ  

ಅವತ್ತ ನನ್ ಕಣ್ ನನಗ ನಂಬದಷ್ಟು ಆಶ್ಚರ್ಯ ಆತು. ಎರಡೂ ಕಣ್ಣಾಗ ದಳ ದಳ ನೀರು ಹರಿಲಿಕತ್ತಾವು. ತಡಕೊಳ್ಳಲಿಕ್ಕೆ ಆಗದಷ್ಟು. ಹಿಂಗ್ ಕಣ್ಣೀರ್ ಹಾಕಿ ಎಷ್ಟೋ ವರ್ಷ ಆಗಿದ್ವು!  … ನನಗ ನೆನಪಿದ್ದಂಗ ಹತ್ತು ವರ್ಷದ ಹಿಂದ ಇರ್ಬೇಕು ನನ್ನ ಹೆಂಡತಿ ನನ್ನ ಬಿಟ್ಟು ತಾ ಒಬ್ಬಾಕಿನ ತೌರ ಮನೀಗೆ ಹೋಗಿದ್ದು. ಅದನ್ನ ಬಿಟ್ರ ಅಕಿ ಒಬ್ಬಾಕಿನ ಎಂದೂ ಹೋಗೇ ಇಲ್ಲ. ಪ್ರತಿ ಸಲ ಊರಿಗೆ ಹೋಗುಮುಂದ ಜೊತಿಗೆ ನಾನೂ ಇದ್ದ ಇರ್ತಿದ್ದೆ. ಅಥವಾ ತನ್ನ ಜೋಡಿ […]

ಮಹತ್ವ ಕಳೆದುಕೊಳ್ಳುತ್ತಿರುವ ಮಹಾತ್ಮರ ಜಯಂತಿಗಳು:  ಕೆ ಟಿ ಸೋಮಶೇಖರ ಹೊಳಲ್ಕೆರೆ.

ರಾಮನ ಆದರ್ಶ, ಹನುಮನ ಸೇವಾನಿಷ್ಟೆ, ಮಹಾವೀರನ ಅಹಿಂಸೆ, ಪ್ರಾಣಿದಯೆ, ಅಂಬೇಡ್ಕರವರ ಸ್ವಾಭಿಮಾನ, ಯೋಗ್ಯವಾದುದಕ್ಕಾಗಿ ಅಸದೃಶ ಹೋರಾಟ, ಅಕ್ಕನ ಸ್ವಾತಂತ್ರ್ಯಕ್ಕಾಗಿ ಅರಸೊತ್ತಿಗೆಯನ್ನು ದಿಕ್ಕರಿಸಿದ ದಿಟ್ಟತನ … ಆನುಭಾವ,  ಸ್ವಾಭಿಮಾನ, ಗಾಂಧೀಜಿಯ ಸತ್ಯ –  ಇವುಗಳನ್ನು ಯಾರು ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ?  ಮಹಾತ್ಮರು ಯಾರು? ಎಂಬ ಪ್ರಶ್ನೆಯನ್ನು ಮೇಲ್ನೋಟಕ್ಕೆ ಸರಳ ಅನ್ನಿಸಿದರೂ ಚರ್ಚಿಸತೊಡಗಿದಾಗ ಸಂಕೀರ್ಣ ಅನ್ನಿಸುತ್ತದೆ! ಚರ್ಚೆ ಕೊನೆಗೊಳ್ಳದಂತಾಗುತ್ತದೆ! ಒಂದು ಮಾತಿನಲ್ಲಿ ಹೇಳಬೇಕೆಂದರೆ  ಯಾರ ಜೀವನ ಉತ್ತಮ, ಮಾನವೀಯ ಸಮಾಜ ಸೃಷ್ಟಿಗೆ ಕಾರಣವಾಗುತ್ತದೋ ಅವರೇ ಮಹಾತ್ಮರು. ಎಂದು ಹೇಳ ಬೇಕಾಗುತ್ತದೆ. " […]

ಪ್ಲಾಸ್ಟಿಕ್: ರೇಖ ಮಾಲುಗೋಡು.

ಕಾಯಿಲೆಯೇ ಏನೆಂದು ಗೊತ್ತಿಲ್ಲದೇ ಹೊಟ್ಟೆ ಉಬ್ಬರಿಸಿ ಅಡ್ಡಬಿದ್ದ ದನದಿಂದ ಕೆಜಿಗಟ್ಟಲೆ ಪ್ಲಾಸ್ಟಿಕ್ ಹೊರತೆಗೆದ ಪಶುವೈದ್ಯ ಎಂದು ಓದುವಾಗ ಮುಂದಿನ ದಿನಗಳಲ್ಲಿ ದನದ ಬದಲು ಮನುಷ್ಯ  ಎನ್ನುವ ಪದ ಬಂದರೆ ಆಶ್ಚರ್ಯವೇನಿಲ್ಲ. ಈಗ ಎಲ್ಲಿ ನೋಡಿದರು ಪ್ಲಾಸ್ಟಿಕ್ ಕವರ್ಗಳದ್ದೇ ಸಾಮ್ರಜ್ಯ.ಪ್ಲಾಸ್ಟಿಕ್ ಪದ ಬಳಕೆಗೆ  ನಮ್ಮ ಕನ್ನಡದಲ್ಲಿ ಸುಲಭವಾಗಿ ಆಡುವಂತ ಪರ್ಯಾಯ ಪದವಿಲ್ಲ. ಆದ್ದರಿಂದ ಬೇರೆ ಆಂಗ್ಲ ಪದದ ತರವೇ ನಮ್ಮನ್ನು ನಾವು ಆಂಗ್ಲಪದಗಳಿಗೆ ಹೊಂದಿಸಿಕೊಂಡು ಬಿಟ್ಟಿದ್ದೇವೆ.  ನಮ್ಮ ಪರಿಸರ ಶುದ್ದವಾಗಿರಬೇಕೆಂದರೆ ನಾವೇ ಪ್ಲಾಸ್ಟಿಕ್ನ್ನುಆದಷ್ಟು ಕಡಿಮೆ ಮಾಡುತ್ತಾ ಹೋಗಬೇಕು.ನಮ್ಮ ಹಿಂದಿನ […]

ಈಗ ಹಂಪಿಯೆಂದರೇ ?: ಬಿ. ಎಲ್. ಆನಂದ ಆರ್ಯ

ಹಂಪಿಯೆಂದು ಹೆಸರು ಕೇಳಿದ ಕೂಡಲೆ ನೆನಪಾಗೋದು ;   ಅಲ್ಲಿನ ಶಿಲ್ಪ-ಕೆತ್ತನೆಗಳು, ಬೆಟ್ಟ-ಗುಡ್ಡಗಳು, ದೇವಾಲಯಗಳು. ಇತ್ತೀಚಿಗೆ ನಾವು ಕಾಣುವ ಹಂಪಿಯ ಪರಿಚಯಿಸಲು ಪ್ರಯತ್ನಿಸುವೆ.  ಹಂಪಿಯು ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ಹೀಗಾಗಿ ಸುಮಾರು 30 ಚದರ ಕೀ. ಮೀ. ನಷ್ಟು ಈಗಲೂ ವ್ಯಾಪಕವಾದ ಗುಡಿಗುಂಡಾರ, ಶಿಲ್ಪಕೆತ್ತನೆ, ಪುಷ್ಕರಣಿ, ಕೋಟೆಗಳ ಮಾರ್ದನಿಯಿದೆ. ಹಾಗೆಯೇ ಕನ್ನಡದಷ್ಟೆ ಇಂಗ್ಲೀಷ್ ಮಾತಾಡುವ ಹಾಗೂ ಪಾಶ್ಚತ್ಯ, ಭಾರತೀಯ ಸಂಸ್ಕೃತಿಗಳ ಮಹಾಸಂಗಮತಾಣವಾಗಿ ಮಾರ್ಪಟ್ಟಿದೆ. ಪ್ರವಾಸಿಗರ ಪ್ರಭಾವದಿಂದ ಅಲ್ಲಿನ ಜನರು ಕೃಷಿಯ ಹೊರತುಪಡಿಸಿ ವ್ಯಾಪಾರವಹಿವಾಟು ನಡೆಸಿ ನಿಶ್ಚಿಂತರಾಗಿ ಹೊಟ್ಟೆ […]

ಖುಷಿ ಮತ್ತು ಸಂತೋಷ: ಶಿವರಾಜ್ ಬಿ. ಎಲ್

ನಾನು ಅನೇಕ ಬಾರಿ, ತುಂಬಾ ದಿನಗಳಿಂದ ಅತಿಯಾಗಿ ಕಾಡುತ್ತಿದೆ ಅದೇನೆಂದರೆ ನಮ್ಮ ಜೀವನದ ಮುಖ್ಯ ಗುರಿ ಕೇವಲ ಸಂತೋಷವಾಗಿರುವುದಾ???. ಹೌದು ತಾನೇ ನಮ್ಮ ಜೀವನದ ಮುಖ್ಯ ಉದ್ದೇಶ ನಾವು ಖುಷಿಯಾಗಿ ಇರುವುದೇ ಆಗಿದೆ,  ಆದರೆ ಈ ನೋವು ಮತ್ತು ಕಷ್ಟ ಪಡುವುದು ಯಾಕೆ ?? ಇವು ಕೂಡ ನಾವು ಸಂತೋಷವನ್ನು ಪಡೆಯೋಕೆ ಇರುವ ಕೆಲವು ಕಾರಣಗಳು. ಈ ರೀತಿಯಾಗಿ ನಂಬಿರುವುದು ನಾನೊಬ್ಬನೇ ಅಲ್ಲ,ನಮ್ಮ ಸುತ್ತ ಮುತ್ತಲಿನ ಎಲ್ಲ ಜನರು ಇದೆ ಸಿದ್ಧಾಂತ ನಂಬಿ ಜೀವನ ಮಾಡುತ್ತಿದ್ದಾರೆ. ಕೆಲವರು […]

ಮಾನವ ಜನುಮ ಕನ್ನಡ ವಿಡಿಯೋ

https://www.youtube.com/watch?v=y9PBe1-JakQ&feature=youtu.be

ಎಲ್ಲರಂಥವನಲ್ಲ ನನ್ನಪ್ಪ! – ಬರಹಗಳ ಅಹ್ವಾನ

"ನಮ್ಮ ಅಪ್ಪ ನಮಗೆ ಹೀರೋ! ಅವನ ಹಾಗೆ ಮತ್ತೊಬ್ಬನಿಲ್ಲ!" ಅಂತ ನಿಮಗನ್ನಿಸಿದೆಯೇ? ಹಾಗಿದ್ದರೆ ಅದನ್ನು ವ್ಯಕ್ತಪಡಿಸುವ ಅವಕಾಶ ಇಲ್ಲಿದೆ….    ಅಪ್ಪಂದಿರ ಬಗ್ಗೆ ಪುಸ್ತಕ ಮಾಡುವ ಪ್ರಯತ್ನ ನಡೆದಿದೆ. ವಿಶ್ವದ ಎಲ್ಲ ಅಪ್ಪಂದಿರಿಗೆ ನಮ್ಮ ಪ್ರೀತಿಯ ಕೊಡುಗೆ ಇದು. ಅವರು ನಿಮಗೆ ಹೇಗೆ ಸ್ಪೂರ್ತಿ ಆದರು, ಅವರ ಬಗ್ಗೆ ನಿಮಗೇನಿಷ್ಟ, ಅವರ ಜೊತೆ ಕಳೆದ ಭಾವನಾತ್ಮಕ ಕ್ಷಣಗಳು, ಯಾವುದೋ ಒಂದು ಸಣ್ಣ ಜಗಳ, ಕಾಡುತ್ತಿರುವ ಪಾಪ ಪ್ರಜ್ಞೆ, ನಿಮ್ಮ ಕಣ್ಣಲ್ಲಿ ನೀರು ಹರಿಸಿದ ಅವರು ಪಟ್ಟ ಕಷ್ಟಗಳು… […]

ಕಿರುಲೇಖನಗಳು: ಪ್ರಶಸ್ತಿ, ಶಿವು ನಾಗಲಿಂಗಯ್ಯನಮಠ

  ನಂಬರ್ ಪ್ಲೇಟ್ ಬಂಗಾರದ ಹುಡಿಯ ಜಗಕೆಲ್ಲಾ ಎರಚೋಕೆ ಹೊರಟಿದ್ದ ಸೂರ್ಯ ಹಿಂದೆಂದಿಗಿಂತಲೂ ಹೆಚ್ಚು ಖುಷಿಯಾಗಿದ್ದ.ರಾತ್ರಿ ಪಾಳಿ ಮುಗಿಸಿ ಬರುತ್ತಿದ್ದ ಚಂದ್ರನಿಗೊಂದು ಟಾಟಾ ಹೇಳಿ, ಅರುಣೋದಯಕ್ಕೇ ಗೂಡು ಬಿಡೋ ಹಕ್ಕಿಗಳಿಗೊಂದು ಹಾಯ್ ಹೇಳೋ ನಿತ್ಯಕರ್ಮದಲ್ಲಿ ಎದುರಾಗೋ ಅಂಕಲ್ಲುಗಳಿಗೆ ಇವನೆಂದರೆ ಪಂಚ ಪ್ರಾಣ.ವಾಕಿಂಗ್ ಮಾಡೋಕೆ ಮನಸಿದ್ರೂ ಚಳಿ ಚಳಿಯೆನ್ನುತ್ತಾ ಮನೆ ಬಿಡೋಕೇ ಬೇಜಾರಾಗೋ ಸಂದರ್ಭದಲ್ಲಿ ಬೆಳಕ ಬೆಚ್ಚನೆಯ ಶಾಲು ಹೊಚ್ಚುವವನ ಕಂಡರೆ ಯಾರಿಗೆ ಇಷ್ಟವಿರೋಲ್ಲ ಹೇಳಿ ? ತರುಲತೆಗಳಿಗೆ ಗೆಲುವು ತರುವವನ, ಮೊಗ್ಗಾಗಿ ಮುದುಡಿದ ಮನಗಳ ಅರಳಿಸೋನ ಬರುವಿಕೆಗೇ […]